ಹೊಸಬರ 'ಗಿಲ್ಕಿ'ಗೆ ಗುರುಡ ಗಮನ ವೃಷಭ ವಾಹನ 'ಶಿವ'ನ ಬೆಂಬಲ

ಕನ್ನಡ ಚಿತ್ರರಂಗಕ್ಕೆ ಹೊಸ ಪ್ರತಿಭೆಗಳು ಬರುವುದ ಹೊಸದೇನಲ್ಲ. ಪ್ರತಿ ದಿನ ಯಾರಾದರೂ ಸಿನಿಮಾ ಮಾಡುವ ಕನಸನ್ನು ಹೊತ್ತು ಬರುತ್ತಾರೆ. ಆದರೆ, ಅವರು ಸ್ಯಾಂಡಲ್‌ವುಡ್‌ನಲ್ಲಿ ಗೆಲ್ಲುತ್ತಾರಾ? ಅನ್ನುವುದು ದೊಡ್ಡ ಪ್ರಶ್ನೆಯಾಗಿ ಉಳಿಯುತ್ತೆ. ಕೆಲವರಿಗೆ ಸಿನಿಮಾ ಗೆದ್ದು ಬಿಡುತ್ತೆ. ಕೆಲವರಿಗೆ ನಿರಾಶ ಆಗುವುದು ಗ್ಯಾರಂಟಿ. ಆದರೆ ಪ್ರಯತ್ನ ಮಾತ್ರ ನಿಲ್ಲಿಸುವ ಹಾಗಿಲ್ಲ. ಈಗೊಂದು ಹೊಸಬರ ತಂಡ 'ಗಿಲ್ಕಿ' ಅನ್ನುವ ಸಿನಿಮಾ ಮಾಡಿದೆ. ಹಾಡುಗಳಿಂದಲೇ ಗಮನ ಸೆಳೆಯುತ್ತಿದೆ.

ಕಂಟೆಂಟ್ ಸಿನಿಮಾ ಕೊಟ್ಟರೆ ಪ್ರೇಕ್ಷಕರು ಸಿನಿಮಾ ನೋಡುತ್ತಾರೆ ಅನ್ನುವುದಕ್ಕೆ ಗರುಡ ಗಮನ ವೃಷಭ ವಾಹನದಂತಹ ಸಿನಿಮಾ ಒಂದೊಳ್ಳೆ ಉದಾಹರಣೆ. ಇತ್ತೀಚೆಗೆ ತೆರೆಕಂಡಿರುವ ಈ ಸಿನಿಮಾ ನೋಡಿ ಜನರು ಮೆಚ್ಚುಗೆ ಸೂಚಿಸಿದ್ದಾರೆ. ಹೀಗಾಗಿ 'ಗಿಲ್ಕಿ' ತಂಡ ಶಿವನ ಅವತಾರವೆತ್ತಿದ ರಾಜ್‌ ಬಿ ಶೆಟ್ಟಿಯಿಂದ ಹಾಡೊಂದನ್ನು ಬಿಡುಗಡೆ ಮಾಡಿಸಿದೆ.

'ಗಿಲ್ಕಿ' ಟೈಟಲ್ ಸಾಂಗ್‌ಗೆ ಭೇಷ್ ಎಂದ 'ಶಿವ'

'ಗಿಲ್ಕಿ' ಸಿನಿಮಾದ ನಿರ್ದೇಶಕ YK ನಿಶ್ಕಲ್ಮಶ ಪ್ರೇಮಕಥೆಯನ್ನು ತೆರೆಮೇಲೆ ತರುತ್ತಿದ್ದಾರೆ. ಸಮಾಜದಿಂದ ದೂರ ಉಳಿದಿರುವ ಮೂವರು ವಿಶೇಷ ಚೇತನ ಜೀವಗಳು ತಮ್ಮದೇ ಆದ ಅದ್ಭುತ ಪ್ರಪಂಚ ಕಟ್ಟಿಕೊಳ್ಳುವ ಅದ್ಭುತ ಪರಿಕಲ್ಪನೆಯೇ ಈ 'ಗಿಲ್ಕಿ'. ಈ ಸಿನಿಮಾ ಪ್ರೇಕ್ಷಕರ ಮನಸ್ಸಿಗೆ ನಾಟುತ್ತದೆ ಅನ್ನುವ ಭರವಸೆಯಲ್ಲಿ ಇಡಿ ಚಿತ್ರತಂಡವಿದೆ. ಇದೊಂದು ಕಂಟೆಂಟ್ ಸಿನಿಮಾ ಆಗಿರುವುದರಿಂದ ಗೆದ್ದೇ ಗೆಲ್ಲುತ್ತೇವೆ ಅನ್ನುವ ನಂಬಿಕೆಯಲ್ಲಿ ಹೊಸಬರ ತಂಡವಿದೆ.

Garuda gamana vrushaba vahana director raj b shetty praised new team gilki

ಗಿಲ್ಕಿ ಚಿತ್ರತಂಡ ಕೆಲವು ದಿನಗಳ ಹಿಂದೆ ಆ ದೇವರೇ ಎನ್ನುವ ಹಾಡನ್ನು ಬಿಡುಗಡೆ ಮಾಡಿತ್ತು. ಆ ಹಾಡು ಸಿನಿಪ್ರಿಯರ ಹೃದಯವನ್ನು ಗೆದ್ದಿತ್ತು. ಇದೀಗ ಮತ್ತೊಂದು ಹಾಡನ್ನು ಬಿಡುಗಡೆ ಮಾಡಿದೆ. ಈ ಹಾಡನ್ನು 'ಗರುಡ ಗಮನ ವೃಷಭ ವಾಹನ' ಸಿನಿಮಾದ ನಟ ಹಾಗೂ ನಿರ್ದೇಶಕ ರಾಜ್ ಬಿ ಶೆಟ್ಟಿ ಬಿಡುಗಡೆ ಮಾಡಿದ್ದಾರೆ. ತೀರ ಸೇರೋ ಅನ್ನುವ ಗಿಲ್ಕಿ ಸಿನಿಮಾದ ಟೈಟಲ್ ಸಾಂಗ್ ಅನ್ನು ಬಿಡುಗಡೆ ಮಾಡಿ ಹಾಡಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Garuda gamana vrushaba vahana director raj b shetty praised new team gilki

ತೀರ ಸೇರೊ.. ಹಾಡಿಗೆ ವಾಸುಕಿ ವೈಭವ್ ಸಾಹಿತ್ಯ

ಹೊಸಬರ 'ಗಿಲ್ಕಿ' ಸಿನಿಮಾಗೆ ಸಂಗೀತ ನಿರ್ದೇಶಕ ಹಾಗೂ ಗಾಯಕ ವಾಸುಕಿ ವೈಭವ್ ಸಾಹಿತ್ಯ ರಚಿಸಿದ್ದಾರೆ. ಆದಿಲ್ ನದಾಫ್ ಈ ಹಾಡಿಗೆ ಅದ್ಭುತವಾಗಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಈಇಂಪಾದ ಹಾಡನ್ನು ಭರತ್ ನಾಯಕ್ ಹಾಡಿ ಜೀವ ತುಂಬಿದ್ದಾರೆ. ಕಂಟೆಂಟ್ ಬೇಸಡ್ , ಸೋಷಿಯಲ್ ಮೆಸೇಜ್ ಹೊಂದಿರುವ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಗೆಲ್ಲುವುದೇ ಇಲ್ಲ ಅನ್ನು ಮಾತಿತ್ತು. ಆದ್ರೀಗ ಅವುಗಳ ಮಹತ್ವ ಅರಿವಿಗೆ ಬರುತ್ತಿದೆ. ಕಂಟೆಂಟ್ ಸಿನಿಮಾಗಳನ್ನು ಇಷ್ಟ ಪಡುವವರಿಗೆ ಈ ಸಿನಿಮಾ ಹೇಳಿ ಮಾಡಿಸಿದ್ದು ಅನ್ನುತ್ತೆ ಚಿತ್ರತಂಡ. ಈ ಸಿನಿಮಾದಲ್ಲಿ ತಾರಕ್ ಪೊನ್ನಪ್ಪ, ಚೈತ್ರಾ ಆಚಾರ್ ಹಾಗೂ ಗೌತಮ್ ರಾಜ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

English summary
Garuda Gamana Vrushaba Vahana director Raj B Shetty praised new team Gilki. He released Gilki Movie new song.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X