ವಿದೇಶದಲ್ಲಿ 250 ಶೋ ಕಂಡ 'ಗಾಳಿಪಟ 2': ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು?

ಸ್ಯಾಂಡಲ್‌ವುಡ್‌ನಲ್ಲಿ ಬರೀ ಪ್ಯಾನ್ ಇಂಡಿಯಾ ಸಿನಿಮಾಗಳೇ ಸದ್ದು ಮಾಡುತ್ತಿತ್ತು. ಕೇವಲ ಕನ್ನಡ ಭಾಷೆಯಲ್ಲಿ ಬಿಡುಗಡೆಯಾಗುವ ಸಿನಿಮಾಗಳ ಗತಿಯೇನು? ಅನ್ನೋ ಆತಂಕವಿತ್ತು. ಅದನ್ನು ದೂರು ಮಾಡಿದ ಸಿನಿಮಾ 'ಗಾಳಿಪಟ 2'. ಈ ಸಿನಿಮಾ ರಿಲೀಸ್ ಆದಲ್ಲಿಂದ ಕಲೆಕ್ಷನ್ ವಿಚಾರದಲ್ಲಿ ಸಿಕ್ಕಾಪಟ್ಟೆ ಸೌಂಡು ಮಾಡುತ್ತಲೇ ಇದೆ.

ಇತ್ತೀಚೆಗೆ ನಿರ್ದೇಶಕ ಯೋಗರಾಜ್‌ ಭಟ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಕಾಂಬಿನೇಷನ್‌ನಲ್ಲಿ ಬಂದಿರಲಿಲ್ಲ. ಹಾಗಾಗಿಯೇ 'ಗಾಳಿಪಟ 2' ಚಿತ್ರದ ಬಗ್ಗೆ ಸ್ಯಾಂಡಲ್‌ವುಡ್ ಬೆರಗು ಕಣ್ಣುಗಳಿಂದಲೇ ನೋಡಿತ್ತು. ಬಿಡುಗಡೆಯಾದ ದಿನದಿಂದ ಥಿಯೇಟರ್‌ನಲ್ಲಿ ಸಿನಿಮಾ ನೋಡಲು ಪ್ರೇಕ್ಷಕರು ಆಸಕ್ತಿ ತೋರಿದ್ದಾರೆ. ಕೇವಲ ಒಂದು ವಾರದಲ್ಲಿಯೇ ಸಿನಿಮಾಗೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ ಅನ್ನೋ ಮಾತು ಗಾಂಧಿನಗರದಲ್ಲಿ ಹರಿದಾಡುತ್ತಿದೆ.

ಇನ್ನೊಂದು ಕಡೆ ಪ್ಯಾನ್ ಇಂಡಿಯಾ ಸಿನಿಮಾ ಅಲ್ಲದೆ ಹೋದರೂ, ಓವರ್‌ ಸೀಸ್‌ನಲ್ಲಿ ಕನ್ನಡ ಸಿನಿಮಾ ಬೇಜಾನ್ ಸದ್ದು ಮಾಡುತ್ತಿದೆ. ಟ್ರೇಡ್ ಅನಲಿಸ್ಟ್‌ಗಳ ಪ್ರಕಾರ, 'ಗಾಳಿಪಟ 2' ವಿದೇಶದಲ್ಲಿ ಒಳ್ಳೆ ಬ್ಯುಸಿನೆಸ್ ಮಾಡಿದೆ. ಅಂದ್ಕೊಂಡಿದ್ದಕ್ಕಿಂತ ಹೆಚ್ಚು ಪ್ರದರ್ಶನ ಕಂಡಿದೆ ಅಂತಿದ್ದಾರೆ ಟ್ರೇಡ್ ಅನಲಿಸ್ಟ್‌ಗಳು.

ವಿದೇಶದಲ್ಲಿ ಹಾರಿದ ಗೋಲ್ಡನ್ 'ಗಾಳಿಪಟ'

ವಿದೇಶದಲ್ಲಿ ಹಾರಿದ ಗೋಲ್ಡನ್ 'ಗಾಳಿಪಟ'

ಯೋಗರಾಜ್ ಭಟ್ ಹಾಗೂ ತಂಡ ಈಗಾಗಲೇ 'ಗಾಳಿಪಟ 2' ಯಶಸ್ಸಿನ ಸಂಭ್ರಮದಲ್ಲಿ ಮುಳುಗೆದ್ದಿದೆ. ಮೊದಲ ವಾರವೇ ಸಿನಿಮಾ ಗೆದ್ದಿರೋ ಖುಷಿಯಲ್ಲಿ ತೇಲಾಡುತ್ತಿದೆ. ಇದೇ ವೇಳೆ ಗಣೇಶ್ ಹಾಗೂ ಯೋಗರಾಜ್‌ ಭಟ್ ತಂಡಕ್ಕೆ ಮತ್ತೊಂದು ಸಂತಸದ ಸಂಗತಿಯಿದೆ. ಅದರಲ್ಲೂ ಗೋಲ್ಡನ್ ಸ್ಟಾರ್ ಗಣೇಶ್ ಹಿಂದಿನ ಯಾವ ಸಿನಿಮಾ ವಿದೇಶದಲ್ಲಿ ಈ ಮಟ್ಟಿಗೆ ಸದ್ದು ಮಾಡಿರಲಿಲ್ಲ ಅನ್ನೋದು ಟ್ರೇಡ್ ಅನಲಿಸ್ಟ್‌ಗಳ ವಾದ. 'ಗಾಳಿಪಟ 2' ವಿದೇಶದಲ್ಲಿ ಮೊದಲ ವಾರವೇ 150 ಸೆಂಟರ್‌ಗಳಲ್ಲಿ ಸುಮಾರು 250 ಶೋಗಳನ್ನು ಕಂಡಿದೆ. ಇದು ಕನ್ನಡ ಸಿನಿಮಾಗಳ ಪಾಲಿಗೆ ದೊಡ್ಡ ಸಾಧನೆ ಎನ್ನುತ್ತಿದ್ದಾರೆ. ಹೀಗಾಗಿ ಎರಡನೇ ವಾರ ಶೋಗಳ ಸಂಖ್ಯೆ ಹೆಚ್ಚು ಮಾಡಲಾಗಿದೆ.

ರಾಜ್ಯದಲ್ಲಿ ಶೋಗಳ ಸಂಖ್ಯೆ

ರಾಜ್ಯದಲ್ಲಿ ಶೋಗಳ ಸಂಖ್ಯೆ

'ಗಾಳಿಪಟ 2' ನಿರೀಕ್ಷೆ ಮೀರಿ ಯಶಸ್ಸು ಕಾಣುತ್ತಿದೆ. ಪ್ರೇಕ್ಷಕರು 'ಗಾಳಿಪಟ 2' ಸಿನಿಮಾ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಹೀಗಾಗಿ ಕರ್ನಾಟಕದಲ್ಲಿಯೂ ಮೊದಲ ವಾರ ಶೋಗಳ ಸಂಖ್ಯೆಯನ್ನು ಹೆಚ್ಚಿಸಿದ್ದರು. ಮೂಲಗಳ ಪ್ರಕಾರ, 'ಗಾಳಿಪಟ 2' ಸಿಂಗಲ್ ಸ್ಕ್ರೀನ್‌ಗಳಲ್ಲಿ ಸುಮಾರು 700 ಶೋಗಳನ್ನು ಕಂಡಿದ್ದು, ಅದೇ ಮಲ್ಟಿಪ್ಲೆಕ್ಸ್‌ನಲ್ಲಿ 400 ರಿಂದ 500 ಶೋ ಕಂಡಿದೆ ಎನ್ನುತ್ತಿವೆ. ಹೀಗಾಗಿ 'ಗಾಳಿಪಟ 2' ಒಂದೇ ಭಾಷೆಯಲ್ಲಿ ತೆರೆಕಂಡ ಹೊರತಾಗಿಯೂ ಇದು ದೊಡ್ಡ ಸಾಧನೆ ಎಂದೇ ಹೇಳಲಾಗುತ್ತಿದೆ. 'ಗಾಳಿಪಟ 2' ಎಲ್ಲೆಲ್ಲಿ ಎಷ್ಟು ಶೋ ಕಂಡಿದೆ ಅನ್ನೋ ಡಿಟೈಲ್ಸ್ ಇಲ್ಲಿದೆ.

ಕರ್ನಾಟಕ 700 ಶೋ ( ಮೊದಲ ವಾರ)
ಬಾಂಬೆ-ಹೈದರಾಬಾದ್ 50 ಶೋ ( ಮೊದಲ ವಾರ)
ಓವರ್‌ಸೀಸ್ 250ಶೋ ( ಮೊದಲ ವಾರ)

ಮೊದಲ ವಾರದ ಕಲೆಕ್ಷನ್ ಎಷ್ಟು?

ಮೊದಲ ವಾರದ ಕಲೆಕ್ಷನ್ ಎಷ್ಟು?

'ಗಾಳಿಪಟ' ಬಳಿಕ ಯೋಗರಾಜ್ ಭಟ್ ಹಾಗೂ ಗಣೇಶ್ ಕಾಂಬಿನೇಷನ್ ಸಿನಿಮಾ ಮತ್ತೆ ಹಲ್‌ಚಲ್ ಎಬ್ಬಿಸಿದೆ. ಈ ಹಿಂದೆ ಇವರಿಬ್ಬರದ್ದೇ ಸಿನಿಮಾ 'ಮುಗುಳು ನಗೆ' ಆ ಮಟ್ಟಿಗೆ ಸದ್ದು ಮಾಡಿಲ್ಲ. 14 ವರ್ಷಗಳ ಬಳಿಕ ಮತ್ತೆ ಜೋಡಿ ಸದ್ದು ಮಾಡುತ್ತಿದೆ. ಮೊದಲ ವಾರ ಕೇವಲ ಕರ್ನಾಟಕದಲ್ಲಿ 'ಗಾಳಿಪಟ 2' ಸಿನಿಮಾ ಸುಮಾರು 10 ಕೋಟಿ ರೂ. ಷೇರು ಗಳಿಸಿದೆ ಎನ್ನಲಾಗಿದೆ. ಹಾಗೇ ಹೊರ ರಾಜ್ಯ, ಬಾಂಬೆ ಹಾಗೂ ಹೈದರಾಬಾದ್ ಕರ್ನಾಟಕದ ಭಾಗಗಳಲ್ಲೂ ಸಿನಿಮಾ ಗೆದ್ದಿದೆ. ಎಲ್ಲಾ ಭಾಗದ ಕಲೆಕ್ಷನ್ ಸೇರಿದರೆ, ಬಾಕ್ಸಾಫೀಸ್‌ನಿಂದ ಈ ಸಿನಿಮಾಗೆ ಸುಮಾರು 15 ಕೋಟಿ ರೂ. ಷೇರು ಬಂದಿದೆ ಎನ್ನಲಾಗಿದೆ.

Recommended Video

Head Bush | Rowdigalu | ರೌಡೀಸ್ ಆಂಥಮ್‌ಗೆ ಹೆಜ್ಜೆ ಹಾಕಿದ ಡಾಲಿ | Dhananjay | Agni Sreedhar *Sandalwood
'ಗಾಳಿಪಟ 2' ರೆಸ್ಪಾನ್ಸ್‌ಗೆ ಫುಲ್ ಖುಷ್

'ಗಾಳಿಪಟ 2' ರೆಸ್ಪಾನ್ಸ್‌ಗೆ ಫುಲ್ ಖುಷ್

'ಗಾಳಿಪಟ 2' ತಂಡಕ್ಕೆ ನಿರೀಕ್ಷೆಗೂ ಮೀರಿದ ರೆಸ್ಪಾನ್ಸ್ ಸಿಕ್ಕಿದೆ. ಇದಕ್ಕೆ ಇಡೀ ತಂಡ ಖುಷಿಯಾಗಿದೆ. ಎರಡನೇ ವಾರ ಕೇವಲ 70 ರಿಂದ 80ರಷ್ಟು ಮಂದಿ ಥಿಯೇಟರ್‌ಗೆ ಬರಬಹುದು ಎಂಬ ನಿರೀಕ್ಷೆಯಿತ್ತು. ಆದರೆ, ಅದು 90ರಷ್ಟಿದೆ ಎನ್ನುತ್ತಿದೆ ತಂಡ. ಇನ್ನೊಂದು ವಿದೇಶದಲ್ಲಿ ಎಲ್ಲೆಲ್ಲಿ ರಿಲೀಸ್ ಆಗಿದೆಯೋ ಅಲ್ಲೆಲ್ಲಾ ಸಿನಿಮಾದ ಕಲೆಕ್ಷನ್ ಚೆನ್ನಾಗಿದೆ. ಈ ಕಾರಣಕ್ಕೆ ಇಡೀ ತಂಡ ಫುಲ್ ಖುಷಿಯಾಗಿದೆ.

More from Filmibeat

English summary
Ganesh Diganth Starrer Gaalipata 2 Oversease Shows And Box Office Report. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X