ದರ್ಶನ್ ರಿಲೀಸ್‌ಗೆ ಸೂಚನೆ ಸಿಕ್ಕಿತೇ? ವೈರಲ್ ಆಗುತ್ತಿರೋ ವಿಡಿಯೋ ಕಥೆಯೇನು?

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿಇದ್ದಾರೆ. ನ್ಯಾಯಾಂಗ ಬಂಧನದಲ್ಲಿರುವ ದರ್ಶನ್, ಗೆಳತಿ ಪವಿತ್ರಾ ಗೌಡ ಸೇರಿದಂತೆ ಸಹಚರರು ಜೈಲಿನಲ್ಲಿ ಇದ್ದಾರೆ. ಇದೇ ಜುಲೈ 4 ರಂದು ಇವರ ನ್ಯಾಯಾಂಗ ಬಂಧನದ ಅವಧಿ ಕೊನೆಗೊಳ್ಳಲಿದೆ. ಹೀಗಾಗಿ ನ್ಯಾಯಾಲಯದಲ್ಲಿ ಇವರಿಗೆ ಜಾಮೀನು ಕೊಡಿಸಲು ಶತಪ್ರಯತ್ನ ನಡೆಯುತ್ತಿದೆ.

ಇನ್ನೊಂದು ಅಭಿಮಾನಿಗಳು ದರ್ಶನ್ ಆರೋಪ ಮುಕ್ತರಾಗಿ ಬರಲಿ ಅಂತ ಪ್ರಾರ್ಥಿಸುತ್ತಿದ್ದಾರೆ. ಕೆಲವರು ಸೋಶಿಯಲ್ ಮೀಡಿಯಾಗಳಲ್ಲಿ ದರ್ಶನ್ ಬೆಂಬಲಕ್ಕೆ ನಿಂತಿದ್ದಾರೆ. ಅದೇ ಮತ್ತೆ ಕೆಲವರು ದರ್ಶನ್ ಜೈಲಿನಿಂದ ಬಿಡುಗಡೆಯಾಗಲಿ ದೇವರ ಮೊರೆ ಹೋಗಿದ್ದಾರೆ. ಶತಾಯಗತಾಯ ಏನಾದರೂ ಮಾಡಿ ತಮ್ಮ ನಟನ ಈ ಪ್ರಕರಣದಿಂದ ಹೊರಬರಲೇ ಬೇಕು ಅಂತ ಪೂಜೆಗಳನ್ನು ಸಲ್ಲಿಸುತ್ತಿದ್ದಾರೆ.

God gave a blessing to fans for the Darshan release video which is trending

ಸದ್ಯ ದರ್ಶನ್ ಅಭಿಮಾನಿಯೊಬ್ಬರು ದೇವರ ಮುಂದೆ ದರ್ಶನ್ ಜೈಲಿನಿಂದ ಬಿಡುಗಡೆಗಾಗಲಿ ಅಂತ ಬೇಡಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅಂದ್ಹಾಗೆ ಆ ವಿಡಿಯೋದಲ್ಲಿ ಅಂತಹದ್ದೇನಿದೆ? ಎಲ್ಲಿಯ ವಿಡಿಯೋ? ಇದೆಲ್ಲವನ್ನು ತಿಳಿಯಲು ಮುಂದೆ ಓದಿ.

ಕಷ್ಟ ಎದುರಾದಾಗ ದೇವರ ಮೊರೆ ಹೋಗುವುದು ವಾಡಿಕೆ. ನಂಬಿಕೆಯಿದ್ದ ದೇವರ ಬಳಿ ಹೋಗಿ ಪ್ರಾರ್ಥನೆ ಮಾಡುತ್ತಾರೆ. ದೇವರ ಬಳಿ ಪ್ರಶ್ನೆ ಕೇಳುತ್ತಾರೆ. ಈಗ ದರ್ಶನ್ ಅಭಿಮಾನಿಯೊಬ್ಬ ಅದೇ ಕೆಲಸ ಮಾಡಿದ್ದಾನೆ. ದರ್ಶನ್‌ ಜೈಲಿನಿಂದ ಬಿಡುಗಡೆಯಾಗುವಂತೆ ದೇವರ ಮೊರೆ ಹೋಗಿದ್ದಾರೆ. ಈ ವಿಡಿಯೋದಲ್ಲಿ ದೇವರ ಬಳಿಕ ಪ್ರಶ್ನೆ ಕೇಳುವುದು ಕೂಡ ಸೆರೆಯಾಗಿದೆ. ಅದಕ್ಕೆ ದೇವರ ಪ್ರಸಾದ ಕೂಡ ಕೊಟ್ಟಿದ್ದು, ಫ್ಯಾನ್ಸ್ ವೈರಲ್ ಮಾಡುತ್ತಿದ್ದಾರೆ.

God gave a blessing to fans for the Darshan release video which is trending

"ಒಬ್ಬರು ಕಲಾವಿದರು ಒಂದು ತೊಂದರೆಯಲ್ಲಿ ಸಿಕ್ಕಾಕಿಕೊಂಡಿದ್ದಾರೆ. ಅವರು ದರ್ಶನ್ ಅಂತ. ಅವರು ತಪ್ಪು ಮಾಡಿರಬಹುದು. ಮಾಡದೆಯೂ ಇರಬಹುದು. ಅವರ ಅಭಿಮಾನಿಗಳ ಪರವಾಗಿ ನಿಮ್ಮ ಬಳಿ ಕೇಳಿಕೊಳ್ಳುತ್ತಿದ್ದೇವೆ. ಅವರು ಏನೇ ಆರೋಪಗಳು ಮಾಡಿದರೂ ಆದಷ್ಟು ಬೇಗ ನಿವಾರಣೆ ಮಾಡಿ, ಅವರಿಗೆ ಯಾವುದೇ ರೀತಿ ತೊಂದರೆ ಆಗದಂತೆ ಅಭಿಮಾನಿಗಳ ಜೊತೆ ಮತ್ತೆ ಅವರು ಸೇರುತ್ತಾರೆ ಅನ್ನೋದೇ ಆದರೆ, ನಿನ್ನ ಆಶೀರ್ವಾದವಿದ್ದು ನೀನು ನಡೆಸಿಕೊಡುತ್ತೇನೆ ಅನ್ನೋದೇ ಆದರೆ ನೀನು ಆಶೀರ್ವಾದ ಮಾಡಪ್ಪ" ಎಂದು ಕೇಳಿಕೊಂಡಿದ್ದಾರೆ.

ದೇವರ ಮುಂದೆ ಹೀಗೆ ಬೇಡಿಕೊಳ್ಳುತ್ತಿದ್ದಂತೆ ಮುಡಿಸಿದ್ದ ಹೂವು ಕೆಳಗೆ ಬೀಳುತ್ತೆ. ದೇವರು ಪ್ರಸಾದ ಕೊಟ್ಟಿದ್ದನ್ನು ನೋಡಿ ಆ ವ್ಯಕ್ತಿ ಸಂತಸ ಪಟ್ಟಿದ್ದಾನೆ. "ನೀನು ಅಪ್ಪಣೆ ಕೊಟ್ಟಿದ್ದೀಯಾ ಅಂದ ತಕ್ಷಣ ಆದಷ್ಟು ಬೇಗ ಬಂದೇ ಬರುತ್ತಾರೆ. ಆದಷ್ಟು ಬೇಗ ಅವರನ್ನು ಕರೆಸಿಕೊಡಪ್ಪ" ಎಂದು ಮತ್ತೆ ಕೇಳಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದು, ಯಾವ ದೇವರು? ಊರು ಅನ್ನೋ ಮಾಹಿತಿ ಲಭ್ಯವಾಗಿಲ್ಲ.

More from Filmibeat

English summary
God gave a blessing to fans for the Darshan release video, which is trending
Read more about: darshan video ದರ್ಶನ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X