"ಅದೆಷ್ಟು ಬಾರಿ ಮದುವೆ ಮಾಡಿಸಿದ್ದಾರೋ ಲೆಕ್ಕಾನೇ ಇಲ್ಲ"; ಮದುವೆ ವದಂತಿ ಬಗ್ಗೆ ಮೌನ ಮುರಿದ ಮೋಹಕತಾರೆ

ಕಳೆದ ಕೆಲವು ದಿನಗಳಿಂದ ಮೋಹಕತಾರೆ ರಮ್ಯಾ ಮದುವೆ ಆಗುತ್ತಿದ್ದಾರೆ ಅನ್ನೋದ ಸುದ್ದಿ ಸದ್ದು ಮಾಡಿತ್ತು. ದೆಹಲಿ ಮೂಲಕ ಉದ್ಯಮಿಯೊಬ್ಬರೊಂದಿಗೆ ರಮ್ಯಾ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಅನ್ನೋ ಸುದ್ದಿ ಹರಿದಾಡಿತ್ತು. ಸಹಜವಾಗಿಯೇ ರಮ್ಯಾ ಈ ಬಾರಿ ಮದುವೆ ಆಗುತ್ತಿರಬಹುದೆಂದು ಅವರ ಅಭಿಮಾನಿಗಳು ಕೂಡ ನಂಬಿದ್ದರು. ಆದರೆ, ಈಗಾಗಲೇ ಹಬ್ಬಿರುವ ಸುದ್ದಿಯ ಬಗ್ಗೆ ರಮ್ಯಾ ಮೌನ ಮುರಿದಿದ್ದಾರೆ.

ರಮ್ಯಾ ಮದುವೆ ಬಗ್ಗೆ ಸುದ್ದಿ ಹಬ್ಬಿದಾಗಲೇ ಈ ಸುದ್ದಿ ಬಗ್ಗೆ ಸ್ಪಷ್ಟನೆ ಇರಲಿಲ್ಲ. 41 ವರ್ಷದ ನಟಿ ಸಿನಿಮಾಗಳಿಂದಲೂ ದೂರವಿದ್ದಾರೆ. ಕಮ್‌ ಬ್ಯಾಕ್ ಮಾಡಬೇಕಿದ್ದ 'ಉತ್ತರಕಾಂಡ' ಸಿನಿಮಾದಿಂದಲೂ ಹೊರ ನಡೆದಿದ್ದರು. ಹೀಗಾಗಿ ಹಬ್ಬಿರುವ ಮದುವೆ ವದಂತಿ ನಿಜ ಇರಬಹುದೇನೋ ಎಂದು ನಂಬಿದ್ದರು. ಅದಾಗಲೇ ನ್ಯೂಸ್ ಚಾನೆಲ್ ಒಂದಕ್ಕೆ ಇದು ಸುಳ್ಳು ಸುದ್ದಿ ಎಂದು ಪ್ರತಿಕ್ರಿಯೆ ನೀಡಿದ್ದರು. ಈಗ ತಮ್ಮ ಇನ್‌ಸ್ಟಾಗ್ರಾಂ ಖಾತೆ ಮೂಲಕ ಮದುವೆ ಸುದ್ದಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

Finally actress Ramya Divya Spandana breaks her silence on her marriage rumours

ದಿಢೀರನೇ ಮೋಹಕತಾರೆ ರಮ್ಯಾಗೆ ಮದುವೆ ಸುದ್ದಿ ಹಲ್‌ಚಲ್ ಎಬ್ಬಿಸಿತ್ತು. ಇದೇ ವರ್ಷ ಮದುವೆ ಕೂಡ ಆಗುತ್ತಾರೆ ಅನ್ನೋ ಸುದ್ದಿನೂ ಓಡಾಡಿತ್ತು. ಅಲ್ಲದೆ ರಮ್ಯಾ ಉದ್ಯಮಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿತ್ತು. ಆದರೆ, ಮೋಹಕತಾರೆ ರಮ್ಯಾ ಕಡೆಯಿಂದ ಅಧಿಕೃತ ಮಾಹಿತಿ ಬಂದಿರಲಿಲ್ಲ. ಹೀಗಾಗಿ ಅವರ ಅಭಿಮಾನಿಗಳಂತೂ ಈ ಸುದ್ದಿಯನ್ನು ನಂಬಬೇಕೋ ಬೇಡವೋ ಅನ್ನುವ ಗೊಂದಲದಲ್ಲಿಯೇ ಇದ್ದರು.

ಆದ್ರೀಗ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ತಮ್ಮ ಮದುವೆ ಬಗ್ಗೆ ಮೋಹಕತಾರೆ ರಮ್ಯಾ ಪ್ರತಿಕ್ರಿಯೆ ನೀಡಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. " ಮಾಧ್ಯಮದವರು ಅದೆಷ್ಟು ಬಾರಿ ನನ್ನ ಮದುವೆ ಮಾಡಿಸಿದ್ದಾರೋ, ಆ ಬಗ್ಗೆ ಲೆಕ್ಕವಿಲ್ಲದಂತಾಗಿದೆ. ಒಂದು ವೇಳೆ ನಾನು ಮದುವೆ ಆಗುವುದೇ ಆದರೆ, ಆ ವಿಷಯವನ್ನು ನನ್ನಿಂದಲೇ ನಿಮಗೆ ಸಿಗುತ್ತೆ. ಆದರೆ, ನಂಬಲು ಅರ್ಹವಲ್ಲದ ಮೂಲಗಳಿಂದ ಬಂದ ವದಂತಿಯನ್ನು ದಯವಿಟ್ಟು ನಿಲ್ಲಿಸಿ" ಎಂದು ಬರೆದು ರಮ್ಯಾ ತಮ್ಮ ಇನ್‌ಸ್ಟಾ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.

ಮೋಹಕತಾರೆ ರಮ್ಯಾ ಸುದ್ದಿ ಹಬ್ಬುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ರಮ್ಯಾ ಮದುವೆ ಆಗುತ್ತಿರುವ ಬಗ್ಗೆ ಸುದ್ದಿಗಳು ಹರಿದಾಡಿದ್ದವು. ಆಗಲೂ ರಮ್ಯಾ ತಮ್ಮ ಮದುವೆ ಬಗ್ಗೆ ಸ್ಪಷ್ಟನೆ ನೀಡಿದ್ದರು. ಈಗ ಮತ್ತೊಮ್ಮೆ ಸುದ್ದಿ ಹಬ್ಬಿದ್ದು, ಆ ಬಗ್ಗೆ ಈಗ ಪ್ರತಿಕ್ರಿಯೆ ನೀಡಿದ್ದು, ಅವರ ಅಭಿಮಾನಿಗಳಿಗೆ ಕ್ಲಾರಿಟಿ ಸಿಕ್ಕಂತೆ ಆಗಿವೆ. ಈ ಮೂಲಕ ಸದ್ಯಕ್ಕಂತೂ ರಮ್ಯಾ ಮದುವೆ ಆಗುತ್ತಿಲ್ಲ ಅನ್ನೋದು ಕನ್ಫರ್ಮ್ ಆಗಿದೆ.

ಅಂದ್ಹಾಗೆ ಮೋಹಕತಾರೆ ರಮ್ಯಾಗೆ ಈಗ 41 ವರ್ಷ. ಇನ್ನೊಂದು ಕಡೆ ಸಿನಿಮಾದಿಂದನೂ ದೂರವಿದ್ದಾರೆ. ಹಾಗೇ ರಾಜಕೀಯದಲ್ಲೂ ಸಕ್ರಿಯವಾಗಿಲ್ಲ. ಎರಡೂ ಕ್ಷೇತ್ರದಲ್ಲೂ ಆಕ್ಟಿವ್ ಆಗಿರದ ನಟಿ ಮದುವೆ ಸಿದ್ಧರಾಗಿರಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಆ ವಿಷಯನ್ನು ಈಗ ತಳ್ಳಿ ಹಾಕಿದ್ದಾರೆ. ಸದಾ ಟ್ರಾವೆಲ್ ಮಾಡುವ ರಮ್ಯಾ ಬೆಂಗಳೂರು, ದೆಹಲಿ ಸೇರಿದಂತೆ ವಿದೇಶ ಪ್ರವಾಸದಲ್ಲಿ ಇರುತ್ತಾರೆ. ಸದ್ಯ ರಮ್ಯಾ ಎಲ್ಲಿದ್ದಾರೆ ಅನ್ನೋ ಬಗ್ಗೆ ಮಾಹಿತಿ ಇಲ್ಲ.

ರಮ್ಯಾ ತಮ್ಮ ಖಾಸಗಿ ವಿಚಾರಗಳನ್ನು ಚರ್ಚೆ ಮಾಡುವುದಿಲ್ಲ. ಮದುವೆ ಬಗ್ಗೆ ಪ್ರಶ್ನೆ ಮಾಡಿದಾಗಲೆಲ್ಲ ಅವರಿಂದ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಸಿನಿಮಾಗೆ ರಮ್ಯಾ ಕಮ್‌ಬ್ಯಾಕ್ ಮಾಡುತ್ತಾರೆ ಅನ್ನೋ ಸುದ್ದಿಯಿತ್ತು. ಡಾಲಿ ಧನಂಜಯ್ ನಟಿಸುತ್ತಿರುವ 'ಉತ್ತರಕಾಂಡ' ಸಿನಿಮಾ ಕೂಡ ಅನೌನ್ಸ್ ಆಗಿತ್ತು. ಆದರೆ, ರಮ್ಯಾ ಆ ಸಿನಿಮಾದಿಂದಲೂ ಹೊರಬಂದಿದ್ದರು. ಈ ಸಿನಿಮಾಗೂ ಮುನ್ನ 'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾದಲ್ಲೂ ನಟಿಸಬೇಕಿತ್ತು. ಆದರೆ, ಅದರಿಂದಲೂ ಹೊರಬಂದಿದ್ದರು. ಸದ್ಯ ಅವರ ಮುಂದಿನ ನಡೆ ಇನ್ನೂ ನಿಗೂಢವಾಗಿಯೇ ಇದೆ.

More from Filmibeat

English summary
Finally actress Ramya Divya Spandana breaks her silence on her marriage rumours
Read more about: ramya marriage filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X