ಕನ್ನಡದಲ್ಲೇ 'ಮ್ಯಾಕ್ಸ್' ಸಿನಿಮಾ ನೋಡಿ ಎಂದು ಕ್ರಿಕೆಟ್ ದಿಗ್ಗಜ ಕಪಿಲ್ ದೇವ್; ಇವರಿಗೂ ಕಿಚ್ಚನಿಗೂ ಲಿಂಕ್ ಏನು?

ಸ್ಯಾಂಡಲ್‌ವುಡ್ ಮಂದಿಗೆ ನಾಳೆ (ಡಿಸೆಂಬರ್ 25) ಮತ್ತೊಂದು ಹಬ್ಬ. ಕಿಚ್ಚ ಸುದೀಪ್ ಅಭಿನಯದ ಸಿನಿಮಾ 'ಮ್ಯಾಕ್ಸ್' ಮ್ಯಾಕ್ಸಿಮಂ ಅಬ್ಬರದೊಂದಿಗೆ ಥಿಯೇಟರ್‌ಗೆ ಲಗ್ಗೆ ಇಡುವುದಕ್ಕೆ ಸಜ್ಜಾಗಿದೆ. ಈಗಾಗಲೇ ಕಿಚ್ಚನ ಅಭಿಮಾನಿಗಳು ಥಿಯೇಟರ್ ಮುಂದೆ ಹಬ್ಬ ಆಚರಿಸುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಕೊನೆಯ ಹಂತದ ಸಿದ್ಧತೆಗಳು ಕೂಡ ಭರ್ಜರಿಯಾಗಿ ನಡೆಯುತ್ತಿವೆ.

ಪಕ್ಕಾ ಆಕ್ಷನ್, ಸೆಂಟಿಮೆಂಟ್ ಎಂಟರ್‌ಟೈನರ್ ಸಿನಿಮಾ 'ಮ್ಯಾಕ್ಸ್' ಬಗ್ಗೆ ಬಿಡುಗಡೆಗೂ ಮುನ್ನ ಭರವಸೆಯನ್ನು ಹುಟ್ಟಾಕಿದೆ. 'ವಿಕ್ರಾಂತ್ ರೋಣ' ಬಳಿಕ 'ಮ್ಯಾಕ್ಸ್' ರಿಲೀಸ್ ಆಗುತ್ತಿರುವುದರಿಂದ ಈ ಸಿನಿಮಾ ಮೇಲೆ ನಿರೀಕ್ಷೆ ದುಪ್ಪಟ್ಟಿದೆ. ಅದರಲ್ಲೂ ಒಂದು ರಾತ್ರಿಯಲ್ಲಿ ನಡೆಯುವ ಕಥೆ ಎಂದು ಹೇಳಿದ್ದರಿಂದ ಕಿಚ್ಚನ ಫ್ಯಾನ್ಸ್‌ಗೆ ಅದ್ಯಾವಾಗ ಸಿನಿಮಾ ನೋಡುತ್ತೇವೋ ಅಂತ ತುದಿಗಾಲಲ್ಲಿ ನಿಂತಿದ್ದಾರೆ.

Former World Cup-winning cricket team captain Kapil Dev talks about Kichcha Sudeep s film Max

ಇನ್ನೊಂದು ಕಡೆ ಕಿಚ್ಚನ 'ಮ್ಯಾಕ್ಸ್' ಸಿನಿಮಾಗೆ ಭಾರತೀಯ ಕ್ರಿಕೆಟ್ ತಂಡ ಮಾಜಿ ನಾಯಕ ಕಪಿಲ್ ದೇವ್ ಕೂಡ ಸಾಥ್ ಕೊಟ್ಟಿದ್ದಾರೆ. ಕನ್ನಡಿಗರಿಗೆ ಕನ್ನಡದಲ್ಲಿಯೇ ಸುದೀಪ್ ಸಿನಿಮಾ 'ಮ್ಯಾಕ್ಸ್' ನೋಡಿ ಎಂದು ಹೇಳಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಕಪಿಲ್ ದೇವ್ 'ಮ್ಯಾಕ್ಸ್' ಬಗ್ಗೆ ಮಾತಾಡಿದಕ್ಕೆ ಫ್ಯಾನ್ಸ್ ಫಿದಾ ಆಗಿರೋದೇನೋ ನಿಜ. ಹಾಗೇ ಕಪಿಲ್ ದೇವ್‌ಗೂ ಈ ಸಿನಿಮಾಗೂ ಏನು ಸಂಬಂಧ ಅಂತ ಕನ್ಫ್ಯೂಸ್ ಕೂಡ ಆಗಿದ್ದಾರೆ.

ಸಿನಿಪ್ರಿಯರು 'ಮ್ಯಾಕ್ಸ್' ಮೂಡ್‌ನಲ್ಲಿ ಇದ್ದಾರೆ. ಕಿಚ್ಚನೇ ಹೇಳಿರುವಂತೆ ಒಂದು ರಾತ್ರಿಯಲ್ಲಿ ಅದೇನು ನಡೆಯುತ್ತೆ? ಕಿಚ್ಚ ಸುದೀಪ್ ಈ ಕಥೆಯ ಬಗ್ಗೆ ಅಷ್ಟೊಂದು ಕಾನ್ಫಿಡೆನ್ಸ್ ಆಗಿರುವುದು ಯಾಕೆ? ಅನ್ನೋದನ್ನು ನೋಡಲು ಕಾತುರರಾಗಿದ್ದಾರೆ. ಈ ಮಧ್ಯೆ ಕಿಚ್ಚ ಸುದೀಪ್ ಸಿನಿಮಾಗೆ ಭಾರತಕ್ಕೆ ಮೊದಲ ವರ್ಲ್ಡ್ ಕಪ್ ಗೆದ್ದ ಕ್ರಿಕೆಟ್ ಲೋಕದ ದಿಗ್ಗಜ ಕಪಿಲ್ ದೇವ್ ಸಾಥ್ ಕೊಟ್ಟಿದ್ದು ಕೆಲವರಿಗೆ ಅಚ್ಚರಿ ಮೂಡಿಸಿದೆ.

ಅಂದ್ಹಾಗೆ ಇದೇ 'ಮ್ಯಾಕ್ಸ್' ಸಿನಿಮಾದಲ್ಲಿ ನಟಿಸಿರುವ ಸಂಯುಕ್ತ ಹೊರನಾಡು ತಮ್ಮ ಎಕ್ಸ್ ಖಾತೆಯಲ್ಲಿ ಕಪಿಲ್ ದೇವ್ ವಿಶ್ ಮಾಡಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅವರಿಗೆ ಕಪಿಲ್ ದೇವ್ ಸಿಕ್ಕಿದ್ದು ಹೇಗೆ? ಅವರನ್ನು ಕನ್ನಡದಲ್ಲಿ ಮಾತಾಡಿಸಿದ್ದು ಯಾರು? ಹೇಗೆ ಎಂಬ ಮಾಹಿತಿಯನ್ನು ಹಂಚಿಕೊಂಡಿಲ್ಲ. ಆದರೂ ಕನ್ನಡ ಸಿನಿಮಾವೊಂದಕ್ಕೆ ಕಪಿಲ್ ದೇವ್ ಶುಭ ಕೋರಿದ್ದು ಕ್ರಿಕೆಟ್ ಹಾಗೂ ಸಿನಿಮಾ ಪ್ರೇಮಿಗಳಿಗೆ ಖುಷಿ ಕೊಟ್ಟಿದೆ.

ಸಂಯುಕ್ತ ಹೊರನಾಡು ಶೇರ್ ಮಾಡಿರುವ ವಿಡಿಯೋದಲ್ಲಿ ಕಪಿಲ್ ದೇವ್ "ಓ.. ಮ್ಯಾಕ್ಸ್ ರಿಲೀಸಿಂಗ್ ಟುಮಾರೋ.. ಹೋಗಿ ನೋಡಿ" ಎಂದು ಕಪಿಲ್ ದೇವ್ ಹೇಳಿದ್ದಾರೆ. ಈ ಚಿಕ್ಕ ವಿಡಿಯೋವನ್ನು ಸಂಯುಕ್ತ ಹೊರನಾಡು ಹಂಚಿಕೊಂಡಿದ್ದಾರೆ. ಕಪಿಲ್ ದೇವ್ ಕನ್ನಡದಲ್ಲಿ ಮಾತಾಡಿದ್ದಕ್ಕೆ ಕನ್ನಡಿಗರು ಫುಲ್ ಖುಷಿಯಾಗಿದ್ದಾರೆ. ಸದ್ಯ ಈ ವಿಡಿಯೋ ಪುಟ್ಟ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಈ ಸಿನಿಮಾದಲ್ಲಿ ಸಂಯುಕ್ತ ಹೊರನಾಡು ಸಬ್ ಇನ್ಸೆಪೆಕ್ಟರ್ ಆರತಿ ಅನ್ನುವ ಪಾತ್ರದಲ್ಲಿ ನಟಿಸಿದ್ದಾರೆ. ಇದು ಕೂಡ 'ಮ್ಯಾಕ್ಸ್' ಸಿನಿಮಾದಲ್ಲಿ ಪ್ರಮುಖ ಪಾತ್ರ ಎನ್ನಲಾಗಿದೆ. ಇವರೊಂದಿಗೆ ಸುಕ್ರುತಾ ವಾಗ್ಲೆ ಪೊಲೀಸ್ ಪಾತ್ರದಲ್ಲಿ ನಟಿಸಿದ್ದಾರೆ. ಹಾಗೇ ತಮಿಳು ನಟಿ ವರಲಕ್ಷ್ಮಿ ಶರತ್ ಕುಮಾರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಹಾಗೂ ವಿಜಯ್ ಕಾರ್ತಿಕೇಯನ್ ನಿರ್ದೇಶನ ಕುತೂಹಲವನ್ನು ದುಪ್ಪಟ್ಟು ಮಾಡಿದೆ.

More from Filmibeat

English summary
Former World Cup-winning cricket team captain Kapil Dev talks about Kichcha Sudeep's film Max;
Read more about: sudeep sandalwood video
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X