ಕನಗನಮರಡಿ ಬಸ್ ದುರಂತಕ್ಕೆ ಮರುಗಿದ ನಟ ಗಣೇಶ್, ರಾಗಿಣಿ
ಮಂಡ್ಯ ಜಿಲ್ಲೆಯ ಕನಗನಮರಡಿಯಲ್ಲಿ ಸಂಭವಿಸದ ಬಸ್ ದುರಂತಕ್ಕೆ ಸ್ಯಾಂಡಲ್ ವುಡ್ ಮರುಗಿದೆ. ಗೋಲ್ಡನ್ ಸ್ಟಾರ್ ಗಣೇಶ್, ರಾಗಿಣಿ ಸೇರಿದಂತೆ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ.
ದುರಂತದಿಂದ ಆಘಾತಕ್ಕೆ ಒಳಗಾಗಿರುವ ಗಣೇಶ್ ಟ್ವಿಟ್ಟರ್ ಮೂಲಕ ಮೃತರಾದ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ''ಮಂಡ್ಯ ಜಿಲ್ಲೆಯ ಕನಗನಮರಡಿಯಲ್ಲಿ ಬಸ್ ದುರಂತ ನಿಜಕ್ಕೂ ದುರದೃಷ್ಟಕರ.ವಿಧಿಯ ಕ್ರೌರ್ಯಕ್ಕೆ ಬಲಿಯಾದ ಮುಗ್ಧ ಜೀವಗಳ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಮೃತರ ಕುಟುಂಬಗಳಿಗೆ ದುಃಖ ಬರಿಸುವ ಶಕ್ತಿಯನ್ನು ದೇವರು ನೀಡಲಿ'' ಎಂದು ಸಂತಾಪ ಸೂಚಿಸಿದ್ದಾರೆ.
Big Breaking: ಮಂಡ್ಯದಲ್ಲಿ ಭೀಕರ ಬಸ್ ಅಪಘಾತ: 20 ಕ್ಕೂ ಹೆಚ್ಚು ಜನ ಸಾವು

ಈ ದುಃಖದಲ್ಲಿ ಭಾಗಿಯಾದ ನಟ ಗಣೇಶ್ ಇಂದು ಬಿಡುಗಡೆಯಾಗಬೇಕಿದ್ದ 'ಆರೆಂಜ್' ಚಿತ್ರದ ಟ್ರೈಲರ್ ನ್ನ ಮುಂದೂಡಿದ್ದಾರೆ. ಪ್ರಶಾಂತ್ ರಾಜ್ ನಿರ್ದೇಶನ ಮಾಡಿದ್ದ ಆರೆಂಜ್ ಟ್ರೈಲರ್ ಇಂದು ಸಂಜೆ 6.05ಕ್ಕೆ ರಿಲೀಸ್ ಆಗಬೇಕಿತ್ತು.
ಮಂಡ್ಯ ಬಸ್ ಅಪಘಾತ: ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ
ಇನ್ನು ಕನಗನಮರಡಿ ಬಸ್ ದುರಂತದ ಬಗ್ಗೆ ನಟಿ ರಾಗಿಣಿ ಕೂಡ ಟ್ವೀಟ್ ಮಾಡಿದ್ದು, ''ಈ ಸುದ್ದಿ ಕೇಳಿ ಆಘಾತ ಮತ್ತು ಅಚ್ಚರಿಯಾಗಿದೆ. ಬಸ್ ಅಪಘಾತದಲ್ಲಿ ಮೃತಪಟ್ಟವರ ಶವ ಹೊರತೆಗೆಯಲು ನೆರವಿಗೆ ಬಂದ ರೈತರಿಗೆ ನಾನು ಥ್ಯಾಂಕ್ಸ್ ಹೇಳ್ತೀನಿ. ಆ ಕುಟುಂಬಗಳಿಗೆ ಈ ನೋವು ಭರಿಸುವ ಧೈರ್ಯವನ್ನ ಆ ದೇವರು ನೀಡಲಿ'' ಎಂದಿದ್ದಾರೆ.
ಕನಗನಮರಡಿಯಲ್ಲಿ 25ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಬಸ್ಸು ಯಾರಿಗೆ ಸೇರಿದ್ದು?
ಘಟನೆ ವಿವರ:
ಪಾಂಡವರಪುದಿಂದ ಮಂಡ್ಯಗೆ ತೆರಳುತಿದ್ದ ರಾಜ್ ಕುಮಾರ್ ಎಂಬ ಹೆಸರಿನ ಬಸ್ ಕನಗನಮರಡಿ ಗ್ರಾಮದ ಬಳಿ ನಾಲೆಗೆ ಬಿದ್ದು, ಸಂಪೂರ್ಣವಾಗಿ ಮುಳುಗಿತ್ತು. ಈ ದುರಂತದಲ್ಲಿ 25ಕ್ಕೂ ಅಧಿಕ ಮಂದಿ ನಿಧನರಾಗಿದ್ದಾರೆ.


Click it and Unblock the Notifications











