"ಶಿವಣ್ಣ ಕ್ಯಾನ್ಸರ್ ಫ್ರೀ ಜರ್ನಿ ಡಾಕ್ಯೂಮೆಂಟರಿ ಆಗುತ್ತೆ": ಗೀತಾ ಶಿವರಾಜ್‌ಕುಮಾರ್
ಸ್ಯಾಂಡಲ್‌ವುಡ್ ಸೂಪರ್‌ಸ್ಟಾರ್ ಶಿವರಾಜ್‌ಕುಮಾರ್ ಆರೋಗ್ಯ ಸಮಸ್ಯೆ ಎದುರಾದಾಗ ಅವರ ಅಭಿಮಾನಿಗಳು, ಕುಟುಂಬದವರು ಆತಂಕಕ್ಕೆ ಒಳಗಾಗಿದ್ದರು. ಆದ್ರೀಗ ಶಿವಣ್ಣ ಯುಎಸ್‌ಎನಲ್ಲಿ ಚಿಕಿತ್ಸೆ ಪಡೆದು ಹಿಂತಿರುಗಿದ್ದಾರೆ. ಅಮೆರಿಕದಲ್ಲಿ ಶಸ್ತ್ರ ಚಿಕಿತ್ಸೆ ಪಡೆದ ಬಳಿಕ ಸುಮಾರು ಒಂದು ತಿಂಗಳ ಕಾಲ ವಿಶ್ರಾಂತಿ ಪಡೆದು ಇಂದು (ಜನವರಿ 26) ಹಿಂತಿರುಗಿದ್ದಾರೆ.
ಕ್ಯಾನ್ಸರ್ ಪತ್ತೆಯಾದ ಬಳಿಕ ಶಿವಣ್ಣ ಕಳೆದ ಕೆಲವು ತಿಂಗಳಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದರು. ಅವರ ಅಭಿಮಾನಿಗಳು ಕೂಡ ಶಿವಣ್ಣ ಸಂಪೂರ್ಣವಾಗಿ ಗುಣಮುಖರಾಗಿ ಬರಬೇಕು ಅಂತ ಬಯಸಿದ್ದರು. ಅದರಂತೆಯೇ ಶಿವಣ್ಣನ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ. ಈ ಸಂಪೂರ್ಣ ಕ್ಯಾನ್ಸರ್ ಫ್ರೀಯಾಗಿ ತಾಯ್ನಾಡಿಗೆ ಹಿಂತಿರುಗಿದ್ದಾರೆ.

ಶಿವರಾಜ್‌ಕುಮಾರ್ ಬೆಂಗಳೂರಿಗೆ ಹಿಂತಿರುಗುತ್ತಿದ್ದಂತೆ ಮಾಧ್ಯಮಗಳೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಚಿಕಿತ್ಸೆ ಹೇಗೆ ನಡೀತು? ಚಿಕಿತ್ಸೆ ಬಳಿಕ ಹೇಗೆ ರಿಕವರಿ ಆದರು? ಗೀತಾ ಶಿವರಾಜ್‌ಕುಮಾರ್ ಹೇಗೆ ಬೆಂಬಲವಾಗಿ ನಿಂತಿದ್ದರು? ಅನ್ನೋದನ್ನು ಹೇಳಿಕೊಂಡಿದ್ದಾರೆ. ಇದೇ ವೇಳೆ ಶಿವರಾಜ್‌ಕುಮಾರ್ ಅವರ ಕ್ಯಾನ್ಸರ್ ಫ್ರೀ ಜರ್ನಿಯನ್ನು ಗೀತಾ ಶಿವರಾಜ್‌ಕುಮಾರ್ ಡಾಕ್ಯೂವೆಂಟರಿ ಮಾಡುವುದಕ್ಕೆ ನಿರ್ಧರಿಸಿದ್ದಾರೆ. ಹಾಗಿದ್ದರೆ, ಶಿವಣ್ಣ ಹಾಗೂ ಗೀತಾ ಶಿವರಾಜ್‌ಕುಮಾರ್ ಏನು ಹೇಳಿದ್ದಾರೆ? ಅನ್ನೋದನ್ನು ನೋಡೋಣ..
ಅಮೆರಿಕದಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾದ ಬಳಿಕ ಶಿವಣ್ಣ ಎರಡೇ ದಿನಕ್ಕೆ ಎದ್ದು ಓಡಾಡುವುದಕ್ಕೆ ಶುರು ಮಾಡಿದ್ದರು. ಅಲ್ಲಿಂದ ಅವರ ದಿನಚರಿ ಹೇಗಿತ್ತು ಅನ್ನೋದನ್ನು ಮಾಧ್ಯಮಗಳ ಮುಂದೆ ರಿವೀಲ್ ಮಾಡಿದ್ದಾರೆ. "ಎರಡನೇ ದಿನಕ್ಕೆ ಸಪೋರ್ಟ್ ಹಿಡಿದುಕೊಂಡು ಎದ್ದು ಓಡಾಡುವುದಕ್ಕೆ ಶುರು ಮಾಡಿದೆ. ಯಾಕಂದ್ರೆ ಆರಂಭದಲ್ಲಿಯೇ ಹೆಚ್ಚು ಪೋರ್ಸ್ ಮಾಡುವುದಕ್ಕೆ ಆಗಲಿಲ್ಲ. ಮೂರನೇ ದಿನದಿಂದ ಏನೂ ಸಪೋರ್ಟ್ ಇಲ್ಲದೆ ವಾಕಿಂಗ್ ಮಾಡುವುದಕ್ಕೆ ಶುರು ಮಾಡಿದೆ. ಆರಂಭದಲ್ಲಿ ಆಹಾರದ ವಿಚಾರದಲ್ಲಿ ಟೆಸ್ಟ್ ಸಿಕ್ಕಿರಲಿಲ್ಲ. ನಾಲ್ಕೈದು ದಿನ ಲಿಕ್ವಿಡ್‌ನಲ್ಲಿ ಇದ್ದೆ ಅಷ್ಟೇ. ಆಮೇಲೆ ದಿನಗಳಲ್ಲಿ ಅನ್ನ ರಸಂ ತಿನ್ನುವುದಕ್ಕೆ ಶುರು ಮಾಡಿದ್ದೆ." ಎಂದು ಶಿವಣ್ಣ ಮಾಹಿತಿ ಹಂಚಿಕೊಂಡಿದ್ದಾರೆ.

ಹಾಗೇ ಅಮೆರಿಕದಲ್ಲೂ ಶಿವರಾಜ್‌ಕುಮಾರ್ ವಾಕಿಂಗ್ ಅನ್ನು ನಿಲ್ಲಿಸಿರಲಿಲ್ಲ. ಅಲ್ಲೂ ಪ್ರತಿದಿನ ಲಿಮಿಟೆಡ್ ವಾಕಿಂಗ್ ಮಾಡುತ್ತಿದ್ದರು. "ದಿನ ಒಂದು ರೌಂಡ್ ವಾಕ್ ಮಾಡುತ್ತಿದ್ದೆ. ಆಮೇಲೆ ಅಲ್ಲೇ ದಾರಿಯಲ್ಲಿ ಒಂದು ಸ್ಟಾರ್ ಬಕ್ಸ್ ಇತ್ತು. ಅಲ್ಲಿ ಹೋಗಿ ಒಂದು ಲೋಟ ಕಾಫಿ ಕುಡಿಯುತ್ತಿದ್ದೆ. ಆನಂತರ ವಾಪಾಸ್ ಬರುತ್ತಿದ್ದೆ. ಬರುವಷ್ಟರಲ್ಲಿ ಗೀತಾ ಅವರು ಕಿಚನ್‌ನಲ್ಲಿ ಅಡುಗೆ ಶುರು ಮಾಡಿರುತ್ತಿದ್ದರು. ಆ ಘಮ ಸಂಜೆವರೆಗೂ ಹಾಗೆ ಇರುತ್ತಿತ್ತು" ಎಂದಿದ್ದಾರೆ.
ಇದೇ ವೇಳೆ ಶಿವಣ್ಣ ಎಲ್ಲರಿಗೂ ಸ್ಪೂರ್ತಿಯಾಗಬೇಕು ಅಂತ ವೈದ್ಯರು ಸಲಹೆ ನೀಡಿದ್ದರು. ಈ ಕಾರಣಕ್ಕೆ ಗೀತಾ ಶಿವರಾಜ್‌ಕುಮಾರ್ ಡಾಕ್ಯೂಮೆಂಟರಿ ಮಾಡುವುದಕ್ಕೆ ನಿರ್ಧರಿಸಿದ್ದಾರೆ. ಅವರೇ ಶಿವಣ್ಣ ಹಾಗೂ ವೈದ್ಯರ ಸಂದರ್ಶನವನ್ನು ಮಾಡಿಟ್ಟುಕೊಂಡಿದ್ದಾರೆ. "ವೈದ್ಯರು ಇವರ ಧೈರ್ಯವನ್ನು ನೋಡಿ ಖುಷಿ ಪಟ್ಟಿದ್ದರು. ಎಲ್ಲರಿಗೂ ಶಿವಣ್ಣ ಅವರ ಮಾದರಿ ಆಗಬೇಕು ಅಂತ ವೈದ್ಯರು ಹೇಳಿದ್ದರು. ಅದಕ್ಕೆ ಆ ಎಲ್ಲಾ ಕ್ಷಣಗಳನ್ನು ನಾನೇ ಶೂಟಿಂಗ್ ಮಾಡಿದ್ದೇನೆ. ಅದನ್ನು ಡಾಕ್ಯೂಮೆಂಟರಿ ಮಾಡಬೇಕು ಅಂತ ಇದ್ದೀನಿ. ನಿಮ್ಮ ತರ ಇಂಟರ್‌ವ್ಯೂ ಮಾಡಿದ್ದೀನಿ, ಇವರಿಗೆ ಚಿಕಿತ್ಸೆ ಕೊಟ್ಟ ವೈದ್ಯರನ್ನು ಮಾತಾಡಿಸಿದ್ದೇನೆ. ಅದನ್ನು ಯಾರಿಗೆ ಕೊಡಬೇಕು? ಹೇಗೆ ಬರುತ್ತೆ ಅಂತ ನೋಡಬೇಕು" ಎಂದು ಗೀತಾ ಶಿವರಾಜ್‌ಕುಮಾರ್ ಹೇಳಿದ್ದಾರೆ.
ಇನ್ನು ಶಿವಣ್ಣ ಕೆಲವು ದಿನಗಳು ವಿಶ್ರಾಂತಿ ಪಡೆದು ಮತ್ತೆ ಶೂಟಿಂಗ್ ಆರಂಭ ಮಾಡಲಿದ್ದಾರೆ. ಈಗಾಗಲೇ 131ನೇ ಸಿನಿಮಾದ ಶೂಟಿಂಗ್‌ಗೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ ರಾಮ್ ಚರಣ್ ಅಭಿನಯದ ಸಿನಿಮಾದಲ್ಲಿ ಒಂದು ಹಂತದ ಶೂಟಿಂಗ್ ಮುಗಿಸಿಕೊಡಲಿದ್ದಾರೆ. ಆ ಬಳಿಕ ಹೇಮಂತ್ ರಾವ್ ನಿರ್ದೇಶಿಸುತ್ತಿರುವ 'ಭೈರವನ ಕೊನೆ ಕಥೆ' ಸಿನಿಮಾದಲ್ಲಿ ಭಾಗಿಯಾಗಲಿದ್ದಾರೆ. ಈ ಸಿನಿಮಾದ ಜೊತೆ ಜೊತೆಗೆ ಅವರದ್ದೇ ಹೋಮ್ ಪ್ರೊಡಕ್ಷನ್‌ನಲ್ಲಿ 'ಎ ಫಾರ್ ಆನಂದ್' ಶುರುವಾಗಲಿದೆ.


Click it and Unblock the Notifications











