Baanadariyalli: 'ಬಾನದಾರಿಯಲಿ' ಪ್ರೇಕ್ಷಕರು ಏನಂದ್ರು? ಗಣೇಶ್-ರುಕ್ಮಿಣಿ-ರಂಗಾಯಣ ರಘುಗೆ ಜೈ!
ಈ ವಾರ ರಿಲೀಸ್ ಆಗುತ್ತಿರುವ ಬಹು ನಿರೀಕ್ಷಿತ ಸಿನಿಮಾ 'ಬಾನದಾರಿಯಲಿ'. ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಪ್ರೀತಂ ಗುಬ್ಬಿ ಕಾಂಬಿನೇಷನ್ ಸಿನಿಮಾ ಈಗಾಗಲೇ ಟೀಸರ್, ಟ್ರೈಲರ್ ಮೂಲಕ ಗಮನ ಸೆಳೆದಿದೆ.
ಸೆಪ್ಟೆಂಬರ್ 28ರಂದು ರಿಲೀಸ್ ಆಗುತ್ತಿರುವ ಈ ಸಿನಿಮಾ ಬಿಡುಗಡೆಗೂ ಮುನ್ನವೇ ವಿಶೇಷ ಪ್ರದರ್ಶನವನ್ನು ಹಮ್ಮಿಕೊಂಡಿದ್ದರು. ಎಲೆಲ್ಲಿ ಪ್ರೀಮಿಯರ್ ಹಾಕಿದ್ದರೋ ಅಲ್ಲೆಲ್ಲ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ. ಗಣೇಶ್, ರುಕ್ಮಿಣಿ ವಸಂತ್ ಹಾಗೂ ರಂಗಾಯಣ ರಘು ಪ್ರೀಮಿಯರ್ ಶೋ ನೋಡಿದ ಪ್ರೇಕ್ಷಕರ ಮನಗೆದಿದ್ದಾರೆ. ಅಷ್ಟೇ ಅಲ್ಲದೆ ಸಿನಿಮಾ ನೋಡಿದ ಪ್ರೇಕ್ಷಕರು ಅಭಿಪ್ರಾಯ ಏನಿದೆ? ತಿಳಯಲು ಮುಂದೆ ಓದಿ.

"ಕ್ಲೈಮ್ಯಾಕ್ಸ್, ಕೀನ್ಯಾ ಫಾರೆಸ್ಟ್ ಸೂಪರ್"
"ಬರೀ ಲವ್ ಸ್ಟೋರಿ ಅಂತ ತೋರಿಸುವುದಕ್ಕೆ ಹೋಗಿಲ್ಲ. ಹುಡುಗ ಹುಡುಗಿ ಪ್ರೀತಿ ಅಂತ ತೋರಿಸೋಕೆ ಹೋಗಿಲ್ಲ. ಅವಳು ಇಷ್ಟ ಪಟ್ಟಿದ್ದು, ಅವಳ ಪ್ರಪಂಚ, ಕನಸು ಅದೆನ್ನಲ್ಲ ಈಡೇಸುತ್ತಾನೆ. ಅದನ್ನು ಎಮೋಷನಲ್ ಆಗಿ ತುಂಬಾ ಚೆನ್ನಾಗಿ ತೋರಿಸಿದ್ದಾರೆ. ಆಮೇಲೆ ಕ್ಲೈಮ್ಯಾಕ್ಸ್, ಕೀನ್ಯಾ ಫಾರೆಸ್ಟ್ ಎಲ್ಲಾ ಸೂಪರ್ ಆಗಿದೆ. ಮ್ಯೂಸಿಕ್ ಇನ್ನೂ ಚೆನ್ನಾಗಿರಬಹುದಿತ್ತು. ಆದರೂ ಓಕೆ. ಪ್ರತಿ ಸಿನಿಮಾದಲ್ಲಿ ಮಾಡಿದ ಹಾಗೆ ಮನಸ್ಸಲ್ಲಿ ಅಳು ಇಟ್ಕೊಂಡು.. ಆಚೆ ನಗಿಸಿಕೊಂಡು.. ಸೂಪರ್ ಆಗಿದೆ. ರುಕ್ಮಿಣಿ ವಸಂತ್ ಅದ್ಭುತವಾಗಿ ಮಾಡಿದ್ದಾರೆ." ಎಂದು ಒಬ್ಬರು ಅಭಿಪ್ರಾಯ ಪಟ್ಟಿದ್ದಾರೆ.
"ಗಣೇಶ್ ಒಬ್ಬರಿಗೆ ನಗಿಸೋಕೆ ಅಳಿಸೋಕೆ ಬರೋದು"
"ಫಸ್ಟ್ ಹಾಫ್ ಹಾಗೂ ಸೆಕೆಂಡ್ ಹಾಫ್ ಸಖತ್ ಆಗಿ ತೋರಿಸಿದ್ದಾರೆ. ರುಕ್ಮಿಣಿ ವಸಂತ್ ಅವರ ಪಾತ್ರ ಫಸ್ಟ್ ಹಾಫ್‌ನಲ್ಲಿ ಅದ್ಭುತವಾಗಿದೆ. ಫಸ್ಟ್ ಹಾಫ್ ಚೆನ್ನಾಗಿದೆ. ಎಮೋಷನಲ್ ಆಗಿದೆ. ಗಣೇಶ್ ಒಬ್ಬರಿಗೆ ನಗಿಸೋಕೆ ಹಾಗೂ ಅಳಿಸೋಕೆ ಬರೋದು ಸಿನಿಮಾ ಸೂಪರ್ ಆಗಿದೆ." ಎಂದು ಇನ್ನೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.
"ರಂಗಾಯಣ ರಘು ಪಾತ್ರ ಅದ್ಭುತ"
"ಸಿನಿಮಾ ಚೆನ್ನಾಗಿದೆ. ರಂಗಾಯಣ ರಘು ಅಪ್ಪ ಪಾತ್ರವನ್ನು ಅದ್ಭುತವಾಗಿ ಮಾಡಿದ್ದಾರೆ. ಹಾಗೇ ಗಣೇಶ್ ಎಲ್ಲಾ ಸಿನಿಮಾಗಳಂತೆ ಹೇಗೆ ಲವ್ ಎಮೋಷನ್ ಕೊಟ್ಟಿದ್ದಾರೋ ಹಾಗೆ ಕೊಟ್ಟಿದ್ದಾರೆ." ಎಂದಿದ್ದಾರೆ ಪ್ರೇಕ್ಷಕ.

"ಗಣೇಶ್-ರುಕ್ಮಿಣಿ ವಸಂತ್ ಸೂಪರ್"
"ಮೂವಿ ಚೆನ್ನಾಗಿದೆ. ಎಮೋಷನಲ್ ಕಂಟೆಂಟ್ ತುಂಬಾನೇ ಇದೆ. ಸಿನಿಮ್ಯಾಟೋಗ್ರಫಿ ಚೆನ್ನಾಗಿದೆ. ಕೆಲವು ಕಡೆ ಮ್ಯೂಸಿಕ್ ಹಾಗೂ ಸಾಂಗ್ಸ್ ಚೆನ್ನಾಗಿದೆ. ಸಿನಿಮಾದಲ್ಲಿ ಇಬ್ಬರು ಹೀರೊಯಿನ್ ಇದ್ದಾರೆ. ಅದರಲ್ಲಿ ಗಣೇಶ್ ಹಾಗೂ ರುಕ್ಮಿಣಿ ಕಾಂಬಿನೇಷನ್ ಜಾಸ್ತಿಯಿದೆ. ಸಿನಿಮಾ ಚೆನ್ನಾಗಿದೆ ನೋಡಬಹುದು." ಎನ್ನುತ್ತಾರೆ.
"ಕೊನೆಯ 30 ನಿಮಿಷ ಸಂಕಟ ಆಗುತ್ತೆ"
"ಗಣೇಶ್ ಅವರ ನಟನ ತಾಕತ್ತು ಏನು ಅನ್ನೋದನ್ನು ಈ ಸಿನಿಮಾದಲ್ಲಿ ನೋಡಬಹುದು. ಎಮೋಷನಲ್ ಸೀನ್‌ನಲ್ಲಿ ಗಣೇಶ್ ಎಷ್ಟು ಪರ್ಫೆಕ್ಟ್ ಅನ್ನೋದು ಈ ಸಿನಿಮಾದಲ್ಲಿ ಗೊತ್ತಾಗುತ್ತೆ. ಕೊನೆಯ 30 ನಿಮಿಷ ಅಳಿಸುತ್ತಾರೆ. ಸಾಮಾನ್ಯವಾಗಿ ಅಳೋದು ಬೇರೆ. ಹೊಟ್ಟೆಯಲ್ಲಿ ಸಂಕಟ ಆಗಿ ಅಳೋದು ಬೇರೆ. ಗಣೇಶ್ ವೃತ್ತಿ ಬದುಕಿನ ಬೆಸ್ಟ್ ಸಿನಿಮಾ ಅನ್ನಬಹುದು. ಗಣೇಶ್ ಹಾಗೂ ರಂಗಾಯಣ ರಘು ಕಾಂಬಿನೇಷನ್ ಹೈಲೈಟ್ ಆಗುತ್ತೆ." ಎಂದು ಪ್ರೇಕ್ಷಕರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.


Click it and Unblock the Notifications











