ಒಂದೇ ಸಿನಿಮಾದಲ್ಲಿ ಸ್ಯಾಂಡಲ್‌ವುಡ್‌ನ ಇಬ್ಬರು ತ್ಯಾಗರಾಜರು; ಗಣೇಶ್-ರಮೇಶ್ 'ಗ್ರೇಟೆಸ್ಟ್ ಶೋ'

ಕೆಲವು ಕಾಂಬಿನೇಷನ್‌ಗಳೇ ಹಾಗೆ ಕೇಳಿದ ಕೂಡಲೇನೆ ತಲೆಯೊಳಗೆ ಕೂತು ಬೀಡುತ್ತೆ. ಇಬ್ಬರು ಹೀರೊಗಳು ಒಂದೇ ಸಿನಿಮಾದಲ್ಲಿ ನಟಿಸುತ್ತಾರೆ ಅನ್ನೋದೆ ಸಿನಿಪ್ರೇಮಿಗಳಲ್ಲಿ ದೊಡ್ಡದೊಂದು ಕ್ರೇಜ್ ಹುಟ್ಟಿಸುತ್ತೆ. ಕನ್ನಡ ಚಿತ್ರರಂಗದಲ್ಲಿ ಸದ್ಯ ಅಂತಹದ್ದೊಂದು ಕ್ರೇಜ್ ಹುಟ್ಟಾಕುತ್ತಿರೋದು ಗಣೇಶ್ ಹಾಗೂ ರಮೇಶ್ ಅರವಿಂದ್ ಅವರ ಕ್ರೇಜಿ ಕಾಂಬಿನೇಷನ್.

ಇವರೊಬ್ಬರು ಒಂದೇ ಸಿನಿಮಾ ಒಟ್ಟಿಗೆ ನಟಿಸುತ್ತಿದ್ದಾರೆ. ಆ ಸಿನಿಮಾ ಪೋಸ್ಟರ್ ಕೂಡ ಈಗಾಗಲೇ ರಿವೀಲ್ ಆಗಿದೆ. ಒಂದು ಹಳೆ ಪೋಸ್ಟ್ ಕಾರ್ಡ್ ಮೇಲೆ ಕೇವಲ ಇಬ್ಬರ ಫೋಟೊ ಇಟ್ಟಿದ್ದರೆ ಅಷ್ಟೊಂದು ಮಜಾ ಕೊಡುತ್ತಿರಲಿಲ್ಲ. ಆದರೆ, ಈ ಟೈಟಲ್ ಇಲ್ಲದ ಪೋಸ್ಟರ್ ಬೇರೆ ಏನೋ ಹೇಳುವುದಕ್ಕೆ ಹೊರಟಿದೆ. ಇನ್ನೂ ಟೀಮ್ ಬೇರೆ "ನೀವು ಹಿಂದೆಂದೂ ನೋಡಿರದ ಗ್ರೇಟೆಸ್ಟ್ ಶೋ" ಎಂದು ಹೇಳಿಕೊಂಡಿದೆ.

Golden Star Ganesh Ramesh Aravind combination movie announced here is the details

ಪೋಸ್ಟರ್ ಏನೋ ಮಜವಾಗಿದೆ. ಆದರೆ, ಅದಕ್ಕಿಂತಲೂ ಕ್ರೇಜಿ ಅಂತ ಅನಿಸಿದ್ದು ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ರಮೇಶ್ ಅರವಿಂದ್ ಕಾಂಬಿನೇಷನ್. ಈ ಹಿಂದೆ ಈ ಜೋಡಿ ಒಂದೇ ಸಿನಿಮಾಗೆ ಒಟ್ಟಿಗೆ ಕೆಲಸ ಮಾಡಿದ್ದರೂ, ಹೀರೋಗಳಾಗಿ ಸ್ಕ್ರೀನ್ ಶೇರ್ ಮಾಡಿಕೊಂಡಿರಲಿಲ್ಲ. ಆದ್ರೀಗ ಒಂದೇ ಪರದೆ ಮೇಲೆ ಇಬ್ಬರು ಸ್ಯಾಂಡಲ್‌ವುಡ್‌ನ ತ್ಯಾಗರಾಜರು ತಮ್ಮ ಕಥೆ ಹೇಳುವುದಕ್ಕೆ ಬರುತ್ತಿದ್ದಾರೆ.

ಕನ್ನಡ ಚಿತ್ರರಂಗದ ತ್ಯಾಗರಾಜ ಯಾರು ಅಂತ ವಿಶೇಷವಾಗಿ ಹೇಳಬೇಕಿಲ್ಲ. ಒಂದಿಷ್ಟು ವರ್ಷಗಳ ಕಾಲ ರಮೇಶ್ ಅರವಿಂದ್‌ಗೆ ಈ ಹೆಸರು ಅಭಿಮಾನಿಗಳೇ ಪ್ರೀತಿ ಇಟ್ಟಿದ್ದರು. ಬ್ಯಾಕ್ ಟು ಬ್ಯಾಕ್ ಹಿಟ್‌ಗಳನ್ನು ಕೊಟ್ಟಿದ್ದ ರಮೇಶ್ ಅರವಿಂದ್ ಪ್ರತಿ ಸಿನಿಮಾದಲ್ಲೂ ನಾಯಕಿಯನ್ನು ಕಳೆದುಕೊಂಡಿದ್ದರು. ಅದಕ್ಕೆ ಪ್ರೀತಿಯಿಂದ ತ್ಯಾಗರಾಜ ಎಂದು ಫ್ಯಾನ್ಸ್ ಕರೆದಿದ್ದರು. ಮುಂಗಾರು ಮಳೆ ಬಂದ್ಮೇಲೆ ಅದು ಗೋಲ್ಡನ್ ಸ್ಟಾರ್ ಗಣೇಶ್ ಕಡೆಗೆ ಶಿಫ್ಟ್ ಆಗುತ್ತಿತ್ತು.

Golden Star Ganesh Ramesh Aravind combination movie announced here is the details

ರಮೇಶ್ ಅರವಿಂದ್ ಹಾಗೂ ಗಣೇಶ್ ಇಬ್ಬರಲ್ಲೂ ಒಂದು ಸಾಮ್ಯತೆಯಿದೆ. ಈ ಇಬ್ಬರೂ ನಟರು ಸಿನಿಮಾದಲ್ಲಿ ಎಷ್ಟು ನಗಿಸಬಲ್ಲರೋ ಅಷ್ಟೇ ಕಣ್ಣಲ್ಲಿ ನೀರು ಹಾಕಿಸಬಲ್ಲರು. ಇಬ್ಬರೂ ಈ ಎರಡು ವಿಷಯದಲ್ಲಿ ನಿಸ್ಸೀಮರು. ಇನ್ನೊಂದು ಸಾಮ್ಯತೆ ಅಂದರೆ, ಇವರಿಬ್ಬರ ಸಿನಿಮಾಗಳು ಹೆಚ್ಚು ಕಡಿಮೆ ಒಂದೇ ಜಾನರ್‌ಗೆ ಹೋಲಿಸಬಹುದು. ಈ ಕಾರಣಕ್ಕೆ ಸ್ಯಾಂಡಲ್‌ವುಡ್‌ಗೆ ಇದೊಂದು ಕ್ರೇಜಿ ಕಾಂಬಿನೇಷನ್ ಅಂತ ನಿಸ್ಸಂದೇಹವಾಗಿ ಹೇಳಬಹುದು.

ಈ ಹಿಂದೆ ಇವರಿಬ್ಬರ ನಟಿಸುತ್ತಿರುವ ಇದೇ ಸಿನಿಮಾದ ಪೋಸ್ಟರ್ ಒಂದನ್ನು ರಿವೀಲ್ ಮಾಡಲಾಗಿತ್ತು. ಈಗ ಗಣೇಶ್ ಹುಟ್ಟುಹಬ್ಬಕ್ಕೆ ಮತ್ತೊಂದು ಪೋಸ್ಟರ್ ರಿವೀಲ್ ಮಾಡಿದ್ದಾರೆ. ಪುಷ್ಪಕ ವಿಮಾನ, ಇನ್ಸ್‌ಪೆಕ್ಟರ್ ವಿಕ್ರಮ್, ಮಾನ್ಸೂನ್ ರಾಗದಂತಹ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ವಿಖ್ಯಾತ್ ಎ ಆರ್ ಈಗ ನಿರ್ದೇಶಕರಾಗಿರುವುದು ವಿಶೇಷ. ಸದ್ಯ ಪೋಸ್ಟರ್‌ನಲ್ಲಿ ಹೆಚ್ಚಿನ ವಿಷಯವನ್ನೇನು ಹೇಳಿಲ್ಲ. ಆದರೆ, ಒಂದಿಷ್ಟು ಸುಳಿವನ್ನಂತೂ ಕೊಟ್ಟಿದ್ದಾರೆ.

ಈ ಪೋಸ್ಟರ್‌ನಲ್ಲಿ ರಮೇಶ್ ಅರವಿಂದ್ ಹಾಗೂ ಗಣೇಶ್ ಅವರ ಯಂಗ್ ಇರುವ ಫೋಟೊಗಳನ್ನು ಬಳಸಲಾಗಿದೆ. ಒಂದು ಕಾಗದ ಲಕೋಟೆ, ಅದರ ಮೇಲೊಂದು ಒಂದು ಪೀಪಿ ಇಡಲಾಗಿದೆ. ವಿದೇಶದ ಸೀಲೊಂದು ಇದೆ. ಹೀಗಾಗಿ ಓಲ್ಡ್ ಫೋಟೊ ತೋರಿಸಿದ್ದರಿಂದ, ಇದೊಂದು ರೆಟ್ರೋ ಸಿನಿಮಾ ಇರಬಹುದಾ? ಅನ್ನೋ ಅನುಮಾನ ಮೂಡಿದರೂ, ರಮೇಶ್ ಅರವಿಂದ್ ಬರ್ತ್‌ಡೇ ವೇಳೆ ರಿಲೀಸ್ ಆದ ಫೋಟೊ ಬೇರೆ ಹೇಳುತ್ತೆ. ಏನಕ್ಕೂ ಆಗಸ್ಟ್ 16ಕ್ಕೆ ಫಸ್ಟ್ ಲುಕ್ ರಿಲೀಸ್ ಆಗುತ್ತೆ. ಅಲ್ಲಿವರೆಗೂ ಕುತೂಹಲದಿಂದ ಕಾಯೋಣ.

More from Filmibeat

English summary
Ganesh and Ramesh Aravind combination movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X