"ರವಿ ಬೆಳಗರೆ ಪತ್ರಿಕಾ ಲೋಕದ ಪಾತಕಿ.. ಆಶಾಲತಾ, ಶ್ರುತಿ, ಅಮೂಲ್ಯರನ್ನು ಕೇಳಿ"; ಪ್ರತಾಪ್ ಸಿಂಹ

ಕರ್ನಾಟಕ ಕಂಡ ಜನಪ್ರಿಯ ಪತ್ರಕರ್ತರ ಸಾಲಿನಲ್ಲಿ ಅನೇಕ ಮಂದಿ ನಿಲ್ಲುತ್ತಾರೆ. ಕನ್ನಡ ಪತ್ರಿಕೋದ್ಯಮಕ್ಕೆ ಬೇರೆ ಬೇರೆ ಸಂದರ್ಭದಲ್ಲಿ ಹೊಸ ಮೆರುಗುಗಳನ್ನು ನೀಡಿದವರಿದ್ದಾರೆ. ಇಂತಹವರಲ್ಲಿ ದಿವಂಗತ ಪತ್ರಕರ್ತ ರವಿಬೆಳಗರೆ ಹಾಗೂ ಮಾಜಿ ಪತ್ರಕರ್ತ ಪ್ರತಾಪ್ ಸಿಂಹ ಕೂಡ ಸೇರಿಕೊಳ್ಳುತ್ತಾರೆ. ಇಬ್ಬರ ಬರವಣೆಗೆಗಳಿಗೆ ಅವರದ್ದೇ ಆದ ಫ್ಯಾನ್ ಫಾಲೋವಿಂಗ್ ಇದ್ದರು. ಇವರ ಬರವಣಿಗೆಗಳು ಓದುಗರನ್ನು ಕರೆತರುವ ತಾಕತ್ತು ಇತ್ತು.

ಆದರೆ ಪತ್ರಿಕೋದ್ಯಮ ಅಂತ ಬಂದಾಗ ರವಿ ಬೆಳಗರೆ ಹಾಗೂ ಪ್ರತಾಪ್ ಸಿಂಹ ನಡುವೆ ವೈಮನಸ್ಸು ಇತ್ತು. ಪ್ರತಾಪ್ ಸಿಂಹ ಬಗ್ಗೆ ರವಿ ಬೆಳಗರೆ ತಮ್ಮ ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ನೆಗೆಟಿವ್ ಆಗಿ ಬರುತ್ತಿದ್ದರು. ಇನ್ನೊಂದು ಕಡೆ ಪ್ರತಾಪ್ ಸಿಂಹ ಅದಕ್ಕೆ ಸೇಡು ತೀರಿಸಿಕೊಳ್ಳುತ್ತಿದ್ದರು. ಹೀಗೆ ಒಂದಿಷ್ಟು ದಿನ ನಡೆಯುತ್ತಿತ್ತು. ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಪ್ರತಾಪ್ ಸಿಂಹ ಮತ್ತೆ ರವಿ ಬೆಳಗರೆ ಬಗ್ಗೆ ಆರೋಪಗಳ ಸುರಿಮಳೆಯನ್ನೇ ಸುರಿಸಿದ್ದಾರೆ.

Former journalist and Mysuru MP Prathap Simha said Ravi Belagere is criminal of journalism

ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಸಾಧನಾ ಸೌರಭ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರತಾಪ್ ಸಿಂಹ, 'ಹಾಯ್ ಬೆಂಗಳೂರು' ಎಂಬ ಪತ್ರಿಕೆಯಲ್ಲಿ ರವಿ ಬೆಳೆಗೆರೆ ಸಿನಿಮಾರಂಗದ ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ಬರೆಯುತ್ತಿದ್ದರು. ಅವರು ಭೂಗತಲೋಕದ ಪಾತಕಿ ಎನ್ನುವಂತೆ ಪತ್ರಿಕಾ ಲೋಕದ ಪಾತಕಿ ಎಂದು ಮಾಜಿ ಪತ್ರಕರ್ತ ಹಾಗೂ ಸಂಸದ ಪ್ರತಾಪ್ ಸಿಂಹ ಆಕ್ರೋಶ ಹೊರ ಹಾಕಿದ್ದಾರೆ. ಇವರ ಹೇಳಿಕೆ ಈಗ ಪತ್ರಿಕಾಲೋಕದಲ್ಲಿ ಚರ್ಚೆಯಾಗುತ್ತಿದೆ.


ಪತ್ರಿಕಾಲೋಕದ ಪಾತಕಿ ರವಿ ಬೆಳಗೆರೆ

ಸಾಧನಾ ಸೌರಭ ಕಾರ್ಯಕ್ರಮದಲ್ಲಿ ತಮ್ಮ ಹಾಗೂ ರವಿ ಬೆಳಗರೆ ನಡುವಿನ ವೈಮನಸ್ಸಿನ ಬಗ್ಗೆ ಆಕ್ರೋಶವಾಗಿ ಮಾತಾಡಿದ್ದಾರೆ. ಇದೇ ವೇಳೆ ರವಿ ಬೆಳಗೆರೆ ಪತ್ರಿಕಾ ಲೋಕದ ಪಾತಕಿ ಎಂದು ಟೀಕಿಸಿದ್ದಾರೆ. "ರವಿ ಬೆಳಗೆರೆ ಅದೇನು ಹೊಟ್ಟೆ ಉರಿ ಅನ್ನೋದು ಗೊತ್ತಿಲ್ಲ. 2023ರಲ್ಲಿ ಮೊದಲ ಬಾರಿಗೆ ನನ್ನ ಬಗ್ಗೆ ಬರೆದರು. ಅವರನ್ನು ಪತ್ರಕರ್ತ ಅಂತ ಹೇಳಲ್ಲ. ಭೂಗತಲೋಕದ ಪಾತಕಿ ಅಂತ ಹೇಳುತ್ತಾರಲ್ಲ ಹಾಗೆ ಪತ್ರಿಕಾ ಲೋಕದ ಪಾತಕಿ ಅಂತ ಇದ್ದರೆ ಅದು ರವಿ ಬೆಳಗೆರೆ. ಅದನ್ನು ಎಲ್ಲರ ಎದುರುಗಡೆ ಹೇಳುವುದಕ್ಕೆ ಬಯಸುತ್ತೇನೆ." ಎಂದು ಪತ್ರಕರ್ತ ರವಿ ಬೆಳಗೆರೆ ಹೇಳಿದ್ದಾರೆ.

ಆಶಾಲತಾ, ಶ್ರುತಿ, ಅಮೂಲ್ಯ ಕೇಳಿ

ರವಿ ಬೆಳಗೆರೆ ಪತ್ರಿವಾರ ತಮ್ಮ 'ಹಾಯ್‌ ಬೆಂಗಳೂರು' ಪತ್ರಿಕೆಯಲ್ಲಿ ಕನ್ನಡ ಚಿತ್ರರಂಗದ ಹೆಣ್ಣು ಮಕ್ಕಳ ಬಗ್ಗೆ ಅಸಹ್ಯವಾಗಿ ಬರೆಯುತ್ತಿದ್ದರು. ಸಮಾಜದಲ್ಲಿ ತಲೆ ಎತ್ತಿ ತಿರುಗದ ಹಾಗೆ ಮಾಡುತ್ತಿದ್ದರು ಎಂದು ಟೀಕಿಸಿದ್ದಾರೆ. "ಹಾಯ್ ಬೆಂಗಳೂರು ಪತ್ರಿಕೆ ಏನಾದರೂ ಬಂತು ಅಂದರೆ, ಟೀ ಸ್ಟಾಲ್ ಅಲ್ಲಿ-ಇಲ್ಲಿ ಗೂಡಂಗಡಿ ಎಲ್ಲಾ ಕಡೆ ನೇತಾಕಿರೋರು. ಒಳಗಡೆ ಚಿತ್ರಗಳಿವೆ ಎಚ್ಚರಿಕೆ. ಒಳಗೆ ಫುಲ್ ಡಿಟೈಲ್ಸ್. ಪ್ರತಿವಾರ ಯಾವುದಾದರೂ ಒಂದು ಕನ್ನಡ ಚಿತ್ರರಂಗದ ಹೆಣ್ಣು ಮಗಳ ಮಾನ ಹರಾಜು ಮಾಡಿ ಅದರಲ್ಲಿ ಬದುಕಿದ್ದು. ಅವನ ಬೇರೆ ಬರವಣಿಗೆ ಬಿಟ್ಟು ಬಿಡಿ ಪ್ರತಿವಾರ ಅವನ ಪೇಪರ್ ಸೇಲ್ ಆಗುತ್ತಿದ್ದದ್ದು ಏನಕ್ಕೆ? ಆಶಾ ಲತಾ ಅವರನ್ನು ಹೋಗಿ ಕೇಳಿ, ಶ್ರುತಿ ಅವರನ್ನು ಹೋಗಿ ಕೇಳಿ, ಅಮೂಲ್ಯ ಅವರನ್ನು ಹೋಗಿ ಕೇಳಿ, ಶೃಂಗೇರಿಯಲ್ಲಿ ಒಬ್ಬರು ನಟಿ ಇದ್ದರು ಅವರನ್ನು ಕೇಳಿ. ಪ್ರತಿವಾರನೂ ಒಬ್ಬ ಹೆಣ್ಣು ಮಗಳ ಬಗ್ಗೆ ರೋಚಕವಾಗಿ, ಅಸಹ್ಯವಾಗಿ ಬರೆದು ಸಮಾಜದಲ್ಲಿ ಎತ್ತಿ ತಿರುಗಬಾರದು. ಆ ರೀತಿ ಮಾಡುತ್ತಿದ್ದಂತಹ ವ್ಯಕ್ತಿ ರವಿ ಬೆಳಗೆರೆಯಾಗಿದ್ದರು." ಎಂದು ಕಿಡಿಕಾರಿದ್ದಾರೆ.

Former journalist and Mysuru MP Prathap Simha said Ravi Belagere is criminal of journalism

"ಸುಮ್ ಸುಮ್ಮನೆ ಬಂದು ಕುಟುಕಿದ"

"ಈ ವ್ಯಕ್ತಿ ಅದೇನಕ್ಕೆ ಹಾಗೆ ಬರೆಯುತ್ತಿದ್ದನೋ ಗೊತ್ತಿಲ್ಲ. ನಾನು ಯುವಕನಾಗಿ ಬಂದು ಬರೆಯುತ್ತಿದ್ದೆ. ನಮ್ಮ ಪತ್ರಿಕೋದ್ಯಮವನ್ನು ಯಾವಾಗಲೂ ಎಡಕ್ಕೆ ಎಳೆದುಕೊಂಡು ಹೋಗೋದು. ನಾನು ಸ್ವಲ್ಪ ರೈಟ್‌ ಎಳೆಯೋದು ಜಾಸ್ತಿ. ಬಲಪಂಥೀಯ ವಿಚಾರಗಳು ಇದ್ದವು. ಮುಸ್ಮಾನ ಬಾಂಧವರು ಅಂತ ಬರೆಯೋರು. ನಮಗೂ ಅವರಿಗೂ ಏನ್ರಿ ಸಂಬಂಧ? ನಾನು ಮುಸ್ಲೀಮರನ್ನು ಮುಸ್ಲೀಮರು ಅಂತ ಬರೆದೆ. ಕ್ರೈಸ್ತರನ್ನು ಕ್ರೈಸ್ತರು ಅಂತ ಬರೆದೆ. ಹೀಗೆ ಪತ್ರಿಕೋದ್ಯಮ ಆರಂಭ ಮಾಡಿದ್ದೆ. ಈ ಮನುಷ್ಯ ಸುಮ್ ಸುಮ್ಮನೆ ಬಂದು ಕುಟುಕಿದ." ಎಂದು ಪ್ರತಾಪ್ ಸಿಂಹ ಆಕ್ರೋಶ ಹೊರ ಹಾಕಿದ್ದಾರೆ.

ಪತ್ರಿಕಾ ಲೋಕದ ಪಾತಕಿ ಯಾಕೆ?

"ನಾನು ಯಾಕೆ ಪತ್ರಿಕಾ ಲೋಕದ ಪಾತಕಿ ಎಂದು ಹೇಳಿದೆ ಅಂದರೆ, ಅನುಭವಿಸಿದವರಿಗೆ ಅದರ ನೋವು ಏನು ಎಂದು ಗೊತ್ತಾಗುತ್ತೆ. ನಮ್ಮ ಪ್ರೀತಿ ಪಾತ್ರರೋ, ನಮ್ಮ ಸಂಬಂಧಿಕರೋ, ನಮ್ಮ ಹಿತೈಶಿಗಳೋ ಈ ರೀತಿ ಅವನ ಪತ್ರಿಕೆ ಮುಖಾಂತರ ಚಾರಿತ್ರ್ಯವಧೆಗೆ ಒಳಗಾದಾಗ ಅದರ ನೋವು ನಮಗೆ ಫೀಲ್ ಆಗುತ್ತೆ. ಅವನು ಎಷ್ಟು ಜನಕ್ಕೆ ನೋವು ಕೊಟ್ಟಿದ್ದಾನೆ ಅನ್ನೋದನ್ನು ಯೋಚನೆ ಮಾಡಿ. ಅದಕ್ಕೋಸ್ಕರವಾಗಿ ಈ ವಿಚಾರವನ್ನು ಹೇಳಿದೆ." ಎಂದು ಪ್ರತಾಪ್ ಸಿಂಹ ಆರೋಪಿಸಿದ್ದಾರೆ.

English summary
Former journalist and Mysuru MP Prathap Simha said Ravi Belagere is criminal of journalism.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X