"ಮಾನಸಿಕವಾಗಿ ತುಂಬಾ ನೋವಾಗಿದೆ, ಮಾತನಾಡುವ ಸ್ಥಿತಿಯಲ್ಲಿ ಇಲ್ಲ"; ಎಸ್.ಎಂ ಕೃಷ್ಣ ನಿಧನಕ್ಕೆ ರಮ್ಯಾ ಕಣ್ಣೀರು

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ನಿಧನರಾಗಿದ್ದಾರೆ. ಸುಧೀರ್ಘ ರಾಜಕೀಯ ಜೀವನದಲ್ಲಿ ಬೇರೆ ಬೇರೆ ಹುದ್ದೆಗಳಲ್ಲಿ ಎಸ್‌.ಕೃಷ್ಣ ಕಾರ್ಯ ನಿರ್ವಹಿಸಿದ್ದಾರೆ. ಕರ್ನಾಟಕದ ಮುಖ್ಯ ಮಂತ್ರಿಯಾಗಿ, ಮಹಾರಾಷ್ಟ್ರದ ರಾಜ್ಯಪಾಲರಾಗಿ, ಕೇಂದ್ರ ವಿದೇಶಾಂಗ ಸಚಿವರಾಗಿ ಗುರುತಿಸಿಕೊಂಡಿದ್ದರು. ಕಳೆದ ಕೆಲವು ದಿನಗಳಿಂದ ವಯೋಸಹಜ ಕಾಯಿಲೆಯಿಂದ ಎಸ್‌ ಎಂ ಕೃಷ್ಣ ಬಳಲುತ್ತಿದ್ದರು.

92ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ ಎಸ್‌ ಎಂ ಕೃಷ್ಣ ಹಲವು ರಾಜಕೀಯ ಮುಖಂಡರಿಗೆ ಗುರುವಾಗಿದ್ದಾರೆ. ಅದರಲ್ಲೂ ರಾಜ್ಯದ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌, ರಮ್ಯಾ ಸೇರಿದಂತೆ ಹಲವರಿಗೆ ರಾಜಕೀಯ ಮಾರ್ಗದರ್ಶನ ನೀಡಿದ್ದಾರೆ. ಇವರ ನಿಧನಕ್ಕೆ ರಾಜಕೀಯ ಮುಖಂಡರು ಕಣ್ಣೀರು ಹಾಕಿದ್ದಾರೆ. ಎಸ್‌ ಎಂ ಕೃಷ್ಣ ನಿಧನದ ಸುದ್ದಿಯನ್ನು ತಿಳಿದಯ ಮೋಹಕತಾರೆ ರಮ್ಯಾ ಭಾವುಕರಾಗಿದ್ದಾರೆ.

Former Karnataka chief minister S M Krishna passed away actress Ramya paid last respect

ಎಸ್‌ ಎಂ ಕೃಷ್ಣ ಅವರ ನಿಧನ ಸುದ್ದಿ ಕೇಳಿ ಮೋಹಕತಾರೆ ರಮ್ಯಾ ಸದಾಶಿವನಗರದಲ್ಲಿರುವ ಅವರ ಮನೆಗೆ ಬಂದು ಅಂತಿಮ ದರ್ಶನ ಪಡೆದಿದ್ದಾರೆ. ರಮ್ಯಾ ಅವರನ್ನು ರಾಜಕೀಯಕ್ಕೆ ಬರುವಂತೆ ಪ್ರೇರೆಪಿಸಿದ್ದ ಎಸ್‌ ಎಂ ಕೃಷ್ಣ ಅವರನ್ನು ತಂದೆ ಸಮಾನರಂತೆ ಕಾಣುತ್ತಿದ್ದರು. ಹೀಗಾಗಿ ಅವರನ್ನು ಕಳೆದು ಕೊಂಡ ನೋವಿನಲ್ಲಿ ರಮ್ಯಾ ಇದ್ದಾರೆ. ಅವರ ನಿಧನದಿಂದ ಮಾನಸಿಕವಾಗಿ ನೋವಾಗಿದೆ ಎಂದು ರಮ್ಯಾ ಹೇಳಿದ್ದಾರೆ.

ಹಿರಿಯ ರಾಜಕೀಯ ಮುಖಂಡ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್‌ ಎಂ ಕೃಷ್ಣ ಅವರ ಅಂತಿಮ ದರ್ಶನವನ್ನು ಪಡೆದ ಬಳಿಕ ರಮ್ಯಾ ಭಾವುಕರಾಗಿದ್ದರು. ರಾಜಕೀಯ ಗುರು ನಿಧನದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡುವ ವೇಳೆ ಭಾವುಕರಾಗಿದ್ದರು. ಕಣ್ಣೀರು ಹಾಕುತ್ತಲೇ ಅಂತಿಮ ದರ್ಶನಕ್ಕೆ ಬಂದಿದ್ದ ನಟಿ ರಮ್ಯಾ ಮಾನಸಿಕವಾಗಿ ನೋವಾಗಿದೆ ಅಂತಷ್ಟೇ ಹೇಳಿ ತೆರಳಿದ್ದಾರೆ.

"ನಾನು ಯಾವುದೇ ಹೇಳಿಕೆ ಕೊಡುವುದಕ್ಕೆ ಆಗುವುದಿಲ್ಲ. ನನಗೆ ಮಾನಸಿಕವಾಗಿ ನೋವಾಗಿದ್ದು, ಮಾತನಾಡುವ ಸ್ಥಿತಿಯಲ್ಲಿ ನಾನು ಇಲ್ಲ" ಎಂದಷ್ಟೇ ಮೋಹಕ ತಾರೆ ರಮ್ಯಾ ಅಂತಿಮ ನಮನ ಸಲ್ಲಿಸಿ ಅಲ್ಲಿಂದ ತೆರಳಿದ್ದಾರೆ. ರಮ್ಯಾ ರಾಜಕೀಯ ಭವಿಷ್ಯಕ್ಕೆ ಎಸ್‌ ಎಂ ಕೃಷ್ಣ ಅವರೇ ಬುನಾದಿ ಹಾಕಿದ್ದರು. ಸಿನಿಮಾಗಳಲ್ಲಿ ಸತತ 10 ವರ್ಷಗಳ ಕಾಲ ನಂ 1 ನಟಿಯಾಗಿ ಮುಂಚಿದ್ದ ರಮ್ಯಾರನ್ನು ರಾಜಕೀಯಕ್ಕೆ ಕರೆತಂದಿದ್ದರು.

ಸದ್ಯ ರಮ್ಯಾ ರಾಜಕೀಯ ಹಾಗೂ ಸಿನಿಮಾ ಎರಡೂ ಕ್ಷೇತ್ರದಿಂದಲೂ ಅಂತರವನ್ನು ಕಾಯ್ದುಕೊಂಡಿದ್ದಾರೆ. ರಾಜಕೀಯಕ್ಕೆ ಗುಡ್‌ ಬೈ ಹೇಳಿ ಸಿನಿಮಾ ಕ್ಷೇತ್ರಕ್ಕೆ ಹಿಂತಿರುವ ಪ್ರಯತ್ನ ಮಾಡಿದ್ದರೂ ಮತ್ತೆ ಹಿಂದೆ ಸರಿದಿದ್ದರು. ಒಂದು ಸಿನಿಮಾ ನಿರ್ಮಾಣ ಮಾಡಿದ ಬಳಿಕ ಸೈಲೆಂಟ್ ಆಗಿದ್ದಾರೆ. ಇತ್ತೀಚೆಗಷ್ಟೇ ಸ್ನೇಹಿತರೊಂದಿಗೆ ತಮ್ಮ ಹುಟ್ಟುಹಬ್ಬವನ್ನು ರಮ್ಯಾ ಆಚರಿಸಿಕೊಂಡಿದ್ದರು. ಬರ್ತ್‌ಡೇ ಖುಷಿಯಲ್ಲಿ ಇರುವಾಗಲೇ ಎಸ್‌ ಎಂ ಕೃಷ್ಣ ನಿಧನ ರಮ್ಯಾ ಅವರನ್ನು ನೋವಿನಲ್ಲಿ ಮುಳುಗಿಸಿದೆ.

ಇನ್ನು ಕರ್ನಾಟಕವನ್ನು ಐಟಿ ಹಬ್ ಮಾಡಿದ ಹೆಗ್ಗಳಿಕೆ ಎಸ್ ಎಂ ಕೃಷ್ಣ ಅವರಿಗೆ ಸಲ್ಲುತ್ತೆ. ಅವರು ಮುಖ್ಯ ಮಂತ್ರಿಯಾಗಿದ್ದ ಸಂದರ್ಶನದಲ್ಲಿ ಕರ್ನಾಟಕದಲ್ಲಿ ಐಟಿ ಹಾಗೂ ಬಿಟಿ ಕ್ಷೇತ್ರಗಳು ಗಣನೀಯವಾಗಿ ಡೆವೆಲಪ್ಮೆಂಟ್ ಕಂಡಿತ್ತು. ಬೆಂಗಳೂರನ್ನು ಸಿಂಗಾಪುರ್ ಮಾಡುವ ಕನಸನ್ನು ಎಸ್‌ ಎಂ ಕೃಷ್ಣ ವ್ಯಕ್ತಪಡಿಸಿದ್ದರು. ಹಲವು ವರ್ಷಗಳ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಎಸ್ ಎಂ ಕೃಷ್ಣ ಬಿಜೆಪಿಗೆ ಸೇರ್ಪಡೆಯಾಗಿದ್ದರು.

More from Filmibeat

English summary
Former Karnataka chief minister S M Krishna died actress Ramya paid last respect;
Read more about: ramya actress death
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X