ಥೈಲ್ಯಾಂಡ್‌ನ ಕಾಡಿನೊಳಗೆ ಡೈಸಿ ಬೋಪಣ್ಣ ಬಿಂದಾಸ್: ಮಿಂಚಿನ ಹುಡುಗಿ ಕಂಡು ಮಿಂಚಂತೆ ಕಳೆದ ಹೋದ ನೆಟ್ಟಿಗರು

ಡೈಸಿ ಬೋಪಣ್ಣ ಯಾರಿಗೆ ಗೊತ್ತಿಲ್ಲ ಹೇಳಿ.. ಇವರ ಹೆಸರು ಹೇಳಿದರೆ ಸಾಕು ಹುಡುಗರು ಎದೆಯೊಳಗೆ ಗಾಳಿಪಟ ಹಾರಿಸಿಬಿಡುತ್ತಾರೆ. ಮತ್ತೆ ಕೆಲವರು ಮಿಂಚಾಗಿ ನೀನು ಬರಲು ಅಂತ ಹಾಡೋಕೆ ಶುರುವಿಟ್ಟುಕೊಳ್ಳುತ್ತಾರೆ. ಡೈಸಿ ಬೋಪಣ್ಣ ಅಂದರೆ ಹಂಗೆ..

ಸದ್ಯ ಡೈಸಿ ಬೋಪಣ್ಣ ಸಿನಿಮಾರಂಗದಿಂದ ದೂರ ಉಳಿದಿದ್ದಾರೆ. ಮದುವೆ ಬಳಿಕ ಅದ್ಯಾಕೋ ಮತ್ತೆ ಬಣ್ಣ ಹಚ್ಚುವ ಮನಸ್ಸು ಮಾಡಿಲ್ಲ. ಆದರೆ, ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ತುಂಬಾನೇ ಆಕ್ಟಿವ್ ಆಗಿ ಇದ್ದಾರೆ. ತಮ್ಮ ಗ್ಲಾಮರಸ್ ಫೋಟೊಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ.

Gaalipata Actress Daisy Bopanna in glamorous mood in Thailand photos go viral

ಇಷ್ಟೊಂದು ಆಕ್ವೀವ್ ಆಗಿರೋ ನಟಿ ಸಿನಿಮಾದಿಂದ ದೂರ ಉಳಿದಿರೋ ಬಗ್ಗೆ ಅಭಿಮಾನಿಗಳಿಗೆ ಬೇಸರವಿದೆ. ಆದರೂ, ಸೋಶಿಯಲ್ ಮೀಡಿಯಾ ಆಗಾಗ ದರ್ಶನ ಕೊಡುತ್ತಿರೋದ್ರಿಂದ ಸಮಾಧಾನಗೊಂಡಿರಬಹುದು. ಸದ್ಯಕ್ಕೀಗ ಡೈಸಿ ಬೋಪಣ್ಣ ಥೈಲ್ಯಾಂಡ್‌ನಲ್ಲಿದ್ದಾರೆ. ಫುಲ್ ಮಸ್ತಿ ಮೂಡ್‌ನಲ್ಲಿದ್ದಾರೆ. ಜೊತೆ ಗ್ಲಾಮರಸ್‌ ಫೋಟೊಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.

ಕಾಡಿನೊಳಗೆ ಕಳೆದು ಹೋದ ಡೈಸಿ ಬೋಪಣ್ಣ

'ಗಾಳಿಪಟ' ನಟಿ ಬೈಸಿ ಬೋಪಣ್ಣ ಥೈಲ್ಯಾಂಡ್‌ನಲ್ಲಿ ಮಸ್ತ್ ಮೋಡಿ ಮಜಾ ಮಾಡುತ್ತಿದ್ದಾರೆ. ಹಸಿರು ಹಾಗೂ ಕಪ್ಪು ಬಿಕಿನಿ ತೊಟ್ಟು ಬೋಲ್ಡ್ ಲುಕ್ ಕೊಟ್ಟಿದ್ದಾರೆ. ಥೈಲ್ಯಾಂಡ್‌ನಲ್ಲಿ ಕಾಡಿನ ಮಧ್ಯೆದಲ್ಲಿರುವ ಕೊಳದಲ್ಲಿ ರಿಲ್ಯಾಕ್ಸ್ ಮೂಡಿಗೆ ಜಾರಿದ್ದಾರೆ.

'ಗಾಳಿಪಟ', 'ಐಶ್ವರ್ಯಾ', 'ರಾಮ ಶ್ಯಾಮ ಭಾಮ' ಸಿನಿಮಾಗಳು ಬಂದಾಗ ಡೈಸಿಗೆ ದೊಡ್ಡ ಅಭಿಮಾನಿ ಬಳಗವೇ ಹುಟ್ಟಿಕೊಂಡಿತ್ತು. ಅಲ್ಲಿಂದ ಇಲ್ಲಿವರೆಗೂ ಡೈಸಿ ಅವರ ಪಾಲಿಗೆ ಮಿಂಚಿನ ಹುಡುಗಿಯೇ. ಥೈಲ್ಯಾಂಡ್‌ನ ಕಾಡಿನೊಳಗೆ ಸದ್ದು ಬೋಲ್ಡ್ ಕೊಟ್ಟಿದ್ದಲ್ಲದೆ, " ಕಾಡಿನ ಮಧ್ಯದಲ್ಲಿ ಎಲ್ಲೋ ಇದ್ದೀನಿ. ವಿಶ್ವದ ಪ್ರತಿಯೊಂದು ಸ್ಥಳವೂ ಹೀಗೆ ಇರಲಿ ಎಂದು ಆಶಿಸುತ್ತೇನೆ" ಎಂದು ಪೋಸ್ಟ್ ಮಾಡಿದ್ದಾರೆ.

ಮಿಂಚಿನಂತೆ ಕಳೆದು ಹೋದ ನೆಟ್ಟಿಗರು

ಡೈಸಿ ಬೋಪಣ್ಣ ಥೈಲ್ಯಾಂಡ್‌ನ ಗ್ಲಾಮರಸ್ ಫೋಟೊಗಳನ್ನು ಶೇರ್ ಮಾಡುತ್ತಿದ್ದಂತೆ ನೆಟ್ಟಿಗರು ಫುಲ್ ಆಕ್ಟೀವ್ ಆಗಿದ್ದಾರೆ. ನೆಟ್ಟಿಗರು ಮಾಡಿರೋ ಕಮೆಂಟ್‌ಗಳನ್ನು ನೋಡಿದರೆ, ಡೈಸಿ ಬೋಪಣ್ಣರನ್ನು ಅದೆಷ್ಟು ಮಿಸ್ ಮಾಡಿಕೊಳ್ಳುತ್ತಿದ್ದಾರೆ ಅನ್ನೋದು ಗೊತ್ತಾಗುತ್ತೆ. ಇಬ್ಬರಂತೂ " ಮಿಂಚಾಗಿ ನೀನು ಬರಲು.." ಅಂತ ಹಾಡುವುದಕ್ಕೆ ಮುಂದಾಗಿದ್ದಾರೆ.

ಬಹುತೇಕ ಕಮೆಂಟ್‌ಗಳು ನಟಿ ಡೈಸಿ ಬೋಪಣ್ಣರನ್ನು ಸಿನಿಮಾಗೆ ಆಹ್ವಾನ ನೀಡುತ್ತಿವೆ. ಒಬ್ಬರು " ನಾನು ನಿಮ್ಮನ್ನು ಕನ್ನಡ ಸಿನಿಮಾಗಳಲ್ಲಿ ನೋಡಿದ್ದೇನೆ. ಐಶ್ವರ್ಯಾ ಹಾಗೂ ಗಾಳಿಪಟದಲ್ಲಿ ನಿಮ್ಮ ಆಕ್ಟಿಂಗ್‌ ಅನ್ನು ಇಷ್ಟಪಟ್ಟಿದ್ದೇನೆ. ತುಂಬಾ ಚೆನ್ನಾಗಿ ಕಾಣುತ್ತೀದ್ದೀರಿ" ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು " ಬನ್ನಿ ಕನ್ನಡ ಇಂಡಸ್ಟ್ರಿಗೆ" ಎಂದು ಮನವಿ ಮಾಡಿದ್ದಾರೆ. ಇನ್ನೊಬ್ಬರು "ನೀವು ಹಾಗೂ ನೀವು ಇರುವ ಸ್ಥಳ ಎರಡು ಸುಂದರವಾಗಿದೆ" ಎಂದು ಕಾಂಪ್ಲಿಮೆಂಟ್ಸ್ ಕೊಟ್ಟಿದ್ದಾರೆ.

ಸಿನಿಮಾದಿಂದ ಡೈಸಿ ದೂರ

ಡೈಸಿ ಬೋಪಣ್ಣ 'ಗಾಳಿಪಟ','ಒಲವೇ ಜೀವನ ಲೆಕ್ಕಾಚಾರ','ರಂಗ ಎಸ್‌ಎಸ್‌ಎಲ್‌ಸಿ', 'ಬಿಂಬ', 'ಭಗವಾನ್', 'ರಾಮ ಶ್ಯಾಮ ಭಾಮ', 'ಜಾಕ್‌ಪಾಟ್‌','ಸತ್ಯವಾನ್ ಸಾವಿತ್ರಿ' ಅಂತಹ ಜನಪ್ರಿಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೆಲವು ಸಿನಿಮಾಗಳು ಇವರಿಗೆ ಯಶಸ್ಸು ತಂದುಕೊಡಲಿಲ್ಲ. ಹೀಗಾಗಿ ಬಾಲಿವುಡ್ ಚಿತ್ರರಂಗದ ಕಡೆ ಮುಖ ಮಾಡಿದ್ದರು.

2012ರಲ್ಲಿ ತೆರೆಕಂಡಿದ್ದ 'ಕ್ರೇಜಿ ಲೋಕ'ವೇ ಇವರ ಕೊನೆಯ ಸಿನಿಮಾ. ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ ಬಳಿಕ ಅಲ್ಲೇ ಅಮಿತ್ ಎಂಬುವವರನ್ನು ವಿವಾಹವಾದರು. ಅಲ್ಲಿಂದ ಮತ್ತೆ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. ಆದರೆ, ಸೋಶಿಯಲ್ ಮೀಡಿಯಾಗಳಲ್ಲಿ ಡೈಸಿ ಸದಾ ಆಕ್ಟೀವ್ ಆಗಿದ್ದು, ಮತ್ತೆ ಚಿತ್ರರಂಗಕ್ಕೆ ಮರಳುವ ಸಾಧ್ಯತೆ ಹೆಚ್ಚಿದೆ.

More from Filmibeat

English summary
Gaalipata Actress Daisy Bopanna is in a glamorous mood in Thailand. Daisy's bold green bikini photos go viral; know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X