»   » ಮತ್ತೆ ಬಟಾ ಬಯಲಾಯ್ತು ಕನ್ನಡ ಚಿತ್ರೋದ್ಯಮದ ಒಗ್ಗಟ್ಟು

ಮತ್ತೆ ಬಟಾ ಬಯಲಾಯ್ತು ಕನ್ನಡ ಚಿತ್ರೋದ್ಯಮದ ಒಗ್ಗಟ್ಟು

Posted By:
Subscribe to Filmibeat Kannada

ದೊಡ್ಡ ಬಜೆಟಿನ ಪರಭಾಷಾ ಚಿತ್ರಗಳು ಬಿಡುಗಡೆಯಾದಾಗ ಸೈಲೆಂಟಾಗಿ ಸೈಡಲ್ಲಿದ್ದು ತಮ್ಮ ಚಿತ್ರಗಳ ಬಿಡುಗಡೆಗೆ ಮುಂದಾಗದ ನಮ್ಮ ಕನ್ನಡ ಚಿತ್ರೋದ್ಯಮದವರು ಈಗ ತಮ್ಮ ತಮ್ಮೊಳಗೆ ಫೈಟಿಗೆ ಇಳಿದಿದ್ದಾರೆ.

ಬಾಹುಬಲಿ, ಭಜರಂಗಿ ಭಾಯ್ ಜಾನ್ ಚಿತ್ರ ಬಿಡುಗಡೆಯಾದಾಗ ತಮ್ಮ ಸಿನಿಮಾಗಳ ಬಿಡುಗಡೆಗೆ ಧೈರ್ಯ ತೋರದ ನಮ್ಮ ನಿರ್ಮಾಪಕರು ಮತ್ತು ಹಂಚಿಕೆದಾರರು, ಈಗ ಎರಡು ವಾರದ ಅಂತರದಲ್ಲಿ ನಾಲ್ಕು ಸಿನಿಮಾ ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ.

ಯಾರ ಚಿತ್ರ ಬಿಡುಗಡೆಯಾಗಲಿ, ಬಿಡಲಿ ನಾವಂತೂ ನಮ್ಮ ಸಿನಿಮಾ ಬಿಡುಗಡೆ ಮಾಡೇ ಮಾಡುತ್ತೇವೆಂದು ಹಠಕ್ಕೆ ಬಿದ್ದಿರುವ ನಿರ್ಮಾಪಕರಿಂದ ನಷ್ಟ ಅನುಭವಿಸುವುದು ನಮ್ಮ ಕನ್ನಡ ಚಿತ್ರಗಳೇ ಅನ್ನುವ ಅರಿವಿಲ್ಲದಂತೇ ಇವರು ವರ್ತಿಸುತ್ತಿರುವುದು ದುರಂತ.

ಮತ್ತೊಂದು ಗಂಭೀರ ವಿಚಾರವೇನಂದರೆ ಎರಡು ವಾರದ ಅಂತರದಲ್ಲಿ ಬಿಡುಗಡೆಯಾಗುತ್ತಿರುವ ಎಲ್ಲಾ ನಾಲ್ಕು ಸಿನಿಮಾಗಳು ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಚಿತ್ರಗಳು.

ಪರಭಾಷಾ ಚಿತ್ರಗಳಿಗೆಂದೇ ಮೀಸಲಾಗಿರುವ ಬೆಂಗಳೂರು ಸೇರಿದಂತೆ ರಾಜ್ಯದ ಚಿತ್ರಮಂದಿರಗಳನ್ನು ತಮ್ಮತ್ತ ಸೆಳೆಯುವ ಯಾವ ಪ್ರಯತ್ನಕ್ಕೂ ಮುಂದಾಗದ ನಮ್ಮ ಚಿತ್ರೋದ್ಯಮದವರಿಗೆ ಅದ್ಯಾವಾಗ ದೇವರು ಬುದ್ದಿ ಕರುಣಿಸುತ್ತಾನೋ ಎಂದರೆ ಯಾರೂ ಬೇಸರಿಸಿಕೊಳ್ಳಬಾರದು.

ಮಹೇಶ್ ಬಾಬು ಚಿತ್ರ

ರಾಜ್ಯದ ಚಿತ್ರಮಂದಿರಗಳಲ್ಲಿ ಮಹೇಶ್ ಬಾಬು ಅಭಿನಯದ ಶ್ರೀಮಂತಡು ಸಿನಿಮಾ "ಶ್ರೀಮಂತ"ವಾಗಿ ಇದೇ ಶುಕ್ರವಾರದಿಂದ (ಆ 7) ರಾರಾಜಿಸಲಿದೆ. ಮಾರ್ಸ್ ಫಿಲಂಸ್ ಈ ಚಿತ್ರದ ಕರ್ನಾಟಕ ಡಿಸ್ಟ್ರಿಬ್ಯೂಟರ್ (ಬಿಕೆಟಿ ಹೊರತು ಪಡಿಸಿ), ಬಿಕೆಟಿ ಪ್ರಾಂತ್ಯಕ್ಕೆ ಬೃಂದಾ ಅಶೋಷಿಯೇಟ್ಸ್ ಹಂಚಿಕೆದಾರರು. ಬೆಂಗಳೂರಿನ ಮೂವಿಲ್ಯಾಂಡ್ ಸೇರಿದಂತೆ ದೊಡ್ಡ ಸಂಖ್ಯೆಯ ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ, ಮೂಲಗಳ ಪ್ರಕಾರ ಸುಮಾರು 120-130ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ..

ತೆಲುಗು, ತಮಿಳು ಚಿತ್ರಗಳಿಗೆ ಕರ್ನಾಟಕ ದೊಡ್ಡ ಮಾರುಕಟ್ಟೆ

ಆಂಧ್ರ, ತೆಲಂಗಾಣದ ನಂತರ ತೆಲುಗು ಚಿತ್ರಗಳಿಗೆ ದೊಡ್ಡ ಮಾರುಕಟ್ಟೆ ಅಂದರೆ ಕರ್ನಾಟಕ. ಶ್ರೀಮಂತಡು ಚಿತ್ರಕ್ಕೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದರೆ ಒಂದು ವಾರದ ನಂತರವೂ ಚಿತ್ರ ಚಿತ್ರಮಂದಿರದಲ್ಲಿ ಕಚ್ಚಿಕೊಳ್ಳುವುದು ಗ್ಯಾರಂಟಿ. ಆಗ ಬರುವ ವಾರ ಬಿಡುಗಡೆಯಾಗುತ್ತಿರುವ ಕನ್ನಡ ಚಿತ್ರಗಳಿಗೆ ಮತ್ತಷ್ಟು ಚಿತ್ರಮಂದಿರದ ಕೊರತೆ ಕಾಡುವುದಂತೂ ಗ್ಯಾರಂಟಿ.

ಬುಗುರಿ

ಗೋಲ್ಡನ್ ಸ್ಟಾರ್ ಅಭಿನಯದ ಬುಗುರಿ ಚಿತ್ರ ಬರುವ (ಆ 14) ವಾರ ಬಿಡುಗಡೆಯಾಗುತ್ತಿದೆ. ಎಂ ಡಿ ಶ್ರೀಧರ್ ನಿರ್ದೇಶನದ ಈ ಚಿತ್ರದಲ್ಲಿ ಎರಿಕಾ ಫೆರ್ನಾಂಡಿಸ್, ರಿಚಾ ಪಾನಯ್, ಸಾಧು ಕೋಕಿಲ ಮುಂತಾದವರಿದ್ದಾರೆ. ಈ ಚಿತ್ರ ವರ್ಷದ ಬಹು ನಿರೀಕ್ಶಿತ ಸಿನಿಮಾಗಳಲ್ಲೊಂದು.

ಎಲ್ರಾ ಕಾಲ್ ಎಳಿತದೇ ಕಾಲ..

ಉಪೇಂದ್ರ ನಿರ್ದೇಶನದ ಚಿತ್ರವೆಂದರೆ ಅದಕ್ಕೊಂದು ಹೈಪೇ ಬೇರೆ. ಹಾಗಿರುವಾಗ ಅವರ ನಿರ್ದೇಶನದ, ನಿರ್ಮಾಣದ ಜೊತೆಗೆ ನಾಯಕನಾಗಿ ನಟಿಸುತ್ತಿರುವ ಚಿತ್ರಯೆಂದರೆ ಕೇಳಬೇಕೇ? ಉಪ್ಪಿ 2 ಚಿತ್ರ ಕೂಡಾ ಬರುವ ವಾರ ಅಂದರೆ ಗಣೇಶ್ ಅಭಿನಯದ ಬುಗುರಿ ಚಿತ್ರ ಬಿಡುಗಡೆಯ ದಿನದಂದೇ ಅಂದರೆ ಆಗಸ್ಟ್ ಹದಿನಾಲ್ಕರಂದು ಬಿಡುಗಡೆಯಾಗುತ್ತಿದೆ.

ಆರ್ ಎಕ್ಸ್ ಸೂರಿ

ದುನಿಯಾ ವಿಜಯ್, ರವಿಶಂಕರ್ ಪ್ರಮುಖ ಭೂಮಿಕೆಯಲ್ಲಿರುವ ಮತ್ತೊಂದು ಸುದ್ದಿ ಮಾಡುತ್ತಿರುವ ಚಿತ್ರ ಆರ್ ಎಕ್ಸ್ ಸೂರಿ. ರಾಯಲ್ ಸೀಮಾ ಭಾಗದ ಇತ್ತಂಡಗಳ ನಡುವಿನ ದ್ವೇಷ, ಪ್ರತೀಕಾರ, ಲವ್, ಸೆಂಟಿಮೆಂಟ್ ಸಾರುವ ಚಿತ್ರ ಇದು ಎನ್ನಲಾಗುತ್ತಿದ್ದು ಈಗಾಗಲೇ ಭಾರೀ ಸದ್ದು ಮಾಡುತ್ತಿದೆ.

ರಿಂಗ್ ರೋಡ್

ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಸುದ್ದಿ ಮಾಡುತ್ತಿರುವ ಚಿತ್ರ ರಿಂಗ್ ರೋಡ್. ಮಹಿಳೆಯರೇ ಪ್ರಮುಖ ತಾರಾಗಣದಲ್ಲಿರುವ ಈ ಚಿತ್ರದಲ್ಲಿ ದುನಿಯಾ ವಿಜಯ್ ನಟಿಸಿದ್ದಾರೆ ಎನ್ನುವುದು ವಿಶೇಷ. ಸೂರಿ ಮತ್ತು ರಿಂಗ್ ರೋಡ್ ಎರಡೂ ಚಿತ್ರಗಳು ನೈಜ ಕಥಾದಾರಿತ ಸಿನಿಮಾಗಳು. ಈಗ ಇವರೆಡೂ ಚಿತ್ರಗಳು ಒಂದೇ ದಿನದಂದು ಬಿಡುಗಡೆಗೆ ಸಿದ್ದವಾಗಿವೆ.

English summary
Four Kannada movies i.e. Uppi 2, Buguri, RX Soori and Ring Road set to release in a gap of two weeks.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada