twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡದ ಮೊದಲ ವರ್ಚುವಲ್ ಸಿನಿಮಾ 'ಮೇಡ್ ಇನ್ ಚೈನಾ' ರಿಲೀಸ್‌ ಯಾವಾಗ?

    |

    ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾಗಳ ಮೇಲೆ ಪ್ರಯೋಗ ಆಗಬೇಕು ಅಂತ ಬಯಸುವ ಅದೆಷ್ಟೋ ಮಂದಿ ಇದ್ದಾರೆ. ದಕ್ಷಿಣ ಭಾರತದ ಬೇರೆ ಬೇರೆ ಭಾಷೆಗಳಲ್ಲಿಯೇ ವಿಭಿನ್ನ ಸಿನಿಮಾಗಳನ್ನು ಮಾಡಲು ಮುಂದಾಗಿರುವಾಗ, ಕನ್ನಡದಲ್ಲಿ ಯಾಕೆ ಹೊಸ ಮಾದರಿಯ ಸಿನಿಮಾ ಬರುತ್ತಿಲ್ಲ ಎನ್ನುವವರಿಗೆ ಉತ್ತರ 'ಮೇಡ್ ಇನ್ ಚೈನಾ'. ಈ ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆಯಾಗಿದ್ದು, ಸಿನಿಪ್ರಿಯರ ಗಮನ ಸೆಳೆದಿದೆ.

    'ಮೇಡ್ ಇನ್ ಚೈನಾ' ಸಿನಿಮಾದ ಸ್ಪೆಷಾಲಿಟಿ ಏನು ಅಂತಿರಾ? ಇದು ಕನ್ನಡದ ಮೊದಲ ವರ್ಚುವಲ್ ಸಿನಿಮಾ. ವಿಡಿಯೋ ಕಾಲ್ ಮೂಲಕವೇ ಒಂದು ಇಡೀ ಸಿನಿಮಾ ತೋರಿಸಲಿದ್ದಾರೆ. ಈಗಾಗಲೇ ಮಲಯಾಳಂನಲ್ಲಿ ಇಂತಹದ್ದೊಂದು ಪ್ರಯತ್ನ ಮಾಡಲಾಗಿತ್ತು. ಲಾಕ್‌ಡೌನ್‌ ವೇಳೆ ಮಲಯಾಳಂ ಫಹಾದ್ ಫಾಸಿಲ್ ಹಾಗೂ ತಂಡ ಸೇರಿಕೊಂಡು 'ಸಿ ಯು ಸೂನ್' ಎಂಬ ಚಿತ್ರವನ್ನು ನಿರ್ಮಾಣ ಮಾಡಿತ್ತು. ಅದೇ ಮಾದರಿಯಲ್ಲಿ 'ಮೇಡ್ ಇನ್ ಚೈನಾ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.

    'ಮೇಡ್ ಇನ್ ಚೈನಾ' ಮಾರ್ಚ್ 11ಕ್ಕೆ ರಿಲೀಸ್

    'ಮೇಡ್ ಇನ್ ಚೈನಾ' ಕನ್ನಡದ ಮಟ್ಟಿಗೆ ಪ್ರಯೋಗಾತ್ಮಕ ಸಿನಿಮಾ. ಕಡಿಮೆ ಬಜೆಟ್‌ನಲ್ಲಿ ನಿರ್ಮಾಣಗೊಂಡಿರುವ ಸಿನಿಮಾ. ಕಾನ್ಸೆಪ್ಟ್ ಅನ್ನೇ ಬಂಡವಾಳವಾಗಿಟ್ಟುಕೊಂಡು ನಿರ್ಮಿಸಿದ ಸಿನಿಮಾ. ಇದು ಕನ್ನಡದ ಮೊದಲ ವರ್ಚುವಲ್ ಸಿನಿಮಾ ಕೂಡ ಹೌದು. ಇಡೀ ವಿಡಿಯೋ ಕಾಲ್‌ಗಳ ಮೂಲಕವೇ ಸಾಗುತ್ತದೆ. ಈಗಾಗಲೇ ಬಿಡುಗಡೆಯಾಗಿರುವ 'ಮೇಡ್ ಇನ್ ಚೈನಾ' ಸಿನಿಮಾದ ಟೀಸರ್ ಈ ಕಾನ್ಸೆಪ್ಟ್‌ಗೆ ಜನರಿಗೆ ತಿಳಿಸಿದೆ. ಅಲ್ಲದೆ ಇದೊಂದು ಪಕ್ಕಾ ಕಾಮಿಡಿ ಸಿನಿಮಾ ಅಂತಲೂ ಹಿಂಟ್ ಕೊಟ್ಟಿದೆ.

    'ಇಕ್ಕಟ್' ಸಿನಿಮಾ ಮೂಲಕ ಪ್ರೇಕ್ಷಕರನ್ನು ನಗೆಗಡೆಲ್ಲಿ ತೇಲಿಸಿದ್ದ ನಟ ನಾಗಭೂಷಣ್ 'ಮೇಡ್ ಇನ್ ಚೈನಾ' ಸಿನಿಮಾದ ಪ್ರಮುಖ ಪಾತ್ರ. 'ಮೇಡ್ ಇನ್ ಚೈನಾ' ಕನ್ನಡದ ಮೊದಲ ವರ್ಚುವಲ್ ಸಿನಿಮಾ ಆಗಿರುವುದರಿಂದ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರುತ್ತೆ ಅನ್ನುವ ಕುತೂಹಲವಿದೆ. ಈ ಸಿನಿಮಾ ಇದೇ ಮಾರ್ಚ್ 11ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. 'ಅಯೋಗ್ಯ', 'ರತ್ನಮಂಜರಿ' ಸಿನಿಮಾಗಳ ಛಾಯಾಗ್ರಾಹಕ ಪ್ರೀತಮ್ ತೆಗ್ಗಿನಮನೆ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಗ್ರಾಫಿಕ್ಸ್, ಎಡಿಟಿಂಗ್ ಹಾಗೂ ಛಾಯಾಗ್ರಹಣ ಕೂಡ ಇವರದ್ದೇ.

    first-vartual-kannada-movie-made-in-china-releasing-on-march-11th

    ಲಾಕ್‌ಡೌನ್‌ ವೇಳೆ ನಡೆಯುವ ಕಥೆ

    'ಮೇಡ್ ಇನ್ ಚೈನಾ' ಸಿನಿಮಾದಲ್ಲಿ ನಾಗಭೂಷಣ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರೆ, ನಾಗಭೂಷಣ್ ಪತ್ನಿಯಾಗಿ ಪ್ರಿಯಾಂಕಾ ತಿಮ್ಮೇಶ್ ಕಾಣಿಸಿಕೊಂಡಿದ್ದಾರೆ. ಲಾಕ್‌ಡೌನ್ ವೇಳೆ ಪತಿ ವಿದೇಶದಲ್ಲಿ ಲಾಕ್ ಆಗುತ್ತಾನೆ. ಪತ್ನಿ ಕರ್ನಾಟಕದಲ್ಲಿ ಇರುತ್ತಾಳೆ. ಗಂಡ ಹೆಂಡ್ತಿ‌ ನಡುವಿನ ಪ್ರೀತಿ ಪ್ರೇಮ, ಮಾತುಕತೆ ಎಲ್ಲವೂ ವಿಡಿಯೋ ಕಾಲ್ ಮೂಲಕವೇ ನಡೆಯುತ್ತೆ. ಇದನ್ನೇ 'ಮೇಡ್ ಇನ್ ಚೈನಾ' ಚಿತ್ರದಲ್ಲಿ ಬಿಂಬಿಸಲಾಗಿದೆ. ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳ ಜೊತೆ ಗೌರವ್ ಶೆಟ್ಟಿ, ಅಶ್ವಿನಿ ರಾವ್ ಪಲ್ಲಕ್ಕಿ, ಅರುಣ ಬಾಲರಾಜ್, ರವಿ ಭಟ್ ಮುಂತಾದವರು ನಟಿಸಿದ್ದಾರೆ.

    'ಮೇನ್ ಇನ್ ಚೈನಾ' ಇದೊಂದು ಪಕ್ಕಾ ಕೌಟುಂಬಿಕ ಸಿನಿಮಾವೆಂದು ಚಿತ್ರತಂಡ ಹೇಳಿಕೊಂಡಿದೆ. ಜೊತೆ ಮನರಂಜನೆಗೇನು ಕಮ್ಮಿಯಿಲ್ಲ. ನಾಗಭೂಷಣ್ ಪಾತ್ರದ ಹಾಸ್ಯದ ಜೊತೆಯಲ್ಲಿಯೇ ಲಾಕ್‌ಡೌನ್‌ನ ಸನ್ನಿವೇಶವನ್ನು ಪ್ರೇಕ್ಷಕರಿಗೆ ಹೇಳುತ್ತೆ. ಇದಕ್ಕೂ ಮೊದಲು ನಾಗಭೂಷಣ್ 'ಇಕ್ಕಟ್' ಸಿನಿಮಾ ಕೂಡ ಒಂದೇ ಮನೆಯೊಳಗೆ ಚಿತ್ರೀಕರಿಸಲಾಗಿತ್ತು. ಅದೂ ಕೂಡ ಲಾಕ್‌ಡೌನ್ ಕತೆಯನ್ನೇ ಹೇಳಿತ್ತು. ಈಗ 'ಮೇಡ್ ಇನ್ ಚೈನಾ' ಕೂಡ ಪ್ರೇಕ್ಷಕರಿಗೆ ಇಷ್ಟ ಆಗಬಹುದು ಎಂದು ಹೇಳಲಾಗಿದೆ.

    English summary
    First vartual Kannada Movie Made in China releasing on March 11th.
    Thursday, March 3, 2022, 12:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X