Krishnam Pranaya Sakhi Box Office Day 11: ವೀಕೆಂಡ್‌ ಅಗ್ನಿಪರೀಕ್ಷೆಯಲ್ಲಿ ಗೆದ್ದೇ ಬಿಟ್ರು ಗಣೇಶ್

ಗೋಲ್ಡನ್ ಸ್ಟಾರ್ ಗಣೇಶ್‌ಗೆ ವೀಕೆಂಡ್ ಲಾಭದಾಯಕ ಅಂತ ಪ್ರೂವ್ ಆಗಿದೆ. ನಿರೀಕ್ಷೆಯಂತೆ 'ಕೃಷ್ಣಂ ಪ್ರಣಯ ಸಖಿ' ಎರಡು ದಿನ ಬಂಪರ್ ಕಲೆಕ್ಷನ್ ಮಾಡಿದೆ. ಕನ್ನಡದಲ್ಲಿಯೇ ಹೊಸ ಸಿನಿಮಾ ರಿಲೀಸ್ ಆಗಿದ್ದರೂ, ಗೋಲ್ಡನ್ ಸ್ಟಾರ್ ಸಿನಿಮಾಗೆ ಬಾಕ್ಸಾಫೀಸ್‌ನಲ್ಲಿ ಅದ್ಭುತ ಗಳಿಕೆ ಮಾಡಿದೆ. ವೀಕೆಂಡ್‌ನ ಎರಡು ದಿನಗಳ ಕಳಿಕೆ ಸಖತ್ ಆಗಿದೆ.

'ಕೃಷ್ಣಂ ಪ್ರಣಯ ಸಖಿ' ಮೊದಲ ನಾಲ್ಕು ದಿನಗಳು ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡುತ್ತಿವೆ. 10ನೇ ದಿನ ಹಾಗೂ ಹಾಗೂ 11ನೇ ದಿನದ ಮೇಲೆ ಚಿತ್ರತಂಡ ನಿರೀಕ್ಷೆಯನ್ನು ಇಟ್ಟುಕೊಂಡಿತ್ತು. ಈ ಎರಡು ದಿನಗಳಲ್ಲಿನ ಸಿನಿಮಾ ಕಲೆಕ್ಷನ್ 15 ಕೋಟಿ ರೂಪಾಯಿ ದಾಟಬಹುದೆಂದು ಟ್ರೇಡ್ ಎಕ್ಸ್‌ಪರ್ಟ್ ಲೆಕ್ಕ ಹಾಕಿದ್ದರು.

Ganesh Movie Krishnam Pranaya Sakhi Box office Collection Day 11 Report

ಗಣೇಶ್ 'ಕೃಷ್ಣಂ ಪ್ರಯಣ ಸಖಿ' ಯಶಸ್ಸಿನ ಅಲೆಯಲ್ಲಿ ಇದ್ದಾರೆ. ಈ ಕಾರಣಕ್ಕೆ ಕರ್ನಾಟಕದ ಕೆಲವು ಚಿತ್ರಮಂದಿರಗಳಿಗೆ ಗೋಲ್ಡನ್ ಸ್ಟಾರ್ ವಿಸಿಟ್ ಕೂಡ ಹಾಕಿದ್ದರು. ಇದೇ ಎರಡು ದಿನಗಳು ಆಗಸ್ಟ್ 24 ಹಾಗೂ ಆಗಸ್ಟ್ 25ರಂದು ಬಾಕ್ಸಾಫೀಸ್‌ನಲ್ಲಿ ಮತ್ತೆ ಬಂಪರ್ ಬೆಳೆದಿದೆ. ಹಾಗಿದ್ದರೆ, ಈ ಸಿನಿಮಾ 11ನೇ ದಿನ ಗಳಿಸಿದ್ದು ಎಷ್ಟು?

'ಕೃಷ್ಣ ಪ್ರಣಯ ಸಖಿ' 11ನೇ ದಿನದ ಕಲೆಕ್ಷನ್?

ಗಣೇಶ್ ವೃತ್ತಿ ಬದುಕಿಗೆ ಮತ್ತೆ ಗೋಲ್ಡನ್‌ ಡೇಸ್‌ ಬಂದಿವೆ. ಗಣೇಶ್ ಜೊತೆಗೆ ಮಲಯಾಳಂ ಬ್ಯೂಟಿ ಮಾಳವಿಕಾ ನಾಯರ್ ಹಾಗೂ ಕನ್ನಡತಿ ಶರಣ್ಯ ಶೆಟ್ಟಿ ಕೂಡ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಕಾಣಸಿಕೊಂಡಿದ್ದಾರೆ. ಸಿನಿಮಾ ಬಿಡುಗಡೆಯಾಗಿ ಎರಡನೇ ದಿನಕ್ಕೆ ಕಾಲಿಟ್ಟಿದ್ದ ಈ ಸಿನಿಮಾ ನಿನ್ನೆ (ಆಗಸ್ಟ್ 11) ಪ್ರೇಕ್ಷಕರನ್ನು ಥಿಯೇಟರ್‌ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. 11ನೇ ದಿನ ಸಿನಿಮಾದ ಕಲೆಕ್ಷನ್ 1.95 ಕೋಟಿ ಆಗಿದೆ ಎಂದು sacnilk ವರದಿ ಮಾಡಿದೆ. ಅದೇ ವಿತರಕರ ವಲಯ ಈ ಸಿನಿಮಾ 2 ಕೋಟಿ ರೂಪಾಯಿ ದಾಟಿದೆ ಎಂದು ಹೇಳಿತ್ತಿದೆ.

10ನೇ ದಿನವೂ ಬಂಪರ್

'ಕೃಷ್ಣ ಪ್ರಣಯ ಸಖಿ' 5ನೇ ದಿನದಿಂದ 9ನೇ ದಿನದ ವರೆಗೂ ಕಲೆಕ್ಷನ್‌ನಲ್ಲಿ ಡ್ರಾಪ್‌ ಕಂಡಿತ್ತು. ಆದರೆ, 10ನೇ ದಿನ ಇದೆಲ್ಲವೂ ಉಲ್ಟಾ ಆಗಿತ್ತು. ಕೌಟುಂಬಿಕ ಸಿನಿಮಾ ಆಗಿದ್ದರಿಂದ ಎರಡನೇ ವೀಕೆಂಡ್‌ನ ಮೊದಲ ದಿನ ಕಲೆಕ್ಷನ್‌ನಲ್ಲಿ ದಿಢೀರ್‌ ಏಳಿಗೆ ಕಂಡಿತ್ತು. ಇದೇ sacnilk ಪ್ರಕಾರ, ಗಣೇಶ್ ಸಿನಿಮಾ ಗಳಿಸಿದ್ದು, 1.15 ಕೋಟಿ ರುಪಾಯಿ ಗಳಿಕೆ ಆಗಿದೆ. ಒಟ್ಟು ಎರಡು ದಿನಗಳಲ್ಲಿಯೇ ಈ ಸಿನಿಮಾ 3.10 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ.

Ganesh Movie Krishnam Pranaya Sakhi Box office Collection Day 11 Report

11 ದಿನಗಳ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು?

ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾ 'ಕೃಷ್ಣ ಪ್ರಣಯ ಸಖಿ' 11 ದಿನಗಳ ಕಲೆಕ್ಷನ್ ಕೂಡ ಹೊರಬಿದ್ದಿದೆ. ಎರಡು ವೀಕೆಂಡ್ ಕಲೆಕ್ಷನ್ ಸೇರಿ 15 ಕೋಟಿ ರೂಪಾಯಿ ಹತ್ತಿರದಲ್ಲಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಈ 11 ದಿನಗಳಲ್ಲಿ 'ಕೃಷ್ಣ ಪ್ರಣಯ ಸಖಿ' ಸಿನಿಮಾ 13.97 ಕೋಟಿ ರೂಪಾಯಿಯಿಂದ 14.15 ಕೋಟಿ ರೂಪಾಯಿವರೆಗೂ ಕಲೆಕ್ಷನ್ ಆಗಿರಬಹುದೆಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಚಿತ್ರತಂಡ ಇನ್ನೂ ಅಧಿಕೃತ ಮಾಹಿತಿಯನ್ನು ನೀಡಬೇಕಿದೆ.

ಈ ವಾರದ ಭವಿಷ್ಯವೇನು?

'ಕೃಷ್ಣ ಪ್ರಣಯ ಸಖಿ' ಎರಡು ವಾರಗಳ ಅಗ್ನಿಪರೀಕ್ಷೆಯಲ್ಲಿ ಗೆದ್ದಿದೆ. ಅಸಲಿ ಜಾಲೆಂಜ್‌ ಇರುವುದು ಮೂರನೇ ವಾರ. ಈ ವಾರ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗಟ್ಟಿಯಾಗಿ ನೆಲೆಯೂರಬೇಕು. ಒಂದು ವೇಳೆ ಈ ವಾರದಲ್ಲಿ 25 ಕೋಟಿ ರೂಪಾಯಿ ಕಲೆಕ್ಷನ್ ಮಾಡುವಲ್ಲಿ ಯಶಸ್ವಿಯಾದರೆ, ಗಣೇಶ್ ವೃತ್ತಿ ಬದುಕಿನಲ್ಲಿ 'ಕೃಷ್ಣ ಪ್ರಣಯ ಸಖಿ' ಗೋಲ್ಡನ್ ಡೇಸ್ ತಂದಂತೆಯೇ.

More from Filmibeat

English summary
Ganesh Movie Krishnam Pranaya Sakhi Box office Collection Day 9 Report:
Read more about: ganesh box office filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X