ಗಣೇಶ್ ಮಗಳ ಆಕ್ಟಿಂಗ್ ನೋಡಿದ್ರೆ ಥ್ರಿಲ್ ಆಗ್ತೀರಾ.!
Recommended Video

ಗಣೇಶ್ ಪುತ್ರಿ ಮಾಡಿರೋ ವಿಡಿಯೋ ನೋಡಿ..! | Filmibeat Kannada
ಗೋಲ್ಡನ್ ಸ್ಟಾರ್ ಗಣೇಶ್ ಅವರ ಆಕ್ಟಿಂಗ್ ನೋಡಿದ್ದೀರಾ. ಇನ್ನು 'ಚಮಕ್' ಸಿನಿಮಾ ನೋಡಿದರು ಗಣೇಶ್ ಅವರ ಮಗಳ ಆಕ್ಟಿಂಗ್ ಕೂಡ ನೋಡೇ ಇರ್ತೀರಾ.
ಒಂದು ವೇಳೆ 'ಚಮಕ್' ಸಿನಿಮಾದಲ್ಲಿ ಗಣೇಶ್ ಅವರ ಮಗಳ ಅಭಿನಯ ನೋಡದೇ ಇದ್ದವರಿಗೆ, ಇನ್ನೊಂದು ರೀತಿಯಲ್ಲಿ ಆ ಅವಕಾಶ ಸಿಕ್ಕಿದೆ.
ಹೌದು, ಗಣೇಶ್ ಅವರ ಮಗಳು ಚಾರಿತ್ರ್ಯ ಡಬ್ ಸ್ಮ್ಯಾಶ್ ಮಾಡಿದ್ದು, ಆ ವಿಡಿಯೋವನ್ನ ನಟ ಗಣೇಶ್ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಚಾರಿತ್ರ್ಯ ಅವರ ಮೊದಲ ಡಬ್ ಸ್ಮ್ಯಾಶ್ ವಿಡಿಯೋ ಆಗಿರುವುದು ವಿಶೇಷ.

ಪ್ರೇಮಲೋಕ ಚಿತ್ರದ 'ನೋಡಮ್ಮ ಹುಡುಗಿ ಕೇಳಮ್ಮ ಸರಿಯಾಗಿ' ಹಾಡಿನ ಒಂದು ಸಾಲಿಗೆ ಡಬ್ ಸ್ಮ್ಯಾಶ್ ಮಾಡಿದ್ದು, ತುಂಬಾ ಮುದ್ದಾಗಿ, ಚೆನ್ನಾಗಿ, ಒಳ್ಳೆಯ ನಟಿಯಂತೆ ಅಭಿನಯ ಮತ್ತು ಎಕ್ಸ್ ಪ್ರೆಶನ್ ಕೂಡ ನೀಡಿದ್ದಾರೆ.
ಸದ್ಯ, 'ಆರೆಂಜ್' ಚಿತ್ರದಲ್ಲಿ ಗಣೇಶ್ ನಟಿಸುತ್ತಿದ್ದಾರೆ. ಇನ್ನು ಮಗಳು ಚಾರಿತ್ರ್ಯ ಈಗಾಗಲೇ ಬಾಲನಟಿಯಾಗಿ ಸಿನಿಮಾರಂಗಕ್ಕೆ ಎಂಟ್ರಿಕೊಟ್ಟಿದ್ದು, ಬಹುಶಃ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸಿನಿಮಾಗಳಲ್ಲಿ ಅಭಿನಯಿಸಬಹುದು.
More from Filmibeat
English summary
Golden star ganesh has taken his twitter account to share his daughter charitra first dubsmash video.


Click it and Unblock the Notifications











