ಶಿವಣ್ಣನ ಅಭಿಮಾನಿಗಳಿಗೆ ಹುಟ್ಟುಹಬ್ಬದಂದು ವಿಶೇಷ ಉಡುಗೊರೆ: ಕಿಚ್ಚ ಸುದೀಪ್ ಸಾಥ್!

ಜುಲೈ 12ರಂದು ಶಿವಣ್ಣ ಅಭಿಮಾನಿಗಳಿಗೆ ಹಬ್ಬ. ಆದರೆ, ಈ ಬಾರಿ ಸೆಂಚುರಿಸ್ಟಾರ್ ಶಿವರಾಜ್‌ಕುಮಾರ್ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದೆ ಇರಲು ನಿರ್ಧರಿಸಿದ್ದಾರೆ. ಪವರ್‌ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿಕೆ ನೋವಿನ ಹಿನ್ನೆಲೆಯಲ್ಲಿಯೇ ಹುಟ್ಟುಹಬ್ಬವನ್ನು ಅಭಿಮಾನಿಗಳಿಂದ ಆಚರಿಸಿಕೊಳ್ಳುತ್ತಿಲ್ಲ ಎನ್ನಲಾಗಿದೆ.

ಈ ದಿನದಂದು ಸ್ಯಾಂಡಲ್‌ವುಡ್ ಮಂದಿ ಶಿವಣ್ಣ ಅಭಿಮಾನಿಗಳಿಗೆ ಸರ್ಪ್ರೈಸ್‌ ಗಿಫ್ಟ್ ನೀಡುವುದಕ್ಕೆ ಮುಂದಾಗಿದ್ದಾರೆ. ಶಿವರಾಜ್‌ಕುಮಾರ್ ನಟಿಸುತ್ತಿರುವ ಸಿನಿಮಾಗಳಿಂದ ಒಂದೊಂದು ಗಿಫ್ಟ್ ಸಿಗಲಿದೆ. ಶಿವಣ್ಣನ ಅಭಿಮಾನಿಗಳಿಗೆ ವಿಶೇಷ ಉಡುಗೊರೆ ನೀಡಲು ಕಿಚ್ಚ ಸುದೀಪ್ ಸಿದ್ಧರಾಗಿದ್ದಾರೆ.

ಶಿವಣ್ಣ 60ನೇ ಹುಟ್ಟುಹಬ್ಬಕ್ಕೆ ಸ್ಪೆಷಲ್ ಗಿಫ್ಟ್

ಶಿವಣ್ಣ ಹುಟ್ಟುಹಬ್ಬ ಬಂತು ಅಂದರೆ, ಅಂದು ಹೊಸ ಹೊಸ ಸಿನಿಮಾ ಪೋಸ್ಟ್‌ಗಳು ಅಭಿಮಾನಿಗಳ ಕೈ ಸೇರುತ್ತವೆ. ಅದರಲ್ಲಿ 60ನೇ ಹುಟ್ಟುಹಬ್ಬ ಅಂದರೆ ಸುಮ್ಮನೆನಾ? ಹೊಸ ಹೊಸ ಸಿನಿಮಾಗಳು ಅನೌನ್ಸ್ ಆಗುತ್ತವೆ. ಅಲ್ಲದೆ ಹೊಸ ಸಿನಿಮಾಗಳ ಪೋಸ್ಟರ್ ರಿಲೀಸ್ ಆಗುತ್ತೆ. ಅಂತೆಯೇ ಶಿವರಾಜ್‌ಕುಮಾರ್ ಹೊಸ ಸಿನಿಮಾ 'ಘೋಸ್ಟ್' ಪೋಸ್ಟರ್ ಬಿಡುಗಡೆಯಾಗಲಿದೆ.

Ghost Movie Poster Will Be Released By Kichcha Sudeep On Shiva Rajkumar Birthday

'ಘೋಸ್ಟ್' ಸಿನಿಮಾದ ಪೋಸ್ಟರ್ ಅನ್ನು ಕಿಚ್ಚ ಸುದೀಪ್ ರಿಲೀಸ್ ಮಾಡುತ್ತಿರುವುದು ವಿಶೇಷ. 'ಕಿಂಗ್ ಆಫ್ ಆಲ್ ಮಾಸಸ್' ಎಂಬ ಪೋಸ್ಟರ್ ಅನ್ನು ಸುದೀಪ್ ರಿಲೀಸ್ ಮಾಡುತ್ತಿದ್ದಾರೆ. ಇನ್ನು ಈ ಸಿನಿಮಾವನ್ನು ಶ್ರೀನಿ ನಿರ್ದೇಶಿಸುತ್ತಿದ್ದು, ಈಗಾಗಲೇ ಈ ಸಿನಿಮಾ ಸಾಕಷ್ಟು ಕುತೂಹಲವನ್ನು ಸೃಷ್ಟಿಸಿದೆ.

ಸಂದೇಶ್ ಸಂಸ್ಥೆಯ 29ನೇ ಸಿನಿಮಾ

'ಘೋಸ್ಟ್' ಸಿನಿಮಾವನ್ನು ಸಂದೇಶ್ ನಾಗರಾಜ್ ನಿರ್ಮಾಣ ಮಾಡುತ್ತಿದ್ದಾರೆ. ಸಂದೇಶ್ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿರುವ 29ನೇ ಸಿನಿಮಾ ಇದಾಗಿದ್ದು, ಅರ್ಜುನ್ ಜನ್ಯ ಟ್ಯೂನ್‌ಗಳನ್ನು ಹಾಕುತ್ತಿದ್ದಾರೆ. ಮಹೇಂದ್ರ ಸಿಂಹ ಕ್ಯಾಮರಾ ವರ್ಕ್ ಮಾಡುತ್ತಿದ್ದಾರೆ.

'ಘೋಸ್ಟ್' ಸಿನಿಮಾ ಇನ್ನೂ ಪ್ರೀ-ಪ್ರೊಡಕ್ಷನ್ ಹಂತದಲ್ಲಿದೆ. ನಿರ್ದೇಶಕ ಶ್ರೀನಿ ಕಥೆ, ಚಿತ್ರಕಥೆ ಹಾಗೂ ಲೋಕೇಶ್ ಅನ್ನು ಫೈನಲ್ ಮಾಡುತ್ತಿದ್ದಾರೆ. ಇನ್ನು ಮೂಲಗಳ ಪ್ರಕಾರ, 'ಘೋಸ್ಟ್' ಸಿನಿಮಾ ಆಗಸ್ಟ್ ತಿಂಗಳ ಕೊನೆಯಲ್ಲಿ ಶೂಟಿಂಗ್ ಶುರುವಾಗುವ ಸಾಧ್ಯತೆಯಿದೆ.

Ghost Movie Poster Will Be Released By Kichcha Sudeep On Shiva Rajkumar Birthday

ಶಿವಣ್ಣನ ಬರ್ತ್‌ಡೇ ಭರ್ಜರಿ ಸರ್ಪ್ರೈಸ್

ಸೆಂಚುರಿ ಸ್ಟಾರ್ ಹುಟ್ಟುಹಬ್ಬಕ್ಕೆ ಸಿಕ್ಕಾಪಟ್ಟೆ ಸರ್ಪ್ರೈಸ್ ಅಭಿಮಾನಿಗಳಿಗಾಗಿ ಕಾದಿದೆ. ಶಿವಣ್ಣ ನಟಿಸುತ್ತಿರುವ 125ನೇ ಸಿನಿಮಾ 'ವೇದ' ಚಿತ್ರತಂಡದಿಂದಲೂ ಅಚ್ಚರಿಯ ಗಿಫ್ಟ್ ಸಿಗಬಹುದು. ಇನ್ನೊಂದು ಕಡೆ ಅರ್ಜುನ್ ಜನ್ಯ ನಿರ್ದೇಶನ ಮಾಡುತ್ತಿರುವ ಸಿನಿಮಾದ ಪೋಸ್ಟರ್ ಕೂಡ ರಿಲೀಸ್ ಆಗುವ ಸಾಧ್ಯತೆಯಿದೆ.

ಇನ್ನು ಶಿವಣ್ಣ ಕೈಯಲ್ಲಿ ಕೈ ತುಂಬಾ ಸಿನಿಮಾಗಳಿವೆ. ಈಗಾಗಲೇ ಶಿವರಾಜ್‌ಕುಮಾರ್ ಒಪ್ಪಿಕೊಂಡಿರುವ ಸಿನಿಮಾಗಳು ಕೂಡ ಅನೌನ್ಸ್ ಆಗುವ ಸಾಧ್ಯತೆಯಿದೆ. ಹೀಗಾಗಿ ಜುಲೈ 12ರಂದು ಏನೆಲ್ಲಾ ಸರ್ಪ್ರೈಸ್ ಸಿಗುತ್ತೋ ಎಂದು ಶಿವಣ್ಣನ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

More from Filmibeat

English summary
Ghost Movie Poster Will Be Released By Kichcha Sudeep On Shivarajkumar Birthday, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X