Krishnam Pranaya Sakhi Box Office Day 5: 5ನೇ ದಿನ ಗಣೇಶ್ ಸಿನಿಮಾ ಕಲೆಕ್ಷನ್ ಏನಾಯ್ತು?
ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾ 'ಕೃಷ್ಣಂ ಪ್ರಣಯ ಸಖಿ' ಕಳೆದ ವಾರ ರಿಲೀಸ್ ಆಗಿತ್ತು. ನಾಲ್ಕು ದಿನ ಬ್ಯಾಕ್ ಟು ಬ್ಯಾಕ್ ರಜೆಯನ್ನು ಈ ಸಿನಿಮಾ ಸದುಪಯೋಗ ಪಡೆಸಿಕೊಂಡಿದೆ.ನಾಲ್ಕು ದಿನವೂ ಈ ಸಿನಿಮಾದ ಕಲೆಕ್ಷನ್ ಚೆನ್ನಾಗಿದೆ. ಆದರೆ, ಮೊದಲ ವೀಕೆಂಡ್ ಮುಗಿಯುತ್ತಿದ್ದಂತೆ ರಿಯಲ್ ಚಾಲೆಂಜ್ ಶುರುವಾಗುತ್ತೆ.
ಪಕ್ಕಾ ಫ್ಯಾಮಿಲಿ ಓರಿಯೆಂಟೆಡ್ ಸಿನಿಮಾ 'ಕೃಷ್ಣಂ ಪ್ರಣಯ ಸಖಿ' ವೀಕೆಂಡ್‌ನಲ್ಲಿ ಬ್ಯುಸಿನೆಸ್ ಚೆನ್ನಾಗಿದೆ. ಇನ್ನೊಂದು ಕಡೆ ವಾರದ ಆರಂಭದ ದಿನಗಳು ಚಿತ್ರತಂಡಕ್ಕೆ ದೊಡ್ಡ ಸವಾಲಾಗಿದೆ. ಅಲ್ಲದೆ ಇದೇ ಸಮಯದಲ್ಲಿ ಪರಭಾಷೆಯ ಸಿನಿಮಾಗಳು ಕೂಡ ರಿಲೀಸ್ ಆಗಿವೆ. ಹೀಗಾಗಿ ಗಣೇಶ್ ಸಿನಿಮಾ ಅವುಗಳೊಂದಿಗೆ ಹೋರಾಟ ಮಾಡಬೇಕಾಗಿದೆ.

'ಕೃಷ್ಣಂ ಪ್ರಣಯ ಸಖಿ' ಜೊತೆ ತಮಿಳಿನಲ್ಲಿ ಚಿಯಾನ್ ವಿಕ್ರಂ ಅಭಿನಯದ 'ತಂಗಲಾನ್' ಸಿನಿಮಾ ರಿಲೀಸ್ ಆಗಿದೆ. ಹಾಗೇ ಬಾಲಿವುಡ್ ಸಿನಿಮಾ 'ಸ್ತ್ರೀ 2'ಗೂ ಕರ್ನಾಟಕದಲ್ಲಿ ಮಸ್ತ್ ರೆಸ್ಪಾನ್ಸ್ ಸಿಕ್ಕಿದೆ. ಕನ್ನಡದ ಮತ್ತೊಂದು ಸಿನಿಮಾ ದುನಿಯಾ ವಿಜಯ್ ಅಭಿನಯದ 'ಭೀಮ' ಸಿನಿಮಾದ ಕಲೆಕ್ಷನ್ ಕೂಡ ಡಿಸೆಂಟ್ ಆಗಿದೆ. ಹಾಗಿದ್ದರೆ, ಗಣೇಶ್ ಸಿನಿಮಾ 'ಕೃಷ್ಣಂ ಪ್ರಣಯ ಸಖಿ' ಸೇರಿದಂತೆ ಯಾವ್ಯಾವ ಸಿನಿಮಾ ಹೇಗಿದೆ? ತಿಳಿಯಲು ಮುಂದೆ ಓದಿ.
'ಕೃಷ್ಣಂ ಪ್ರಣಯ ಸಖಿ' 5ನೇ ದಿನದ ಕಲೆಕ್ಷನ್
ಗೋಲ್ಡನ್ ಸ್ಟಾರ್‌ಗೆ ಮತ್ತೆ ಸಕ್ಸಸ್ ರುಚಿ ನೋಡುವ ಅವಕಾಶ ಸಿಕ್ಕಿದೆ. ಮೊದಲ ನಾಲ್ಕು ದಿನದ ಕಲೆಕ್ಷನ್ ಜೋರಾಗಿಯೇ ಇತ್ತು. ಆದರೆ, ನಿರೀಕ್ಷೆಯಂತೆ ಐದನೇ ದಿನ ಗಳಿಕೆಯಲ್ಲಿ ಇಳಿಕೆ ಕಂಡಿದೆ. ನಿನ್ನೆ ಸೋಮವಾರ (ಆಗಸ್ಟ್ 19) ಈ ಸಿನಿಮಾದ ಕಲೆಕ್ಷನ್ ಒಂದು ಕೋಟಿಗೂ ಕಮ್ಮಿಯಾಗಿದೆ. ವಿತರಕರ ವಲಯದಲ್ಲಿ ಈ ಸಿನಿಮಾ 5ನೇ ದಿನ 90 ಲಕ್ಷ ರೂಪಾಯಿ ಕಲೆಕ್ಷನ್ ಆಗಿದೆ ಎಂದು ಚರ್ಚೆಯಾಗುತ್ತಿದೆ.

5 ದಿನದ ಒಟ್ಟು ಕಲೆಕ್ಷನ್
'ಕೃಷ್ಣಂ ಪ್ರಣಯ ಸಖಿ' ಸಿನಿಮಾ ಐದು ದಿನಗಳಲ್ಲಿ 10 ಕೋಟಿ ರೂಪಾಯಿ ಆಸುಪಾಸಿನಲ್ಲಿ ಕಲೆಕ್ಷನ್ ಮಾಡಿದೆ. ಮೊದಲ 1.50 ಕೋಟಿ ರೂಪಾಯಿ ಗಳಿಕೆ ಕಂಡರೇ, ನಾಲ್ಕನೇ ದಿನ ಅತೀ ಹೆಚ್ಚು 2.18 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಒಟ್ಟು ಈ ಐದು ದಿನಗಳಲ್ಲಿ 'ಕೃಷ್ಣಂ ಪ್ರಣಯ ಸಖಿ' ಸಿನಿಮಾದ ಕಲೆಕ್ಷನ್ 7.18 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ವಾರಾಂತ್ಯದ ವೇಳೆ ಕಲೆಕ್ಷನ್ 15 ಕೋಟಿ ರೂಪಾಯಿ ದಾಟಬಹುದೆಂದು ನಿರೀಕ್ಷೆ ಮಾಡಲಾಗಿದೆ.
'ಭೀಮ' ಕತೆಯೇನು?
ದುನಿಯಾ ವಿಜಯ್ 'ಭೀಮ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡಿದೆ. ಆದರೆ, ಮೂರನೇ ವಾರ ಕಲೆಕ್ಷನ್‌ನಲ್ಲಿ ಡ್ರಾಪ್ ಕಂಡಿದೆ. ನಿನ್ನೆ ಸೋಮವಾರ (ಆಗಸ್ಟ್ 19) ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ 60 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. 11 ದಿನಗಳಲ್ಲಿ ಈ ಸಿನಿಮಾ 21.60 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
'ಸ್ತ್ರೀ 2' ಕರ್ನಾಟಕದಲ್ಲಿ ಮಸ್ತ್ ರೆಸ್ಪಾನ್ಸ್
ಕರ್ನಾಟಕದಲ್ಲಿ ಬಾಲಿವುಡ್ ಸಿನಿಮಾ 'ಸ್ತ್ರೀ 2'ಗೆ ಬಾಕ್ಸಾಫೀಸ್‌ನಲ್ಲಿ ಮಸ್ತ್ ರೆಸ್ಪಾನ್ಸ್ ಸಿಕ್ಕಿದೆ. ವೀಕ್‌ಡೇಸ್‌ನಲ್ಲೂ ಈ ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಎರಡು ಕನ್ನಡ ಸಿನಿಮಾಗಳಿಗಿಂತ ಹೆಚ್ಚು ಕಲೆಕ್ಷನ್ ಮಾಡಿದೆ. 'ಸ್ತ್ರೀ 2' ಸೋಮವಾರ ಕರ್ನಾಟಕದಲ್ಲಿ ಸುಮಾರು 1.3 ಕೋಟಿ ರೂಪಾಯಿ ಆಗಿದೆ ಎನ್ನುತ್ತಿದೆ ವಿತರಕರ ವಲಯ.
'ತಂಗಲಾನ್' ಕಲೆಕ್ಷನ್ ಡ್ರಾಪ್
ಅಸಲಿ 'ಕೆಜಿಎಫ್' ಕಥೆ ಹೇಳುತ್ತೇನೆ ಅಂತ ಬಂದಿದ್ದ ಪಾ.ರಂಜಿತ್ ಮತ್ತೆ ಸೋತಿದ್ದಾರೆ. ಚಿಯಾನ್ ವಿಕ್ರಮ್ ಅಂತಹ ನಟನಿದ್ದ ಹೊರತಾಗಿಯೂ ಈ ಸಿನಿಮಾ ಬಾಕ್ಸಾಫೀಸ್ ದೊಡ್ಡ ಮಟ್ಟಕ್ಕೆ ಡ್ರಾಪ್ ಕಂಡಿದೆ. ಕರ್ನಾಟಕದಲ್ಲಿ ಐದನೇ ದಿನ ಈ ಸಿನಿಮಾ ಗಳಿಸಿದ್ದು ಕೇವಲ 35 ರಿಂದ 40 ಲಕ್ಷ ರೂಪಾಯಿ ಎಂದು ವಿತರಕರ ವಲಯದಲ್ಲಿ ಚರ್ಚೆಯಾಗುತ್ತಿದೆ. ಇನ್ನು ಈ ಎಲ್ಲಾ ಸಿನಿಮಾಗಳು ಅಧಿಕೃತ ಬಾಕ್ಸಾಫೀಸ್ ಕಲೆಕ್ಷನ್ ಅನ್ನು ಇನ್ನೂ ರಿವೀಲ್ ಮಾಡುವುದು ಬಾಕಿಯಿದೆ.


Click it and Unblock the Notifications











