'ರಘು ಮುಖರ್ಜಿ ಬಳಿ ಸಿಕ್ಕಾಪಟ್ಟೆ ದುಡ್ಡಿದೆ ಅಂದ್ಕೊಂಡಿದ್ರು": ಫಸ್ಟ್ ಟೈಂ ವೈಯಕ್ತಿಕ ಜೀವನ ರಿವೀಲ್!

ಸ್ಯಾಂಡಲ್‌ವುಡ್‌ನ ಹ್ಯಾಂಡ್‌ಸಮ್ ಹೀರೊಗಳಲ್ಲಿ ರಘು ಮುಖರ್ಜಿ ಕೂಡ ಒಬ್ಬರು. ನಾಗತ್ತಿಹಳ್ಳಿ ಚಂದ್ರಶೇಖರ್ ನಿರ್ದೇಶಿಸಿದ 'ಪ್ಯಾರಿಸ್ ಪ್ರಣಯ' ಸಿನಿಮಾದಿಂದ ಕನ್ನಡಿಗರಿಗೆ ಪರಿಚಯ ಆಗಿದ್ದರು. ಅಲ್ಲಿಂದ ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಲೇ ಬಂದಿದ್ದಾರೆ.

ರಘು ಮುಖರ್ಜಿ ಹೆಸರು ಕೇಳಿ ಕೂಡಲೇ ಯಾರೋ ಎನ್‌ಆರ್‌ಐ ಅಂತ ಭಾವಿಸಿದ್ದವರು ಅದೆಷ್ಟೋ ಮಂದಿ. ಹಲವು ಸಿನಿಮಾಗಳಲ್ಲಿ ನಟಿಸಿದ್ದರೂ, ರಘು ಮುಖರ್ಜಿ ಹಿನ್ನೆಲೆ ಬಹುತೇಕ ಕನ್ನಡಿಗರಿಗೆ ಗೊತ್ತೇ ಇಲ್ಲ. ರಘು ಮುಖರ್ಜಿ ಎಲ್ಲೂ ಹೇಳಿಕೊಂಡಿಲ್ಲ.

ಕೇವಲ ಆಪ್ತರಿಗಷ್ಟೇ ಗೊತ್ತಿರೋ ತಮ್ಮ ಹಿನ್ನೆಲೆಯನ್ನು ಇದೇ ಮೊದಲ ಬಾರಿಗೆ ಕನ್ನಡಿಗರ ಮುಂದಿಟ್ಟಿದ್ದಾರೆ. ಸದ್ಯ 'ಹೆಡ್ ಬುಷ್' ಸಿನಿಮಾದಲ್ಲಿ ನಟಿಸಿರೋ ರಘು ಮುಖರ್ಜಿ ತಮ್ಮ ವೈಯುಕ್ತಿಕ ಬದುಕಿನ ಬಗ್ಗೆ ಡಾಲಿ ಧನಂಜಯ್ ಜೊತೆ ಹಂಚಿಕೊಂಡಿದ್ದಾರೆ. ಅದರ ಸಾರಾಂಶ ಇಲ್ಲಿದೆ.

ಫೈಟರ್ ಪೈಲಟ್ ಆಗ್ಬೇಕಿತ್ತು ರಘು ಮುಖರ್ಜಿ

ಫೈಟರ್ ಪೈಲಟ್ ಆಗ್ಬೇಕಿತ್ತು ರಘು ಮುಖರ್ಜಿ

"ನನ್ನ ಪರ್ಸನಲ್ ಜೀವನ ಹೇಗಿತ್ತು ಅನ್ನೋದು ಯಾರಿಗೂ ಗೊತ್ತಿಲ್ಲ. ನನ್ನ ಸ್ನೇಹಿತರಿಗಷ್ಟೇ ಗೊತ್ತಿದೆ. ನಾನು ಪ್ಯಾರಿಸ್ ಪ್ರಣಯ ಸಿನಿಮಾ ಮಾಡಿದ್ದೇ ಬೇರೆ ಕಾರಣಕ್ಕೆ. ನನ್ನ ಲೈಫ್‌ನಲ್ಲಿ ಏನೇನು ಆಗಿದೆಯೋ, ನಾನು ಏನು ಆಗ್ಬೇಕು ಅಂತ ಇದ್ನೋ ಅದು ಆಗಿಲ್ಲ. ನಾನು ಫೈಟರ್ ಪೈಲಟ್ ಆಗಬೇಕು ಅಂದುಕೊಂಡಿದ್ದೆ. ಚಿಕ್ಕವನಿಂದ ನನಗೆ ಏರೋಪ್ಲೇನ್ ಅಂದರೆ ಇಷ್ಟ. ಹಾರಾಡಬೇಕು ಅಷ್ಟೇ." ಎಂದಿದ್ದಾರೆ ರಘು ಮುಖರ್ಜಿ.

ಕೆಳ ಮಧ್ಯಮ ವರ್ಗದಿಂದ ಬಂದವನು ನಾನು

ಕೆಳ ಮಧ್ಯಮ ವರ್ಗದಿಂದ ಬಂದವನು ನಾನು

"ನನಗೆ 19 ವರ್ಷ. 2001ರಲ್ಲಿ ನಮ್ಮ ಅಪ್ಪ ದಿಢೀರನೇ ತೀರಿಕೊಂಡುಬಿಟ್ಟರು. ಎಲ್ಲರಿಗೂ ಏನೂ ಅಂದರೆ, ರಘು ಮುಖರ್ಜಿ ರಿಚ್ ಫ್ಯಾಮಿಲಿಯಿಂದ ಬಂದವನು. ಅವನ ಬಳಿ ಸಿಕ್ಕಾಪಟ್ಟೆ ದುಡ್ಡಿದೆ ಅಂತ. ಆದರೆ, ಅದು ಸುಳ್ಳು. ತುಂಬಾ ಸಣ್ಣ ಕುಟುಂಬದಿಂದ, ಕೆಳ ಮಧ್ಯಮ ವರ್ಗದಿಂದ ಬಂದ ವ್ಯಕ್ತಿ ನಾನು. ನಮ್ಮ ತಂದೆ ತೀರಿಕೊಂಡಿದ್ದರು. ನಾನು ಒಬ್ಬನೇ ಮಗ. ನಮ್ಮ ತಾಯಿ ಎಲ್ಲೂ ಕೆಲಸ ಮಾಡಿಲ್ಲ. ನಮ್ಮ ತಂದೆ ದುಡಿತಿದ್ರು. ನಮ್ಮನ್ನು ನೋಡಿಕೊಳ್ಳುತ್ತಿದ್ದರು. ತಂದೆ ಸತ್ತಾಗ ನಾನು 12ನೇ ತರಗತಿ ಓದುತ್ತಿದೆ. ನಮ್ಮ ತಂದೆಯವರ ತಂದೆ ಒಂದಿಷ್ಟು ವರ್ಷ ಸಪೋರ್ಟ್ ಮಾಡಿದ್ದರು. ಆಗ ನಮ್ಮ ಮನೆ ಬಾಡಿಗೆ ಮೂರುವರೆ ಸಾವಿರ. ರೇಷನ್, ಅದು-ಇದೂ ಖರ್ಚು ಗೊತ್ತಿದೆಯಲ್ಲ." ಎನ್ನುತ್ತಾರೆ ರಘು ಮುಖರ್ಜಿ.

ಕಾಲ್‌ ಸೆಂಟರ್ Or ಮಿಸ್ಟರ್ ಇಂಡಿಯಾ?

ಕಾಲ್‌ ಸೆಂಟರ್ Or ಮಿಸ್ಟರ್ ಇಂಡಿಯಾ?

"ಆಗ ಕಾಲ್‌ ಸೆಂಟರ್ ಬೂಮ್‌ನಲ್ಲಿತ್ತು. ಎಲ್ಲರೂ ಅದಕ್ಕೆ ಸೇರಿಕೋ ಅಂದರು. ಆಗ ಇಷ್ಟೇನಾ ಲೈಫ್ ಅಂತ ಅನಿಸಿತ್ತು. ಆ ವೇಳೆ ಪ್ರಸಾದ್ ಬಿದ್ದಪ್ಪ ಅವರು ಮಿಸ್ಟರ್ ಇಂಡಿಯಾಗೆ ಎಂಟ್ರಿಗಳನ್ನು ಕಳುಹಿಸಿದ್ದರು. ನಮ್ಮ ತಂದೆ ಸತ್ತ ಬಳಿಕ ನೀವು ಸೆಲೆಕ್ಟ್ ಆಗಿದ್ದೀರಾ ಅಂತ ಬಂದಿತ್ತು. ಅಮ್ಮನಿಗೆ ತೋರಿಸಿದೆ. ಅವರು ಅದೆಲ್ಲಾ ಸರಿ ಹೋಗಲ್ಲ ಅಂತ ಹೇಳಿದ್ದರು. ನೀನು ಜವಾಬ್ದಾರಿ ತೆಗೋಬೇಕು ಅಂತ ಹೇಳಿದ್ದರು. ತಾತಾನಿಗೆ ಕೇಳಿದೆ ನೀನು ಹೋಗಿಬಾ ನೋಡೋಣ ಅಂತ ಹೇಳಿದ್ದರು. 2001ರಲ್ಲಿ 35 ಸಾವಿರ ಅಪ್ಲಿಕೇಷನ್ ಬಂದಿತ್ತು. ಆ ಸ್ಟೇಜ್‌ನಲ್ಲಿ ಏನು ಮಾಡಬೇಕು ಅಂತ ಗೊತ್ತಾಗಿಲ್ಲ."

ಹಣ, ಜನ ನೋಡಿದ್ದೇ ಆಗ!

ಹಣ, ಜನ ನೋಡಿದ್ದೇ ಆಗ!

"ನಾನು ಮಿಸ್ಟರ್ ಇಂಡಿಯಾ ಗೆದ್ದ ಮೇಲೆ ನನ್ನನ್ನು ನೋಡಿ ನಾಗತ್ತಿಹಳ್ಳಿ ಚಂದ್ರಶೇಖರ್ ಸಿನಿಮಾಗೆ ಕರೆದಿದ್ದರು. ಆದರೆ, ನನಗೆ ಆಕ್ಟಿಂಗ್ ಅಂದರೆ ಏನು ಅನ್ನೋದೇ ಗೊತ್ತಿರಲಿಲ್ಲ. ಅವರಿಗೆ ಹೇಳಿದೆ. ಆಗ ಅವರು ಕ್ಯಾಮರಾ ಮುಂದೆ ನಗಿ ಅಂದಾಗ ನಗಿ, ಅಳು ಅಂದಾಗ ಅಳು ಅಂತ ಹೇಳಿದರು. ಅದನ್ನು ನೋಡಿದ್ಮೇಲೆ ನಿಮ್ಮ ಜೊತೆ ಸಿನಿಮಾ ಮಾಡುತ್ತೇನೆ ಅಂತ ಹೇಳಿದ್ರು. ಅಷ್ಟೊತ್ತಿದೆ ಮಿಸ್ಟರ್ ಇಂಟರ್‌ನ್ಯಾಷನಲ್ ಗೆದ್ದಿದ್ದೆ. ಆಗಲೇ ಪ್ಯಾರಿಸ್ ಪ್ರಣಯ ಸಿನಿಮಾ ಸೆಟ್ಟೇರಿತ್ತು. ಹಣ, ದುಡ್ಡು, ಜನ ಎಲ್ಲಾ ನೋಡೋಕೆ ಶುರು ಮಾಡಿದೆ." ಎಂದು ರಘು ಮುಖರ್ಜಿ ಧನಂಜಯ್‌ ಮುಂದೆ ರಿವೀಲ್ ಮಾಡಿದ್ದಾರೆ.

More from Filmibeat

English summary
First Time Raghu Mukharjee Talks About His Personal Life Infront Of Dhananjay, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X