ವೈವಾಹಿಕ ಜೀವನಕ್ಕೆ ಕಾಲಿಟ್ಟ 'ಗತವೈಭವ' ಹೀರೋ ದುಷ್ಯಂತ್; ಇಲ್ಲಿವೆ ಫೋಟೊಗಳು
ಇತ್ತೀಚೆಗಷ್ಟೇ ತೆರೆಕಂಡಿದ್ದ 'ಗತವೈಭವ' ಸಿನಿಮಾದ ಹೀರೋ ದುಷ್ಯಂತ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಿಂಪಲ್ ಸುನಿ ನಿರ್ದೇಶಿಸಿದ ಈ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಚೊಚ್ಚಲ ಚಿತ್ರದಲ್ಲಿಯೇ ದುಷ್ಯಂತ್ ಕನ್ನಡ ಚಿತ್ರರಂಗದ ಭರವಸೆಯ ನಟನಾಗುವ ಎಲ್ಲಾ ಭರವಸೆಯನ್ನು ಮೂಡಿಸಿದ್ದರು. ಮೊದಲ ಸಿನಿಮಾ ತೆರೆಕಂಡ ಬಳಿಕ ದುಶ್ಯಂತ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ದುಶ್ಯಂತ್ ತುಮಕೂರು ಜಿಲ್ಲೆಯ ಗುಬ್ಬಿ ಕ್ಷೇತ್ರದ ಶಾಸಕ ಎಸ್‌ಆರ್ ಶ್ರೀನಿವಾಸ್ ಅವರ ಪುತ್ರ. ತಂದೆ ರಾಜಕೀಯದಲ್ಲಿ ಇದ್ದರೂ ಅತ್ತ ಮುಖ ಮಾಡದೆ, ಸಿನಿಮಾದ ಕಡೆಗೆ ಒಲವು ಬೆಳೆಸಿಕೊಂಡಿದ್ದರು. ಸಿನಿಮಾರಂಗಕ್ಕೆ ಎಂಟ್ರಿ ಕೊಡುವುದಕ್ಕೂ ಮುನ್ನ ನಟನಾಗುವುದಕ್ಕೆ ಬೇಕಿದ್ದ ಎಲ್ಲಾ ತಯಾರಿಗಳನ್ನು ಮಾಡಿಕೊಂಡೇ ಬಂದಿದ್ದರು. ಹೀಗಾಗಿ ಕನ್ನಡ ಚಿತ್ರರಂಗದ ಭರವಸೆಯ ನಟ ಆಗಬಹುದೆಂಬ ನಿರೀಕ್ಷೆಯನ್ನು ಹುಟ್ಟಾಕಿದ್ದಾರೆ.

ಚೊಚ್ಚಲ ಸಿನಿಮಾ 'ಗತವೈಭವ' ತೆರೆಕಂಡ ಬಳಿಕ ರಚನಾ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರಚನಾ ಅವರೂ ಕೂಡ ಮಾಜಿ ಸಂಸದ ಮುದ್ದ ಹನುಮೇಗೌಡರ ಪುತ್ರಿ . ರಾಜಕೀಯ ಕ್ಷೇತ್ರದಲ್ಲಿ ವೈಯಕ್ತಿಕ ಬದುಕಿನ ನಂಟನ್ನು ಬೆಳೆಸಿದ್ದಾರೆ. ಕಳೆದ ಕೆಲವು ದಿನಗಳಿಂದ ಮದುವೆ ಸಮಾರಂಭದಲ್ಲಿ ದುಷ್ಯಂತ್ ಹಾಗೂ ರಚನಾ ಮಿಂದೆದ್ದಿದ್ದರು. ಇಂದು (ಫೆಬ್ರವರಿ 26) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ದುಷ್ಯಂತ್ ಹಾಗೂ ರಚನಾ ಮದುವೆ ಇಂದು (ಫೆಬ್ರವರಿ 26) ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನೆರವೇರಿದೆ. ಇಲ್ಲಿನ ಚಾಮರ ವಜ್ರದಲ್ಲಿ ಈ ಜೋಡಿ ಅದ್ಧೂರಿಯಾಗಿ ಸಪ್ತಪದಿ ತುಳಿದಿದ್ದಾರೆ. ಈ ವಿವಾಹ ಸಮಾರಂಭಕ್ಕೆ ರಾಜಕೀಯ ಮುಖಂಡರು ಹಾಗೂ ಸಿನಿಮಾ ಕ್ಷೇತ್ರದ ಗಣ್ಯರು ಭಾಗವಹಿಸಿದ್ದರು. ನವ ದಂಪತಿಗೆ ಎಲ್ಲಾ ಕ್ಷೇತ್ರದಿಂದ ಬಂದಿದ್ದ ಗಣ್ಯರು ಆಶೀರ್ವಾದ ಮಾಡಿ, ಶುಭ ಹಾರೈಸಿದ್ದಾರೆ. ಕನ್ನಡ ಚಿತ್ರರಂಗದಿಂದ ಡಾಲಿ ಧನಂಜಯ್, ಅಶ್ವಿನಿ ಪುನೀತ್ ರಾಜ್‌ಕುಮಾರ್ ಸೇರಿದಂತೆ ಗಣ್ಯರು ಆಗಮಿಸಿ ಶುಭ ಕೋರಿದ್ದಾರೆ.
ದುಷ್ಯಂತ್ ಹಾಗೂ ರಚನಾ ಮದುವೆ ಬಳಿಕ ಎರಡು ಮನೆಯ ಶಾಸ್ತ್ರಗಳಲ್ಲಿ ಭಾಗಿಯಾಗಲಿದ್ದಾರೆ. ಈ ಶಾಸ್ತ್ರಗಳು ಮುಗಿದ ಬಳಿಕ ಮಾರ್ಚ್ 1ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿ ಆರತಕ್ಷತೆ ನಡೆಯಲಿದೆ. ರಾಜಕೀಯ ಹಾಗೂ ಚಿತ್ರರಂಗದ ಗಣ್ಯರಿಗೆ ವಿಶೇಷ ಆಹ್ವಾನ ನೀಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಸಾಧ್ಯತೆಯಿದೆ. ಇದರೊಂದಿಗೆ ಬೀಗರ ಊಟವನ್ನು ಆಯೋಜಿಸಲಾಗಿದೆ.

ಇತ್ತೀಚೆಗೆ ದುಷ್ಯಂತ್ ಹಾಗೂ ರಚನಾ ಅವರ ನಿಶ್ವಿತಾರ್ಥ ಕೂಡ ಅದ್ಧೂರಿಯಾಗಿ ನಡೆದಿತ್ತು. ಅಲ್ಲದೆ ಕಳೆದ ನಾಲ್ಕೈದು ದಿನಗಳಿಂದ ದುಷ್ಯಂತ್ ಹಾಗೂ ರಚನಾ ಅವರ ಮದುವೆ ಸಂಭ್ರಮದ ಫೋಟೊ ಹಾಗೂ ವಿಡಿಯೋಗಳು ವೈರಲ್ ಆಗಿದ್ದವು. ಅರಿಶಿಣ ಶಾಸ್ತ್ರ, ಸಂಗೀತ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆದಿವೆ. ಇದರ ಫೋಟೊಗಳು ಕೂ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದವು.
ದುಷ್ಯಂತ್ ಹಾಗೂ ರಚನಾ ಮದುವೆ ಮೂಲಕ ರಾಜ್ಯದ ಎರಡು ಪ್ರಭಾವಿ ರಾಜಕೀಯ ಕುಟುಂಬಗಳು ಸಂಬಂಧವನ್ನು ಬೆಳೆಸಿವೆ. ಮುಂದಿನ ದಿನಗಳಲ್ಲಿ ದುಷ್ಯಂತ್ ರಾಜಕೀಯ ಜೀವನಕ್ಕೆ ವರವಾಗಬಹುದೆಂದು ರಾಜಕೀಯ ಪಂಡಿತರು ಲೆಕ್ಕ ಹಾಕಿದ್ದಾರೆ. ಇನ್ನು ಸಿಂಪಲ್ ಸುನಿ ನಿರ್ದೇಶನದ ʻಗತವೈಭವʼ ಸಿನಿಮಾ ದುಷ್ಯಂತ್‌ಗೆ ಸಾಕಷ್ಟು ಹೆಸರು ತಂದು ಕೊಟ್ಟಿದೆ. ರಾಜಕೀಯದಲ್ಲಿ ಹೆಸರು ಮಾಡುವುದಕ್ಕೆ ಸಿನಿಮಾ ಬಂದಿಲ್ಲ. ಸಿನಿಮಾದಲ್ಲಿಯೇ ಏನಾದರೂ ಸಾಧಿಸುವುದಕ್ಕೆ ಬಂದಿದ್ದೇನೆ ಎಂದು ದುಷ್ಯಂತ್ ಹೇಳಿದ್ದರು. ಹೀಗಾಗಿ ಇನ್ನೂ ಒಂದಿಷ್ಟು ಸಿನಿಮಾಗಳನ್ನು ದುಷ್ಯಂತ್ ಮಾಡಬಹುದೆಂಬ ನಿರೀಕ್ಷೆಯ ಅವರ ಬೆಂಬಲಿಗರಿಗಿದೆ. ಮದುವೆ ಸಂಭ್ರಮವೆಲ್ಲ ಮುಗಿಯುತ್ತಿದ್ದಂತೆ ಹೊಸ ಸಿನಿಮಾಗಳು ಘೋಷಣೆಯಾಗುವ ನಿರೀಕ್ಷೆಯಿದೆ.


Click it and Unblock the Notifications











