»   » ನರ್ತಕಿಯಲ್ಲಿ ದರ್ಶನ್, ಅಂಬರೀಶ್ ಕಟೌಟಿಗೆ ಬೆಂಕಿ

ನರ್ತಕಿಯಲ್ಲಿ ದರ್ಶನ್, ಅಂಬರೀಶ್ ಕಟೌಟಿಗೆ ಬೆಂಕಿ

Posted By:
Subscribe to Filmibeat Kannada

ತುಂಬಿದ ಪ್ರದರ್ಶನ ಕಾಣುತ್ತಿರುವ ರೆಬೆಲ್ ಸ್ಟಾರ್ ಅಂಬರೀಶ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬುಲ್ ಬುಲ್ ಚಿತ್ರ ಪ್ರದರ್ಶನವಾಗುತ್ತಿರುವ ಮೈನ್ ಥಿಯೇಟರ್ ಕೆ ಜಿ ರಸ್ತೆಯ ನರ್ತಕಿ ಚಿತ್ರಮಂದಿರದ ಮುಂದೆ ಭಾನುವಾರ (ಮೇ 12) ಸಂಜೆ ಬೆಂಕಿ ಆಕಸ್ಮಿಕ ಘಟನೆ ವರದಿಯಾಗಿದೆ.

ಮೊದಲನೇ ಶೋ (ಸಂಜೆ 4.30) ಶುರುವಾಗುವ ಮುನ್ನ ನರ್ತಕಿ ಚಿತ್ರಮಂದಿರದ ಮುನ್ನ ಜನಸಾಗರವೇ ನೆರೆದಿತ್ತು. ದರ್ಶನ್ ಮತ್ತು ಅಂಬರೀಶ್ ಅಭಿಮಾನಿಗಳು ಸತತವಾಗಿ ಸಿಡಿಸುತ್ತಿದ್ದ ಪಟಾಕಿಯ ಕಿಡಿಯಿಂದಾಗಿ ಅಂಬರೀಶ್ ಹಾಗೂ ದರ್ಶನ್ ಅವರ ಕಟೌಟಿಗೆ ಬೆಂಕಿ ತಗುಲಿ ಹೊತ್ತಿಕೊಳ್ಳಲಾರಂಭಿಸಿತು.

Fire broke out at Nartaki theatre Ambarish and Darshan cutout

ನರ್ತಕಿ ಚಿತ್ರಮಂದಿರದ ಮುಂದೆ ಅಂಬರೀಶ್ ಮತ್ತು ದರ್ಶನ್ ಅವರ ಭಾರೀ ಗಾತ್ರದ ಕಟೌಟ್ ಹಾಕಲಾಗಿದೆ. ಅಭಿಮಾನಿಗಳು ದೊಡ್ದ ಗಾತ್ರದ ಹೂವಿನಹಾರ, ಸ್ಟಾರ್ ಗಳ ಮೂಲಕ ಮೆರವಣಿಗೆಯಲ್ಲಿ ಬಂದು ಚಿತ್ರಮಂದಿರದ ಮುಂದೆ ಜಮಾಯಿಸುತ್ತಿದ್ದರು.

ವಿವಿಧ ಅಭಿಮಾನಿ ಸಂಘಗಳು ಪ್ರತ್ಯೇಕ ಪ್ರತ್ಯೇಕವಾಗಿ ಪಟಾಕಿ ಸಿಡಿಸಲಾರಂಭಿಸಿದ್ದರಿಂದ ಪಟಾಕಿಯ ಕಿಡಿ ಹೂವಿನಹಾರಕ್ಕೆ ತಗುಲಿ ಅಲ್ಲಿಂದ ಕಟೌಟಿಗೆ ಹತ್ತಿಕೊಂಡಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಯಾವುದೇ ಅಪಾಯ ಆದ ಬಗ್ಗೆ ವರದಿಯಾಗಿಲ್ಲ.

ಭಾನುವಾರ ದಿನವಿಡೀ "'ಬುಲ್‌ ಬುಲ್ " ಚಿತ್ರ ಪ್ರದರ್ಶನ ಆರಂಭ ಮತ್ತು ಮುಕ್ತಾಯ ಸಮಯದಲ್ಲಿ ಕೆ ಜಿ ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆ ವಿಪರೀತವಾಗಿತ್ತು. ಚಿತ್ರಕ್ಕೆ ರಾಜ್ಯಾದ್ಯಂತ ಮೂರು ದಿನದಲ್ಲಿ ಸಿಕ್ಕ ಅಭೂತಪೂರ್ವ ಪ್ರತಿಕ್ರಿಯೆಯ ಪ್ರಕಾರ ದರ್ಶನ್ ಅವರ ಸತತ ನಾಲ್ಕನೇ ಚಿತ್ರ ಗೆಲುವಿನತ್ತ ಸಾಗುತ್ತಿದೆ.

ಬುಲ್ ಬುಲ್ ಚಿತ್ರದ ಗ್ಯಾಲರಿ

English summary
Fire broke out - Ambarish and Darshan huge cutout in Nartaki theater, Bangalore on Sunday May 12. Bul Bul movie screening in Nartaki theater.
Please Wait while comments are loading...