Exclusive: 'ಘೋಸ್ಟ್' ಸಿನಿಮಾದಲ್ಲಿ ಅಣ್ಣಾವ್ರ ಸ್ಪೆಷಲ್ ಎಂಟ್ರಿ? ವಿಡಿಯೋ ಬಿಟ್ಟು ನಿರ್ದೇಶಕರು ಹೇಳಿದ್ದೇನು?

ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಟಿಸುತ್ತಿರುವ ಹೊಸ ಸಿನಿಮಾ 'ಘೋಸ್ಟ್'. ಶ್ರೀನಿ ನಿರ್ದೇಶಿಸುತ್ತಿರುವ ಈ ಸಿನಿಮಾ ಆರಂಭ ಆದಲ್ಲಿಂದ ಗಮನ ಸೆಳೆಯುತ್ತಲೇ ಇದೆ. ವಿಶಿಷ್ಟ ಪೋಸ್ಟರ್ ಮೂಲಕ ಸಿನಿಪ್ರಿಯರ ಕುತೂಹಲವನ್ನು ದುಪ್ಪಟ್ಟು ಮಾಡುತ್ತಲೇ ಇದ್ದಾರೆ. ಈಗ ಅಣ್ಣಾವ್ರ ಹುಟ್ಟುಹಬ್ಬಕ್ಕೆ ದೊಡ್ಮನೆ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟಿದ್ದಾರೆ.

ಶಿವರಾಜ್‌ಕುಮಾರ್ ಹಾಗೂ ಶ್ರೀ ಕಾಂಬಿನೇಷನ್‌ನಲ್ಲಿ ರೆಡಿಯಾಗುತ್ತಿರುವ ಮೊದಲ ಸಿನಿಮಾವಿದು. ಶಿವಣ್ಣ ಜೊತೆ ಬಾಲಿವುಡ್ ಅನುಪಮ್ ಖೇರ್, ಮಲಯಾಳಂ ಸ್ಟಾರ್ ನಟ ಜಯರಾಂ ಸೇರಿದಂತೆ ಹಲವು ಮಂದಿ ದಿಗ್ಗಜರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

Ghost Movie Director Srini Fixed Dr.Rajkumar face to Shivarajkumar Video Viral

ಇಂದು (ಏಪ್ರಿಲ್ 24) ಕರ್ನಾಟಕ ರತ್ನ ಡಾ.ರಾಜ್‌ಕುಮಾರ್ ಹುಟ್ಟುಹಬ್ಬ. ಈ ವಿಶೇಷ ಸಂದರ್ಭದಲ್ಲಿ 'ಘೋಸ್ಟ್' ಸಿನಿಮಾ ಪ್ರಿಯರಿಗೆ ಅಚ್ಚರಿಯೊಂದನ್ನು ನೀಡಿದೆ. 'ಘೋಸ್ಟ್' ತಂಡ 20 ಸೆಕೆಂಡುಗಳ ಅಣ್ಣಾವ್ರ ವಿಡಿಯೋವನ್ನು ರಿಲೀಸ್ ಮಾಡಿದೆ. ಇದು ದೊಡ್ಮನೆ ಅಭಿಮಾನಿಗಳ ಸಂಭ್ರಮವನ್ನು ದುಪ್ಪಟ್ಟು ಮಾಡಿದೆ. ಅಷ್ಟಕ್ಕೂ'ಘೋಸ್ಟ್' ಸಿನಿಮಾದಲ್ಲಿ ಅಣ್ಣಾವ್ರು ಎಂಟ್ರಿ ಇರುತ್ತಾ? ತಮ್ಮ ಜಾಗದಲ್ಲಿ ಅಣ್ಣಾವ್ರನ್ನು ನೋಡಿ ಶಿವಣ್ಣ ಏನಂದ್ರು? 20 ಸೆಕೆಂಡ್‌ಗಳ ವಿಡಿಯೋದಲ್ಲಿ ಅಣ್ಣಾವ್ರು ಬಂದಿದ್ದೇಗೆ? ಅನ್ನೋದನ್ನು ನಿರ್ದೇಶಕ ಶ್ರೀನಿ ಫಿಲ್ಮಿಬೀಟ್ ಜೊತೆ ಹಂಚಿಕೊಂಡಿದ್ದಾರೆ.

ಅಣ್ಣಾವ್ರು ಹುಟ್ಟುಹಬ್ಬದಂದು ಸರ್ಪ್ರೈಸ್ ಕೊಟ್ಟಿದ್ದೀರಲ್ಲಾ? ಏನಿದರ ವಿಶೇಷ?

"ನಾವೆಲ್ಲರೂ ಅಣ್ಣಾವ್ರ ಫ್ಯಾನ್ಸ್. ಬೈ ಚಾನ್ಸ್ ಅಣ್ಣಾವ್ರು ಬಿಗ್ ಸ್ಕ್ರೀನ್ ಮೇಲೆ ಬಂದ್ರೆ ಹೇಗಿರುತ್ತೆ? ಅನ್ನೋ ಕುತೂಹಲ ಇದ್ದೇ ಇರುತ್ತೆ. ಇವಾಗಿರೋ ತಂತ್ರಜ್ಞಾನವನ್ನೆಲ್ಲಾ ಇಟ್ಕೊಂಡು ಆ ತರಹದ ಪ್ರಯತ್ನ ಮಾಡಬಹುದಾ? ಅಂತ ಪ್ರಯೋಗ ಮಾಡ್ತಿದ್ವಿ. ಒಂದು ಲೆವೆಲ್‌ಗೆ ಕರೆಕ್ಟ್ ಆಗಿ ಬಂದಿತ್ತು. ಇದು ಇನ್ನೂ ಈ ತಂತ್ರಜ್ಞಾನ ಬೆಳೆಯುತ್ತಲೇ ಇದೆ. ಹೀಗಾಗಿ ಡೆವೆಲಪ್ ಆಗುತ್ತಲೇ ಇದೆ. ಈ ಕಾರಣಕ್ಕೆ ಹುಟ್ಟುಹಬ್ಬಕ್ಕೆ ಈ ವಿಡಿಯೋನಾ ಬಳಸೋಣ ಅಂದ್ಕೊಂಡ್ವಿ."

Ghost Movie Director Srini Fixed Dr.Rajkumar face to Shivarajkumar Video Viral

ಅಣ್ಣಾವ್ರ ಎಂಟ್ರಿ ಕೊಟ್ಟ ಈ ವಿಡಿಯೋದ ಉದ್ದೇಶವೇನು?

"ಮುಂದೆ ಇಂತಹದ್ದೊಂದು ಅವಕಾಶ ಇದೆ ಅನ್ನೋ ಆಲೋಚನೆ ಒಂದಿಷ್ಟು ಮಂದಿಗೆ ಹೊಳೆಯುತ್ತೆ. ಅಣ್ಣಾವ್ರು ಗೆಸ್ಟ್ ಅಪಿಯರೆನ್ಸ್ ಬರೋದು. ಅಣ್ಣಾವ್ರು ಇಡೀ ಸಿನಿಮಾದಲ್ಲಿ ಮಾಡುವಂತಹದ್ದು, ಶಿವಣ್ಣ ಅಣ್ಣಾವ್ರು ಮಾಡುವಂತಹದ್ದು ಏನೋ ಮಾಡಬಹುದು. ಆ ಪ್ರಯತ್ನದ ಹಾದಿಯಲ್ಲಿ ಇದು ಮೊದಲ ಹೆಜ್ಜೆ."

ಇಷ್ಟೊಂದು ಪರ್ಫೆಕ್ಟ್ ಆಗಿ ಅಣ್ಣಾವ್ರ ಮೂಡಿ ಬಂದಿದ್ದೇಗೆ?

"ಇದು ಡೀಪ್ ಫೇಕ್ ಅನ್ನೋ ಒಂದು ಟೆಕ್ನಾಲಜಿ. ಇದು ಆರ್ಟಿಫಿಷಿಯಲ್ ಇಂಟಲಿಜೆನ್ಸ್, ಮಷಿನ್ ಲರ್ನಿಂಗ್. ಒಂದಿಷ್ಟು ಅಣ್ಣಾವ್ರ ಫೋಟೊಗಳನ್ನು ಹಾಗೂ ವಿಡಿಯೋಗಳನ್ನು ಕೊಟ್ಟರೆ, ಅದು ಅಣ್ಣಾವ್ರ ಹಾವಭಾವವನ್ನು ಕಲಿಯುತ್ತೆ. ಈಗ ನಾವು ಶಿವಣ್ಣ ಆಕ್ಟ್ ಮಾಡಿರುವ ವಿಡಿಯೋದಲ್ಲಿ ಶಿವಣ್ಣನನ್ನು ರಿಪ್ಲೇಸ್ ಮಾಡುವುದಕ್ಕೆ ಟ್ರೈ ಮಾಡಿದ್ವಿ. ಅದು ಒಂದೇ ತರ ಬಾಡಿ ಲಾಂಗ್ವೇಜ್ ಇರೋದ್ರಿಂದ ಹೊಂದಾಣಿಕೆ ಆಯ್ತು."

20 ಸೆಕೆಂಡ್‌ಗಳ ಈ ವಿಡಿಯೋಗೆ ಎಷ್ಟು ದಿನ ಬೇಕಾಯ್ತು?

"ಇದು ಟೈಮ್ ತೆಗೆದುಕೊಳ್ಳುತ್ತೆ. ಬರೀ 20 ಸೆಕೆಂಡ್ ವಿಡಿಯೋ ಮಾಡೋದಿಕ್ಕೆ ಒಂದು ವಾರ ತೆಗೆದುಕೊಂಡಿದೆ. ಇಡಿ ಸಿನಿಮಾನೂ ಮಾಡಬಹುದು. ಸಿನಿಮಾ ಬರೀ ವಿಜ್ಯೂವಲ್ ಅಷ್ಟೇ ಅಲ್ಲ. ಆಡಿಯೋನೂ ಇರಬೇಕು. ಅವರ ತರ ವಾಯ್ಸ್ ಇರಬೇಕು. ಅದರಲ್ಲಿ ಸ್ಪಷ್ಟತೆ ಇರಬೇಕು. ಫೇಸ್ ಮ್ಯಾಚ್ ಮಾಡೋದು ಓಕೆ. ಆದರೆ, ಬಾಡಿ ಲ್ಯಾಂಗ್ವೇಜ್, ಪರ್ಫಾರ್ಮೆನ್ಸ್ ಎಲ್ಲವೂ ಓಕೆ. ಆದರೆ, ಇದಕ್ಕೆ ಟೈಂ ಬೇಕು."

ಘೋಸ್ಟ್ ಸಿನಿಮಾದಲ್ಲಿ ಅಣ್ಣಾವ್ರು ಎಂಟ್ರಿ ಇರುತ್ತಾ?

" ಇಲ್ಲ ಇಲ್ಲ.. ಸದ್ಯಕ್ಕೆ ಸಿನಿಮಾದಲ್ಲಿ ಇಲ್ಲ. ಘೋಸ್ಟ್‌ನಲ್ಲಿ ಸರ್ಪ್ರೈಸ್ ಅನ್ನು ಸರ್ಪ್ರೈಸ್ ಆಗಿ ಇಡುತ್ತಿದ್ದೇವೆ. ಇದರಲ್ಲಿ ಪುನೀತ್ ಸರ್ ಕೂಡ ಬಂದು ಹೋಗುತ್ತಾರೆ. ಅದೂ ಸೇಮ್ ಟೆಕ್ನಾಲಜಿ ಬಳಸಿಕೊಂಡು ಮಾಡಿದ್ದೇವೆ. ಹೇಗೆ ಬರುತ್ತೆ ನೋಡೋಣ ಅಂತ ಮಾಡಿದ್ದೇವೆ ಅಷ್ಟೆ. ಸಿನಿಮಾದಲ್ಲಿ ಇರೋದಿಲ್ಲ."

ಶಿವಣ್ಣನ ಫಸ್ಟ್ ರಿಯಾಕ್ಷನ್ ಏನು?

"ಶಿವಣ್ಣಗೆ ತೋರಿಸಿದ ಕೂಡಲೇ ತುಂಬಾನೇ ಖುಷಿಯಾಗಿ ಹೋದ್ರು. ನೋಡಿದ ಕೂಡಲೇ ಏನ್ ಸಖತ್ ಆಗಿದೆ. ಹೇಗೆ ಮಾಡಿದ್ರಿ? ಏನು ಹೀಗೆ ಬಂದಿದೆ? ಏನು ಟೆಕ್ನಾಲಜಿ? ಹೇಗೆ ಮಾಡಿದ್ರಿ ಅಂತ? ಆಶ್ವರ್ಯ ಪಟ್ಟರು."

ಕೊನೆಯಲ್ಲಿ ಈ ಆಲೋಚನೆ ಮೂಡಿದ್ದೇಗೆ?

" ಐದು ವರ್ಷದ ಹಿಂದೆ ಒಂದು ಆಯೋಚನೆ ಇತ್ತು. ಶಂಕರ್‌ನಾಗ್ ಅವರನ್ನು ಒಂದು ಸಿನಿಮಾ ಗೆಸ್ಟ್ ಅಪಿಯರೆನ್ಸ್ ಮಾಡಿಸಿದ್ರೆ ಹೆಂಗೆ ಅಂತ. ಆವಾಗ ಟೆಕ್ನಾಲಜಿನೇ ಇರಲಿಲ್ಲ. ಅದು ಇಂಪಾಸಿಬಲ್ ಅಂತ ಸುಮನ್ನಾಗಿದ್ವಿ. ಈಗ ತಂತ್ರಜ್ಞಾನ ಬದಲಾಗಿದೆ. ಶಿವಣ್ಣನೇ ನಮ್ಮ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅವರನ್ನು ಇಟ್ಕೊಂಡು ಇಂತಹದ್ದೊಂದು ಪ್ರಯತ್ನ ಮಾಡೋದು ಈಗ. ಸದ್ಯ ಘೋಸ್ಟ್‌ನಲ್ಲಿ ಇಲ್ಲ. ಮುಂದಕ್ಕೆ ನೋಡೋಣ." ಎಂದು ಅಣ್ಣಾವ್ರನ್ನು ಮುಂದಿನ ಸಿನಿಮಾದಲ್ಲಿ ತೆರೆಮೇಲೆ ತರೋ ಪ್ರಯತ್ನದಲ್ಲಿ ಇದ್ದಾರೆ.

More from Filmibeat

English summary
Ghost Movie Director Srini Fixed Dr.Rajkumar face to Shivarajkumar Video Viral. He used artificial intelligence to make this video, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X