ನಿರ್ದೇಶಕ ಸಿಂಪಲ್ ಸುನಿ ಕೋರ್ಟ್ ಕಟಕಟೆ ಏರಿದ್ದೇಕೆ ?

ಸಿಂಪಲ್ ಆಗಿ‌ ಒಂದು ಲವ್ ಸ್ಟೋರಿ ಕಥೆ ಹೇಳಿ ಗೆದ್ದಿದ್ದ ಸಿಂಪಲ್ ಸುನಿ ಈಗ ಫುಲ್ ಬ್ಯುಸಿಯಾಗಿದ್ದಾರೆ. ಸಿಂಪಲ್ ಸುನಿ ನಿರ್ದೇಶಿಸಿದ ಎರಡು ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ರಿಲೀಸ್ ಆಗುತ್ತಿವೆ. ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಸಖತ್ ಹಾಗೂ ಶರಣ್ ನಟನೆಯ ಅವತಾರ ಪುರುಷ. ಈ ಸಿನಿಮಾಗಳ ಪ್ರಚಾರದಲ್ಲಿ ನಿರ್ದೇಶಕ ಸುನಿ ಬ್ಯುಸಿಯಾಗಿದ್ದಾರೆ. ಆದರೆ, ಈ ಎರಡೂ ಸಿನಿಮಾಗಳ ನಿರ್ದೇಶಕ ಈಗ ಕೋರ್ಟ್ ಕಟಕಟೆಯಲ್ಲಿ ನಿಂತಿದ್ದಾರೆ.

ಸಿಂಪಲ್ ಸುನಿ ಕೋರ್ಟ್ ಕಟಕಟೆಯಲ್ಲಿ ನಿಲ್ಲುವಂತಹದ್ದು ಏನು ಮಾಡಿದರು? ಎನ್ನುವ ಪ್ರಶ್ನೆ ಸಿನಿಪ್ರಿಯರನ್ನು ಕಾಡದೆ ಇರುವುದಿಲ್ಲ. ಅಷ್ಟಕ್ಕೂ ಸಿಂಪಲ್ ಸುನಿ ಕೋರ್ಟ್ ಕಟಕಟೆಯನ್ನು ಸುಮ್ಮನೆ ಏರಿಲ್ಲ. ಅದಕ್ಕೆ ಪ್ರಮುಖ ಕಾರಣ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಸಖತ್ ಸಿನಿಮಾ. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಅದ್ಯಾವಾಗ ಸಿನಿಮಾ ಶುರುವಾಯ್ತೋ ಅಲ್ಲಿಂದ ಇಂತಹದ್ದು ಏನಾದರೂ ನಡೆಯುತ್ತಲೇ ಇದೆ.

ಸಖತ್ ಸಿನಿಮಾಗಾಗಿ ಕೋರ್ಟ್ ಕಟಕಟೆಗೆ ನಿಂತ ಸುನಿ

ಅಂದ್ಹಾಗೆ ಸಿಂಪಲ್ ಸುನಿ ಇಲ್ಲಿ ಕೋರ್ಟ್ ಕಟಕಟೆಗೆ ಏರಿರುವುದಕ್ಕೆ ಕಾರಣ ಸಖತ್ ಸಿನಿಮಾದ ಪ್ರಚಾರ. ಸಿಂಪಲ್ ಸುನಿ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಕಾಂಬಿನೇಷನ್ ಸಖತ್ ಸಿನಿಮಾ ಇದೇ ನವೆಂಬರ್ 26ಕ್ಕೆ ಬಿಡುಗಡೆಯಾಗುತ್ತಿದೆ. ಚಮಕ್ ಬಳಿಕ ಈ ಜೋಡಿ ಮತ್ತೆ ಜೊತೆಯಾಗಿ ಸಿನಿಪ್ರೇಮಿಗಳಿಗೆ ಹಾಸ್ಯದ ರಸದೌತಣ ಬಡಿಸಲು ಸಜ್ಜಾಗಿದೆ. ಸಿನಿಪ್ರೇಕ್ಷಕರನ್ನು ನಗುವಿನ ಕಡಲಲ್ಲಿ ತೇಲಿಸಲು ಮುಂದಾಗಿದ್ದಾರೆ. ಅದಕ್ಕೂ ಮುನ್ನ ಭರ್ಜರಿ ಪ್ರಚಾರಕ್ಕೆ ನಿಂತಿದ್ದಾರೆ ನಿರ್ದೇಶಕ ಸಿಂಪಲ್ ಸುನಿ.

Golden star Ganesh starrer Sakkath cinema Director new promotional plan

ಸಿನಿಮಾ ಮಾಲ್‌ನಲ್ಲಿ ಕೋರ್ಟ್ ಕಟಕಟೆ
ಸಖತ್ ಸಿನಿಮಾದ ಪ್ರಮೋಷನ್ ಪೋಸ್ಟರ್ ಹಾಗೂ ಟೀಸರ್ ಹಾಗೂ ಹಾಡುಗಳು ಈಗಾಗಲೇ ಪ್ರೇಕ್ಷಕರಿಗೆ ಹಿಡಿಸಿದೆ. ಈ ನಡುವೆ ಸಖತ್ ಚಿತ್ರತಂಡ ಪ್ರಚಾರಕ್ಕಾಗಿ ಭರ್ಜರಿ ಪ್ಲ್ಯಾನ್ ಮಾಡಿದೆ. ಸಿನಿಮಾ ಬಿಡುಗಡೆಯಾಗುವ ಪ್ರತಿ ಮಾಲ್ ಗಳಲ್ಲಿ ಕೋರ್ಟ್ ಕಟಕಟೆ ನಿರ್ಮಿಸಿದೆ. ಸಖತ್ ಸಿನಿಮಾದ ದೃಶ್ಯದಲ್ಲಿ ಕೋರ್ಟ್ ಕಟಕಟೆಯ ದೃಶ್ಯವಿದೆ. ಅದೇ ದೃಶ್ಯವನ್ನು ಸಿನಿಮಾ ಮಾಲ್‌ನಲ್ಲೂ ಮರುಸೃಷ್ಟಿ ಮಾಡುವ ಸಖತ್ ಸಿನಿಮಾದ ನಿರ್ದೇಶಕರು ಮುಂದಾಗಿದ್ದಾರೆ.

ಗೋಲ್ಡನ್ ಸ್ಟಾರ್ ಸಖತ್ ಸಿನಿಮಾ ಕೋರ್ಟ್ ಸುತ್ತಲೂ ನಡೆಯುವ ಕಥೆಯಾಗಿದೆ. ಹೀಗಾಗಿ ಇಡೀ ಚಿತ್ರತಂಡ ಸೇರಿ ಪ್ರಚಾರಕ್ಕೆ ವಿನೂತನ ಪ್ಲ್ಯಾನ್ ಮಾಡಿದೆ. ಇದಕ್ಕಾಗಿ ಸಿನಿಮಾ ಮಾಲ್ ಅಂಗಳದಲ್ಲಿ‌‌ ಕೋರ್ಟ್ ಕಟಕಟೆಯನ್ನು ನಿರ್ಮಿಸಿದೆ. ಸಖತ್ ಸಿನಿಮಾ ನೋಡಲು ಬರುವ ಮಕ್ಕಳು ಹಾಗೂ ಕುಟುಂಬದ ಸದಸ್ಯರು ಈ ಕಟಕಟೆಯಲ್ಲಿ ನಿಂತು ಫೋಟೋಗೆ ಫೋಸ್ ಕೊಡಬಹುದು.

ನವೆಂಬರ್ 14ಕ್ಕೆ ಸಖತ್ ಸಿನಿಮಾದ ಟೈಟಲ್
ಸಖತ್ ಸಿನಿಮಾ ಬಿಡುಗಡೆಗೆ ಇನ್ನು ಕೆಲವೇ ದಿನಗಳಿವೆ ಹೀಗಾಗಿ ನವೆಂಬರ್ 14 ರಂದು ಸಖತ್ ಸಿನಿಮಾದ ಟೈಟಲ್ ರಿಲೀಸ್ ಆಗ್ತಿದೆ. ಕಾಮಿಡಿ ಜೊತೆ ನೈಜ ಸನ್ನಿವೇಶಗಳನ್ನು ತೆರೆಮೇಲೆ ತಂದಿರುವ ಸಖತ್ ಸಿನಿಮಾದಲ್ಲಿ ಗಣೇಶ್ ಗೆ ಜೋಡಿಯಾಗಿ ನಿಶ್ವಿಕಾ ನಾಯ್ಡು ಹಾಗೂ ಸುರಭಿ ನಟಿಸಿದ್ದಾರೆ. ಇವರೊಂದಿಗೆ ರಂಗಾಯಣ ರಘು, ಸಾಧುಕೋಕಿಲ, ಧರ್ಮಣ್ಣ ಕಡೂರು ಪೋಷಕ ಪಾತ್ರ ನಟಿಸಿದ್ದಾರೆ.

ಸಿಂಪಲ್ ಸುನಿ ಈಗಾಗಲೇ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಬಹುಪರಾಕ್ , ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ. ಚಮಕ್ ಅಂತಹ ಸಿನಿಮಾಗಳನ್ನು ನೀಡಿದ್ದು, ಸದ್ಯ ಸಖತ್ ಸಿನಿಮಾ ಮೂಲಕ ಸುದ್ದಿಯಲ್ಲಿದ್ದಾರೆ. ನಿರ್ದೇಶಕ ಸಿಂಪಲ್ ಸುನಿ ಸಿನಿಮಾಗಳು ಅಂದ್ರೆ ಚಿತ್ರಪ್ರೇಮಿಗಳು ಸಖತ್ ಕ್ಯೂರಿಯಾಸಿಟಿಯಿಂದ ನೋಡ್ತಾರೆ. ಸದಾ ಹೊಸತನದಿಂದ ಕೂಡಿಯುವ ಸಿನಿಮಾ ಸಿಂಪಲ್ ಸುನಿ ಈಗ ಕೋರ್ಟ್ ಕಟಕಟೆಯಲ್ಲಿ ನಿಂತು ಪ್ರಚಾರ ಮಾಡುತ್ತಿದ್ದಾರೆ.

More from Filmibeat

English summary
Golden star Ganesh starrer sakkath cinema director new promotional plan going viral. In every cinema mall Court scene has been implimented.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X