ದುರಹಂಕಾರವನ್ನು ಪಕ್ಕಕ್ಕಿಟ್ಟು, ತಕ್ಷಣವೇ ಕ್ಷಮೆ ಕೇಳಬೇಕು; ವಿಜಯ್ ರಂಗರಾಜು ವಿರುದ್ಧ ಗಣೇಶ್ ಕೆಂಡಾಮಂಡಲ
ಸ್ಯಾಂಡಲ್ ವುಡ್ ನ ದಾದಾ, ಸಾಹಸಸಿಂಹ ವಿಷ್ಣುವರ್ಧನ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾನಾಡಿದ ತೆಲುಗು ನಟ ವಿಜಯ್ ರಂಗರಾಜು ವಿರುದ್ಧ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆ ಕಲಾವಿದ ತನ್ನ ದುರಹಂಕಾರವನ್ನು ಪಕ್ಕಕ್ಕಿಟ್ಟು, ತಕ್ಷಣವೇ ಕ್ಷಮೆಕೇಳಬೇಕು ಎಂದು ಗಣೇಶ್ ಗುಡುಗಿದ್ದಾರೆ.
ತೆಲುಗಿನ ಕೆಲವು ಸಿನಿಮಾಗಳಲ್ಲಿ ನಟಿಸಿರುವ ರಂಗರಾಜು ಇತ್ತೀಚಿಗೆ ಸಂದರ್ಶವೊಂದರಲ್ಲಿ ಕನ್ನಡದ ಖ್ಯಾತ ನಟ ವಿಷ್ಣುವರ್ಧನ್ ಬಗ್ಗೆ ಬಾಯಿಗೆ ಬಂದಹಾಗೆ ಕೆಟ್ಟದಾಗಿ ಮಾನಾಡಿದ್ದಾರೆ. ಸ್ಯಾಂಡಲ್ ವುಡ್ ದಾದಾ ಬಗ್ಗೆ ನಾಲಿಗೆ ಹರಿಬಿಟ್ಟಿರುವ ರಂಗರಾಬು ವಿರುದ್ಧ ಅಭಿಮಾನಿಗಳು ಮಾತ್ರವಲ್ಲದೆ, ಕನ್ನಡ ಸ್ಟಾರ್ಸ್ ಕೂಡ ಕೆಂಡಾಮಂಡಲರಾಗಿದ್ದಾರೆ. ನಟ ಜಗ್ಗೇಶ್, ಅನಿರುದ್ಧ್, ಪುನೀತ್ ರಾಜ್ ಕುಮಾರ್, ಸುದೀಪ್ ಸೇರಿದಂತೆ ಅನೇಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ರಿಷಬ್ ಶೆಟ್ಟಿ ರಂಗರಾಜು ವಿರುದ್ಧ ಸಿಡಿದೆದಿದ್ದಾರೆ.
'ವ್ಯಕ್ತಿ ಬದುಕಿದ್ದಾಗ ಮಾತಾಡಿದ್ರೆ ಗಂಡಸ್ತನ ಇರುತ್ತೆ...': ವಿಜಯ್ ರಂಗರಾಜು ವಿರುದ್ಧ ಗುಡುಗಿದ ಕಿಚ್ಚ ಸುದೀಪ್

ಗಣೇಶ್ ಟ್ವೀಟ್
'ಸಂದರ್ಶನವೊಂದರಲ್ಲಿ ಕಲಾವಿದರೊಬ್ಬರು ಕನ್ನಡದ ಮೇರು ನಟರಲ್ಲೊಬ್ಬರಾದ ನಮ್ಮ ವಿಷ್ಣುದಾದಾರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಅತ್ಯಂತ ಅಕ್ಷಮ್ಯ ಹಾಗೂ ನಾನದನ್ನು ಖಂಡಿಸುತ್ತೇನೆ. ಕಲೆ ಮತ್ತು ಕಲಾವಿದನಿಗೆ ಗಡಿ ರೇಖೆಗಳಿಲ್ಲ. ಯಾವುದೇ ಸಿನಿಮಾ ರಂಗಕ್ಕೆ ಸಂಬಂಧಿಸಿದ ಕಲಾವಿದರಾದರೂ ಮತ್ತೊಂದು ಸಿನಿಮಾ ರಂಗದ ಕಲಾವಿದರೊಡನೆ ಪರಸ್ಪರ ಅಭಿಮಾನ ಗೌರವಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಚಿತ್ರೋದ್ಯಗಳ ನಡುವೆ ಸೌಹಾರ್ದತೆಯನ್ನು ಕಾಪಾಡಬೇಕಾಗಿರುವುದು ಆತನ ಕರ್ತವ್ಯ.'

ಅಭಿಮಾನಿಗಳ ಮನಸ್ಸಿಗೆ ಘಾಸಿಯುಂಟುಮಾಡಿದೆ
'ವಿಷ್ಣುದಾದಾ ಸೇರಿದಂತೆ ನಮ್ಮ ಅನೇಕ ಹಿರಿಯರು ಈ ನೀತಿಯನ್ನು ಹಿಂದಿನಿಂದಲೂ ಪಾಲಿಸಿಕೊಂಡೇ ಬಂದಿದ್ದಾರೆ. ವಿಷ್ಣುದಾದಾರಂತಹ ಮೇರು ನಟರ ಬಗ್ಗೆ ಕೀಳು ಅಭಿರುಚಿಯಿಂದ ಮಾತನಾಡಿರುವುದು, ದಾದಾರ ನಟನೆ ಹಾಗೂ ವ್ಯಕ್ತಿತ್ವವನ್ನು ಅಭಿಮಾನಿಸಿ ಆರಾಧಿಸುವ ಪ್ರತಿಯೊಬ್ಬ ಅಭಿಮಾನಿಯ ಮನಸ್ಸಿಗೂ ಘಾಸಿಯುಂಟುಮಾಡಿದೆ. '

ದುರಹಂಕಾರವನ್ನು ಪಕ್ಕಕ್ಕಿಟ್ಟು ಕ್ಷಮೆಯಾಚಿಸಬೇಕು
'ದಾದಾರ ಬಗ್ಗೆ ಈ ರೀತಿಯ ಕೀಳು ಮಟ್ಟದ ಹೇಳಿಕೆಯನ್ನು ಕೊಟ್ಟ ಆತ ಯಾವುದೇ ಚಿತ್ರರಂಗಕ್ಕೆ ಸಂಬಂಧಪಟ್ಟವನಾಗಿದ್ದರೂ, ತನ್ನ ದುರಹಂಕಾರವನ್ನು ಪಕ್ಕಕ್ಕಿಟ್ಟು, ತಕ್ಷಣವೇ ಪತ್ರಿಕಾಗೋಷ್ಠಿಯೊಂದನ್ನು ನಡೆಸಿ, ವಿಷ್ಣು ದಾದಾರ ಅಸಂಖ್ಯ ಅಭಿಮಾನಿಗಳಲ್ಲಿ ಈ ಕೂಡಲೇ ಕ್ಷಮೆ ಯಾಚಿಸಬೇಕೆಂದು ನಾನು ಒಬ್ಬ ಅಭಿಮಾನಿಯಾಗಿ ಆಗ್ರಹಿಸುತ್ತೇನೆ. ಜೈ ವಿಷ್ಣುದಾದಾ'
Recommended Video

ತಪ್ಪೊಪ್ಪಿಕೊಂಡು ಕಲೆ, ಕಲಾವಿದರನ್ನು ಗೌರವಿಸುವುದು ಕಲಿಯಿರಿ
ತಮ್ಮ ವ್ಯಕ್ತಿತ್ವದಿಂದಲೇ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿರುವ ವಿಷ್ಣು ಸರ್ ನಡತೆ ಬಗ್ಗೆ ನಟನೊಬ್ಬ ತುಚ್ಛವಾಗಿ ಮಾತಾನಾಡಿದ್ದು ಖಂಡನೀಯ. ಆತ ಕೂಡಲೇ ತಪ್ಪೊಪ್ಪಿಕೊಂಡು ಕಲೆ, ಕಲಾವಿದರನ್ನು ಗೌರವಿಸುವುದು ಕಲಿಯಬೇಕು.


Click it and Unblock the Notifications











