Krishnam Pranaya Sakhi Box Office Day 9: 9ನೇ ದಿನ ಚೇತರಿಕೆ ಕಂಡ ಗೋಲ್ಡನ್ ಸ್ಟಾರ್ ಸಿನಿಮಾ;
ಈ ವಾರ ಸ್ಯಾಂಡಲ್‌ವುಡ್‌ನಲ್ಲಿ ಬಿಗ್ ಸಿನಿಮಾಗಳು ಇಲ್ಲ. ನಿರೀಕ್ಷಿತ ಸಿನಿಮಾ ಅಂತ ರಿಲೀಸ್ ಆಗಿದ್ದು, 'ಪೌಡರ್' ಮಾತ್ರ. ದಿಗಂತ್, ಧನ್ಯಾ ರಾಮ್ ಕುಮಾರ್, ಶರ್ಮಿಳಾ ಮಾಂಡ್ರೆ ನಟಿಸಿದ ಈ ಸಿನಿಮಾಗೂ ರೆಸ್ಪಾನ್ಸ್ ಚೆನ್ನಾಗಿದೆ. ಇದರ ಜೊತೆಗೆ ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾ ವೀಕೆಂಡ್ ಬಾಕ್ಸಾಫೀಸ್‌ನಲ್ಲಿ ಚೇತರಿಕೆ ಕಂಡಿದೆ.
ನಿನ್ನೆ (ಆಗಸ್ಟ್ 23) 'ಕೃಷ್ಣಂ ಪ್ರಯಣ ಸಖಿ' ಪ್ರದರ್ಶನ ಕಾಣುತ್ತಿದ್ದ ಕೆಲವು ಚಿತ್ರಮಂದಿರಗಳ ಮುಂದೆ ಹೌಸ್‌ಫುಲ್ ಬೋರ್ಡ್ ಬಿದ್ದಿದೆ. ಫ್ಯಾಮಿಲಿ ಆಡಿಯನ್ಸ್‌ಗೆ ಈ ಸಿನಿಮಾ ಇಷ್ಟ ಆಗುತ್ತಿದೆ. ಈ ವಾರದ ಆರಂಭದಲ್ಲಿ ಕಲೆಕ್ಷನ್‌ನಲ್ಲಿ ಇಳಿಕೆ ಕಂಡಿದ್ದ ಈ ಸಿನಿಮಾ ನಿರೀಕ್ಷೆಯಂತೆ ವೀಕೆಂಡ್‌ನಲ್ಲಿ ಚೇತರಿಕೆ ಕಂಡಿದೆ.

'ಕೃಷ್ಣಂ ಪ್ರಣಯ ಸಖಿ' ತೆರೆಕಂಡ ನಿನ್ನೆಗೆ 9ನೇ ದಿನ. ಮೊದಲ ನಾಲ್ಕು ದಿನ ಭರ್ಜರಿ ಕಲೆಕ್ಷನ್ ಮಾಡಿದ್ದ ಸಿನಿಮಾ ಐದನೇ ದಿನದಿಂದ ಹಿಡಿದು 8ನೇ ದಿನದವರೆಗೂ ಕೊಂಚ ಮಟ್ಟಿಗೆ ಇಳಿಕೆ ಕಾಣುತ್ತಿತ್ತು. ಆದ್ರೀಗ ನಿರೀಕ್ಷೆಯಂತೆ ವೀಕೆಂಡ್ ಮತ್ತೆ ಏರಿಕೆಯಾಗುತ್ತಿದೆ. ಹಾಗಿದ್ದರೆ, 9ನೇ ದಿನದಲ್ಲಿ ಈ ಸಿನಿಮಾ ಕಂಡಿದ್ದೆಷ್ಟು? ಈ ಒಂಬತ್ತು ದಿನಗಳಲ್ಲಿ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟಿದೆ?
'ಕೃಷ್ಣಂ ಪ್ರಯಣ' ಸಖಿ 9ನೇ ದಿನ ಗಳಿಸಿದ್ದೆಷ್ಟು?
ನಿನ್ನೆಯಿಂದಲೇ ವೀಕೆಂಡ್ ಶುರುವಾಗಿದೆ. ಈ ಕಾರಣಕ್ಕೆ ಎರಡನೇ ವಾರ ಕೊನೆಯಲ್ಲಿ ಗಣೇಶ್ ಸಿನಿಮಾ 'ಕೃಷ್ಣಂ ಪ್ರಣಯ ಸಖಿ' ಮತ್ತೆ ಚೇತರಿಸಿಕೊಳ್ಳುತ್ತಿದೆ. 8ನೇ ದಿನ ಈ ಸಿನಿಮಾದ ಕಲೆಕ್ಷನ್ 60 ರಿಂದ 65 ಲಕ್ಷ ಎಂದು ಹೇಳಲಾಗಿತ್ತು. 9ನೇ ದಿನ ಕೊಂಚ ಮಟ್ಟಿಗೆ ಏರಿಕೆ ಕಂಡಿದೆ. ವಿತರಕರ ಪ್ರಕಾರ, 9ನೇ ದಿನ 70 ರಿಂದ 73 ಕೋಟಿ ರೂಪಾಯಿ ಕಲೆಕ್ಷನ್ ಆಗಿರಬಹುದೆಂದು ಅಂದಾಜಿಸಿದ್ದಾರೆ. ಅದೇ ಸಿನಿಮಾ ಟ್ರೇಡಿಂಗ್ ಪೋರ್ಟಲ್ sacnilk 9ನೇ ದಿನ 50 ಲಕ್ಷ ರೂಪಾಯಿ ಗಳಿಸಿದೆ ಎಂದು ಹೇಳುತ್ತಿದೆ.

9 ದಿನಗಳಲ್ಲಿ ಎಷ್ಟಾಯ್ತು ಕಲೆಕ್ಷನ್ ?
'ಕೃಷ್ಣಂ ಪ್ರಯಣ ಸಖಿ' ಕೇವಲ ಹಾಡುಗಳಿಂದಲೇ ಪ್ರೇಕ್ಷಕರನ್ನು ಥಿಯೇಟರ್‌ಗೆ ಸೆಳೆದಿದೆ. ಈ ಸಿನಿಮಾದಿಂದಲೇ ಫ್ಯಾಮಿಲಿ ಆಡಿಯನ್ಸ್ ಚಿತ್ರಮಂದಿರಕ್ಕೆ ಬರುವಂತೆ ಆಗಿದೆ. ಒಟ್ಟು 9 ದಿನಗಳಲ್ಲಿ ವಿಶ್ವದಾದ್ಯಂತ 13 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ವಿತರಕರ ವಲಯ ಹೇಳುತ್ತಿದೆ. ಇನ್ನು sacnilk ಪ್ರಕಾರ, ಈ ಸಿನಿಮಾ ವಿಶ್ವದಾದ್ಯಂತ ಗಳಿಸಿದ್ದು, 10.49 ಕೋಟಿ ರೂಪಾಯಿ. ಆದರೂ, ಸಿನಿಮಾ ಹಿಟ್ ಲಿಸ್ಟ್ ಸೇರಿದೆಯೆಂದು ಸ್ಯಾಂಡಲ್‌ವುಡ್ ಸರ್ಟಿಫಿಕೇಟ್ ಕೊಟ್ಟಿದೆ.
ಎರಡು ದಿನದ ಕಲೆಕ್ಷನ್ ಮೇಲೆ ಕಣ್ಣು
'ಕೃಷ್ಣಂ ಪ್ರಯಣ ಸಖಿ' ಸಿನಿಮಾ ಇನ್ನೆರಡು ದಿನಗಳಲ್ಲಿ ಭರ್ಜರಿ ಕಲೆಕ್ಷನ್ ಆಗಬೇಕಿದೆ. ಇಂದು (ಆಗಸ್ಟ್ 24 ) ಹಾಗೂ ನಾಳೆ (ಆಗಸ್ಟ್ 25) ಕೋಟಿ ಲೆಕ್ಕದಲ್ಲಿ ಕಲೆಕ್ಷನ್ ಆಗಬೇಕಿದೆ. ಹಾಗಾದರೆ, 15 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಬಹುದು. ಇನ್ನು ಮೂರನೇ ವಾರದ ಆರಂಭ ಹೇಗಾಗುತ್ತೆ ಅನ್ನೋದು ಈಗಾಗಲೇ ಊಹಿಸುವುದು ಅಸಾಧ್ಯ?
15 ದಿನಗಳಲ್ಲಿ 'ಭೀಮ'ನ ಕಥೆಯೇನು?
ಇನ್ನು ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿದ 'ಭೀಮ' 15ನೇ ದಿನಕ್ಕೆ ಅತೀ ಕಡಿಮೆ ಗಳಿಕೆಯನ್ನು ದಾಖಲಿಸಿದೆ. ನಿನ್ನೆ (ಆಗಸ್ಟ್ 23) 'ಭೀಮ' ಕೇವಲ 18 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದ್ದು, ಈ 15 ದಿನಗಳಲ್ಲಿ 'ಭೀಮ' ಕಲೆಕ್ಷನ್ 24.11 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆಯಂದು sacnilk ಹೇಳಿದೆ.


Click it and Unblock the Notifications











