ಗಣೇಶ್‌ಗೆ 'ಗೋಲ್ಡನ್ ಸ್ಟಾರ್' ಬಿರುದು ಸಿಕ್ಕಿದ್ಯಾವಾಗ? ಕಪಿಲ್ ಶರ್ಮಾ ಶೋನಲ್ಲಿ ಗಣಿ ಹೇಳಿದ್ದೇನು?

ಗೋಲ್ಡನ್ ಸ್ಟಾರ್ ಗಣೇಶ್ ಇತ್ತೀಚೆಗೆ ಸಿನಿಮಾದ ಜೊತೆ ಜೊತೆಗೆ ಸಿನಿಮಾದ ಬೇರೆ ಬೇರೆ ವಿಭಾಗಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಸದ್ಯಕ್ಕೀಗ ಕ್ರಿಕೆಟ್ ಆಡುವುದರಲ್ಲಿ ಗಣೇಶ್ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಅದರ ಪ್ರಚಾರಕ್ಕಂತಲೇ ಗಣೇಶ್ ಭಾರತ ಜನಪ್ರಿಯ ಟಾಕ್ ಶೋ 'ದಿ ಕಪಿಲ್ ಶರ್ಮಾ' ಶೋನಲ್ಲಿ ಭಾಗಿಯಾಗಿದ್ದಾರೆ.

ನಿಂತು ಹೋಗಿದ್ದ ಸಿಸಿಎಲ್ ಪಂದ್ಯಾವಳಿ ಮತ್ತೆ ಆರಂಭ ಆಗುತ್ತಿದೆ. ಹೀಗಾಗಿ ಎಲ್ಲಾ ತಂಡಗಳು ಭರ್ಜರಿಯಾಗಿಯೇ ಸಿದ್ಧತೆಗಳನ್ನು ನಡೆಸಿವೆ. ಹಾಗೇ ಕರ್ನಾಟಕ ಬುಲ್ಡೋಜರ್ ತಂಡ ಕೂಡ ಸಖತ್ ಆಗಿಯೇ ಅಭ್ಯಾಸ ನಡೆಸಿದೆ. ಈ ಗ್ಯಾಪ್‌ನಲ್ಲಿಯೇ ಸಿಸಿಎಲ್ ತಂಡಗಳನ್ನು ಕಪಿಲ್ ಶರ್ಮಾ ಶೋಗೆ ಕರೆಸಲಾಗಿತ್ತು.

ಕಪಿಲ್ ಶರ್ಮಾ ಶೋನಲ್ಲಿ ತಂಡದ ಪ್ರಮುಖ ಆಟಗಾರ ಅಥವಾ ನಾಯಕ ಭಾಗವಹಿಸಿದ್ದರು. ಕರ್ನಾಟಕ ಬುಲ್ಡೋಜರ್ ತಂಡದಿಂದ ಗೋಲ್ಡನ್ ಗಣೇಶ್ ಭಾಗಿಯಾಗಿದ್ದರು. ಈ ವೇಳೆ ತಮಗೆ ಗೋಲ್ಡನ್ ಸ್ಟಾರ್ ಅನ್ನೋ ಟೈಟಲ್ ಯಾಕೆ ಬಂತು ಅನ್ನೋದನ್ನು ರಿವೀಲ್ ಮಾಡಿದ್ದಾರೆ.

ಗಣಿಗೆ 'ಗೋಲ್ಡನ್ ಸ್ಟಾರ್' ಟೈಟಲ್ ಸಿಕ್ಕಿದ್ದೇಗೆ?

ಗಣಿಗೆ 'ಗೋಲ್ಡನ್ ಸ್ಟಾರ್' ಟೈಟಲ್ ಸಿಕ್ಕಿದ್ದೇಗೆ?

ಕಪಿಲ್ ಶರ್ಮಾ ಶೋನಲ್ಲಿ ಗಣೇಶ್ ಕರ್ನಾಟಕ ಬುಲ್ಡೋಜರ್ಸ್ ತಂಡದಿಂದ ಭಾಗಿಯಾಗಿದ್ದರು. ಈ ವೇಳೆ ತಮಗೆ ಗೋಲ್ಡನ್ ಸ್ಟಾರ್ ಅನ್ನೋ ಟೈಟಲ್ ಯಾಕೆ ಬಂತು? ಯಾವಾಗ ಬಂತು ಅನ್ನೋದನ್ನು ರಿವೀಲ್ ಮಾಡಿದ್ದಾರೆ. ಇದೇ ವೇಳೆ ತಮ್ಮ ಆರಂಭದ ಜರ್ನಿಯನ್ನು ನೆನಪಿಸಿಕೊಂಡಿದ್ದಾರೆ. 2006ರಲ್ಲಿ 'ಮುಂಗಾರು ಮಳೆ' ಸಿನಿಮಾ ರಿಲೀಸ್ ಆದ ಬಳಿಕ ಗಣೇಶ್ ಬದುಕು ಹೇಗೆ ಬದಲಾಯ್ತು ಅನ್ನೋದನ್ನು ರಿವೀಲ್ ಮಾಡಿದ್ದಾರೆ.

ಗೋಲ್ಡನ್ ಸ್ಟಾರ್ ಟೈಟಲ್ ಸಿಕ್ಕಿದ್ದೇಗೆ?

ಗೋಲ್ಡನ್ ಸ್ಟಾರ್ ಟೈಟಲ್ ಸಿಕ್ಕಿದ್ದೇಗೆ?

2003ರಲ್ಲಿ ಉದಯ ಟಿವಿಯಲ್ಲಿ 'ಕಾಮಿಡಿ ಟೈಮ್' ಶೋ ಮೂಲಕ ಆರಂಭವಾದ ಜರ್ನಿಯಿಂದ 'ಗೋಲ್ಡನ್ ಸ್ಟಾರ್' ಬರೋವರೆಗೂ ತಮ್ಮ ಜರ್ನಿ ಹೇಗಿತ್ತು ಅನ್ನೋದನ್ನು ರಿವೀಲ್ ಮಾಡಿದ್ದಾರೆ. " ನಾನು 2003ರಲ್ಲಿ ಕರ್ನಾಟಕದಲ್ಲಿ ಕಾಮಿಡಿ ಟೈಮ್ ಅನ್ನೋ ಶೋ ಮಾಡುತ್ತಿದ್ದೆ. ಅದು ತುಂಬಾ ದೊಡ್ಡ ಹಿಟ್ ಆಗಿತ್ತು. ಆ ಬಳಿಕ ನಾನು ಸಿನಿಮಾ ನಟನಾದೆ. ಯಾವುದೇ ಸಿನಿಮಾ ಮಾಡಿದರೂ ದೊಡ್ಡ ಹಿಟ್ ಆಗುತ್ತಿತ್ತು. ಇದನ್ನು ನೋಡಿ ಕರ್ನಾಟಕದ ಜನರು ಗೋಲ್ಡನ್ ಸ್ಟಾರ್ ಅಂತ ಟೈಟಲ್ ಕೊಟ್ರು." ಎಂದು ಗಣೇಶ್ ಹೇಳಿದ್ದಾರೆ.

ಬ್ಲಾಕ್‌ ಬಸ್ಟರ್ ಸಿನಿಮಾ ಕೊಟ್ಟಿದ್ದ ಗಣೇಶ್

ಬ್ಲಾಕ್‌ ಬಸ್ಟರ್ ಸಿನಿಮಾ ಕೊಟ್ಟಿದ್ದ ಗಣೇಶ್

2006ರಲ್ಲಿ ಗಣೇಶ್ ಅಭಿನಯದ 'ಮುಂಗಾರು ಮಳೆ' ಸಿನಿಮಾ ರಿಲೀಸ್ ಆಗಿತ್ತು. ಆ ಸಿನಿಮಾ ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಿಸಿಬಿಟ್ಟಿತ್ತು. ಇಲ್ಲಿಂದ ಗಣೇಶ್ ಒಂದರ ಹಿಂದೊಂದು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದ್ರು. 'ಚೆಲುವಿನ ಚಿತ್ತಾರ','ಗಾಳಿಪಟ', 'ಮಳೆಯಲಿ ಜೊತೆಯಲಿ', 'ಕೃಷ್ಣ'ದಂತಹ ಸಿನಿಮಾ ನೀಡಿದ್ದಾರೆ. ಇದೇ ವೇಳೆ ಅಭಿಮಾನಿಗಳು ಪ್ರೀತಿಯಿಂದ 'ಗೋಲ್ಡನ್ ಸ್ಟಾರ್' ಅನ್ನೋ ಪಟ್ಟ ಕೊಟ್ಟು ಸಂಭ್ರಮಿಸಿದ್ದರು.

ಪರಭಾಷೆ ದಿಗ್ಗಜರೊಂದಿಗೆ ಗಣೇಶ್

ಪರಭಾಷೆ ದಿಗ್ಗಜರೊಂದಿಗೆ ಗಣೇಶ್

ಭಾರತದ ಜನಪ್ರಿಯ ಕಾಮಿಡಿ ಶೋ ಅಂದ್ರೆ ಅದು 'ಕಪಿಲ್ ಶರ್ಮಾ ಶೋ'. ಸಿಸಿಎಲ್ ಆರಂಭ ಆಗುತ್ತಿರುವ ಹಿನ್ನೆಲೆಯಲ್ಲಿ ಬಾಲಿವುಡ್ ನಟ ಸೊಹೇಲ್ ಖಾನ್, ಬೋಜ್ಪುರಿ ನಟ ಮನೋಜ್ ತಿವಾರಿ, ದಿನೇಶ್ ಲಾಲ್ ಯಾದವ್,ಜಿಶು ಸೇನ್ ಗುಪ್ತಾ, ಸೋನು ಸೂದ್,ಬಿನೋ ದಿಲ್ಲೋನ್, ಸುಧೀರ್ ಬಾಬು, ಜೀವ ಜೊತೆ ಗೋಲ್ಡನ್ ಸ್ಟಾರ್ ಗಣೇಶ್ ಅತಿಥಿಯಾಗಿ ಭಾಗವಹಿಸಿದ್ದರು.

More from Filmibeat

English summary
Ganesh Revealed How He Got Golden Star Title In The Kapil Sharma Show,Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X