Don't Miss!
- Automobiles
ಭಾರತದಲ್ಲಿ ಗ್ಲಾಂಝಾ ಪ್ರೀಮಿಯಂ ಹ್ಯಾಚ್ಬ್ಯಾಕ್ನ ಬೆಲೆ ಹೆಚ್ಚಿಸಿದ ಟೊಯೊಟಾ
- Sports
Border-Gavaskar Trophy: ಭಾರತ vs ಆಸ್ಟ್ರೇಲಿಯಾ ಅತಿ ಹೆಚ್ಚು ರನ್, ಹೆಚ್ಚು ವಿಕೆಟ್ ಗಳಿಸಿದ ಆಟಗಾರರ ಪಟ್ಟಿ
- News
ವಂದೇ ಭಾರತ್ ರೈಲಿಗಿಂತ 'ವಂದೇ ಮೆಟ್ರೋ' ಹೇಗೆ ಭಿನ್ನ? ಇಲ್ಲಿವೆ ಪ್ರಮುಖ ವೈಶಿಷ್ಟ್ಯ-ವಿಶೇಷತೆಗಳು
- Finance
Real Estate Deal: ದೇಶದ ಅತೀ ದೊಡ್ಡ ರಿಯಲ್ ಎಸ್ಟೇಟ್ ಡೀಲ್ಗೆ ಹೂಡಿಕೆ ಮಾಡಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Technology
ಏರ್ಟೆಲ್ ಗ್ರಾಹಕರೇ, ಅವಸರವಾಗಿ ರೀಚಾರ್ಜ್ ಮಾಡಬೇಡಿ, ಈ ಪ್ಲ್ಯಾನ್ ಗಮನಿಸಿ!
- Lifestyle
ಕ್ಯಾನ್ಸರ್ ಚಿಕಿತ್ಸೆ ಬಳಿಕ ಮಗು ಪಡೆಯಲು ಸುರಕ್ಷಿತ ವಿಧಾನ ಇದೇ ನೋಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಜನಾರ್ಧನ್ ರೆಡ್ಡಿ ಪುತ್ರ ಕಿರೀಟಿ ಸಿನಿಮಾದಲ್ಲಿ ಜೆನಿಲಿಯಾ ಪಾತ್ರವೇನು?
ದಕ್ಷಿಣ ಭಾರತದಲ್ಲಿ ಜೆನಿಲಿಯಾ ಹೆಸರು ಯಾರಿಗೆ ಗೊತ್ತಿಲ್ಲ ಹೇಳಿ? ಒಂದು ಕಾಲದಲ್ಲಿ ಹುಡುಗರ ಕ್ರಶ್ ಆಗಿದ್ದ ಈ ನಟಿ ವಿವಾಹದ ಬಳಿಕ ಸಿನಿಮಾದಿಂದ ದೂರಾನೇ ಉಳಿದಿದ್ದರು. ಹಲವು ವರ್ಷಗಳ ಕಾಲ ಟಾಲಿವುಡ್‌ನಲ್ಲಿ ಸಕ್ಸಸ್‌ಫುಲ್ ನಟಿಯಾಗಿ ಮೆರೆದಿದ್ದ ಜೆನಿಲಿಯಾ ಮತ್ತೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ವಿಶೇಷ ಅಂದರೆ ಕನ್ನಡ ಹಾಗೂ ತೆಲುಗು ಎರಡೂ ಭಾಷೆಯಲ್ಲೂ 'ಬೊಮ್ಮರಿಲ್ಲು' ನಟಿ ಕಾಣಿಸಿಕೊಳ್ಳುತ್ತಿರುವುದು ಫ್ಯಾನ್ಸ್‌ಗಂತೂ ಖುಷಿ ಕೊಟ್ಟಿದೆ.
ಮಾಜಿ ಸಚಿವ ಗಾಲಿ ಜನಾರ್ಧನ್ ರೆಡ್ಡಿ ಪುತ್ರ ಕಿರೀಟಿ ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದ್ದಾರೆ. ಈಗಾಗಲೇ ಅದ್ಧೂರಿಯಾಗಿ ಸಿನಿಮಾವನ್ನು ಲಾಂಚ್ ಮಾಡಲಾಗಿದೆ. ಇದೇ ವೇದಿಕೆ ಮೇಲೆ ಜೆನಿಲಿಯಾ ಡಿಸೋಜಾ ಗ್ರ್ಯಾಂಡ್ ಎಂಟ್ರಿ ಕೊಟ್ಟಾಗಿತ್ತು.
ಅಪ್ಪು
ಬಗ್ಗೆ
ಭಾವನಾತ್ಮಕವಾಗಿ
ಬರೆದುಕೊಂಡ
ಜನಾರ್ದನ
ರೆಡ್ಡಿ
ಪುತ್ರ
ಕಿರೀಟಿ!
ಜೆನಿಲಿಯಾ ಡಿಸೋಜಾ ಸಿನಿಮಾಗೆ ಕಮ್‌ಬ್ಯಾಕ್ ಮಾಡಿದ್ದೇನೋ ಆಗಿದೆ. ಆದರೆ, ಈ ಸಿನಿಮಾ ಜೆನಿಲಿಯಾ ಪಾತ್ರವೇನು? ಅನ್ನುವುದೇ ದೊಡ್ಡ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿತ್ತು. ಕೊನೆಗೂ ಕಿರೀಟಿ ಸಿನಿಮಾದಲ್ಲಿ ಜೆನಿಲಿಯಾ ಪಾತ್ರವೇನು? ಅನ್ನೋದು ರಿವೀಲ್ ಆಗಿದೆ.
ಕಿರೀಟಿ
ರೆಡ್ಡಿಗೆ
ಸಿಕ್ಕಳು
ನಾಯಕಿ,
ಅವಳೇ
ಕಿಸ್
ಬೆಡಗಿ
ಶ್ರೀಲೀಲಾ!

ಜೆನಿಲಿಯಾ ಸಾಫ್ಟ್‌ವೇರ್ ಕಂಪನಿ CEO
ಕಿರೀಟಿ ಅಭಿನಯದ ಮೊದಲ ಸಿನಿಮಾಗೆ ಇನ್ನೂ ಹೆಸರಿಟ್ಟಿಲ್ಲ. ಆದರೆ, ಸಿನಿಮಾ ಚಿತ್ರೀಕರಣ ಈಗಾಗಲೇ ಶುರುವಾಗಿದ್ದು, ಜೆನಿಲಿಯಾ ಡಿಸೋಜಾ ಪಾತ್ರದ ಬಗ್ಗೆ ಮಾಧ್ಯಮಗಳಿಗೆ ಸುಳಿವು ಸಿಕ್ಕಿದೆ. ಈಗಾಗಲೇ ವರದಿ ಆಗಿರುವ ಪ್ರಕಾರ, ಜೆನಿಲಿಯಾ ಡಿಸೋಜಾ ಸಾಫ್ಟ್‌ವೇರ್ ಕಂಪನಿಯೊಂದರ ಸಿಇಓ ಆಗಿ ಕಾಣಿಸಿಕೊಳ್ಳಿದ್ದಾರಂತೆ. ಈ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಚಿತ್ರತಂಡವೇ ಈ ಸುದ್ದಿಯನ್ನು ಅಧಿಕೃತವಾಗಿ ಘೋಷಣೆ ಮಾಡಲಿದೆ.

2012ರಲ್ಲಿ ನಟಿಸಿದ್ದೇ ಕೊನೆ
ಜೆನಿಲಿಯಾ 2012ರಲ್ಲಿ 'ನಾ ಇಷ್ಟಂ' ಅನ್ನುವ ತೆಲುಗು ಸಿನಿಮಾದಲ್ಲಿ ನಟಿಸಿದ್ದರು. ರಾಣಾ ದಗ್ಗುಬಾಟಿ ಹಾಗೂ ಜೆನಿಲಿಯಾ ಡಿಸೋಜಾ ಜೋಡಿಯಾಗಿದ್ದ ಈ ಸಿನಿಮಾ ತಮಿಳಿಗೂ ಡಬ್ ಆಗಿತ್ತು. ಇಲ್ಲಿಂದ ಜೆನಿಲಿಯಾ ಯಾವುದೇ ತೆಲುಗು ಸಿನಿಮಾದಲ್ಲಿ ನಟಿಸಲಿಲ್ಲ. ಬರೋಬ್ಬರಿ 10 ವರ್ಷಗಳ ಬಳಿಕ ಜೆನಿಲಿಯಾ ದಕ್ಷಿಣ ಭಾರತದ ಕಡೆ ಮುಖ ಮಾಡಿದ್ದು, ಮತ್ತೆ ಚಾರ್ಮಿಂಗ್ ಫೇಸ್ ನೋಡುವುದಕ್ಕೆ ಕಾದು ಕೂತಿದ್ದಾರೆ.

ರೊಮ್ಯಾಂಟಿಕ್ ಆಕ್ಷನ್ ಸಿನಿಮಾದಲ್ಲಿ ನಟನೆ
ಜನಾರ್ಧನ ರೆಡ್ಡಿ ಪುತ್ರನ ಕಿರೀಟಿ ಎಂಟ್ರಿಗೆ ದಿಗ್ಗಜರೇ ಅಖಾಡಕ್ಕಿಳಿದಿದ್ದಾರೆ. ವಾರಾಹಿ ಚಲನಚಿತ್ರಂ ಬ್ಯಾನರ್‌ನಡಿ ಸಾಯಿ ಕೊರ್ರಪಟ್ಟಿ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ದೇವಿಶ್ರೀ ಪ್ರಸಾದ್ ಟ್ಯೂನ್ ಹಾಕಿದ್ದಾರೆ. ಬಾಹುಬಲಿ ಖ್ಯಾತಿಯ ಸೇಂಥಿಲ್ ಕುಮಾರ್ ಕ್ಯಾಮಾರಾಮ್ಯಾನ್ ಆಗಿದ್ದಾರೆ. ಇದೊಂದು ರೊಮ್ಯಾಂಟಿಕ್ ಆಕ್ಷನ್ ಡ್ರಾಮ ಆಗಿರುವುದರಿಂದ ಕಿರೀಟಿ ಸಿನಿಮಾ ಮೇಲೆ ಎರಡೂ ಚಿತ್ರರಂಗ ಕಣ್ಣಿಟ್ಟಿದೆ.

ಪುನೀತ್ ರಾಜ್‌ಕುಮಾರ್ ಪ್ರೇರಣೆ
ಕಿರೀಟಿ ರೆಡ್ಡಿಗೆ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಪ್ರೇರಣೆ. ಅಪ್ಪು ಡ್ಯಾನ್ಸ್ ಹಾಗೂ ಫೈಟ್ ನೋಡಿ ಸಿನಿಮಾ ಮಾಡಬೇಕು ಅನ್ನುವ ನಿರ್ಧಾರ ಮಾಡಿದ್ದರು. ಈ ವಿಷಯವನ್ನು ಲಾಂಚ್ ದಿನವೇ ಕಿರೀಟಿ ಹೇಳಿಕೊಂಡಿದ್ದಾರೆ. ಇನ್ನು ಕಿರೀಟಿ, ಶ್ರೀಲೀಲಾ ಹಾಗೂ ಜೆನಿಲಿಯಾ ಡಿಸೋಜಾ ಈ ಮೂವರನ್ನೊಳಗೊಂಡ ಸಿನಿಮಾ ಹೇಗೆ ಮೂಡಿ ಬರುತ್ತೆ ಅನ್ನುವ ಕುತೂಹಲವಂತೂ ಇದ್ದೇ ಇದೆ.