Ghost Trailer: "ನಾನು ಯಾರ ತಂಟೆಗೂ ಹೋಗಲ್ಲ.. ಸೋಲುವ ಭಯಕ್ಕಲ್ಲ" ಎನ್ನುತಲೇ 'ಆನಂದ್' ಕೊಟ್ಟಿದ್ದೇಕೆ?
ಅಕ್ಟೋಬರ್ ತಿಂಗಳಾದರೂ ಸ್ಯಾಂಡಲ್‌ವುಡ್‌ಗೆ ಆಶಾದಾಯಕವಾಗಿರುತ್ತಾ? ಈ ಪ್ರಶ್ನೆಗೆ ಶಿವಣ್ಣ ಅಭಿನಯದ 'ಘೋಸ್ಟ್' ಉತ್ತರ ಕೊಡುತ್ತೆ ಅನ್ನೋ ನಿರೀಕ್ಷೆಯಿದೆ. ಈಗಾಗಲೇ ಶಿವಣ್ಣನ ಲುಕ್, ಖದರ್‌ಗೆ ಸೆಂಚುರಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಸಿನಿಮಾ ಯಾವಾಗ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ.
ಶ್ರೀನಿ ನಿರ್ದೇಶನದ 'ಘೋಸ್ಟ್' ಸದ್ಯ ಸ್ಯಾಂಡಲ್‌ವುಡ್‌ಗೆ ಇರುವ ಹೋಪ್. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ರಿಲೀಸ್ ಆಗುತ್ತಿರುವ ಈ ಸಿನಿಮಾ ಈಗಾಗಲೇ ಎಲ್ಲಾ ಭಾಷಿಗರ ಗಮನ ಸೆಳೆದಿದೆ. ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ಸಿನಿಮಾ ಬಿಡುಗಡೆಗೆ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಅಕ್ಟೋಬರ್ 19 ರಂದು ಸಿನಿಮಾ ರಿಲೀಸ್ ಆಗುತ್ತಿರುವುದರಿಂದ 'ಘೋಸ್ಟ್' ಪ್ರಚಾರ ಶುರುವಾಗಿದೆ. ಸಿನಿಪ್ರಿಯರ ನಿರೀಕ್ಷೆಯಂತೆ 'ಘೋಸ್ಟ್' ಟ್ರೈಲರ್ ರಿಲೀಸ್ ಆಗಿದೆ. ಶಿವಣ್ಣ ಪಕ್ಕಾ ಮಾಸ್ ಲುಕ್‌ನಲ್ಲಿ ಎಂಟ್ರಿ ಕೊಟ್ಟಾಗಿದೆ. ಪ್ರೇಕ್ಷಕರು ಸಿನಿಮಾದ ಟ್ರೈಲರ್‌ಗೆ ಫಿದಾ ಆಗಿದ್ದಾರೆ.
'ಘೋಸ್ಟ್' ಟ್ರೈಲರ್‌ನಲ್ಲಿ ಡೈಲಾಗ್‌ಗಳ ಅಬ್ಬರ
'ಘೋಸ್ಟ್' ಸಿನಿಮಾ ಟ್ರೈಲರ್‌ನಲ್ಲಿ ಮಾಸ್ ಡೈಲಾಗ್‌ಗಳದ್ದೇ ಅಬ್ಬರ. ಶಿವಣ್ಣ ಇಲ್ಲಿ ಗ್ಯಾಂಗ್‌ಸ್ಟರ್ ಲುಕ್ ಕೊಟ್ಟಿದ್ದರೂ, ಅವರ ರೋಲ್‌ನಲ್ಲೊಂದು ಸರ್ಪ್ರೈಸ್ ಇದೆ ಅನ್ನೋದು ಈಗಾಗಲೇ ತಂಡವೇ ಹೇಳಿಕೊಂಡಿದೆ. ಆದರೆ, ಟ್ರೈಲರ್ ಮಾಸ್ ಡೈಲಾಗ್‌ಗಳನ್ನೇ ಬಿಟ್ಟು ಸದ್ದು ಮಾಡುತ್ತಿದೆ. "ಯುದ್ಧ.. ಮಾನವ ಲೋಕದ ಮಾಗದ ಕರಗ.. ಇಂತಹ ಯುದ್ಧಗಳಿಂದ ಸಾಮ್ರಾಜ್ಯ ಕಟ್ಟಿದ್ದಕ್ಕಿಂತ ಆದ ಪತನಗಳೇ ಜಾಸ್ತಿ. ಸಾಮ್ರಾಜ್ಯವನ್ನ ಕಟ್ಟಿದೋನ ಇತಿಹಾಸ ಎಷ್ಟೋ ಬಾರಿ ಮರೆತಿರಬಹುದು. ಆದರೆ... ಧ್ವಂಸ ಮಾಡಿದ ನನ್ನಂತವನನ್ನ ಎಂದಿಗೂ ಮರೆತಿಲ್ಲ" ಎಂದು ಖಡಕ್ ಡೈಲಾಗ್ ಬಿಟ್ಟಿದ್ದಾರೆ.
ರಾಜಮೌಳಿಯಿಂದ ಟ್ರೈಲರ್ ರಿಲೀಸ್
'ಜೈಲರ್' ಸಿನಿಮಾ ಬಳಿಕ ಶಿವಣ್ಣ ಖದರ್ ಏನು ಅನ್ನೋದು ಅನ್ಯ ಭಾಷಿಗರಿಗೂ ಗೊತ್ತಾಗಿದೆ. ಅದಕ್ಕೆ 'ಘೋಸ್ಟ್'ಗಾಗಿ ಪರಭಾಷಿಗರೂ ಕಾಯುತ್ತಿದ್ದಾರೆ. ಮೂವಿ ಮಾಂತ್ರಿಕ ರಾಜಮೌಳಿ ತೆಲುಗು ಟ್ರೈಲರ್ 'ಘೋಸ್ಟ್' ಅನ್ನು ರಿಲೀಸ್ ಮಾಡಿದ್ದು ವಿಶೇಷ. ಹೀಗಾಗಿ ಟ್ರೈಲರ್ ಅಂದ್ಕೊಂಡಿದ್ದಕ್ಕಿಂತ ಒಂದು ಕ್ರೇಜ್ ಹೆಚ್ಚಾಗಿದೆ.

ಟ್ರೈಲರ್ ಬಗ್ಗೆ ಏನಂತಾರೆ ನೆಟ್ಟಿಗರು?
'ಫೋಸ್ಟ್' ಟ್ರೈಲರ್ ಕನ್ನಡ ಚಿತ್ರರಂಗಕ್ಕೆ ಮೆಗಾ ಸಕ್ಸಸ್ ಕೊಡಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಅದಕ್ಕೆ ಟ್ರೈಲರ್ ನೋಡಿ ನೆಟ್ಟಿಗರು ಸಖತ್ತಾಗಿಯೇ ಕಮೆಂಟ್ ಮಾಡುತ್ತಿದ್ದಾರೆ. "ನಿಜಕ್ಕೂ ಕಥೆಯಲ್ಲಿ ಕಾಂಪ್ರೊಮೈಸ್ ಆಗಿಲ್ಲ ಅನ್ಸತ್ತೆ ನಿರ್ದೇಶಕ ಶ್ರೀನಿ ಅವ್ರು.. ಶಿವಣ್ಣನ ಮಾಸ್ ಆಗಿ ನೋಡೋದೇ ಚಂದ" ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು "ಇತಿಹಾಸ ಬರೆಯೋದೇ ತಾಕತ್ ಇರೋ ಮನುಷ್ಯನ ಬಗ್ಗೆ ಸಲಾಂ ಹೊಡೆಯೋನ ಬಗ್ಗೆ ಒಂದು ಸಾಲು ಬರೆಯಲ್ಲ. ಏನ್ ಡೈಲಾಗ್ ಗುರು" ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
'ಆನಂದ್' ಲುಕ್‌ನಲ್ಲಿ ಶಿವಣ್ಣ
'ಘೋಸ್ಟ್' ಟ್ರೈಲರ ಅದೆಷ್ಟೇ ಮಾಸ್ ಆಗಿದ್ದರೂ, ಶಿವಣ್ಣ ಕ್ಲಾಸ್ ಲುಕ್ ಟ್ರೆಂಡಿಂಗ್‌ನಲ್ಲಿದೆ. ಶಿವಣ್ಣನ ಮೊದಲ ಸಿನಿಮಾ 'ಆನಂದ್'ನಲ್ಲಿ ಕಂಡಂತೆ ಇದರಲ್ಲೂ ಒಂದೆರಡು ಲುಕ್ ಕೊಟ್ಟಿದ್ದಾರೆ. ಆ ಲುಕ್ ಈಗ ಟ್ರೆಂಡಿಂಗ್‌ನಲ್ಲಿದೆ. ಅದನ್ನು ನೋಡಿ ನೆಟ್ಟಿಗರೂ ಕೂಡ ಥ್ರಿಲ್ ಆಗಿದ್ದಾರೆ. ಸಿನಿಮಾ ಥಿಯೇಟರ್‌ನಲ್ಲೇ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. "ಈ ಲುಕ್‌ನ ಚಿತ್ರಮಂದಿರದಲ್ಲೀ ನೋಡ್ಬೇಕು ಅನ್ನೋದೂ ನನ್ನ ಕನಸಾಗಿತ್ತು. ಅದು ಘೋಸ್ಟ್ ಇಂದ ನನಸಾಗುತ್ತದೆ. ಐ ಯಾಮ್ ವೈಟಿಂಗ್ ಘೋಸ್ಟ್." ಎಂದು ಬರೆದಿದ್ದಾರೆ.


Click it and Unblock the Notifications











