ಪತಿಯ ಕೈ ಹಿಡಿದು ಗೀತಕ್ಕ ಭಾವುಕ;"ನನ್ನ ಜನರಿಗೆ ಮೋಸ ಮಾಡಲ್ಲ" ಎಂದಿದ್ದೇಕೆ ಶಿವಣ್ಣ?
ಸೆಂಚರಿ ಸ್ಟಾರ್ ಶಿವರಾಜ್‌ಕುಮಾರ್ ಸಿನಿಮಾ 'ಭೈರತಿ ರಣಗಲ್' ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಶಿವಣ್ಣನನ್ನು ಮತ್ತೊಮ್ಮೆ ಮಾಸ್ ಅವತಾರದಲ್ಲಿ ನೋಡುವುದಕ್ಕೆ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಇನ್ನೊಂದು ಕಡೆ ಶಿವಣ್ಣನ ಅನಾರೋಗ್ಯ ಬಗ್ಗೆನೂ ಆತಂಕಕ್ಕೆ ಒಳಗಾಗಿದ್ದಾರೆ. ಪ್ರತಿಯೊಂದು ಸಂದರ್ಶನಲ್ಲಿಯೂ ತಮ್ಮ ಆರೋಗ್ಯದ ಬಗ್ಗೆ ಬಹಿರಂಗವಾಗಿಯೇ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ.
'ಭೈರತಿ ರಣಗಲ್' ಸಿನಿಮಾ ರಿಲೀಸ್ ಆಗುತ್ತಿರುವ ಬೆನ್ನಲ್ಲೇ ಆ್ಯಂಕರ್ ಅನುಶ್ರೀ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ದಾರೆ. ಅದರ ಪ್ರೋಮೊ ಒಂದನ್ನು ಅನುಶ್ರೀ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿನ ಶಿವಣ್ಣ ಹಾಗೂ ಗೀತಾ ಶಿವರಾಜ್‌ಕುಮಾರ್ ಇಬ್ಬರೂ ಅನುಶ್ರೀ ಜೊತೆ ಮಾತಾಡುವಾಗ ಕೆಲವೊಮ್ಮೆ ಖುಷಿಯಾಗಿಯೂ, ಇನ್ನೊಮ್ಮೆ ಭಾವನಾತ್ಮಕವಾಗಿಯೂ ಕಾಣಿಸಿಕೊಂಡಿದ್ದಾರೆ.

ಶಿವಣ್ಣ ಹಾಗೂ ಗೀತಾ ಶಿವರಾಜ್‌ಕುಮಾರ್ ಇಬ್ಬರ ಸಂದರ್ಶನವನ್ನು ಮೈಸೂರಿನಲ್ಲಿರುವ ಶಕ್ತಿಧಾಮದ ಮಕ್ಕಳ ಜೊತೆ ಆ್ಯಂಕರ್ ಅನುಶ್ರೀ ಮಾಡಿದ್ದಾರೆ. ಮಕ್ಕಳೊಂದಿಗೆ ಶಿವಣ್ಣ ಅಣ್ಣನಾಗಿ ಅವರೊಂದಿಗಿನ ಬಾಂಧವ್ಯವನ್ನು ಹಂಚಿಕೊಂಡಿದ್ದಾರೆ. ಹಾಗೇ ಮಕ್ಕಳೊಂದಿಗೆ ಹಾಡಿ ಸಂಭ್ರಮಿಸಿದ್ದಾರೆ. ಇದೇ ವೇಳೆ ಗೀತಾ ಶಿವರಾಜ್‌ಕುಮಾರ್ ಭಾವುಕರಾಗಿದ್ದು ಫ್ಯಾನ್ಸ್ ಗೊಂದಲಕ್ಕೆ ಒಳಗಾಗಿದ್ದಾರೆ.
ಆ್ಯಂಕರ್ ಅನುಶ್ರೀ ಜೊತೆಗಿನ ಸಂದರ್ಶನ ಮಜವಾಗಿ ಇರುತ್ತೆ. ಕೆಲವೊಮ್ಮೆ ಭಾವುಕವಾಗಿರುತ್ತೆ. ಹೆಚ್ಚಾಗಿ ಕಾಮಿಡಿ, ಮಸ್ತಿಯಾಗಿಯೇ ಇರುತ್ತೆ. ಶಿವಣ್ಣ ಹಾಗೂ ಗೀತಾ ಶಿವರಾಜ್‌ಕುಮಾರ್ ಸಂದರ್ಶನ ಸ್ವಲ್ಪ ಎಮೋಷನಲ್ ಆಗಿದೆ. ಅನುಶ್ರೀ ಸಂದರ್ಶನದಲ್ಲಿ ಶಿವಣ್ಣ ಹಾಗೂ ಗೀತಾ ಗೀತಾ ಶಿವರಾಜ್‌ಕುಮಾರ್ ಆಡಿದ ಮಾತುಗಳ ಪ್ರೋಮೊದಲ್ಲಿನ ಹೈಲೈಟ್ ಇಲ್ಲಿದೆ.

ಪ್ರೋಮೊದ ಆರಂಭದಲ್ಲಿಯೇ "ಮೈಸೂರಿನಿಂದ ನಿಟ್ಟುಸಿರು ಇರುವವರೆಗೆ.." ಎಂದು ಆರಂಭ ಆಗುತ್ತೆ. ಹಾಗೇ ಶಿವರಾಜ್‌ಕುಮಾರ್ ಮೈಸೂರಿನಲ್ಲಿರುವ ಶಕ್ತಿಧಾಮದ ಬಗ್ಗೆನೂ ಮಾತಾಡಿದ್ದಾರೆ. "ಶಕ್ತಿಧಾಮಕ್ಕೆ ಶಕ್ತಿ ತುಂಬಿದ್ದು ಅಮ್ಮ" ಎಂದು ಶಿವಣ್ಣ ಈ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಇದೇ ವೇಳೆ ನಮ್ಮಿಬ್ಬರಲ್ಲಿ ನಿಮಗೆ ಯಾರು ಇಷ್ಟ ಎಂದು ಆ್ಯಂಕರ್ ಅನುಶ್ರೀಗೆ ಗೀತಾ ಶಿವರಾಜ್‌ಕುಮಾರ್ ಪ್ರಶ್ನೆ ಮಾಡಿದ್ದು ಕೂಡ ಈ ಪ್ರೋಮೊದ ಹೈಲೈಟ್.
ಹಾಗೇ ಅನುಶ್ರೀ ಗೀತಾ ಶಿವರಾಜ್‌ಕುಮಾರ್‌ಗೆ "ಅಣ್ಣ ಮಾಸ್ ಆಗಿರುವುದು ಇಷ್ಟನಾ? ರೊಮ್ಯಾಂಟಿಕ್ ಆಗಿರುವುದು ಇಷ್ಟನಾ? ಎಂದು ಪ್ರಶ್ನೆ ಹಾಕಿದ್ದರು. ಆಗ ಗೀತಾ ಶಿವರಾಜ್‌ಕುಮಾರ್ ಒಂದು ಸೆಕೆಂಡ್ ಕೂಡ ಯೋಚನೆ ಮಾಡದೆ ಮಾಸ್ ಎಂದು ಉತ್ತರ ಕೊಟ್ಟಿದ್ದಾರೆ. ಹಾಗೇ ಶಕ್ತಿಧಾಮದ ಮಕ್ಕಳು ಶಿವಣ್ಣನಿಗೆ ಶಾಲೆಯಲ್ಲಿ ಒದೆ ತಿಂದಿದ್ದೀರಾ ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ಶಿವಣ್ಣ "ಎಷ್ಟು ಬಾರಿ ಒದೆ ತಿಂದಿದ್ದೇನೋ ನನಗೆ ಗೊತ್ತಿಲ್ಲ. ಅವಾಗ ಕಾಲುಗಳಿಗೆ ಪ್ಯಾಡ್ ಹಾಕೊಂಡು ಹೋಗುತ್ತಿದೆ." ಎಂದು ಶಿವಣ್ಣ ನಗೆಗಡಲಲ್ಲಿ ತೇಲಿಸಿದ್ದಾರೆ.
ಇದೇ ವೇಳೆ ಶಿವಣ್ಣ ಯಾವುದೇ ಒಬ್ಬ ಒಂದು ಉದೇಶಕ್ಕಾಗಿ ಬದುಕಬೇಕು. ಇಲ್ಲ ಉದ್ದೇಶಕ್ಕೋಸ್ಕರ ಹೋರಾಟ ಮಾಡಬೇಕು. ನಿಮ್ಮ ಮನೆ ಉರಿಯೋದಕ್ಕೆ ಇನ್ನೊಂದು ಮನೆ ಆರಿಸೋದಾ? ಎಲ್ಲರಿಗೂ ಒಬ್ಬೊಬ್ಬ ತಾಯಿಯಾದರೆ, ನಮಗೆ ಮೂರು ನಾಲ್ಕು ತಾಯಿಯರು. ನಾನು ನನ್ನ ಜನರನ್ನು ಚೀಟ್ ಮಾಡುವುದಿಲ್ಲ." ಎಂದಾಗ ಶಿವಣ್ಣ ಹಾಗೂ ಗೀತಾ ಶಿವರಾಜ್‌ಕುಮಾರ್ ಭಾವುಕರಾಗಿದ್ದಾರೆ.


Click it and Unblock the Notifications











