Krishnam Pranaya Sakhi Box Office Day 12:12ನೇ ದಿನ ಗಣೇಶ್‌ಗೆ ಸಿನಿಮಾದ ಕಥೆಯೇನು?

ಗೋಲ್ಡನ್‌ಸ್ಟಾರ್ ಗಣೇಶ್ ಸಿನಿಮಾ 'ಕೃಷ್ಣಂ ಪ್ರಣಯ ಸಖಿ' ರಿಲೀಸ್ ಆಗಿ ಎರಡು ವಾರ ಮುಗಿದಿದೆ. ಮೂರನೇ ವಾರಕ್ಕೆ ಕಾಲಿಟ್ಟಿದೆ. ಇನ್ನೊಂದು 10 ದಿನಗಳನ್ನು ಬಾಕ್ಸಾಫೀಸ್‌ನಲ್ಲಿ ಗಟ್ಟಿಯಾಗಿ ನೆಲೆಯೂರಿದರೆ, ಮತ್ತೆ ರಜೆಗಳು ಸಿಗುತ್ತವೆ. ಜನರು ಹಬ್ಬದ ಮೂಡಿನಲ್ಲಿ ಸಿನಿಮಾ ನೋಡುವುದಕ್ಕೆ ಚಿತ್ರಮಂದಿರಕ್ಕೆ ಹೋಗಬಹುದು.

ಸದ್ಯ ಮೂರನೇ ವಾರದ ಮೊದಲ ದಿನ 'ಕೃಷ್ಣಂ ಪ್ರಣಯ ಸಖಿ'ಯ ಬಾಕ್ಸಾಫೀಸ್‌ ರೆಸ್ಪಾನ್ಸ್ ಹೇಗಿದೆ? ಅನ್ನೋ ಕುತೂಹಲಕ್ಕೆ ತೆರೆ ಬಿದ್ದಿದೆ. ಗೋಲ್ಡನ್ ಸ್ಟಾರ್‌ ಗಣೇಶ್‌ ವೃತ್ತಿ ಬದುಕಿಗೆ ಮತ್ತೆ ಬೂಸ್ಟ್ ಕೊಟ್ಟ ಈ ಸಿನಿಮಾಗೆ ಮೂರನೇ ವಾರದ ಮೊದಲ ದಿನ ಎಷ್ಟು ಕಲೆಕ್ಷನ್ ಮಾಡುತ್ತೆ? ಅನ್ನೋ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.

Ganesh Movie Krishnam Pranaya Sakhi Box office Collection Day 12 Report

ಗೋಲ್ಡನ್ ಗಣೇಶ್ ಸಿನಿಮಾವನ್ನು 'ದಂಡುಪಾಳ್ಯ' ಸಿನಿಮಾ ಖ್ಯಾತಿಯ ಶ್ರೀನಿವಾಸ್ ರಾಜು ಆಕ್ಷನ್ ಕಟ್ ಹೇಳಿದ್ದರು. ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ ಮಲಯಾಳಂ ನಟಿ ಮಾಳವಿಕಾ ನಾಯರ್, ಶರಣ್ಯ ಶೆಟ್ಟಿ, ರಂಗಾಯಣ ರಘು, ಸಾಧು ಕೋಕಿಲ ಸೇರಿದಂತೆ ಗಣ್ಯರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸದ್ಯ 'ಕೃಷ್ಣಂ ಪ್ರಣಯ ಸಖಿ' ಸಿನಿಮಾದ 12ನೇ ದಿನದ ಕಲೆಕ್ಷನ್ ಎಷ್ಟು? ತಿಳಿಯಲು ಮುಂದೆ ಓದಿ..

'ಕೃಷ್ಣಂ ಪ್ರಣಯ ಸಖಿ' 12ನೇ ದಿನ ಗಳಿಸಿದ್ದೆಷ್ಟು?

ಗಣೇಶ್ ಸಿನಿಮಾ 'ಕೃಷ್ಣಂ ಪ್ರಣಯ ಸಖಿ' ಹಾಡುಗಳಿಂದಲೇ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಬಹಳ ದಿನಗಳ ಬಳಿಕ ಹಾಡುಗಳಿಂದಲೇ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತಂದ ಸಿನಿಮಾವಿದು. ಈ ಕಾರಣಕ್ಕೆ ಮೂರನೇ ವಾರದ ಮೊದಲ ದಿನ ಅಂದರೆ, ಆಗಸ್ಟ್ 26ರಂದು ಸಿನಿಮಾ ದ ಕಲೆಕ್ಷನ್ ಮತ್ತೆ ಡ್ರಾಪ್ ಆಗಿದೆ. 12ನೇ ದಿನ 'ಕೃಷ್ಣಂ ಪ್ರಣಯ ಸಖಿ' ಸಿನಿಮಾದ ಬಾಕ್ಸಾಫೀಸ್‌ ಕಲೆಕ್ಷನ್ 41 ಲಕ್ಷ ರೂಪಾಯಿ ಎಂದು sacnilk ವರದಿ ಮಾಡಿದೆ. ಆದರೆ, ವಿತರಕರ ವಲಯ ಈ ಸಿನಿಮಾ ಕಲೆಕ್ಷನ್ 50 ಲಕ್ಷ ರೂಪಾಯಿ ದಾಟಿದೆ ಎಂದು ಹೇಳಿತ್ತಿದೆ.

Ganesh Movie Krishnam Pranaya Sakhi Box office Collection Day 12 Report

10-11ನೇ ದಿನದ ಬಂಪರ್ ಕಲೆಕ್ಷನ್

ಎರಡನೇ ವೀಕೆಂಡ್‌ನಲ್ಲಿ 'ಕೃಷ್ಣಂ ಪ್ರಣಯ ಸಖಿ' ಸಿನಿಮಾದ ಕಲೆಕ್ಷನ್ ಅದ್ಭುತವಾಗಿತ್ತು. 10ನೇ ದಿನ ಅಂದರೆ, ಶನಿವಾರ 1.15 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದರೆ, 11ನೇ ದಿನ ಈ ಸಿನಿಮಾ ಗಳಿಸಿದ್ದು, 1.95 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ. ಒಟ್ಟು ಎರಡು ದಿನಕ್ಕೆ 3.10 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಆದರೆ, 12ನೇ ದಿನ ಡ್ರಾಪ್ ಆಗಿದೆ.

12 ದಿನಗಳ ಕಲೆಕ್ಷನ್ ಎಷ್ಟು?

ಗಣೇಶ್ ಸಿನಿಮಾ 'ಕೃಷ್ಣ ಪ್ರಣಯ ಸಖಿ' 12 ದಿನಗಳಲ್ಲಿ ಡಿಸೆಂಟ್ ಅಮೌಂಟ್‌ ಅನ್ನು ಕಲೆ ಹಾಕಿದೆ. ಎರಡನೇ ವೀಕೆಂಡ್‌ನಲ್ಲಿ ಈ ಸಿನಿಮಾ ಕಲೆಕ್ಷನ್ ಅದ್ಭುತವಾಗಿತ್ತು. ಆದರೆ, 12ನೇ ದಿನ ನಿರೀಕ್ಷೆ ಮಾಡಿದಂತೆ ಮತ್ತೆ ಬಾಕ್ಸಾಫೀಸ್‌ನಲ್ಲಿ ಡ್ರಾಪ್ ಆಗಿದೆ. ಬಹುಶ: ಇದು ಮುಂದಿನ ವೀಕೆಂಡ್‌ವರೆಗೂ ಹೀಗೆ ಮುಂದುವರೆಯುವ ಸಾಧ್ಯತೆ ಇದೆ. sacnilk ಪ್ರಕಾರ, ಈ ಸಿನಿಮಾ ಇಲ್ಲಿವರೆಗೂ ವಿಶ್ವದಾದ್ಯಂತ 14.43 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಆದರೆ, ಕನ್ನಡ ಸಿನಿಮಾ ವಿತರಕರ ವಲಯದಲ್ಲಿ ಕಲೆಕ್ಷನ್ 16 ಕೋಟಿ ದಾಟಿದೆ ಎನ್ನಲಾಗಿದೆ. ಏನಕ್ಕೂ 'ಕೃಷ್ಣ ಪ್ರಣಯ ಸಖಿ' ತಂಡ ಅಧಿಕೃತ ಬಾಕ್ಸಾಫೀಸ್ ಕಲೆಕ್ಷನ್ ನೀಡಬೇಕಿದೆ.

'ಭೀಮ' ಕಥೆ ಏನಾಯ್ತು?

ಇನ್ನು ದುನಿಯಾ ವಿಜಯ್ ನಿರ್ದೇಶಿಸಿ, ನಟಿಸಿರುವ 'ಭೀಮ' ಸಿನಿಮಾ ರಿಲೀಸ್ ಆಗಿ ನಿನ್ನೆಗೆ 18 ದಿನಗಳಾಗಿವೆ. ನಾಲ್ಕನೇ ವಾರಕ್ಕೆ ಕಾಲಿಟ್ಟಿರುವ ಈ ಸಿನಿಮಾದ ಸ್ಕ್ರೀನ್‌ಗಳ ಸಂಖ್ಯೆ ಕೂಡ ಕಡಿಮೆ ಆಗುತ್ತಿದೆ. ಹೀಗಾಗಿ ಬಾಕ್ಸಾಫೀಸ್‌ನಲ್ಲೂ ದೊಡ್ಡ ಮಟ್ಟದ ಡ್ರಾಪ್ ಕಾಣಿಸುತ್ತಿದೆ. 12ನೇ ದಿನ ಈ ಸಿನಿಮಾ ಕೇವಲ 13 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ.

More from Filmibeat

English summary
Ganesh Movie Krishnam Pranaya Sakhi Box office Collection Day 12 Report:
Read more about: ganesh box office filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X