»   » ಸಿಂಪಲ್ಲಾಗಿ ತಂಡದ ’ಉಳಿದವರು ಕಂಡಂತೆ’ ಫಸ್ಟ್ ಲುಕ್

ಸಿಂಪಲ್ಲಾಗಿ ತಂಡದ ’ಉಳಿದವರು ಕಂಡಂತೆ’ ಫಸ್ಟ್ ಲುಕ್

Posted By:
Subscribe to Filmibeat Kannada

ಸಮಸ್ತ ಕುಲಕೋಟಿಗಳಿಗೆ ಸಿಂಪಲ್ಲಾಗಿ ಚಿತ್ರವೊಂದು ಗೆಲ್ಲಲು ಏನು ಮಾಡಬೇಕೆಂದು ತೋರಿಸಿ ಕೊಟ್ಟ 'ಸಿಂಪಲ್ಲಾಗೊಂದ್ ಲವ್ ಸ್ಟೋರಿ' ಚಿತ್ರತಂಡ ಈಗ ಮತ್ತೊಂದು ಚಿತ್ರಕ್ಕೆ ವೇದಿಕೆ ಸಜ್ಜು ಮಾಡಿಕೊಳ್ಳುತ್ತಿದೆ.

ಒನ್ ಇಂಡಿಯಾ ಕಚೇರಿಗೆ ಈ ಹಿಂದೆ ಭೇಟಿ ಕೊಟ್ಟಿದ್ದ ಸಮಯದಲ್ಲಿ ಈ ವಿಷಯವನ್ನು ಬಹಿರಂಗ ಪಡಿಸಿದ್ದ ನಾಯಕ ರಕ್ಷಿತ್ ಶೆಟ್ಟಿ ಹೊಸ ಚಿತ್ರ ಮೇ 2013 ರಲ್ಲಿ ಸೆಟ್ಟೇರಲಿದೆ ಎಂದು ಹೇಳಿದ್ದರು. ಅದರಂತೆ ತನ್ನ ಮುಂದಿನ ಚಿತ್ರದ ಫಸ್ಟ್ ಲುಕ್ ಸ್ಕೆಚ್ ಅನ್ನು ರಕ್ಷಿತ್ ಶೆಟ್ಟಿ ತನ್ನ ಫೇಸ್ ಬುಕ್ ಅಕೌಂಟ್ ನಲ್ಲಿ ಹಾಕಿಕೊಂಡಿದ್ದಾರೆ.

First look of Rakshit Shetty next project Ulidavaru Kandante

'ಉಳಿದವರು ಕಂಡಂತೆ' ಎನ್ನುವುದು ಚಿತ್ರದ ಹೆಸರು ಮತ್ತು as seen by the rest ಇದು ಚಿತ್ರದ ಟ್ಯಾಗ್ ಲೈನ್. ಚಿತ್ರದ ಹೀರೊ ಕಂ ನಿರ್ದೇಶಕ ರಕ್ಷಿತ್ ಶೆಟ್ಟಿ. ಸಿಂಪಲ್ಲಾಗೊಂದ್ ಲವ್ ಸ್ಟೋರಿ ಚಿತ್ರದ ನಿರ್ಮಾಪಕರಾಗಿದ್ದ ಹೇಮಂತ್ ಮತ್ತು ಸುನಿಲ್ ಈ ಚಿತ್ರಕ್ಕೂ ಬಂಡವಾಳ ಸುರಿಯಲಿದ್ದಾರೆ.

ಉಳಿದಂತೆ ಚಿತ್ರಕ್ಕೆ ಎಡಿಟರ್ ಸಚಿನ್, ಸಂಗೀತ ಅಜನೀಶ್ ಲೋಕನಾಥ್, ಸಿನಿಮಾಟೋಗ್ರಾಫಿ ಕರಣ್ ಚಾವ್ಲಾ. ಯುವಿನ್ ಸಿನಿಮಾಸ್ ಬ್ಯಾನರಡಿಯಲ್ಲಿ ಮೂಡಿ ಬರಲಿರುವ ಚಿತ್ರಕ್ಕೆ ನಾಯಕಿ ಮತ್ತು ಇತರ ತಾರಾಗಣದ ಆಯ್ಕೆ ಇನ್ನೂ ಅಂತಿಮವಾಗಿಲ್ಲ. ಚಿತ್ರತಂಡಕ್ಕೆ ನಮ್ಮ ಕಡೆಯಿಂದ ಆಲ್ ದಿ ಬೆಸ್ಟ್.

ರಕ್ಷಿತ್ ಶೆಟ್ಟಿ ಸಂದರ್ಶನ

English summary
Simplag Ond Love Story fame actor Rakshit Shetty's next venture 'Ulidvaru Kandante' first look sketch.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada