Puneeth Rajkumar Birthday: ಪುನೀತ್ ಹುಟ್ಟುಹಬ್ಬದ ಬ್ಯಾನರ್ ಹಿಡಿದು ಬಾನಂಗಳದಲ್ಲಿ ಹಾರಾಡುತ್ತಿದೆ ಪುಷ್ಪಕ ವಿಮಾನ

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬ ರಾಜ್ಯಾದ್ಯಂತ ಉತ್ಸವದ ರೂಪ ಪಡೆದುಕೊಂಡಿದೆ. ಇಡೀ ಕರ್ನಾಟಕದಾದ್ಯಂತ ಅಪ್ಪು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಥಿಯೇಟರ್ ಮುಂದೆ ಜನಜಾತ್ರೆನೇ ಸೇರಿದೆ. ರಾಜ್ಯದ ಉದ್ದಗಲಕ್ಕೂ ಅಭಿಮಾನಿಗಳು ತಮ್ಮದೇ ರೀತಿ ಪುನೀತ್ ಹಬ್ಬ ಆಚರಿಸುತ್ತಿದ್ದಾರೆ. ಕೆಲವೆಡೆ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ. ಕೆಲವೆಡೆ ಅಭಿಮಾನಿಗಳೇ ಸ್ವಯಂ ಪ್ರೇರಿತರಾಗಿ ಬೀದಿಗಿಳಿದು ಹುಟ್ಟುಹಬ್ಬ ಆಚರಿಸುತ್ತಿದ್ದಾರೆ.

Recommended Video

'ಜೇಮ್ಸ್': ಅಪ್ಪು ಒನ್‌ಮ್ಯಾನ್ ಶೋ | James

ರಾಜ್ಯದ ಮೂಲೆ ಮೂಲೆಯಲ್ಲೂ ಅಭಿಮಾನಿಗಳ ಹಬ್ಬಆಚರಣೆ ಮಾಡುತ್ತಿದ್ದಾರೆ. ಇನ್ನು ನಾಲ್ಕು ದಿನ ಅಪ್ಪು ಹಬ್ಬ ನಿಲ್ಲುವುದಿಲ್ಲ. ಇನ್ನು ನಾಲ್ಕು ದಿನ 'ಜೇಮ್ಸ್' ಸಿನಿಮಾದ ಜೊತೆ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬ ಆಚರಣೆ ನಡೆಯುತ್ತೆ. ಸದ್ಯಕ್ಕೀಗ ಬೆಂಗಳೂರಿನ ಬಾನಂಗಳಲ್ಲಿ ಪುಟ್ಟ ವಿಮಾನವೊಂದು ಪುನೀತ್ ಹುಟ್ಟು ಹಬ್ಬದ ಬಾವುಟ ಹಿಡಿದು ಹಾರಾಡುತ್ತಿದೆ.

ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬ ಕೇವಲ ಭೂಮಿ ಮೇಲಷ್ಟೇ ಅಲ್ಲ. ಬಾನಂಗಳದಲ್ಲೂ ಬರ್ತ್‌ಡೇ ಸಂಭ್ರಮಾರಣೆ ಮಾಡಲಾಗುತ್ತಿದೆ. ವಿಮಾನವೊಂದು ಬೆಂಗಳೂರಿನಲ್ಲಿ ಬಾನಂಗಳದಲ್ಲಿ ಪುನೀತ್ ಹುಟ್ಟುಹಬ್ಬದ ಬಾವುಟ ಹಿಡಿದು ಹಾರಾಡುತ್ತಿದೆ. ಇಡೀ ದಿನ ಈ ವಿಮಾನ ಎಲ್ಲೆಲ್ಲಿ ಹಾರಾಡುತ್ತೆ? ಯಾವಾ ಮಾರ್ಗವಾಗಿ ಹಾರಾಟ ಮಾಡುತ್ತದೆ ಅನ್ನುವುದರ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ.

ವಿಮಾನದಲ್ಲಿ ಅಪ್ಪು ಬರ್ತ್‌ಡೇ ವಿಶ್

ವಿಮಾನದಲ್ಲಿ ಅಪ್ಪು ಬರ್ತ್‌ಡೇ ವಿಶ್

ಪುನೀತ್ ರಾಜ್‌ಕುಮಾರ್ ಬರ್ತ್‌ಡೇ ಸಂಭ್ರಮ ಮುಗಿಲು ಮುಟ್ಟಿದೆ. ಅಭಿಮಾನಿಗಳು ಥಿಯೇಟರ್‌ ಮುಂದೆ, ರಾಜ್ಯದ ನಾನಾ ಭಾಗಗಳಲ್ಲಿ ಆಚರಣೆ ಮಾಡುತ್ತಿದ್ದಾರೆ. ಇನ್ನೊಂದು ಕಡೆ ಬಾನಂಗಳದಲ್ಲಿ ಸದ್ದಿಲ್ಲದೆ, ಹ್ಯಾಪಿ ಬರ್ತ್‌ಡೇ ಪವರ್‌ಸ್ಟಾರ್ ಬ್ಯಾನರ್ ಹಿಡಿದು ಹಾರಾಡುತ್ತಿದೆ. ಭೂಮಿ ಮೇಲಷ್ಟೆ ಅಲ್ಲ. ಆಕಾಶದಲ್ಲೂ ಬಾನಿಗೊಂದು ಎಲ್ಲೆ ಎಲ್ಲಿದೆ ಅಂತ ಅಪ್ಪು ಹುಟ್ಟುಹಬ್ಬದ ಬ್ಯಾನರ್ ಹಿಡಿದು ಅಭಿಮಾನಿಗಳಿಗೆ ಶುಭಾಶಯಗಳನ್ನು ಕೋರುತ್ತಿದೆ.

ಎಲ್ಲೆಲ್ಲಿ ಕಾಣಿಸುತ್ತೆ ಈ ಬ್ಯಾನರ್?

ಎಲ್ಲೆಲ್ಲಿ ಕಾಣಿಸುತ್ತೆ ಈ ಬ್ಯಾನರ್?

ಹ್ಯಾಪಿ ಬರ್ತ್‌ಡೇ ಪವರ್‌ಸ್ಟಾರ್ ಬ್ಯಾನರ್ ಹೊತ್ತ ಸಣ್ಣ ವಿಮಾನ ಬಾನಂಗಳದಲ್ಲಿ ಒಂದು ಸುತ್ತಿನ ಹಾರಾಟ ಮುಗಿಸಿದೆ. ಬೆಳಗ್ಗೆ 9.30ರಿಂದ 11.30ರವರೆಗೆ ಹಾರಾಟ ಮಾಡಿದೆ. ಮೊದಲು ಜಕ್ಕೂರು ವಿಮಾನ ನಿಲ್ದಾಣದಿಂದ ಹೊರಟು ಡಾ.ರಾಜ್‌ಕುಮಾರ್ ಪುಣ್ಯಭೂಮಿ ಮೇಲೆ ಹಾರಾಟ ನಡೆಸಿದೆ. ಇಲ್ಲಿ ಸುಮಾರು 20 ನಿಮಿಷಗಳ ಕಾಲ ಹಾರಾಟ ನಡೆಸಿದೆ. ಇಲ್ಲಿಂದ ಒರಾಯನ್ ಮಾಲ್, ಸದಾಶಿವನಗರ, ಮಲ್ಲೇಶ್ವರಂ, ರಾಜಾಜಿನಗರ, ಮೆಜೆಸ್ಟಿಕ್ ಹಾಗೂ ಗಾಂಧಿನಗರದ ಸುತ್ತಮುತ್ತ ಸುಮಾರು 40 ನಿಮಿಷಗಳ ಕಾಲ ಫ್ಲೈ ಮಾಡಿದೆ.

ಸಂಜೆ 4 ರಿಂದ 6 ಗಂಟೆವರೆಗೆ ಹಾರಾಟ

ಸಂಜೆ 4 ರಿಂದ 6 ಗಂಟೆವರೆಗೆ ಹಾರಾಟ

ಬೆಳಗ್ಗೆ ಎರಡು ಗಂಟೆ ಹಾಗೂ ಸಂಜೆ ಎರಡು ಗಂಟೆ ಹ್ಯಾಪಿ ಬರ್ತ್‌ಡೇ ಪವರ್‌ಸ್ಟಾರ್ ಬ್ಯಾನರ್ ಹಾರಾಟ ನಡೆಸಲಿದೆ. ಈಗಾಗಲೇ ಒಂದು ಸುತ್ತು ಹಾರಾಟ ಮುಗಿಸಿರುವ ಮಿನಿ ವಿಮಾನ, ಸಂಜೆ 4 ಗಂಟೆ ಹೊತ್ತಿಗೆ ಮತ್ತೆ ಹಾರಾಟ ನಡೆಸಲಿದೆ. ಈ ಬಾರಿ ಕೆ ಆರ್ ಮಾರುಕಟ್ಟೆ, ವಿವಿ ಪುರಂ, ಬನಶಂಕರಿ, ಮೈಸೂರು ರಸ್ತೆ, ಗೋಪಾಲನ್ ಮಾಲ್, ಜೆಪಿ ನಗರ, ಸಿಲ್ಕ್ ಬೋರ್ಡ್, ಬೆಲ್ಲಂದೂರು, ದೊಮ್ಮಲೂರು, ಕೆಆರ್ ಪುರಂ, ಬನಶಂಕರಿ, ಬಾಣಸವಾಡಿ, ಮಾನ್ಯತಾ ಟೆಕ್ ಪಾರ್ಕ್ ಬಳಿಕ ಜಕ್ಕೂರು ವಿಮಾನ ನಿಲ್ದಾಣ ಸೇರಲಿದೆ.

ಚಿತ್ರಮಂದಿರಗಳ ಮೇಲೆ ಹಾರಾಟ

ಈ ಮಿನಿ ವಿಮಾನ 'ಹ್ಯಾಪಿ ಬರ್ತ್‌ಡೇ ಪವರ್‌ಸ್ಟಾರ್' ಬ್ಯಾನರ್ ಹಿಡಿದು ಎಲ್ಲಾ ಚಿತ್ರಮಂದಿರಗಳ ಮೇಲೂ ಹಾರಾಟ ನಡೆಸಲಿದೆ. ಜೇಮ್ಸ್ ಚಿತ್ರ ಬಿಡುಗಡೆಯಾದ ಪ್ರತಿಯೊಂದು ಚಿತ್ರಮಂದಿರ ಮೇಲೆ ಹಾರಾಡಲಿದ್ದು, ಅಪ್ಪು ಅಭಿಮಾನಿಗಳಿಗೆ ಶುಭಕೋರಿದೆ. ಇನ್ನು 'ಜೇಮ್ಸ್' ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಫಸ್ಟ್ ಡೇ ಫಸ್ಟ್ ಶೋನೇ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

More from Filmibeat

English summary
Flight flying with holding happy birthday power star banner. Due to Puneeth Rajkumar Birthday wishes coming from the sky.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X