'777 ಚಾರ್ಲಿ' ನೋಡಿ ಕಣ್ಣೀರಿಟ್ಟ ಬಾಲಕಿ: ಸಮಾಧಾನ ಮಾಡಲು ನಿರ್ದೇಶಕ ವಿಡಿಯೋ ಕಾಲ್ ಮಾಡಿದ್ಯಾರಿಗೆ?
'777 ಚಾರ್ಲಿ' ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಫ್ಯಾಮಿಲಿ ಸಮೇತ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡುತ್ತಿದ್ದಾರೆ. ಅದರಲ್ಲೂ ಮಕ್ಕಳಿಗೆ '777 ಚಾರ್ಲಿ' ಸಿನಿಮಾ ತುಂಬಾನೇ ಇಷ್ಟ ಆಗಿದೆ. ಈ ಕಾರಣಕ್ಕೆ ದಿನದಿಂದ ದಿನಕ್ಕೆ ಚಾರ್ಲಿಗೆ ಅಭಿಮಾನಿಗಳು ಹೆಚ್ಚಾಗುತ್ತಿದ್ದಾರೆ.
'777 ಚಾರ್ಲಿ' ಸಿನಿಮಾ ನೋಡಿದವರು ಥಿಯೇಟರ್‌ನಿಂದ ಸುಮ್ಮನೆ ಅಂತೂ ಹೊರ ಬರಲುತ್ತಿಲ್ಲ. ಒಂದು ಹನಿ ಕಣ್ಣೀರು ಹಾಕಿಯೇ ಹೊರಬರುತ್ತಿದ್ದಾರೆ. ಹಾಗೇ ಮಕ್ಕಳೂ '777 ಚಾರ್ಲಿ' ಸಿನಿಮಾ ನೋಡಿ ಕಣ್ಣೀರಿಡುತ್ತಿದ್ದಾರೆ. ಇಂತಹದ್ದೊಂದು ವಿಡಿಯೋ ವೈರಲ್ ಆಗುತ್ತಿದೆ.
ಇತ್ತೀಚೆಗೆ ಚಾರ್ಲಿ ಸಿನಿಮಾ ನೋಡಿ ಬಂದ ಬಾಲಕಿಯೊಬ್ಬರು ಕಣ್ಣೀರು ಹಾಕುತ್ತಿದ್ದಳು. ಆಗ ನಿರ್ದೇಶಕ ಬಾಲಕಿಯನ್ನು ಸಮಾಧಾನ ಮಾಡಲು ಮಾಡಿದ ಐಡಿಯಾಗೆ ಪ್ರೇಕ್ಷಕರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ನಿರ್ದೇಶಕ ಕಿರಣ್ ರಾಜ್ ಬಾಲಕಿಯ ಸಮಾಧಾನ ಮಾಡಿದ್ದು ಹೇಗೆ? ತಿಳಿಯಲು ಮುಂದೆ ಓದಿ.
Recommended Video


ಚಾರ್ಲಿ ನೋಡಿ ಕಣ್ಣೀರಿಟ್ಟ ಬಾಲಕಿ
ರಕ್ಷಿತ್ ಶೆಟ್ಟಿ ಹಾಗೂ ನಿರ್ದೇಶಕ ಕಿರಣ್ ರಾಜ್ ಕಾಂಬಿನೇಷನ್ ವರ್ಕ್‌ಔಟ್ ಆಗಿದೆ. ಪ್ರೇಕ್ಷಕರನ್ನು ಚಿತ್ರಮಂದಿರದೊಳಗೆ ಭಾವನಾತ್ಮಕವಾಗಿ ಕಟ್ಟಿಡಲು ಯಶಸ್ವಿಯಾಗಿದ್ದಾರೆ. ಅದಕ್ಕೆ ಈಗಾಗಲೇ ಸಿನಿಮಾ ನೋಡಿ ಕಣ್ಣೀರು ಹಾಕುತ್ತಾ ಹೊರಬರುತ್ತಿರುವ ಪ್ರೇಕ್ಷಕರೇ ಸಾಕ್ಷಿ. ಅದರಂತೆ, ಪುಟ್ಟ ಬಾಲಕಿ ಕೂಡ ಸಿನಿಮಾ ಅಳಲು ಆರಂಭಿಸಿದ್ದಳು. ಈಕೆಯನ್ನು ಅಲ್ಲೇ ಇದ್ದ ನಿರ್ದೇಶಕ ಕಿರಣ್ ರಾಜ್ ಸಮಾಧಾನ ಮಾಡಲು ಯತ್ನಿಸಿದ್ದರು. ಆದರೂ ಆ ಬಾಲಕಿ ಸಮಾಧಾನಗೊಳ್ಳಲೇ ಇಲ್ಲ.

ಚಾರ್ಲಿಗೆ ವಿಡಿಯೋ ಕಾಲ್
'777 ಚಾರ್ಲಿ' ಸಿನಿಮಾ ನೋಡಿ ಕಣ್ಣೀರಿಡುತ್ತಿದ್ದ ಬಾಲಕಿಯನ್ನು ಸಮಾಧಾನ ಮಾಡಲು ಕಿರಣ್ ರಾಜ್ ಮಾಸ್ಟರ್ ಪ್ಲ್ಯಾನ್ ಮಾಡಿದ್ದರು. ತಕ್ಷಣವೇ ಚಾರ್ಲಿಗೆ ವಿಡಿಯೋ ಕಾಲ್ ಮಾಡಿ ಬಾಲಕಿಗೆ ತೋರಿಸಿದರು. ಆ ಬಳಿಕವೇ ಪಟ್ಟ ಬಾಲಕಿ ಕಣ್ಣೀರು ಹಾಕುವುದನ್ನು ನಿಲ್ಲಿಸಿದ್ದಳು. ಈ ಎಮೋಷನಲ್ ವಿಡಿಯೋವನ್ನು ಚಾರ್ಲಿ ತಂಡವೇ ರಿವೀಲ್ ಮಾಡಿದೆ.

ಚಾರ್ಲಿಗೆ ಸೂಪರ್ ರೆಸ್ಪಾನ್ಸ್
ರಕ್ಷಿತ್ ಶೆಟ್ಟಿ ಹಾಗೂ ಚಾರ್ಲಿ ಸಿನಿಮಾ ನೋಡಿದ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೊದಲ ವಾರಕ್ಕಿಂತ ಎರಡನೇ ವಾರ ಚಾರ್ಲಿ ಸಿನಿಮಾಗೆ ಸೂಪರ್ ರೆಸ್ಪಾನ್ಸ್ ಸಿಕ್ಕಿದೆ. ಎರಡನೇ ವಾರದಲ್ಲಿ ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರ ಸಂಖ್ಯೆ ಕೂಡ ದುಪ್ಪಟ್ಟಾಗಿದೆ. ಹೀಗಾಗಿ '777 ಚಾರ್ಲಿ' ಸಿನಿಮಾ ಎರಡನೇ ವಾರದಲ್ಲಿ ಬಾಕ್ಸಾಫೀಸ್‌ನಲ್ಲಿ ಅದ್ಭುತ ಕಲೆಕ್ಷನ್ ಮಾಡಬಹುದು ಎಂದು ನಿರೀಕ್ಷೆ ಮಾಡಲಾಗುತ್ತಿದೆ.

6ನೇ ದಿನದ ಚಾರ್ಲಿ ಕಲೆಕ್ಷನ್ ಎಷ್ಟು?
'777 ಚಾರ್ಲಿ ಬಿಡುಗಡೆಯಾಗಿ ಆರು ದಿನಗಳಾಗಿವೆ. ಈ ಆರು ದಿನಗಳಲ್ಲಿ ಸಿನಿಮಾದ ಗಳಿಕೆ 35 ಕೋಟಿ ರೂ ದಾಟಿದೆ. ಅಲ್ಲದೆ ಉಳಿದ ಭಾಷೆಯಲ್ಲಿಯೂ ಕಲೆಕ್ಷನ್ ವಿಚಾರದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ವೀಕೆಂಡ್‌ನಲ್ಲಿ ಚಾರ್ಲಿ ಸಿನಿಮಾದ ಗಳಿಕೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ಅದರಲ್ಲೂ ಮುಂಬರುವ ಶನಿವಾರ ಹಾಗೂ ಭಾನುವಾರ ಎರಡು ದಿನಗಳಲ್ಲಿ ಚಾರ್ಲಿ ಗಳಿಕೆ ಎಷ್ಟಾಗುತ್ತೆ ಅನ್ನುವುದರ ಮೇಲೆ ಚಾರ್ಲಿಯ ಮುಂದಿನ ಹಾದಿ ಹೇಗಿರುತ್ತೆ ಅನ್ನೋದು ಗೊತ್ತಾಗಲಿದೆ.


Click it and Unblock the Notifications











