ಯುವ ಪ್ರತಿಭೆಗೆ ಆಕ್ಷನ್ ಕಟ್ ಹೇಳುತ್ತಿರೋ 'ಗೀತಾ', 'ಹೊಯ್ಸಳ' ನಿರ್ದೇಶಕ; 'ಆಲ್ಫಾ ಮೆನ್ ಲವ್ ವೈಲೆನ್ಸ್' ಮೇಕಿಂಗ್ ಹೇಗಿದೆ?
ಸ್ಯಾಂಡಲ್‌ವುಡ್ ಹೊಸಬರು ಎಂಟ್ರಿ ಕೊಡುವುದು ಹೊಸ ವಿಚಾರವೇನಲ್ಲ. ಪ್ರತಿ ವರ್ಷಕ್ಕೂ ಹಲವು ಮಂದಿ ಹೀರೋ ಆಗಬೇಕು ಎಂಬ ಕನಸು ಹೊತ್ತು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ. ಆದರೆ, ಇವರಲ್ಲಿ ಕೆಲವು ಮಂದಿ ಮಾತ್ರ ಚಿತ್ರರಂಗದಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡುತ್ತಾರೆ. ಭರವಸೆಯನ್ನು ಮೂಡಿಸುತ್ತಾರೆ. ಈಗ ಇಂತಹದ್ದೊಂದು ಭರವಸೆ ಮೂಡಿಸುವುದಕ್ಕೆ ಮತ್ತೊಂದು ಯುವ ಪ್ರತಿಭೆ ಕನ್ನಡ ಚಿತ್ರರಂಗಕ್ಕೆ ಲಗ್ಗೆ ಇಟ್ಟಿದೆ. ಅವರೇ ಹೇಮಂತ್ ಕುಮಾರ್.
ಇದೇ ವರ್ಷ ಶಿವರಾತ್ರಿಗೆ ಹೇಮಂತ್ ಕುಮಾರ್ ನಟಿಸುತ್ತಿರುವ 'ಆಲ್ಫಾ ಮೆನ್ ಲವ್ ವೈಲೆನ್ಸ್' ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿತ್ತು. ಆ ವೇಳೆ ಕನ್ನಡ ಚಿತ್ರರಂಗಕ್ಕೊಬ್ಬ ಭರವಸೆಯ ನಾಯಕ ಸಿಗಬಹುದೆಂಬ ನಿರೀಕ್ಷೆಯೂ ಮೂಡಿತ್ತು. ನಿರ್ದೇಶಕ ಸಂತೋಷ್ ಆನಂದ್‌ರಾಮ್ ಸಿನಿಮಾದಲ್ಲಿ ಕೆಲಸ ಮಾಡಿದ್ದ ವಿಜಯ್ ಈಗಾಗಲೇ ಎರಡು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಗಣೇಶ್ ನಟಿಸಿದ 'ಗೀತಾ', ಧನಂಜಯ್ ನಟಿಸಿದ 'ಹೊಯ್ಸಳ' ಈ ಎರಡು ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ್ದ ವಿಜಯ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ವಿಜಯ್ ನಿರ್ದೇಶಿಸುತ್ತಿರುವ 'ಆಲ್ಫಾ ಮೆನ್ ಲವ್ ವೈಲೆನ್ಸ್' ಸಿನಿಮಾ ಫಸ್ಟ್ ಲುಕ್ ಹಾಗೂ ಥೀಮ್ ಮ್ಯೂಸಿಕ್‌ನಿಂದ ಗಮನ ಸೆಳೆದಿತ್ತು. ಈಗ ಆಲ್ಫಾ ಸಿನಿಮಾ ತಂಡ ಮೇಕಿಂಗ್ ವಿಡಿಯೋವನ್ನು ರಿಲೀಸ್ ಮಾಡಿದೆ. ಇಲ್ಲಿವರೆಗೂ ನಾಯಕಿಯನ್ನು ಗೌಪ್ಯವಾಗಿಯೇ ಇಟ್ಟಿದ್ದ ತಂಡ ಪ್ರೇಕ್ಷಕರಿಗೆ ಅವರನ್ನೂ ಪರಿಚಯಿಸಿದೆ. ಮೇಕಿಂಗ್ ವಿಡಿಯೋ ನೋಡಿದರೆ, ಸ್ಯಾಂಡಲ್‌ವುಡ್‌ಗೆ ಒಂದೊಳ್ಳೆ ಸಿನಿಮಾ ಸಿಗಬಹುದೆಂಬ ಭರವಸೆ ಮೂಡುತ್ತಿದೆ.
ಹೇಮಂತ್ ಕುಮಾರ್ ನಾಯಕನಾಗಿ ನಟಿಸುತ್ತಿರುವ 'ಆಲ್ಫಾ; ಮೆನ್ ಲವ್ ವೈಲೆನ್ಸ್' ಸಿನಿಮಾ ವೇಗವಾಗಿ ಶೂಟಿಂಗ್ ನಡೆಯುತ್ತಿದೆ. ಹೇಮಂತ್‌ಗೆ ನಾಯಕಿಯಾಗಿ ಗೋಪಿಕಾ ಸುರೇಶ್ ನಟಿಸುತ್ತಿದ್ದಾರೆ. ಈ ಜೋಡಿಯ ಕೆಲವು ಫೋಟೊಗಳನ್ನು ಚಿತ್ರತಂಡ ರಿವೀಲ್ ಮಾಡಿದೆ. ಸದ್ಯ ಈ ಸಿನಿಮಾ ಶೇಕಡ 60 ರಷ್ಟು ಶೂಟಿಂಗ್ ಕಂಪ್ಲೀಟ್ ಮಾಡಿದೆ. 'ಆಲ್ಫಾ' ಸಿನಿಮಾದಲ್ಲಿ ಹೊಸ ಪ್ರತಿಭೆ ಹೇಮಂತ್ ಕುಮಾರ್ ಜೊತೆ ಕನ್ನಡ ಚಿತ್ರರಂಗದ ದೊಡ್ಡ ತಾರಾ ಬಳಗವೇ ನಟಿಸುತ್ತಿದೆ. 'ಆಲ್ಫಾ; ಮೆನ್ ಲವ್ ವೈಲೆನ್ಸ್' ಟೈಟಲ್ ಕೇಳಿದರೆ ಇದೊಂದು ಮಾಸ್ ಆಕ್ಷನ್ ಸಿನಿಮಾ ಅನ್ನೋದನ್ನು ಗೆಸ್ ಮಾಡಬಹುದು. ಆದರೆ, ಮಾಸ್ ಜೊತೆ ಅಪ್ಪ ಮತ್ತು ಮಗನ ಸ್ಟ್ರಾಂಗ್ ಎಮೋಷನ್ ಟ್ರ್ಯಾಕ್ ಕೂಡ ಅಷ್ಟೇ ಹೈಲೆಟ್.
'ಆಲ್ಫಾ ಮೆನ್ ಲವ್ ವೈಲೆನ್ಸ್' ಸಿನಿಮಾದಲ್ಲಿ ಹೇಮಂತ್ ಕುಮಾರ್ ಜೊತೆಯಲ್ಲಿ ಅಚ್ಚುತ್ ಕುಮಾರ್, ರಮೇಶ್ ಇಂದಿರಾ, ಬಾಲು ನಾಗೇಂದ್ರ, ಅವಿನಾಶ್ ಮಾನ್ಸಿ ಸುಧೀರ್ ಸೇರಿದಂತೆ ಸಾಕಷ್ಟು ಮಂದಿ ಕಲಾವಿದರು ನಟಿಸಿದ್ದಾರೆ. 'ಆಲ್ಫಾ' ತಂಡ ರಿಲೀಸ್ ಮಾಡಿರುವ ಈ ಮೇಕಿಂಗ್ ವಿಡಿಯೋದಲ್ಲಿ ಆಕ್ಷನ್ ಸೀನ್‌ಗಳನ್ನು ರಿವೀಲ್ ಮಾಡಲಾಗಿದೆ. ಹೀರೋ ಹೇಮಂತ್ ಕುಮಾರ್ ಸ್ಟಂಟ್‌ಗಳನ್ನು ಮಾಡುತ್ತಿರುವ ದೃಶ್ಯಗಳನ್ನು ಇಲ್ಲಿ ಸೆರೆ ಹಿಡಿಯಲಾಗಿದೆ. ಈ ಸ್ಟಂಟ್ಸ್ ಗಳನ್ನ ವಿನೋದ್ ಮಾಸ್ಟರ್ ನಿರ್ದೇಶನ ಮಾಡಿದ್ದಾರೆ.

'ಆಲ್ಫಾ ಮೆನ್ ಲವ್ ವೈಲೆನ್ಸ್' ಸಿನಿಮಾ ಟಾಕಿ ಪೋಷನ್ ಬಹತೇಕ ಮುಗಿದಿದೆ. ಈಗ ಆಕ್ಷನ್ ಸೀನ್‌ಗಳನ್ನು ಶೂಟ್ ಮಾಡಲಾಗುತ್ತಿದೆ. ಟಾಲಿವುಡ್‌ನ ಜನಪ್ರಿಯ ಆಕ್ಷನ್ ಡೈರೆಕ್ಟರ್ ವಿಜಯ್ ಮಾಸ್ಟರ್ ನಿರ್ದೇಶನ ಮಾಡಲಿದ್ದಾರೆ. ಇನ್ನು ಈ ಸಿನಿಮಾದಲ್ಲಿ ನಾಲ್ಕು ಹಾಡುಗಳಿವೆ. ಅವುಗಳನ್ನು ಆಕ್ಷನ್ ಸೀನ್‌ಗಳು ಮುಗಿದ ಬಳಿಕ ಶೂಟಿಂಗ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಇದೇ ಮೊದಲ ಬಾರಿಗೆ ಆನಂದ್ ಕುಮಾರ್ ನಿರ್ಮಾಪಕರಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ.
ಹೇಮಂತ್ ಕುಮಾರ್ ಮಾಸ್ ಹೀರೋ ಆಗುವುದಕ್ಕೆ ಬೇಕಿರುವ ಎಲ್ಲಾ ತರಬೇತಿಗಳನ್ನು ಪಡೆದು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ನಟ, ನಿರ್ದೇಶಕ ರಘು ಶಿವಮೊಗ್ಗ ಅವರ ಗರಡಿಯಲ್ಲಿ ಹೇಮಂತ್ ಕುಮಾರ್ ತರಬೇತಿಯನ್ನು ಪಡೆದಿದ್ದಾರೆ. ಹಾಗೇ ಫೈಟ್, ಡ್ಯಾನ್ಸ್‌ನಲ್ಲೂ ಪರಿಣಿತಿ ಹೊಂದಿದ್ದಾರೆ. ಇಷ್ಟೇ ಮಾಸ್ ಹೀರೋ ಆಗಲು ಬೇಕಿರುವ ಮಾರ್ಷಲ್ ಆರ್ಟ್ಸ್ ಅನ್ನೂ ಕಲಿತು ಬಂದಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಹೊಸ ಹೀರೋಗಳು ಬಾರದೆ ಹಲವು ವರ್ಷಗಳೇ ಆಗಿವೆ. ಈ ಸಿನಿಮಾ ಮೂಲಕ ಹೊಸ ಹೀರೋ ಸಿಗಬಹುದಾ? ನೋಡಬೇಕಿದೆ.


Click it and Unblock the Notifications











