Krishnam Pranaya Sakhi Box Office Day 6: 6ನೇ ದಿನ ಗಣೇಶ್ ಸಿನಿಮಾ ಕಥೆಯೇನು? 'ಭೀಮ' ಕಲೆಕ್ಷನ್ ಎಷ್ಟು?

ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ಗೋಲ್ಡನ್ ಡೇಸ್ ಮರುಕಳಿಸಿದ ಹಾಗೆ ಕಾಣಿಸುತ್ತಿದೆ. ಒಂದ್ಕಡೆ ಬಾಕ್ಸಾಫೀಸ್‌ನಲ್ಲಿ 'ಭೀಮ' ಸದ್ದು ಮಾಡುತ್ತಿದೆ. ಅದೇ ಇನ್ನೊಂದು ಕಡೆ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 'ಕೃಷ್ಣಂ ಪ್ರಯಣ ಸಖಿ'ಗೂ ಪ್ರೇಕ್ಷಕರು ಪಾಸಿಟಿವ್ ರೆಸ್ಪಾನ್ಸ್ ಕೊಟ್ಟಿದ್ದಾರೆ. ಎರಡೂ ಸಿನಿಮಾಗಳು ಕನ್ನಡ ಚಿತ್ರರಂಗಕ್ಕೆ ಮತ್ತೆ ಗೆಲುವಿನ ಕಳೆ ಕೊಟ್ಟಿರುವುದಂತೂ ನಿಜ.

ಆಗಸ್ಟ್ 15ರಂದು ತೆರೆಕಂಡಿದ್ದ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 'ಕೃಷ್ಣಂ ಪ್ರಣಯ ಸಖಿ' ಸಿನಿಮಾ ಕಲೆಕ್ಷನ್ ಮೊದಲ ನಾಲ್ಕು ದಿನ ಅದ್ಭುತವಾಗಿ ಆಗಿದೆ. ಆದರೆ, ಎರಡನೇ ವಾರದ ಆರಂಭದ ದಿನಗಳಲ್ಲಿ ಬಾಕ್ಸಾಫೀಸ್‌ನಲ್ಲಿ ಕೊಂಚ ಇಳಿಕೆ ಕಂಡಿದೆ. ಕೋಟಿಯಲ್ಲಿ ಆಗುತ್ತಿದ್ದ ಕಲೆಕ್ಷನ್ ನಿಧಾನವಾಗಿ ಲಕ್ಷಕ್ಕೆ ಇಳಿಯುತ್ತಿದೆ. ಫ್ಯಾಮಿಲಿ ಎಂಟರ್‌ಟೈನರ್ ಆಗಿರುವುದರಿಂದ ವಾರದ ಮಧ್ಯದಲ್ಲಿ ಕುಟುಂಬ ಸಮೇತ ಸಿನಿಮಾ ನೋಡುವುದು ಕಷ್ಟ ಸಾಧ್ಯ.

Ganesh movie Krishnam Pranaya Sakhi box office collection day 6 report

ಈ ಕಾರಣಕ್ಕೆ 'ಕೃಷ್ಣಂ ಪ್ರಯಣಂ ಸಖಿ' ಸಿನಿಮಾ ಮೊದಲ ಮೂರು ಶೋಗಳು ಡ್ರಾಪ್ ಆಗಿವೆ. ಆದರೆ, ನೈಟ್ ಶೋಗಳಿಗೆ ಪಾಸಿಟಿವ್ ರೆಸ್ಪಾನ್ಸ್ ಸಿಗುತ್ತಿದೆ ಅಂತಿವೆ ಡಿಸ್ಟ್ರಿಬ್ಯೂಷನ್ ಮೂಲಗಳು. ಸದ್ಯ ಗಣೇಶ್ ಸಿನಿಮಾ 'ಕೃಷ್ಣಂ ಪ್ರಣಯ ಸಖಿ' ಬಾಕ್ಸಾಫೀಸ್‌ನಲ್ಲಿ ಆರನೇ ದಿನ ಎಷ್ಟು ಕಲೆಕ್ಷನ್ ಮಾಡಿದೆ ಅನ್ನೋದನ್ನು ತಿಳಿಯಲು ಮುಂದೆ ಓದಿ.

'ಕೃಷ್ಣಂ ಪ್ರಯಣ ಸಖಿ' 6 ದಿನದ ಕಲೆಕ್ಷನ್ ಎಷ್ಟು?

ಯಾವುದೇ ಸಿನಿಮಾ ರಿಲೀಸ್ ಆದರೂ, ವಾರದ ಆರಂಭದ ದಿನಗಳಲ್ಲಿ ಬಾಕ್ಸಾಫೀಸ್ ಕಲೆಕ್ಷನ್ ಡ್ರಾಪ್ ಆಗುತ್ತೆ. ಮತ್ತೆ ವೀಕೆಂಡ್‌ನಲ್ಲಿ ಪಿಕ್‌ ಅಪ್ ಆಗುತ್ತೆ. 'ಕೃಷ್ಣಂ ಪ್ರಯಣ ಸಖಿ' ವಿಚಾರದಲ್ಲೂ ಹೀಗೆ ಆಗಿದೆ. ಈ ಕಾರಣಕ್ಕೆ 6ನೇ ದಿನದ ಕಲೆಕ್ಷನ್‌ ಲಕ್ಷಕ್ಕೆ ಇಳಿಕೆ ಕಂಡಿದೆ. ಸಿನಿಮಾ ಟ್ರೇಡ್ ಅನ್ನು ಟ್ರ್ಯಾಕ್ ಮಾಡುವ sacnilk ಪೋರ್ಟಲ್ 6ನೇ ದಿನದ ಕಲೆಕ್ಷನ್ ಅನ್ನು ರಿವೀಲ್ ಮಾಡಿದೆ. ಇದರ ಪ್ರಕಾರ, 68 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ.

6 ದಿನಗಳ ಕಲೆಕ್ಷನ್ ಹೇಗಿದೆ?

ಗಣೇಶ್ ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಹಿಟ್ ಅಂತ ಸಾಬೀತಾಗಿದೆ. ವಿತರಕರ ವಲಯ ಖುಷಿಯಾಗಿದೆ. ಅದರಲ್ಲೂ ಥಿಯೇಟರ್‌ನಲ್ಲಿ ಜನರನ್ನೇ ಕಾಣದ ಮಾಲೀಕರು ಖುಷಿಯಾಗಿದ್ದಾರೆ. ಕಳೆದ ಆರು ದಿನಗಳಲ್ಲಿ ಕಲೆಕ್ಷನ್ 10 ಕೋಟಿ ರೂಪಾಯಿ ಸಮೀಪದಲ್ಲಿದೆ. ಮೊದಲ ಐದು ದಿನಗಳಲ್ಲಿ 7.18 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಅದೇ 6ನೇ ದಿನದ ಗಳಿಕೆ ಸೇರಿದ 7.86 ಲಕ್ಷ ರುಪಾಯಿ ಕಲೆಕ್ಷನ್ ಆಗಿದೆ. ಹೀಗೆ ಮುಂದುವರೆದರೆ, ವೀಕೆಂಡ್ ವೇಳೆ 15 ಕೋಟಿ ರೂಪಾಯಿ ದಾಟಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಇದು ಬೇರೆ ಬೇರೆ ಮೂಲಗಳಿಂದ ಬಂದಿರುವ ಕಲೆಕ್ಷನ್ ರಿಪೋರ್ಟ್. ಚಿತ್ರತಂಡ ಇನ್ನೂ ಅಧಿಕೃತವಾಗಿ ಮಾಹಿತಿಯನ್ನು ರಿವೀಲ್ ಮಾಡಬೇಕಿದೆ.

Ganesh movie Krishnam Pranaya Sakhi box office collection day 6 report

ಈ ವಾರ ಪೈಪೋಟಿ ಇಲ್ಲ

ಈ ವಾರ ಕನ್ನಡದಲ್ಲಿ ಪ್ರಮುಖವಾಗಿ 'ಪೌಡರ್' ಸಿನಿಮಾ ರಿಲೀಸ್ ಆಗುತ್ತಿದೆ. ಕೆಆರ್‌ಜಿ ಸ್ಟುಡಿಯೋ ನಿರ್ಮಿಸಿರುವ ಈ ಸಿನಿಮಾ ಬಿಟ್ಟರೆ, ಗಣೇಶ್ 'ಕೃಷ್ಣಂ ಪ್ರಣಯ ಸಖಿ'ಗೆ ಈ ವಾರ ಪೈಪೋಟಿ ಕೊಡುವಂತಹ ಸಿನಿಮಾಗಳು ಯಾವುದೂ ಇಲ್ಲ. ಹೀಗಾಗಿ ಬಾಕ್ಸಾಫೀಸ್‌ನಲ್ಲಿ ಗಣೇಶ್ ಸಿನಿಮಾದ ದರ್ಬಾರ್ ಮುಂದುವರೆಯಬಹುದೆಂದು ನಿರೀಕ್ಷೆ ಮಾಡಲಾಗಿದೆ.

'ಭೀಮ' ಕಲೆಕ್ಷನ್ ಎಷ್ಟು?

ಇನ್ನೊಂದು ಕಡೆ ದುನಿಯಾ ವಿಜಯ್ ನಿರ್ದೇಶಿಸಿ ನಟಿಸಿದ ಸಿನಿಮಾ 'ಭೀಮ' ಕಲೆಕ್ಷನ್‌ನಲ್ಲಿ ಡ್ರಾಪ್ ಆಗಿದೆ. ಆದರೆ, ಕಳೆದ ಎರಡು ವಾರವೂ ಬಾಕ್ಸಾಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಅನ್ನೇ ಮಾಡಿದೆ. ಕಳೆದ 12 ದಿನಗಳಲ್ಲಿ ಈ ಸಿನಿಮಾ ಸುಮಾರು 23.38 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎನ್ನಲಾಗಿದೆ. ಈ ಮೂಲಕ ನಿರ್ಮಾಪಕರು ಫುಲ್ ಖುಷಿಯಾಗಿದ್ದು, 2024ರಲ್ಲಿ ಕನ್ನಡಕ್ಕೆ ಮೊದಲ ಹಿಟ್ ಸಿನಿಮಾ ಕೊಟ್ಟಿದ್ದಾರೆ.

More from Filmibeat

English summary
Ganesh movie Krishnam Pranaya Sakhi box office collection day 6 report:
Read more about: ganesh box office filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X