ಸುಪಾರಿ ಕಿಲ್ಲಿಂಗ್​, ಹನಿ ಟ್ರ್ಯಾಪ್​, ಕನ್ನಡದ ಕಿಚ್ಚು : 'ಪೆಂಟಗನ್' ಟ್ರೈಲರ್‌ಗೆ ತೆಲುಗು ನಿರ್ದೇಶಕ ಫಿದಾ

ಸ್ಯಾಂಡಲ್‌ವುಡ್‌ನಲ್ಲಿ ವಿಭಿನ್ನ ರೀತಿಯಲ್ಲಿ ಪ್ರಯೋಗಗಳಾಗುತ್ತಿವೆ. ಹೊಸಬರಷ್ಟೇ ಅಲ್ಲ ಅನುಭವ ಇರುವವರೂ ಕೂಡ ಪ್ರಯೋಗಾತ್ಮಕ ಸಿನಿಮಾಗಳಿಗೆ ಕೈ ಹಾಕುತ್ತಿದ್ದಾರೆ. ಸದ್ಯ ಕನ್ನಡ ಚಿತ್ರರಂಗದಲ್ಲಿ ಇಂತಹದ್ದೇ ಒಂದು ಸಿನಿಮಾ ಸದ್ದು ಮಾಡುವುದಕ್ಕೆ ಶುರು ಮಾಡಿದೆ. ಅದುವೇ 'ಪೆಂಟಗನ್'.

ಕೆಲವು ದಿನಗಳಿಂದ 'ಪೆಂಟಗನ್' ಸಿನಿಮಾ ಸಿನಿಪ್ರೇಮಿಗಳ ಗಮನ ಸೆಳೆಯುತ್ತಿದೆ. ಯಾಕಂದ್ರೆ, ಐದು ಮಂದಿ ನಿರ್ದೇಶಕರು ಸೇರಿಕೊಂಡು ಐದು ಕಥೆಗಳನ್ನು ತಂದು 'ಪೆಂಟಗಾನ್' ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಈ ಕಾರಣಕ್ಕೆ ಈ ಸಿನಿಮಾ ಗಮನ ಸೆಳೆಯುತ್ತಿದೆ.

Five Directors Anthology Movie The Pentagon Trailer Released: Film Will Be In Theatres on April 7th.

ಇನ್ನೇನು ಸಿನಿಮಾ ಬಿಡುಗಡೆ ಸನಿಹವಾಗುತ್ತಿದ್ದಂತೆ 'ಪೆಂಟಗನ್' ಚಿತ್ರತಂಡ ಟ್ರೈಲರ್ ರಿಲೀಸ್ ಮಾಡಿದೆ. ಈ ಸಿನಿಮಾದಲ್ಲಿ ಸಮಾಜದ ಐದು ವಿಭಿನ್ನ ಆಯಾಮಗಳನ್ನು ತೆರೆಮೇಲೆ ತರಲಾಗಿದೆ. ಐದೂ ಕಥೆಗಳ ಝಲಕ್ ಅನ್ನು ತೋರಿಸಲು ಟ್ರೈಲರ್ ಬಗ್ಗೆ ಈಗಾಗಲೇ ಚರ್ಚೆ ಹುಟ್ಟಾಕಿದ್ದು, ಕುತೂಹಲವನ್ನು ಕೆರಳಿಸಿದೆ.

ಕಿಚ್ಚು ಹಚ್ಚಿದ 'ಪೆಂಟಗನ್' ಟ್ರೈಲರ್

'ರಾಜಹುಲಿ' ಖ್ಯಾತಿಯ ಗುರು ದೇಶಪಾಂಡೆ 'ಪೆಂಟಗನ್' ಸಿನಿಮಾಗೆ ನಿರ್ದೇಶಕ, ನಿರ್ಮಾಪಕ ಕಮ್ ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡಿದ್ದಾರೆ. ಟ್ರೈಲರ್ ನೋಡಿದ ಬಳಿಕ ನೆಟ್ಟಿಗರು ಪಾಸಿಟಿವ್ ಆಗಿ ಕಮೆಂಟ್ ಮಾಡುತ್ತಿದ್ದಾರೆ.

'ಪೆಂಟಗನ್' ಸಿನಿಮಾಗೆ ಕನ್ನಡ ಚಿತ್ರರಂಗದ ಐದು ಮಂದಿ ನಿರ್ದೇಶಕರು ಆಕ್ಷನ್ ಕಟ್ ಹೇಳಿದ್ದಾರೆ. 'ಶಿವಾಜಿ ಸುರತ್ಕಲ್​' ಸಿನಿಮಾ ನಿರ್ದೇಶಿಸಿರೋ ಆಕಾಶ್​ ಶ್ರೀವತ್ಸ, 'ಚೂರಿಕಟ್ಟೆ' ಸಿನಿಮಾದ ನಿರ್ದೇಶಕ ರಾಘು ಶಿವಮೊಗ್ಗ, 'ಬ್ರಹ್ಮಚಾರಿ' ನಿರ್ದೇಶಕ ಚಂದ್ರಮೋಹನ್, ಹೊಸ ಪ್ರತಿಭೆ ಕಿರಣ್ ಕುಮಾರ್​ ಹಾಗೂ ಗುರುದೇಶಪಾಂಡೆ ಒಂದೊಂದು ಕಥೆಗೆ ಆಕ್ಷನ್ ಕಟ್ ಹೇಳಿದ್ದಾರೆ.

Five Directors Anthology Movie The Pentagon Trailer Released: Film Will Be In Theatres on April 7th.

ಈ ಸಿನಿಮಾ ಟ್ರೈಲರ್ ನೋಡಿದ ಬಳಿಕ ಇದು ಸಮಾಜದ ಕೆಲವು ಗಂಭೀರ ಸಮಸ್ಯೆಗಳನ್ನು ತೆರೆಮೇಲೆ ತರುವ ಪ್ರಯತ್ನ ಮಾಡಿದೆ ಎಂದು ಅನಿಸುತ್ತೆ. ಸುಪಾರಿ ಕಿಲ್ಲಿಂಗ್​, ಹನಿ ಟ್ರ್ಯಾಪ್​, ಕನ್ನಡದ ಕಿಚ್ಚು ಅದರ ಹಿಂದಿನ ರಾಜಕೀಯ ಇವೆಲ್ಲವನ್ನು ನೈಜವಾಗಿ ತೆರೆಮೇಲೆ ಕಟ್ಟಿಕೊಡಲಾಗಿದೆ.

ರಿಷಬ್ ಶೆಟ್ಟಿ, ಅನಿಲ್ ಪುಡಿ ಟ್ವೀಟ್

ಈ ಟ್ರೈಲರ್ ರಿಲೀಸ್ ಆಗುತ್ತಿದ್ದಂತೆ ತೆಲುಗು ನಿರ್ದೇಶಕ ಅನಿಲ್ ರವಿಪುಡಿ ಮೆಚ್ಚಿ ಟ್ವೀಟ್ ಮಾಡಿದ್ದಾರೆ. "ಕನ್ನಡ ಅಂಥಾಲಜಿ ಸಿನಿಮಾದ ಟ್ರೈಲರ್ ಅನ್ನು ನಿಮ್ಮೊಂದಿಗೆ ಶೇರ್ ಮಾಡುತ್ತಿರುವುದಕ್ಕೆ ನಾನು ಉತ್ಸುಕನಾಗಿದ್ದೇನೆ." ಎಂದು ತೆಲುಗು ನಿರ್ದೇಶಕ ಟ್ವೀಟ್ ಮಾಡಿದ್ದಾರೆ.

ಹಾಗೇ ಈಗಾಗಲೇ ಇಂತಹದ್ದೊಂದು ಪ್ರಯತ್ನ ಮಾಡಿರುವ 'ಕಾಂತಾರ' ಖ್ಯಾತಿಯ ರಿಷಬ್ ಶೆಟ್ಟಿ "ಪೆಂಟಗನ್ ಕನ್ನಡ ಅಂಥಾಲಜಿ ಸಿನಿಮಾ. ಮತ್ತೊಂದು 'ಕಥಾ ಸಂಗಮ'. ಪುಟ್ಟಣ್ಣ ಕಣಗಾಲ್ ಅವರ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಟ್ರೈಲರ್ ಅದ್ಭುತವಾಗಿದೆ" ಎಂದು ಟ್ವೀಟ್ ಮಾಡಿದ್ದಾರೆ.

'ಪೆಂಟಗನ್' ಸಿನಿಮಾ ಟ್ರೈಲರ್ ಮೂಲಕ ನಿರೀಕ್ಷೆಗಳನ್ನು ಹೆಚ್ಚಿಸಿದೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಸಿನಿಮಾ ಕೂಡ ರಿಲೀಸ್ ಆಗುತ್ತಿದೆ. ಏಪ್ರಿಲ್ 7ಕ್ಕೆ ರಾಜ್ಯಾದ್ಯಂತ 'ಪೆಂಟಗನ್' ಥಿಯೇಟರ್‌ಗಳಲ್ಲಿ ಸದ್ದು ಮಾಡಲಿಗಿದೆ. ಈ ಸಿನಿಮಾದಲ್ಲಿ ಕಿಶೋರ್, ಪ್ರಕಾಶ್ ಬೆಳವಾಡಿ, ಪಿ. ರವಿಶಂಕರ್ ಸೇರಿದಂತೆ ಹಲವು ಕಲಾವಿದರು ಬಣ್ಣ ಹಚ್ಚಿದ್ದಾರೆ.

More from Filmibeat

English summary
Five Directors Anthology Movie The Pentagon Trailer Released: Film Will Be In Theatres on April 7th. Guru Deshpande, Akash Srivatsa, Raghu Shivamogga, Chandra Mohan And Shivakumar directed the movie,know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X