ಬಾಕ್ಸಾಫೀಸ್‌ನಲ್ಲಿ 'ಗಾಳಿಪಟ 2' ಭರ್ಜರಿ ಸಕ್ಸಸ್: ಗೆಲುವಿಗೆ 5 ಪ್ರಮುಖ ಕಾರಣಗಳು?

ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಯೋಗರಾಜ್‌ ಭಟ್ ಕಾಂಬಿನೇಷನ್ ಮೇಲೆ ಮೊದಲಿನಿಂದಲೂ ಒಂದು ಕ್ರೇಜ್ ಇದೆ. ಇವರಿಬ್ಬರೂ ಸೇರಿದ್ದಾರೆ ಅಂದರೆ, ಆಗ ನೆನಪಿಗೆ ಬರೋದು ಎರಡು ಸಿನಿಮಾ. ಅದುವೇ 'ಮುಂಗಾರು ಮಳೆ', 'ಗಾಳಿಪಟ'. ಈ ಎರಡು ಸಿನಿಮಾ ಕನ್ನಡ ಚಿತ್ರರಂಗಕ್ಕೆ ಹೊಸ ದಿಕ್ಕು ತೋರಿಸಿದ ಸಿನಿಮಾಗಳು.

ಈ ಎರಡು ಸಿನಿಮಾಗಳ ಬಳಿಕ ಮತ್ತೆ ಈ ಜೋಡಿ 'ಮುಗುಳು ನಗೆ'ಗಾಗಿ ಒಂದಾಗಿದ್ದರೂ, ಅದು ಬಾಕ್ಸಾಫೀಸ್‌ನಲ್ಲಿ ಅಂದ್ಕೊಂಡಷ್ಟು ಮೋಡಿ ಮಾಡಿರಲಿಲ್ಲ. ಇಬ್ಬರೂ ಜೊತೆ ಸೇರಿ ಹ್ಯಾಟ್ರಿಕ್ ಸಕ್ಸಸ್ ಕೊಡಬೇಕು ಅನ್ನುವ ಆಸೆ ಇಡೇರಲಿಲ್ಲ. ಈ ಮಧ್ಯೆ ನಾಲ್ಕನೇ ಬಾರಿ ಜೊತೆಯಾಗಿ ಮತ್ತೆ ಗಾಳಿಪಟ ಹಾರಿಸುವುದಕ್ಕೆ ಮುಂದಾದಾಗ ಗೆಲುವಿನ ಬಗ್ಗೆ ಅನುಮಾನ ಮೂಡಿತ್ತು. ಅದಕ್ಕೆ ಕಾರಣ ಮತ್ಯಾವುದೂ ಅಲ್ಲ ಇದೇ 'ಮುಗುಳು ನಗೆ'.

Recommended Video

ಸಿನಿಮಾ ಗೆದಿದ್ದೆ ಆದ್ರೆ ನನಗೆ ಮೋಸ ಆಗಿದೆ | Gaalipata 2 | Pawan Kumar |Gaalipata 2 Collection

ಬಹಳ ದಿನಗಳ ಬಳಿಕ ಯೋಗರಾಜ್‌ ಭಟ್ಟರಿಗೂ, ಗೋಲ್ಡನ್ ಸ್ಟಾರ್ ಗಣೇಶ್‌ಗೂ ಮತ್ತೆ ಸ್ಯಾಂಡಲ್‌ವುಡ್‌ನಲ್ಲಿ 'ಗಾಳಿಪಟ' ಹಾರಿಸುವುದಕ್ಕೆ ಅವಕಾಶ ಸಿಕ್ಕಿದೆ. ಕಣ್ಣಿಗೆ ಕಾಣದಷ್ಟು ಎತ್ತರಕ್ಕೆ ಹಾರದೇ ಇದ್ದರೂ, ಕಂಡರೂ ಕಾಣದಷ್ಟು ಎತ್ತರಕ್ಕೆ ಹಾರುತ್ತಿದೆ. ಇನ್ನು ಸಿನಿಮಾದಲ್ಲಿ 'ಗಾಳಿಪಟ' ಆಗಾಗ ದಿಕ್ಕು ಬದಲಿಸಿದರೂ, ಪ್ರೇಕ್ಷಕರಿಗೆ ಮಜ ಕೊಡುವುದರಲ್ಲಿ ಹಿಂದೆ ಬಿದ್ದಿಲ್ಲ. ಇಂತಹ ಸಂದರ್ಭದಲ್ಲಿ 14 ವರ್ಷದ ಹಿಂದಿನ ಸಕ್ಸಸ್‌ಫುಲ್ ಸಿನಿಮಾದ ಸೀಕ್ವೆಲ್ ಈಗ ಗೆದ್ದಿರುವುದಕ್ಕೆ 5 ಪ್ರಮುಖ ಕಾರಣಗಳು ಹೀಗಿವೆ.

'ಗಾಳಿಪಟ' ಅನ್ನೋ ಬ್ರ್ಯಾಂಡ್

'ಗಾಳಿಪಟ' ಅನ್ನೋ ಬ್ರ್ಯಾಂಡ್

'ಗಾಳಿಪಟ 2' ಗೆಲುವಿಗೆ ಪ್ರಮುಖ ಕಾರಣ 'ಗಾಳಿಪಟ'. 14 ವರ್ಷಗಳ ಹಿಂದೆ ರಿಲೀಸ್ ಆಗಿದ್ದ ಗಣೇಶ್, ದಿಗಂತ್ ಹಾಗೂ ಯೋಗರಾಜ್‌ ಭಟ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡಿತ್ತು. ಇದೇ ಸಿನಿಮಾ ಗುಂಗಿನಲ್ಲಿ ಜನರು ಥಿಯೇಟರ್‌ಗೆ ಬರುತ್ತಿದ್ದಾರೆ. ಫ್ರೆಂಡ್‌ಶಿಪ್, ತಮಾಷೆ, ಜೊತೆಗೊಂದಿಷ್ಟು ಎಮೋಷನ್, ಚಿಕ್ಕ ಚಿಕ್ಕ ಲವ್ ಸ್ಟೋರಿ, ಇವುಗಳ ನಿರೀಕ್ಷೆ ಇಟ್ಟುಕೊಂಡು ಥಿಯೇಟರ್‌ಗೆ ಬರುತ್ತಿದ್ದಾರೆ. ಸಿನಿಮಾ ಗೆಲ್ಲುವುದಕ್ಕೆ 'ಗಾಳಿಪಟ' ಅನ್ನೋ ಬ್ರ್ಯಾಂಡ್‌ ಪ್ರಮುಖ ಕಾರಣ.

ಭಟ್ಟರ ಟಿಪಿಕಲ್ ಡೈಲಾಗ್ ಸಿನಿಮಾ

ಭಟ್ಟರ ಟಿಪಿಕಲ್ ಡೈಲಾಗ್ ಸಿನಿಮಾ

2022ರಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ವೆರೈಟಿ ಸಿನಿಮಾಗಳು ರಿಲೀಸ್ ಆಗಿ ಗೆದ್ದಿವೆ. ಲವ್‌ಸ್ಟೋರಿ, ಮಾಸ್, ಥ್ರಿಲ್ಲರ್, ಎಮೋಷನ್ ಸಿನಿಮಾಗಳನ್ನು ಪ್ರೇಕ್ಷಕರು ನೋಡಿದ್ದರು. 'ಲವ್‌ ಮಾಕ್ಟೇಲ್' ಲವ್‌ಸ್ಟೋರಿ, 'ಕೆಜಿಎಫ್ 2' ಹಾಗೂ 'ಜೇಮ್ಸ್' ಮಾಸ್ ಸಿನಿಮಾ, '777 ಚಾರ್ಲಿ' ಎಮೋಷನಲ್ ಸಿನಿಮಾ, 'ವಿಕ್ರಾಂತ್ ರೋಣ' ಥ್ರಿಲ್ಲರ್ ಇಂತಹ ವಿಭಿನ್ನ ಸಿನಿಮಾಗಳ ಮಧ್ಯೆ ಲಾಜಿಕ್ ಇಲ್ಲದೆ ಡೈಲಾಗ್‌ನಲ್ಲೇ ಮ್ಯಾಜಿಕ್ ಮಾಡೋ ಸಿನಿಮಾ ಪ್ರೇಕ್ಷಕರಿಗೆ ಕಿಕ್ ಕೊಡುತ್ತಿದೆ.

ಮಳೆ ಮತ್ತು ಸುಂದರ ತಾಣ

ಮಳೆ ಮತ್ತು ಸುಂದರ ತಾಣ

ಬ್ಯೂಟಿಫುಲ್ ಲೋಕೇಶ್ ಹಾಗೂ ಮಳೆ ಎರಡೂ ಯೋಗರಾಜ್‌ ಭಟ್ಟರ ಟ್ರೇಡ್ ಮಾರ್ಕ್. ಬಹಳ ದಿನಗಳಿಂದ ಕನ್ನಡ ಸಿನಿಮಾಗಳಲ್ಲಿ ಇವೆರಡೂ ಮಿಸ್ ಆಗಿತ್ತು. ಮತ್ತೆ 'ಮುಂಗಾರು ಮಳೆ', 'ಗಾಳಿಪಟ'ದಂತಹ ಸಿನಿಮಾ ನೋಡಲು ಬಯಸಿದ್ದ ಸಿನಿಪ್ರಿಯರ ಕಣ್ಣುಗಳಿಗೆ ಇವು ತಂಪು ನೀಡಿವೆ.

ದಿಗಂತ್ ಕಮ್ ಬ್ಯಾಕ್ ಸಿನಿಮಾ

ದಿಗಂತ್ ಕಮ್ ಬ್ಯಾಕ್ ಸಿನಿಮಾ

ಇತ್ತೀಚೆಗೆ ದೂದ್ ಪೇಡಾ ದಿಗಂತ್ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ, ಆ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡುತ್ತಿರಲಿಲ್ಲ. 'ಗಾಳಿಪಟ 2' ದಿಗಂತ್‌ಗೆ ಕಮ್‌ ಬ್ಯಾಕ್ ಸಿನಿಮಾ ಅಂತ ಸಾಬೀತಾಗಿದೆ. ದಿಗಂತ್ ದೃಶ್ಯಗಳು ಬಂದಾಗಲೆಲ್ಲಾ ಪ್ರೇಕ್ಷಕರು ಮನಬಿಚ್ಚಿ ನಗುತ್ತಾರೆ. ಶಿಳ್ಳೆ ಹೊಡುತ್ತಿದ್ದಾರೆ. ದಿಗಂತ್ ಸಿನಿಮಾಗಳಿಗೆ ಇಂತಹದ್ದೊಂದು ರಿಸೆಪ್ಷನ್ ಸಿಗದೆ ಬಹಳ ದಿನಗಳಾಗಿತ್ತು. ಹೀಗಾಗಿ 'ಗಾಳಿಪಟ 2'ಗೆ ದಿಗಂತ್ ಕೂಡ ಕಾರಣ.

ಅನಂತ್‌ನಾಗ್‌-ರಂಗಾಯಣ ರಘು

ಅನಂತ್‌ನಾಗ್‌-ರಂಗಾಯಣ ರಘು

'ಗಾಳಿಪಟ 2' ಬೆಂಬಲಕ್ಕೆ ನಿಂತ ಎರಡು ಪಾತ್ರಗಳು ಆನಂತ್ ನಾಗ್ ಹಾಗೂ ರಂಗಾಯಣ ರಘು. ಪೋಷಕ ಪಾತ್ರಗಳಿಗೆ ಈ ಎರಡು ಪಾತ್ರ ನಿಜವಾದ ಅರ್ಥ ಕೊಟ್ಟಿವೆ. ಆನಂತ್‌ನಾಗ್ ಹಾಗೂ ರಂಗಾಯಣ ರಘು ಇಬ್ಬರ ಪಾತ್ರಗಳು ಸಹಜ ಎನಿಸುತ್ತವೆ. ಮೂವರು ಸ್ನೇಹಿತರ ಬೆಂಬಲಕ್ಕೆ ನಿಜವಾಗಿ ನಿಂತಿದ್ದೂ ಇವರೇ.. ಈ 5 ಕಾರಣಗಳು ಪ್ರೇಕ್ಷಕರಿಗೆ ಕತೆಯನ್ನೂ ಮರೆತು ಸಿನಿಮಾ ನೋಡುವಂತೆ ಮಾಡಿವೆ.

More from Filmibeat

English summary
Ganesh Diganth Starrer Gaalipata 2 Success At the Box Office Here Is 5 Reason, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X