2006 to 2026 ಗೋಲ್ಡನ್ ಜರ್ನಿಗೆ ಎಂಟ್ರಿ ಕೊಡ್ತಿರೋ 'ತಮ್ಮ ಸುಖಾಗಮನ ಬಯಸುವ' -ಗೋಲ್ಡನ್ ಸ್ಟಾರ್ ಗಣೇಶ್

ಗೋಲ್ಡನ್ ಸ್ಟಾರ್ ಗಣೇಶ್ ಹೀರೋ ಆಗಿ 2026ಕ್ಕೆ 20 ವರ್ಷಗಳಾಗಿವೆ. 2006ರಲ್ಲಿ 'ಚೆಲ್ಲಾಟ'ದ ಮೂಲಕ ಇವರ ಜರ್ನಿ ಆರಂಭ ಆಗಿತ್ತು. ಯೋಗರಾಜ್‌ ಭಟ್ ನಿರ್ದೇಶಿಸಿದ 'ಮುಂಗಾರು ಮಳೆ' ಸ್ಟಾರ್ ಮಾಡಿದ್ದು, ಇಲ್ಲಿವರೆಗೂ ಕರೆದುಕೊಂಡು ಬಂದಿದೆ. ಈ ಎರಡು ದಶಕಗಳ ಜರ್ನಿಗೆ ವಿಶೇಷ ಗೌರವ ಸೂಚಿಸುವುದಕ್ಕೆ ಹೊಸ ಸಿನಿಮಾ ಅನೌನ್ಸ್ ಆಗಿದೆ. ಅದುವೇ 'ತಮ್ಮ ಸುಖಾಗಮನ ಬಯಸುವ'.

ಇಲ್ಲಿವರೆಗೂ ಗೋಲ್ಡನ್ ಸ್ಟಾರ್ ಗಣೇಶ್‌ ಸಿನಿಮಾಗಳನ್ನು ಎಂಜಾಯ್ ಮಾಡುತ್ತಾ ಬಂದಿರುವ ಅಭಿಮಾನಿಗಳಿಗೆ ತಮ್ಮ 20 ವರ್ಷಗಳ ಜರ್ನಿಗೆ ಆಹ್ವಾನ ನೀಡುವಂತೆ ಟೈಟಲ್ ಇದೆ. ಶಿವರಾತ್ರಿ ಹಬ್ಬದ ಈ ಶುಭ ಸಂದರ್ಭದಲ್ಲಿ ಸಿನಿಮಾದ ಫಸ್ಟ್ ಲುಕ್ ಅನ್ನು ರಿವೀಲ್ ಮಾಡಲಾಗಿದೆ. ಹೊಸ ಸಿನಿಮಾದ ಟೈಟಲ್ ಅನ್ನು ಗೋಲ್ಡನ್ ಸ್ಟಾರ್ ಅಭಿಮಾನಿಗಳೂ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದಾರೆ.

Ganesh new movie Thamma Sukhagamana Bayasuva is tribute to 20 years journey said director

ಇಂದು ಶಿವರಾತ್ರಿಯಂದು (ಫೆಬ್ರವರಿ 15) ಕಂಠೀರವ ಸ್ಟುಡಿಯೋದಲ್ಲಿ 'ತಮ್ಮ ಸುಖಾಗಮನ ಬಯಸುವ' ಸಿನಿಮಾದ ಮುಹೂರ್ತನೂ ನಡೆದಿದೆ. ಅರ್ಜುನ್ ಜನ್ಯ ಈ ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ. 'ಹೊಂದಿಸಿ ಬರೆಯಿರಿ', 'ತೀರ್ಥರೂಪ ತಂದೆಯವರಿಗೆ' ಅಂತಹ ಸಿನಿಮಾಗಳ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಶುಭ ಸಂದರ್ಭದಲ್ಲಿ ರಾಮೇನಹಳ್ಳಿ ಜಗನ್ನಾಥ ಫಿಲ್ಮಿಬೀಟ್ ಕನ್ನಡದೊಂದಿಗೆ ಸಿನಿಮಾದ ಟೈಟಲ್, ಒನ್‌ಲೈನ್ ಸ್ಟೋರಿ ಸೇರಿದಂತೆ ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ರಾಮೇನಹಳ್ಳಿ ಜಗನ್ನಾಥ ನಿರ್ದೇಶಿಸಿದ ಸಿನಿಮಾದ ಟೈಟಲ್‌ಗಳು ಮೊದಲು ಆಕರ್ಷಿಸುತ್ತವೆ. ಈ ಹಿಂದೆ ನಿರ್ದೇಶಿಸಿದ ಎರಡು ಸಿನಿಮಾಗಳ ಟೈಟಲ್‌ಗಳು ಕೂಡ ಕನ್ನಡಿಗರಿಗೆ ತೀರಾ ಹತ್ತಿರ ಎನಿಸುತ್ತವೆ. ಈಗ ಮೂರನೇ ಸಿನಿಮಾ ಟೈಟಲ್‌ ಕೂಡ ಅತ್ಯಾಪ್ತ ಎನಿಸುತ್ತೆ. ಆದರೆ, ಮೊದಲ ಸೋಲ್‌ಮೇಟ್ ಅಂತ ವರ್ಕಿಂಗ್ ಇಟ್ಟಿದ್ದರು. ಗಣೇಶ್ ಅವರೇ ಹಿಂದಿನ ಸಿನಿಮಾಗಳಂತೆ ಕನ್ನಡಿಗರಿಗೆ ಹತ್ತಿರವಾಗೋ ಟೈಟಲ್ ಇಡಿ ಎಂದಿದ್ದರಂತೆ. ಹೀಗೆ ಹುಟ್ಟಿಕೊಂಡ ಟೈಟಲ್ 'ತಮ್ಮ ಸುಖಾಗಮನ ಬಯಸುವ'. ಫಿಲ್ಮಿಬೀಟ್‌ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಟೈಟಲ್‌ ಬಗ್ಗೆ ಇಂಟ್ರೆಸ್ಟಿಂಗ್ ವಿಷಯ ಹಂಚಿಕೊಂಡಿದ್ದಾರೆ.

"ನನಗೆ ವೈಯಕ್ತಿಕವಾಗಿ ಟೈಟಲ್‌ಗಳು ಯಾವಾಗಲೂ ಆಪ್ತತೆಯಿಂದ ಇರಬೇಕು. ಹೆಚ್ಚು ಬಳಕೆಯಲ್ಲಿ ಇರುವ ಪದಗಳಾದರೆ, ಜನರಿಗೆ ಹೆಚ್ಚು ಕನೆಕ್ಟ್ ಆಗುತ್ತೆ ಅನ್ನೋದು ನನ್ನ ನಂಬಿಕೆ. ತಮ್ಮ ಸುಖಾಗಮನ ಬಯಸುವ ಟೈಟಲ್ ಅನ್ನು ಇನ್ನೊಂದು ಅರ್ಥದಲ್ಲಿ ನೋಡುವುದಾರೇ, 2006 ಮುಂಗಾರು ಮಳೆ ಶುರುವಾಗಿದ್ದ ವರ್ಷದಿಂದ 2026ರವರೆಗೆ ಗಣೇಶ್ ಅವರ ಅಭಿಮಾನಿಗಳಿಗೆ ಸುಖಾಗಮನ ಬಯಸುವ ಅನ್ನೋದು ಅರ್ಥ ಆದರೆ, ಕಥೆಗೂ ಕೂಡ ಇದು ತುಂಬಾನೇ ಅತ್ಯಾಪ್ತವಾಗಿದೆ." ಎನ್ನುತ್ತಾರೆ ರಾಮೇನಹಳ್ಳೀ ಜಗನ್ನಾಥ.

Ganesh new movie Thamma Sukhagamana Bayasuva is tribute to 20 years journey said director

ಈ ಸಿನಿಮಾದ ಒನ್‌ಲೈನ್ ಕಥೆ ಬಗ್ಗೆನೂ ರಿವೀಲ್ ಮಾಡಿದ್ದಾರೆ. "ಕಥೆಯನ್ನು ಒಂದು ಸಾಲಿನಲ್ಲಿ ಹೇಳುವುದಾರೇ, ನಿಶ್ವಿತಾರ್ಥ ಆದ ಜೋಡಿಗಳು ಮದುವೆ ಆಗುವವರೆಗೆ ನಡೆಯುವ ಜರ್ನಿಯಲ್ಲಿ ಪರಸ್ಪರ ತಮ್ಮ ಸುಖಾಗಮನ ಬಯಸುವ ಅಂತ ಹೇಳುವುದಾಗಲಿ, ಈ ಜರ್ನಿಯಲ್ಲಿ ಏನಾಗುತ್ತೆ? ಎರಡು ಫ್ಯಾಮಿಲಿಗಳ ನಡುವೆ ಬರುವಂತ ಸನ್ನಿವೇಶಗಳೇ ಕಥೆ. ಈ ಸಿನಿಮಾ ಮದುವೆ ಬಗ್ಗೆ ಇರುವುದರಿಂದ ಜೋಡಿಗಳ ಸ್ವಯಂ ಅನ್ವೇಷಣೆಗಳನ್ನು ಹೇಳಲಾಗುತ್ತೆ. ಹಾಗೇ ಮದುವೆ ಅಂತ ಬಂದಾಗ ಪತ್ರಿಕೆಗಳಲ್ಲಿ ತಮ್ಮ ಸುಖಾಗಮನ ಅಂತ ಇರೋದು. ಅದನ್ನು ಮನೆಯಲ್ಲಿ ಓದಿಸುತ್ತಿದ್ದರು. ಹಾಗಾಗಿ ಅದನ್ನು ಇಟ್ಟಿದ್ದೇನೆ" ಎಂದು ರಾಮೇನಹಳ್ಳೀ ಜಗನ್ನಾಥ ಹೇಳಿದ್ದಾರೆ.

"ಇವತ್ತಿನವರೆಗೂ ನಾನು ಗಣೇಶ್ ಅವರ ಟೈಮಿಂಗ್‌ಗೆ ಬಿಗ್ ಫ್ಯಾನ್. ಆ ಕಾಮಿಡಿ ಸೆನ್ಸ್, ಟೈಮಿಂಗ್ ಎಲ್ಲವೂ ಈ ಸಿನಿಮಾದಲ್ಲಿ ಇದ್ದೇ ಇರುತ್ತದೆ. ಇದರೊಂದಿಗೆ ಒಂದು ಕ್ಲಾಸ್ ಅಪ್ರೋಚ್ ಇದೆ. ಪೋಸ್ಟರ್ ನೋಡಿದರೇ, ಒಬ್ಬ ಉದ್ಯೋಗಿಯ ಹಾಗೆ ಕ್ಲಾಸ್ ಆಗಿ ತೋರಿಸಿದ್ದೇವೆ. ಇಡೀ ಸಿನಿಮಾದಲ್ಲಿ ಅವರು ಹಾಗೆಯೇ ಕಾಣಿಸಿಕೊಳ್ಳುತ್ತಾರೆ." ಎಂದು ನಿರ್ದೇಶಕ ರಾಮೇನಹಳ್ಳೀ ಜಗನ್ನಾಥ ಹೇಳುತ್ತಾರೆ.

ಸದ್ಯಕ್ಕೆ ರಾಮೇನಹಳ್ಳೀ ಜಗನ್ನಾಥ ಬೇಸಿಕ್ ಟೆಕ್ನಿಕಲ್ ಟೀಮ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ. ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆಯುತ್ತಿದ್ದಾರೆ. ಕಥೆ ಹಾಗೂ ಚಿತ್ರಕಥೆಯಲ್ಲಿ ವಿಶ್ವಾಸ್ ಶಂಭುಲಿಂಗಪ್ಪ ನಿರ್ದೇಶಕರಿಗೆ ಕೈ ಜೋಡಿಸಿದ್ದಾರೆ. ಮೇ ತಿಂಗಳಲ್ಲಿ ಈ ಸಿನಿಮಾದ ಶೂಟಿಂಗ್ ಶುರುವಾಗುತ್ತಿದೆ. 'ತಮ್ಮ ಸುಖಾಗಮನ ಬಯಸುವ' ಸಿನಿಮಾ ಗೋಲ್ಡನ್ ಸ್ಟಾರ್ ಗಣೇಶ್ ಅವರ 20 ವರ್ಷಗಳ ಜರ್ನಿಗೆ ಟ್ರಿಬ್ಯೂಟ್ ಕೊಡುವುದಕ್ಕೆ 2026ಕ್ಕೆ ಬಿಡುಗಡೆ ಮಾಡುವ ಪ್ಲ್ಯಾನ್ ಇದೆ. ಆದರೆ, ಗಣೇಶ್ ಅವರ ಲೈನ್‌ಅಪ್‌ ಮೇಲೆ ನಿಂತಿದೆ.

More from Filmibeat

English summary
Ganesh new movie Thamma Sukhagamana Bayasuva is tribute to 20 years journey said director.
Read more about: ganesh kannada movie title
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X