ದೀಪಿಕಾ ಪಡುಕೋಣೆ ವಾಸವಿದ್ದ ಅಪಾರ್ಟ್ಮೆಂಟ್ ಗೆ ಬೆಂಕಿ: ನಟಿ ಸೇಫ್

By Bharath Kumar

Recommended Video

ದೀಪಿಕಾ ಪಡುಕೋಣೆ ವಾಸವಿದ್ದ ಅಪಾರ್ಟ್ಮೆಂಟ್ ಗೆ ಬೆಂಕಿ..! | FIlmibeat Kannada

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನೆಲೆಸಿದ್ದ ಮುಂಬೈನ ಅಪಾರ್ಟ್ಮೆಂಟ್ ನಲ್ಲಿ ಬೆಂಕಿ ಅನಾಹುತ ಸಂಭವಿಸಿದ್ದು, ಘಟನಾ ಸ್ಥಳಕ್ಕೆ ಅಗ್ನಿಶಾಮಕದಳ ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಈ ಅನಾಹುತದ ವೇಳೆ ನಟಿ ದೀಪಿಕಾ ಪಡುಕೋಣೆ ಶೂಟಿಂಗ್ ಕಾರಣದಿಂದ ಹೊರ ಹೋಗಿದ್ದರು. ಹೀಗಾಗಿ, ಅವರ ಫ್ಲ್ಯಾಟ್ ನಲ್ಲಿ ಯಾರೂ ಇರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ವರ್ಲಿನಲ್ಲಿ ಬ್ಯೂಮಾಂಡೆ ಟವರ್ಸ್ ಕಟ್ಟಡದ 32, 33ನೇ ಅಂತಸ್ತಿಗಳಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದಕ್ಕೆ ಕಾರಣ ತಿಳಿದು ಬಂದಿಲ್ಲ. ಆದ್ರೆ, ದೀಪಿಕಾ ಪಡುಕೋಣೆ ಇರೋದು 26 ಅಂತಸ್ತಿನಲ್ಲಿ. ಹೀಗಾಗಿ, ಅವರ ಫ್ಲ್ಯಾಟ್ ಗೆ ಯಾವುದೇ ತೊಂದರೆಯಾಗಿಲ್ಲ ಎಂದು ದೀಪಿಕಾ ಅವರ ಆಪ್ತರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

Fire breaks out at Deepika Padukones apart

ಇನ್ನು 2010ರಲ್ಲಿ ದೀಪಿಕಾ ಪಡುಕೋಣೆ ಈ ಕಟ್ಟಡದಲ್ಲಿ ಪ್ಲ್ಯಾಟ್ ಖರೀದಿಸಿದ್ದು, ತಂದೆಯ ಪ್ರಕಾಶ್ ಪಡುಕೋಣೆ ಮತ್ತು ದೀಪಿಕಾ ಅವರ ಹೆಸರಿನಲ್ಲಿ ಈ ಮನೆಯಿದೆ ಎನ್ನಲಾಗಿದೆ.

More from Filmibeat

English summary
Fire breaks out at Deepika Padukone’s building, the Padmaavat actor is safe. A source close to Deepika has confirmed that the actor was not in the building when the fire broke out. She was out for the shoot of a brand.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X