Krishnam Pranaya Sakhi Box Office Day 8: 8ನೇ ದಿನ ಗಣೇಶ್ ಸಿನಿಮಾ ಏನಾಯ್ತು? 'ಭೀಮ'ನ ಕಥೆಯೇನು?

ಈ ವಾರ ಬಾಕ್ಸಾಫೀಸ್‌ನಲ್ಲಿ ಅಷ್ಟು ದೊಡ್ಡ ಕಲೆಕ್ಷನ್ ಆಗಿಲ್ಲ. ಕನ್ನಡ ಚಿತ್ರರಂಗಕ್ಕೆ ಮರು ಜೀವ ಕೊಟ್ಟ ಎರಡೂ ಸಿನಿಮಾಗಳು ವೀಕ್‌ಡೇಸ್‌ನಲ್ಲಿ ಸ್ವಲ್ಪ ಡಲ್ ಹೊಡೆದಿವೆ. ಅಷ್ಟರಲ್ಲೇ ಮತ್ತೊಂದು ಹೊಸ ಸಿನಿಮಾ 'ಪೌಡರ್' ರಿಲೀಸ್ ಆಗಿದೆ. ಕೆಆರ್‌ಜಿ ಸ್ಟುಡಿಯೋ ನಿರ್ಮಾಣ ಮಾಡಿರುವ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಾ ಅಂತ ಟ್ರೇಡ್ ಎಕ್ಸ್‌ಪರ್ಟ್ಸ್‌ ಎದುರು ನೋಡುತ್ತಿದ್ದಾರೆ.

ಇನ್ನೊಂದು ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 'ಕೃಷ್ಣಂ ಪ್ರಯಣ ಸಖಿ' ಕೂಡ ಚೇತರಿಕೆ ಕಾಣಬಹುದೆಂದು ನಿರೀಕ್ಷೆ ಮಾಡಲಾಗಿದೆ. ಇಂದಿನಿಂದ(ಆಗಸ್ಟ್ 23) ಮತ್ತೊಂದು ವೀಕೆಂಡ್ ಶುರುವಾಗಿದೆ. ಹೀಗಾಗಿ ಗಣೇಶ್ ಸಿನಿಮಾ 'ಕೃಷ್ಣಂ ಪ್ರಯಣ ಸಖಿ' ಬಾಕ್ಸಾಫೀಸ್‌ನಲ್ಲಿ ಮತ್ತೆ ಚೇತರಿಕೆ ಕಾಣಬಹುದೆಂದು ನಿರೀಕ್ಷೆ ಮಾಡಲಾಗಿದೆ. ಇನ್ನು ಮೂರು ದಿನ ಕೋಟಿ ಲೆಕ್ಕದಲ್ಲಿ ಕಲೆಕ್ಷನ್ ಆಗಬಹುದೆಂಬ ನಿರೀಕ್ಷೆಯಿದೆ.

Ganesh movie Krishnam Pranaya Sakhi box office collection day 8 report

ಇನ್ನು ನಿನ್ನೆ (ಆಗಸ್ಟ್ 22) ಅಂದರೆ, ಎಂಟನೇ ದಿನ ಬಾಕ್ಸಾಫೀಸ್‌ ಕಲೆಕ್ಷನ್‌ನಲ್ಲೂ ಇಳಿಕೆ ಕಂಡಿದೆ. ಹಾಗೇ ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿದ 'ಭೀಮ' ಬಾಕ್ಸಾಫೀಸ್‌ ಕಲೆಕ್ಷನ್‌ನಲ್ಲೂ ಡ್ರಾಪ್ ಆಗಿದೆ. 'ಕೃಷ್ಣಂ ಪ್ರಣಯ ಸಖಿ'ಯ 8ನೇ ದಿನದ ಕಲೆಕ್ಷನ್ ಹಾಗೂ 'ಭೀಮ'ನ 14ನೇ ದಿನದ ಕಲೆಕ್ಷನ್ ಹೇಗಿದೆ ಅನ್ನೋದನ್ನು ನೋಡೋಣ.

'ಕೃಷ್ಣಂ ಪ್ರಯಣ' ಸಖಿ 8ನೇ ದಿನ ಕಲೆಕ್ಷನ್

ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾ 'ಕೃಷ್ಣಂ ಪ್ರಯಣ ಸಖಿ' ಪಕ್ಕಾ ಕೌಟುಂಬಿಕ ಸಿನಿಮಾ. ಹೀಗಾಗಿ ಕುಟುಂಬ ಸಮೇತ ಬಂದು ಸಿನಿಮಾ ನೋಡುಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಮೊದಲ ವಾರ ನಿರೀಕ್ಷೆಯಂತೆ ಕಲೆಕ್ಷನ್ ಉತ್ತಮವಾಗಿತ್ತು. ಆದರೆ, ಈ ವಾರದ ಆರಂಭದಿಂದ ನಿರೀಕ್ಷಯಂತೆ ಡ್ರಾಪ್ ಆಗಿದೆ. 'ಕೃಷ್ಣಂ ಪ್ರಯಣ ಸಖಿ' ಎಂಟನೇ ದಿನ 60 ರಿಂದ 65 ಲಕ್ಷ ರೂಪಾಯಿ ಕಲೆಕ್ಷನ್ ಆಗಿರಬಹುದೆಂದು ವಿತರಕರ ವಲಯದಲ್ಲಿ ಚರ್ಚೆಯಾಗುತ್ತಿದೆ. ಅದೇ sacnilk ಈ ಸಿನಿಮಾದ ಎಂಟನೇ ದಿನದ ಕಲೆಕ್ಷನ್ 42 ಲಕ್ಷ ರೂಪಾಯಿ ಎಂದು ಹೇಳುತ್ತಿದೆ.

8 ದಿನಗಳ ಒಟ್ಟು ಕಲೆಕ್ಷನ್

'ಕೃಷ್ಣಂ ಪ್ರಯಣ ಸಖಿ' ಸಿನಿಮಾ ಒಟ್ಟು ದಿನಗಳಲ್ಲಿ 10 ಕೋಟಿ ರೂಪಾಯಿ ದಾಟಿದೆ. ಈ ವೀಕೆಂಡ್‌ನಲ್ಲಿ ಕೋಟಿ ಲೆಕ್ಕದಲ್ಲಿ ಕಲೆಕ್ಷನ್ ಆಗಬಹುದೆಂದು ನಿರೀಕ್ಷೆ ಮಾಡಲಾಗಿದೆ. ಒಟ್ಟು ಎಂಟು ದಿನಗಳಲ್ಲಿ 'ಕೃಷ್ಣಂ ಪ್ರಣಯ ಸಖಿ' 10 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಆಗಿದೆ ಎನ್ನಲಾಗಿದೆ. ಇನ್ನು sacnilk ಪ್ರಕಾರ, 'ಕೃಷ್ಣಂ ಪ್ರಣಯ ಸಖಿ' ಕಲೆಕ್ಷನ್ ವಿಶ್ವದಾದ್ಯಂತ 9. 94 ಕೋಟಿ ರೂಪಾಯಿ ಎಂದು ವರದಿ ಮಾಡಿದೆ.

Ganesh movie Krishnam Pranaya Sakhi box office collection day 8 report

ವೀಕೆಂಡ್‌ ಕಥೆ ಏನಾಗಬಹುದು?

'ಕೃಷ್ಣಂ ಪ್ರಯಣ ಸಖಿ' ಈ ವೀಕೆಂಡ್‌ ಮೇಲೆ ನಿರೀಕ್ಷೆಯಿದೆ. ಎರಡನೇ ವೀಕೆಂಡ್‌ನಲ್ಲಿ ಒಂದೊಳ್ಳೆ ಬ್ಯುಸಿನೆಸ್ ಮಾಡಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಈ ವಾರ ಕೂಡ ಬಿಗ್ ಸ್ಟಾರ್‌ಗಳ ಸಿನಿಮಾ ಇಲ್ಲದೆ ಇರುವುದರಿಂದ 'ಕೃಷ್ಣಂ ಪ್ರಯಣ ಸಖಿ' ಗೆ ಅಡ್ವಾಂಟೇಜ್ ಆಗುವ ಸಾಧ್ಯತೆಯಿದೆ. ಇಂದಿನಿಂದ ಮೂರು ದಿನ ಕೋಟಿ ಲೆಕ್ಕದಲ್ಲಿ ಗಳಿಕೆ ಮಾಡಿದರೆ, ಬಾಕ್ಸಾಫೀಸ್‌ನಲ್ಲಿ ಒಂದೊಳ್ಳೆ ಕಲೆಕ್ಷನ್ ಆಗಬಹುದು.

14ನೇ ದಿನ 'ಭೀಮ'ನ ಕಥೆಯೇನು?

ದುನಿಯಾ ವಿಜಯ್ ನಟನೆಯ 'ಭೀಮ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹಿಟ್ ಅಂತ ಸಾಬೀತಾಗಿದೆ. 14ನೇ ದಿನ ಬಾಕ್ಸಾಫೀಸ್‌ ಇಳಿಕೆ ಕಡಿಮೆ ಆಗಿದ್ದರೂ, ಲಾಭದಲ್ಲಿದೆ ಎನ್ನಲಾಗಿದೆ. sacnilk ಪ್ರಕಾರ, 14ನೇ ದಿನ 23 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದ್ದು, ಇದೂವರೆಗೂ ವರ್ಲ್ಡ್ ವೈಡ್ 23.91 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.

More from Filmibeat

English summary
Ganesh movie Krishnam Pranaya Sakhi box office collection day 8, Bheema Day 14 Report
Read more about: ganesh box office filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X