ಗೋಲ್ಡನ್ ಸ್ಟಾರ್ ಮನೆಯಲ್ಲಿಂದು ಸಂಭ್ರಮದ ದಿನ

ನಟ ಗಣೇಶ್ 'ಖುಷಿ ಖುಷಿಯಾಗಿ' ಅಂತ ಸಿನಿಮಾ ಮಾಡಿದ್ದರು. ಆದರೆ, ಗಣೇಶ್ ಮನೆಯಲ್ಲಿ ಈಗ ನಿಜವಾದ ಖುಷಿ ಮೂಡಿದ ದಿನ. ಕಾರಣ ಈ ದಿನ ಗಣೇಶ್ ಮಗಳು ಚಾರಿತ್ರ್ಯ ಹುಟ್ಟಿದ ದಿನ.

ಹುಟ್ಟುಹಬ್ಬದ ವಿಶೇಷವಾಗಿ ಗಣೇಶ್ ತಮ್ಮ ಮಗಳ ಸಂತೋಷದ ಕ್ಷಣಗಳ ಫೋಟೋಗಳನ್ನು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಚಾರಿತ್ರ್ಯಳ ನಾಲ್ಕು ಮುದ್ದಾದ ಫೋಟೋಗಳನ್ನು ಗಣೇಶ್ ಶೇರ್ ಮಾಡಿದ್ದಾರೆ. ಪುಟ್ಟ ಸೀರೆಯಲ್ಲಿ ಪುಟ್ಟ ಹುಡುಗಿಯನ್ನು ನೋಡುವುದೇ ಚೆಂದ.

golden star ganesh celebrating her daughter charithriya birthday

ಮಗಳ ಬಗ್ಗೆ ಬರೆದುಕೊಂಡಿರುವ ಅವರು ''ನೀನು ಈ ಜಗತ್ತಿಗೆ ಬಂದ ದಿನ ಎಂದಿಗೂ ನನ್ನ ಮೆಚ್ಚಿನ ದಿನ ಆಗಿರುತ್ತದೆ. ಹ್ಯಾಪಿ ಬರ್ತ್ ಡೇ ಚೆರ್ರಿ. ಡಾರ್ಲಿಂಗ್ ನೀನು ಎಂದಿಗೂ ನನ್ನ ಪ್ರೀತಿಯ ಪುಟ್ಟ ಹುಡುಗಿ. ದೇವರು ನಿನಗೆ ಒಳ್ಳೆಯದು ಮಾಡಲಿ.'' ಎಂದಿದ್ದಾರೆ.

ಗಣೇಶ್ ಹಾಗೂ ಶಿಲ್ಪಾ ಗಣೇಶ್ ದಂಪತಿಗೆ ಆರತಿಗೆ ಮಗಳು ಚಾರಿತ್ರ್ಯ, ಕೀರ್ತಿಗೆ ಮಗ ವಿಹಾನ್ ಎನ್ನುವ ಹಾಗೆ ಇಬ್ಬರು ಮಕ್ಕಳಿದ್ದಾರೆ. ಚಾರಿತ್ರ್ಯ ಗಣೇಶ್ ದೊಡ್ಡ ಮಗಳಾಗಿದ್ದಾಳೆ. ಗಣೇಶ್ ಜೊತೆ 'ಚಮಕ್' ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ಆಕೆ ನಟಿಸಿದ್ದರು.

More from Filmibeat

English summary
Golden star Ganesh celebrating her daughter Charithriya's birthday. The posted Charithriya's beautiful photos and wished her.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X