Garadi Twitter Reaction: 'ಗರಡಿ' ಮಾಸ್.. ಮ್ಯಾಸೀವ್.. ಹೊಡಿರಲೆ ಹಲಗಿ.. ಹೊಡಿರಲೆ ಎಂದ ನೆಟ್ಟಿಗರು!
'ಗರಡಿ' ಸಿನಿಮಾ ಬಿಡುಗಡೆಗೂ ಮುನ್ನವೇ ಕುತೂಹಲ ಹುಟ್ಟಿಸಿದ್ದಕ್ಕೆ ಕಾರಣವಿದೆ. ಇದು ರೆಗ್ಯೂಲರ್ ಯೋಗರಾಜ್ ಭಟ್ಟರ ಸಿನಿಮಾ ಅಲ್ಲ. ಇದು ಪಕ್ಕಾ ಮಾಸ್ ಸಿನಿಮಾ. ಹೀಗಾಗಿ ಮಾಸ್ ಆಡಿಯನ್ಸ್ ಪ್ರತಿಕ್ರಿಯೆ ಈ ಸಿನಿಮಾಗೆ ಹೇಗಿರುತ್ತೆ ಅನ್ನೋದನ್ನು ತಿಳಿದುಕೊಳ್ಳುವ ಕುತೂಹಲವಿದೆ.
ಇನ್ನೊಂದು ಕಡೆ ಯಶಸ್ ಸೂರ್ಯ ಹಲವು ವರ್ಷಗಳ ಬಳಿಕ ಮತ್ತೆ ಸಿನಿಮಾಗೆ ಕಮ್‌ಬ್ಯಾಕ್ ಮಾಡಿದ್ದಾರೆ. ಅದರಲ್ಲಿ ದರ್ಶನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಿಸಿ ಪಾಟೀಲ್, ರವಿಶಂಕರ್ ಸೇರಿದಂತೆ ಹಲವು ಕಲಾವಿದರು ಸಿನಿಮಾದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಈಗಾಗಲೇ 'ಗರಡಿ' ಸಿನಿಮಾ ವಿಮರ್ಶೆ ಹೊರಬಿದ್ದಿದೆ. ಕೆಲವರಿಗೆ ಸಿನಿಮಾ ಇಷ್ಟ ಆಗಿದೆ. ದೇಸಿ ಕಥೆಗೆ ಜೈ ಎಂದಿದ್ದಾರೆ. ಮತ್ತೆ ಕೆಲವರಿಗೆ ಹೊಸದೇನೂ ಇಲ್ಲ ಎಂದೆನಿಸಿದೆ. ಇದೊಂದು ಕಡೆಯಾದರೆ, ಇನ್ನೊಂದು ಕಡೆ ಸಿನಿಮಾ ನೋಡಿ ನೆಟ್ಟಗರು ಟ್ವಿಟರ್‌ನಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅಲ್ಲಿ ರೆಸ್ಪಾನ್ಸ್ ಹೇಗಿದೆ ಅನ್ನೋದನ್ನು ತಿಳಿಯಲು ಮುಂದೆ ಓದಿ.
ದರ್ಶನ್ ಮೇಜರ್ ಹೈಲೈಟ್
"ಸಿನಿಮಾದ ಕಥೆ ಅತ್ಯದ್ಭುತವಾಗಿದೆ. ಕಲಾವಿದರ ಆಯ್ಕೆ ತುಂಬಾನೇ ಚೆನ್ನಾಗಿದೆ. ಕಥೆ- ನಿರ್ದೇಶನ ಚೆನ್ನಾಗಿದೆ. ದರ್ಶನ್ ಅತಿಥಿ ಪಾತ್ರ ಮೇಜರ್ ಹೈಲೈಟ್. ಹಾಡು, ಡೈಲಾಗ್, ಎಡಿಟಿಂಗ್, ಆರ್ಟ್ ವರ್ಕ್, ಫೈಟ್ಸ್ ಓಕೆ. ನೆಗೆಟಿವ್ ಏನಿಲ್ಲ. ಸ್ಕ್ರೀನ್ ಪ್ಲೇ 50/50. ಲವ್ ಸ್ಟೋರಿ ವಾಶ್ ಔಟ್ ಆಗಿದೆ. ಹಿನ್ನೆಲೆ ಸಂಗೀತ ಚೆನ್ನಾಗಿಲ್ಲ. ಕಮರ್ಷಿಯಲ್ ಸಿನಿಮಾ ನೋಡಬಹುದು. 3/5 ಸ್ಟಾರ್" ಎಂದು ನೆಟ್ಟಿಗರು ಸಿನಿಮಾ ಬಗ್ಗೆ ವಿಮರ್ಶೆ ಬರೆದು ಹಾಕಿದ್ದಾರೆ.
ಮಾಸ್.. ಮ್ಯಾಸೀವ್
"ಮಾಸ್.. ಮ್ಯಾಸೀವ್.. ಆಮೇಲೆ ಡಿ ಬಾಸ್ ಬರ್ತಾರೆ.. ಅವರ ನಡಿಗೆ.. ಮ್ಯಾನರಿಸಂ.. ಡೈಲಾಗ್ ಜೊತೆ ಡಿ ಬಾಸ್ ಆಕ್ಷನ್ ಸೀಕ್ವೆನ್ಸ್ ಅಂತೂ ತುಂಬಾನೇ ಸೊಗಸಾಗಿದೆ." ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ. ಇಡೀ ಸಿನಿಮಾಗಿಂತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂಟ್ರಿ ಹಾಗೂ ಮ್ಯಾನರಿಸಂಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ.
ಹೊಡಿರಲೆ ಹಲಗಿ.. ಹೊಡಿರಲೆ
ಯೋಗರಾಜ್ ಭಟ್ಟರ ಸಿನಿಮಾ ಅಂದ್ಮೇಲೆ ಡೈಲಾಗ್‌ಗೇನು ಕಮ್ಮಿಯಿರೋದಿಲ್ಲ. ಇನ್ನು ಮಾಸ್ ಸಿನಿಮಾ ಅಂದ್ಮೇಲೆ ಡೈಲಾಗ್ ಮೇಲೆ ವರ್ಕ್‌ಔಟ್ ಮಾಡಿರುತ್ತಾರೆ. ಜೊತೆ ಮನರಂಜನೆ ಏನೂ ಕಮ್ಮಿಯಿರೋದಿಲ್ಲ. ಇದನ್ನೆಲ್ಲ ನೋಡಿ ನೆಟ್ಟಿಗರೊಬ್ಬರು ಭಟ್ಟರ ಡೈಲಾಗ್ ಬಿಟ್ಟಿದ್ದಾರೆ. "ಹೊಡಿರಲೆ ಹಲಗಿ.. ಹೊಡಿರಲೆ ಹಲಗಿ.. ಡಿ ಬಾಸ್ ಎಂಟ್ರಿಗೆ ಹೊಡಿರಲೆ.. ಮುರಿತಲೋ ಹಲಗಿ.. ಇಂದಿನಿಂದ ಜನಭರಿತ ಪ್ರದರ್ಶನ" ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಬಾಸ್ ಎಂಟ್ರಿಗೆ ಶಿಳ್ಳೆ ಚಪ್ಪಾಳೆ
"ಬಾಸ್ ಎಂಟ್ರಿಯಾಗ್ತಿದ್ದಂತೆ, ಶಿಳ್ಳೆ ಚಪ್ಪಾಳೆ ಚಿತ್ರಮಂದಿರವನ್ನು ಆವರಿಸುತ್ತದೆ. ಅಬ್ಬರದ ಹೊಡಿ ಬಡಿ ಮೂಲಕವೇ ಮಾಸ್ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಯಶಸ್ ಸೂರ್ಯ ಒಂದೊಳ್ಳೆ ಪಾತ್ರದ ಮೂಲಕ ಕಂಬ್ಯಾಕ್ ಮಾಡಿದ್ದಾರೆ. ಅದ್ಭುತ ಪ್ರದರ್ಶನ ನೀಡಿದ್ದಾರೆ." ಎಂದು ಮತ್ತೊಬ್ಬ ನೆಟ್ಟಿಗರು ಟ್ವಿಟರ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಅದೆಂಥಾ ಆಕ್ಷನ್ ಸೀಕ್ವೆನ್
"ಡಿ ಬಾಸ್ ಮ್ಯಾಸೀವ್ ಎಂಟ್ರಿಗೆ ಇಡೀ ಥಿಯೇಟರ್ ಶಿಳ್ಳೆ ಹಾಕಿತ್ತು. ಮಾರ್ನಿಂಗ್ ಶೋ ದರ್ಶನ್ ಹೆಸರಿನಿಂದಲೇ ಉತ್ತಮ ಆರಂಭ ಪಡೆದುಕೊಂಡಿದೆ. ಉತ್ತರ ಕರ್ನಾಟಕ ಶೈಲಿಯ ಭಾಷೆಯಲ್ಲಿ ಅದೆಂಥಾ ಆಕ್ಷನ್ ಸೀಕ್ವೆನ್ ಅದ್ಭುತ" ಎಂದು ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.


Click it and Unblock the Notifications











