»   » 'ಪುಷ್ಪಕ ವಿಮಾನ' ರೀಮೇಕ್ ಸಿನಿಮಾನಾ? ಕ್ಲಾರಿಟಿ ಇಲ್ಲಿದೆ!

'ಪುಷ್ಪಕ ವಿಮಾನ' ರೀಮೇಕ್ ಸಿನಿಮಾನಾ? ಕ್ಲಾರಿಟಿ ಇಲ್ಲಿದೆ!

Posted By:
Subscribe to Filmibeat Kannada

ರಮೇಶ್ ಅರವಿಂದ್ ಅಭಿನಯದ 100ನೇ ಸಿನಿಮಾ 'ಪುಷ್ಪಕ ವಿಮಾನ' ಇದೇ ವಾರ ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಕಾಣುತ್ತಿದೆ. ಈಗಾಗಲೇ ಚಿತ್ರದ ಟ್ರೈಲರ್ ಹಾಗೂ ಹಾಡುಗಳು ಮೂಲಕ ಮೋಡಿ ಮಾಡಿದ್ದು, ಪ್ರೇಕ್ಷಕರನ್ನ ಸೆಳೆಯುತ್ತಿದೆ.

ಚಿತ್ರದಲ್ಲಿ ಬುದ್ಧಿಮಾಂದ್ಯ ವ್ಯಕ್ತಿಯಾಗಿ ಕಾಣಿಸಿಕೊಂಡಿರುವ ರಮೇಶ್ ಅವರ ಪಾತ್ರ ಬಿಡುಗಡೆಗೆ ಮುಂಚೆನೇ ಎಲ್ಲರ ಮೆಚ್ಚುಗೆ ಗಳಿಸಿಕೊಂಡಿದೆ. ರಮೇಶ್ ಅವರ ಮಗಳ ಪಾತ್ರದಲ್ಲಿ ರಚಿತಾ ರಾಮ್ ಹಾಗೂ ಚಿಕ್ಕವಯಸ್ಸಿನ ಮಗಳ ಪಾತ್ರದಲ್ಲಿ ಯುವಿನಾ ಪಾರ್ಥವಿ ಕಾಣಿಸಿಕೊಂಡಿದ್ದಾರೆ.[ಯು-ಪ್ರಮಾಣ ಪತ್ರ ಪಡೆದ 'ಪುಷ್ಪಕ ವಿಮಾನ: ರಿಲೀಸ್ ಗೆ ದಿನಗಣನೆ ]


ಟ್ರೈಲರ್, ಹಾಡು, ಪೋಸ್ಟರ್ ಗಳಿಂದ ವಿಶೇಷವೆನಿಸಿರುವ 'ಪುಷ್ಪಕ ವಿಮಾನ' ರೀಮೇಕ್ ಸಿನಿಮಾನ ಎಂಬ ಚರ್ಚೆ ಎಲ್ಲೆಡೆ ಕೇಳಿಬರುತ್ತಿದೆ. ಹಾಗಾದ್ರೆ, 'ಪುಷ್ಪಕ ವಿಮಾನ' ರೀಮೇಕ್ ಚಿತ್ರನಾ? ಈ ಬಗ್ಗೆ ಚಿತ್ರದ ನಿರ್ದೇಶಕರು ಹೇಳಿದ್ದೇನು ಗೊತ್ತಾ? ಮುಂದೆ ಓದಿ....


'ಪುಷ್ಪಕ ವಿಮಾನ' ರೀಮೇಕ್?

'ಪುಷ್ಪಕ ವಿಮಾನ' ರೀಮೇಕ್ ಚಿತ್ರನಾ....? ಹೀಗಂತಾ ಚರ್ಚೆಯೊಂದು ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಇದಕ್ಕೆ ಕಾರಣ, 'ಪುಷ್ಪಕ ವಿಮಾನ' ತಂದೆ-ಮಗಳ ಬಾವನಾತ್ಮಕ ಸಂಬಂಧದ ಚಿತ್ರವೆಂಬುದು. ಹಾಗೂ ಬುದ್ಧಿಮಾಂದ್ಯ ವ್ಯಕ್ತಿಯಾಗಿ ಕಾಣಿಸಿಕೊಂಡಿರುವ ರಮೇಶ್ ಅರವಿಂದ್ ಅವರ ಪಾತ್ರ.[ಹೊಸ ವರ್ಷದ ಆರಂಭದಲ್ಲಿ ಹಾರಲಿದೆ 'ಪುಷ್ಪಕ ವಿಮಾನ' ]


ತಮಿಳಿನ 'ದೈವತಿರುಮಗಳ್' ಕಥೆನಾ?

ಕನ್ನಡದ 'ಪುಷ್ಪಕ ವಿಮಾನ', ತಮಿಳಿನ 'ದೈವ ತಿರುಮಗಳ್' ಚಿತ್ರದ ಕಥೆನಾ ಎಂಬ ಅನುಮಾನ ಕಾಡುತ್ತಿತ್ತು. ಯಾಕಂದ್ರೆ, ಈ ಚಿತ್ರದಲ್ಲಿ ಚಿಯಾನ್ ವಿಕ್ರಂ ನಾಯಕನಾಗಿದ್ದು, ಬುದ್ಧಿಮಾಂದ್ಯ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದರು. ಮಗಳ ಪಾತ್ರದಲ್ಲಿ ಬೇಬಿ ಸಾರಾ ಹಾಗೂ ಲಾಯರ್ ಪಾತ್ರದಲ್ಲಿ ನಟಿ ಅನುಷ್ಕಾ ಶೆಟ್ಟಿ ಅಭಿನಯಿಸಿದ್ದರು. ಹೀಗಾಗಿ ಈ ಚಿತ್ರಕ್ಕೂ, ಕನ್ನಡದ 'ಪುಷ್ಪಕ ವಿಮಾನ'ಕ್ಕೂ ಸಂಬಂಧವಿರಬಹುದು ಎನ್ನಲಾಗುತ್ತಿತ್ತು.


ರೀಮೇಕ್ ಚಿತ್ರವಲ್ಲವೆಂದ ನಿರ್ದೇಶಕ

'ಪುಷ್ಪಕ ವಿಮಾನ' ರೀಮೇಕ್ ಚಿತ್ರವೆಂಬುದನ್ನ ನಿರ್ದೇಶಕ ಅಲ್ಲೆಗೆಳೆದಿದ್ದಾರೆ. ಇದು ಯಾವುದೇ ಚಿತ್ರದ ರೀಮೇಕ್ ಎಲ್ಲ. ತಂದೆ-ಮಗಳ ಸಂಬಂಧದ ಕುರಿತು ಹಲವು ಸಿನಿಮಾಗಳು ಬಂದಿರಬಹುದು. ಆ ಚಿತ್ರಗಳನ್ನೆಲ್ಲ ನೋಡಿದ್ದೀವಿ. ಆದ್ರೆ, ನಮ್ಮ ಚಿತ್ರ ಸ್ವಮೇಕ್'' ಎಂದು ಚಿತ್ರದ ನಿರ್ದೇಶಕ ಎಸ್.ರವೀಂದ್ರನಾಥ್ ಸ್ವಷ್ಟಪಡಿಸಿದ್ದಾರೆ.


ಹಾಲಿವುಡ್ ಚಿತ್ರಗಳ ಸ್ಪೂರ್ತಿ!

ಅಂದ್ಹಾಗೆ, 'ಪುಷ್ಪಕ ವಿಮಾನ' ರೀಮೇಕ್ ಚಿತ್ರವಲ್ಲ. ಆದ್ರೆ, ಹಾಲಿವುಡ್ ನ ಕೆಲ ಚಿತ್ರಗಳನ್ನ ಸ್ಪೂರ್ತಿಯಾಗಿರಿಸಿಕೊಂಡು ಮಾಡಲಾಗಿದೆಯಂತೆ. ಹಾಲಿವುಡ್ ನ 'ಮಿರಕಲ್ ಸೆಲ್ ನಂಬರ್ ಸವೆನ್', 'ಲೈಫ್ ಈಸ್ ಬ್ಯೂಟಿಫುಲ್, 'ಪರ್ಸ್ಯುಟ್ ಆಫ್ ಹ್ಯಾಪಿನೇಸ್' ಅಂತಹ ಚಿತ್ರಗಳಿಂದ ನಿರ್ದೇಶಕರು ಸ್ಪೂರ್ತಿ ಪಡೆದುಕೊಂಡಿದ್ದಾರಂತೆ.['ಪುಷ್ಪಕ ವಿಮಾನ'ದಲ್ಲಿ ರಚಿತಾ ರಾಮ್ 'ಲಾಯರ್', ಫಸ್ಟ್ ಲುಕ್ ರಿಲೀಸ್! ]


ಇದೇ ವಾರ ತೆರೆಗೆ 'ಪುಷ್ಪಕ ವಿಮಾನ'

ಇದೇ ವಾರ (ಜನವರಿ 6 ರಂದು) 'ಪುಷ್ಪಕ ವಿಮಾನ' ತೆರೆಗೆ ಬರ್ತಿದೆ. ರಮೇಶ್ ಅರವಿಂದ್, ಯುವಿನಾ, ರಚಿತಾ ರಾಮ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಎಸ್.ರವಿಂಧ್ರನಾಥ್ ನಿರ್ದೇಶನ, ಚರಣ್ ರಾಜ್ ಅವರ ಸಂಗೀತ ಈ ಚಿತ್ರಕ್ಕಿದೆ. ಪವನ್ ಒಡೆಯರ್, ವಿಖ್ಯಾತ್, ದೀಪಕ್ ಕೃಷ್ಣ, ದೀಪಕ್ ಕಿಶೋರ್, ಸುಕೃತ್, ದೇವಂತ್ ಸೇರಿ ನಿರ್ಮಾಣ ಮಾಡಿದ್ದಾರೆ.


English summary
Ramesh Aravind, Rachita Ram, Baby Yuvina Starerr 'Pushpaka Vimana' is not A Remake Movie Says Director S Ravindranath. Pushpaka Vimana has set to Release on january 6th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada