ದುಬೈನಲ್ಲಿ 'ಕೃಷ್ಣಂ ಪ್ರಣಯ ಸಖಿ'ಗೆ ಮಸ್ತ್ ರೆಸ್ಪಾನ್ಸ್; ಸ್ಪೆಷಲ್ ಶೋ ಹೌಸ್‌ಫುಲ್
2024ರಲ್ಲಿ ಕನ್ನಡ ಚಿತ್ರರಂಗಕ್ಕೆ ಹೊಸ ಹುರುಪು ಕೊಟ್ಟ ಸಿನಿಮಾಗಳಲ್ಲಿ 'ಕೃಷ್ಣಂ ಪ್ರಣಯ ಸಖಿ' ಕೂಡ ಒಂದು. ಕಳೆದ ಆಗಸ್ಟ್ ತಿಂಗಳಲ್ಲಿ ತೆರೆಕಂಡ ಸಿನಿಮಾ ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡಿದೆ. ಪಕ್ಕಾ ಫ್ಯಾಮಿಲಿ ಸಿನಿಮಾಗೆ ಕರ್ನಾಟಕದಲ್ಲಿ ಉತ್ತರ ರೆಸ್ಪಾನ್ಸ್ ಸಿಕ್ಕಿದೆ.
ಈ ಸಿನಿಮಾ ಮೂಲಕ ಮತ್ತೆ ಗಣೇಶ್ ಪಾಲಿಗೆ ಗೋಲ್ಡನ್ ಡೇಸ್ ಶುರುವಾಗಿರುವ ಲಕ್ಷಣ ಕಂಡು ಬಂದಿದೆ. ಸದ್ಯ ಯಶಸ್ಸಿನ ಖುಷಿಯಲ್ಲಿ ತೇಲಾಡುತ್ತಿರುವ 'ಕೃಷ್ಣಂ ಪ್ರಣಯ ಸಖಿ' ಸಿನಿಮಾತಂಡ ದುಬೈಗೂ ಕಾಲಿಟ್ಟಿತ್ತು. ಅಲ್ಲಿನ ಕನ್ನಡಿಗರಿಗಾಗಿ ವಿಶೇಷ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು.

ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಶ್ರೀನಿವಾಸ್ ರಾಜು ಕಾಂಬಿನೇಷನ್‌ನ ಈ ಸಿನಿಮಾ ದುಬೈ ಹಾಗೂ ಅಬುದಾಬಿಯಲ್ಲಿ ಎರಡೂ ಕಡೆ ಪ್ರದರ್ಶನ ಮಾಡಲಾಗಿತ್ತು. ಎರಡೂ ಕಡೆಗಳಲ್ಲೂ ಕನ್ನಡಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎರಡೂ ಕಡೆಗಳಲ್ಲೂ ಥಿಯೇಟರ್ ಹೌಸ್‌ಫುಲ್ ಆಗಿದೆ. ದುಬೈ ಕನ್ನಡಿಗರು ಈ ಸಿನಿಮಾ ನೋಡಿ ಸಿಕ್ಕಾಪಟ್ಟೆ ಇಷ್ಟ ಪಟ್ಟಿದ್ದಾರೆ.
'ಕೃಷ್ಣಂ ಪ್ರಣಯ ಸಖಿ' ಸಿನಿಮಾದ ವಿಶೇಷ ಪ್ರದರ್ಶನವನ್ನು ದುಬೈನಲ್ಲಿ ರಶ್ಮಿ ವೆಂಕಟೇಶ್ , ಸೆಂದಿಲ್ ಮತ್ತು ತಂಡದವರು ಆಯೋಜಿಸಿದ್ದರು. ಈ ವಿಶೇಷ ಪ್ರದರ್ಶನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ನಾಯಕಿ ಮಾಳವಿಕ ನಾಯರ್, ನಟ ರಂಗಾಯಣ ರಘು, ನಿರ್ದೇಶಕ ಶ್ರೀನಿವಾಸರಾಜು, ನಿರ್ಮಾಪಕ ಪ್ರಶಾಂತ್ ಜಿ ರುದ್ರಪ್ಪ ಹಾಗೂ ತಂಡದ ಸದಸ್ಯರು ಈ ಸ್ಪೆಷಲ್ ಶೋನಲ್ಲಿ ಭಾಗಿಯಾಗಿದ್ದರು.

ಅಂದ್ಹಾಗೆ ದುಬೈ ಹಾಗೂ ಅಬುದಾಬಿಯಲ್ಲಿ ಸುಮಾರು 750ಕ್ಕೂ ಅಧಿಕ ಮಂದಿ 'ಕೃಷ್ಣಂ ಪ್ರಣಯ ಸಖಿ' ಸಿನಿಮಾವನ್ನು ವೀಕ್ಷಣೆ ಮಾಡಿದ್ದಾರೆ. ಇದೇ ವೇಳೆ ಅಲ್ಲಿನ ಕನ್ನಡಿಗರು 'ಕೃಷ್ಣಂ ಪ್ರಣಯ ಸಖಿ' ಸಿನಿಮಾದ ಜನಪ್ರಿಯ ಹಾಡುಗಳಿಗೆ ಹೆಜ್ಜೆ ಹಾಕಿದರು. ಥಿಯೇಟರ್‌ನಲ್ಲಿಯೇ ಈ ಹಾಡಿಗೆ ಹೆಜ್ಜೆ ಹಾಕಿ ಸಿನಿಮಾ ತಂಡವನ್ನು ಖುಷಿ ಪಡಿಸಿದ್ದರು.
'ಕೃಷ್ಣಂ ಪ್ರಣಯ ಸಖಿ' ಸಿನಿಮಾಗೆ ಸಿಕ್ಕಿರುವ ರೆಸ್ಪಾನ್ಸ್‌ಗೆ ಗೋಲ್ಡನ್ ಸ್ಟಾರ್ ಗಣೇಶ್ ಫಿದಾ ಆಗಿದ್ದಾರೆ. ಈ ವೇಳೆ ದುಬೈ ಕನ್ನಡಿಗರ ನೀಡಿದ ಪ್ರೋತ್ಸಾಹಕ್ಕೆ ಗಣೇಶ್ ಫಿದಾ ಆಗಿದ್ದಾರೆ. ಸದ್ಯ ಕನ್ನಡದ ಮಟ್ಟಿಗೆ ಎರಡು ಹಿಟ್ ಸಿನಿಮಾಗಳು ಸಿಕ್ಕಿವೆ. ಈಗಾಗಲೇ ಈ ಸಿನಿಮಾ ಕರ್ನಾಟಕದ ಬಾಕ್ಸಾಫೀಸ್‌ನಲ್ಲಿ 15 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಇನ್ನೂ ಕೆಲವು ಚಿತ್ರಮಂದಿರಲ್ಲಿ ಉತ್ತಮ ಪ್ರದರ್ಶನ ಕಾಣಿತ್ತಿದೆ.
ಇನ್ನು ಗೋಲ್ಡನ್ ಸ್ಟಾರ್‌ಗೆ ಮತ್ತೆ ಯಶಸ್ಸಿನಿಂದ ಹೊಸ ಹುರುಪು ಬಂದಂತಾಗಿದೆ. ಹೀಗಾಗಿ ಮುಂದಿನ ಗಣೇಶ್ ಕೈಯಲ್ಲಿ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಕೂಡ ಇದೆ ಅನ್ನುವ ಸುದ್ದಿ ಕೂಡ ಹರಿದಾಡುತ್ತಿದೆ. ಆದರೆ, ಈ ಬಗ್ಗೆ ಇನ್ನೂ ಮಾಹಿತಿ ಹೊರಬಿದ್ದಿಲ್ಲ. 'ಕೃಷ್ಣಂ ಪ್ರಣಯ ಸಖಿ' ಬಳಿಕವೂ ಕನ್ನಡದ ಕೆಲವು ನಿರ್ಮಾಪಕ ಕೂಡ ಆಫರ್ ಕೊಟ್ಟಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ.


Click it and Unblock the Notifications











