For Quick Alerts
  ALLOW NOTIFICATIONS  
  For Daily Alerts

  ರಮೇಶ್ ಅರವಿಂದ್ 100ನೇ ಸಿನಿಮಾದ ವಿರುದ್ಧ 2ನೇ ಕೇಸ್ ದಾಖಲು

  By Bharath Kumar
  |

  ರಮೇಶ್ ಅರವಿಂದ್ ಅಭಿನಯದ 'ಪುಷ್ಪಕ ವಿಮಾನ' ಸಿನಿಮಾ ಈ ವರ್ಷದ ಆರಂಭದಲ್ಲಿ ತೆರೆಕಂಡು, ಯಶಸ್ಸು ಕಂಡಿತ್ತು. ಇದು ರಮೇಶ್ ಅರವಿಂದ್ ಅವರ 100ನೇ ಸಿನಿಮಾ. ರಮೇಶ್ ಅವರ ಜೊತೆಯಲ್ಲಿ ನಟಿ ರಚಿತಾ ರಾಮ್, ಯುವಿನಾ ಪಾರ್ಥವಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದರು.

  ಇದೀಗ, ಈ ಚಿತ್ರದ ನಿರ್ಮಾಪಕರ ವಿರುದ್ಧ ಎಫ್.ಐ.ಆರ್ ದಾಖಲಾಗಿದ್ದು, 'ಪುಷ್ಪಕ ವಿಮಾನ' ಚಿತ್ರಕಥೆ, ಕೊರಿಯನ್ ಚಿತ್ರದಿಂದ ಕದ್ದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.[ವಿಮರ್ಶೆ: ಅದ್ಭುತ ಭಾವನಾತ್ಮಕ 'ಯಾನ', ಅಪ್ಪ-ಮಗಳ ಈ 'ಪುಷ್ಟಕ ವಿಮಾನ']

  ಅಷ್ಟಕ್ಕೂ, 'ಪುಷ್ಪಕ ವಿಮಾನ' ಸಿನಿಮಾ ರೀಮೇಕ್ ಚಿತ್ರನಾ? ಯಾವ ಚಿತ್ರ ಕಥೆಯನ್ನ ಕದ್ದಿದ್ದಾರೆ? ಈಗ ಯಾರು ಈ ದೂರು ದಾಖಲಿಸಿರುವುದು ಎಂಬ ಸಂಪೂರ್ಣ ಮಾಹಿತಿಯನ್ನ ತಿಳಿದುಕೊಳ್ಳಲು ಮುಂದೆ ಓದಿ.....

  ನಾಲ್ಕು ಜನರ ಮೇಲೆ ಎಫ್.ಐ.ಆರ್

  ನಾಲ್ಕು ಜನರ ಮೇಲೆ ಎಫ್.ಐ.ಆರ್

  'ಪುಷ್ಪಕ ವಿಮಾನ' ಚಿತ್ರದ ನಿರ್ಮಾಪಕರಾಗಿರುವ ಪ್ರಖ್ಯಾತ್, ಪವನ್ ಒಡೆಯರ್, ವಿಜಯ್ ಸಾವನೂರ್ ಮತ್ತು ಗುರು ಪ್ರಸಾದ್ ಅವರ ಮೇಲೆ ಕಥೆ ಕದ್ದ ಆರೋಪದಡಿ ಗಿರಿನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

  ಇದು ಎರಡನೇ ಕೇಸ್.!

  ಇದು ಎರಡನೇ ಕೇಸ್.!

  ಇದಕ್ಕೂ ಮುಂಚೆ ಮುಂಬೈ ಕೋರ್ಟ್ ನಲ್ಲಿ 'ಪುಷ್ಪಕ ವಿಮಾನ' ಚಿತ್ರತಂಡದ ಮೇಲೆ ಮೊದಲ ಪ್ರಕರಣ ದಾಖಲಾಗಿದೆ. ಇದು ಕೂಡ ಕಥೆ ಕದ್ದ ಆರೋಪವೇ. ಕೊರಿಯನ್ ಚಿತ್ರದ ಕಥೆ ಕದ್ದು ಈ ಸಿನಿಮಾ ಮಾಡಲಾಗಿದೆ ಎಂದು ಆರೋಪಿಸಿ, ಮೂಲ ರೀಮೇಕ್ ರೈಟ್ಸ್ ಹೊಂದಿರುವ ಕ್ರೋಸ್ ಪಿಕ್ಚರ್ಸ್ ಇಂಡಿಯಾ ಮತ್ತು ಕ್ರೋಸ್ ಟೆಲಿವಿಷನ್ ಇಂಡಿಯಾ ಸಂಸ್ಥೆ ಮುಂಬೈ ಹೈ ಕೋರ್ಟ್ ನಲ್ಲಿ ಕೇಸ್ ದಾಖಲು ಮಾಡಿತ್ತು.[ರಮೇಶ್ ನಟನೆಯ 'ಪುಷ್ಪಕ ವಿಮಾನ' ವಿರುದ್ಧ ಕೇಸ್ ದಾಖಲು]

  ಯಾವ ಚಿತ್ರದ ಕಥೆ ಕದ್ದಿರುವ ಆರೋಪ!

  ಯಾವ ಚಿತ್ರದ ಕಥೆ ಕದ್ದಿರುವ ಆರೋಪ!

  ಕೊರಿಯನ್ ಭಾಷೆಯ ''ಮಿರಾಕಲ್ ಸೆಲ್ ನಂಬರ್ 7'' ಚಿತ್ರಕಥೆಯನ್ನ ಕನ್ನಡ 'ಪುಷ್ಪಕ ವಿಮಾನ' ಚಿತ್ರತಂಡ ಕದ್ದಿದ್ದಾರೆ ಎಂದು ಆರೋಪಿಸಲಾಗಿದೆ. ಆದ್ರೆ, 'ಪುಷ್ಪಕ ವಿಮಾನ' ಚಿತ್ರತಂಡ. ಇದು ರೀಮೇಕ್ ಸಿನಿಮಾ ಅಲ್ಲ, ಸ್ಪೂರ್ತಿ ಪಡೆದುಕೊಂಡು ಮಾಡಿರುವ ಚಿತ್ರವೆಂದು ಹೇಳಿಕೊಂಡಿತ್ತು.['ಪುಷ್ಪಕ ವಿಮಾನ' ರೀಮೇಕ್ ಸಿನಿಮಾನಾ? ಕ್ಲಾರಿಟಿ ಇಲ್ಲಿದೆ!]

  ರಮೇಶ್ ಅರವಿಂದ್ 100ನೇ ಸಿನಿಮಾ

  ರಮೇಶ್ ಅರವಿಂದ್ 100ನೇ ಸಿನಿಮಾ

  ಎಸ್ ರವಿಂದ್ರನಾಥ್ ಅವರ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಚರಣ್ ರಾಜ್ ಸಂಗೀತ ನೀಡಿದ್ದರು. ಪವನ್ ಒಡೆಯರ್, ವಿಖ್ಯಾತ್, ದೀಪಕ್ ಕೃಷ್ಣ, ಸುಕೃತ್ ದೇವೆಂದ್ರ, ದೀಪಕ್ ಕಿಶೋರ್, ದೇವಂತ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದರು. ಉಳಿದಂತೆ ರಚಿತಾ ರಾಮ್, ಯುವಿನಾ ಪಾರ್ಥವಿ, ರಮೇಶ್ ಅರವಿಂದ್ ಅಭಿನಯಿಸಿದ್ದರು. ಜನವರಿ 6 ರಂದು ಸಿನಿಮಾ ರಾಜ್ಯದ್ಯಂತ ಬಿಡುಗಡೆಯಾಗಿತ್ತು.

  English summary
  The FIR has been registered against the producers Vikhyath, Pawan Wadeyar, Guruprasad and Vijay Savanur for allegedly forging documents related to the remake rights of the Korean film Miracle In Cell No 7.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X