'ತ್ರಿಬಲ್ ರೈಡಿಂಗ್' ಸಿನಿಮಾದ ಪೇಯ್ಡ್ ಪ್ರೀಮಿಯರ್‌ಗೆ ಟಿಕೆಟ್ ಬುಕಿಂಗ್ ಆರಂಭ!

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ತ್ರಿಬಲ್ ರೈಡಿಂಗ್' ಸಿನಿಮಾ ಇದೇ ನವೆಂಬರ್ 25ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. 'ಗಾಳಿಪಟ 2' ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಗೋಲ್ಡನ್ ಸ್ಟಾರ್ ಮತ್ತೊಂದು ಸಕ್ಸಸ್‌ಫುಲ್ ಸಿನಿಮಾ ನೀಡುವುದಕ್ಕೆ ಮುಂದಾಗಿದ್ದಾರೆ.

ಗಣೇಶ್ ಸಿನಿಮಾ ಅಂದ್ರೆ ಮನರಂಜನೆಗೇನು ಕೊರತೆ ಇರೋದಿಲ್ಲ. ಆ ಸಿನಿಮಾಗಳಲ್ಲಿ ರೊಮ್ಯಾಂಟಿಕ್ ಸೀನ್‌ಗಳಿರುತ್ತೆ. ನವಿರಾದ ಪ್ರೇಮಕಥೆಗಂತೂ ಕೊರತೆ ಇರೋದಿಲ್ಲ. ಜೊತೆಗೆ ಕಾಮಿಡಿ ದೃಶ್ಯಗಳು ಇರುತ್ತವೆ. ಮಸ್ತ್ ಆಗಿರೋ ಹಾಡುಗಳಂತೂ ಇದ್ದೇ ಇರುತ್ತೆ.

ಈ ವಾರ ರಿಲೀಸ್ ಆಗುತ್ತಿರುವ 'ತ್ರಿಬಲ್ ರೈಡಿಂಗ್' ಸಿನಿಮಾ ಕೂಡ ಹಾಗೇ ಪ್ರೇಕ್ಷಕರಿಗೆ ಮಸ್ತ್ ಮನರಂಜನೆ ನೀಡುವ ಸೂಚನೆಯಂತೂ ನೀಡಿದೆ ಈಗಾಗಲೇ ರಿಲೀಸ್ ಆಗಿರೋ ಸಿನಿಮಾದ ಹಾಡುಗಳು, ಟ್ರೈಲರ್, ಟೀಸರ್ ಎಲ್ಲವೂ ಪ್ರೇಕ್ಷಕರಿಗೆ ಕಿಕ್ ಕೊಟ್ಟಿದೆ.

Golden Star Ganesh Starrer Triple Riding Movie Paid Premier Nov 24th

ಇದೇ ಭರವಸೆ ಮೇಲೆಯೇ ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾ 'ತ್ರಿಬಲ್ ರೈಡಿಂಗ್' ಪೇಯ್ಡ್ ಪ್ರೀಮಿಯರ್‌ ಶೋಗೆ ಟಿಕೆಟ್ ಬುಕಿಂಗ್ ಅನ್ನು ಓಪನ್ ಮಾಡಿದೆ. ಬುಕ್ ಮೈ ಶೋ ಮೂಲಕ ಟಿಕೆಟ್ ಬುಕ್ ಮಾಡಲು ಚಿತ್ರತಂಡ ಅನುವು ಮಾಡಿಕೊಟ್ಟಿದೆ. ನವೆಂಬರ್ 24ರಂದು ಬೆಂಗಳೂರು ಹಾಗೂ ಮೈಸೂರಿ ಸೇರಿದಂತೆ ಹಲವೆಡೆ ಟಿಕೆಟ್ ಬುಕಿಂಗ್ ಆರಂಭ ಮಾಡಿದೆ.

ಮಹೇಶ್ ಗೌಡ ನಿರ್ದೇಶನದ ಈ ತ್ರಿಕೋನ ಪ್ರೇಮಕತೆಯಲ್ಲಿ ಗಣೇಶ್ ಜೊತೆ ಅದಿತಿ ಪ್ರಭುದೇವ, ರಚನಾ ಇಂದರ್ ಹಾಗೂ ಮೇಘಾ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ರಂಗಾಯಣ ರಘು, ಸಾಧುಕೋಕಿಲಾ ಕಾಮಿಡಿ ಕೂಡ ಈ ಸಿನಿಮಾದಲ್ಲಿದ್ದು, ಪ್ರೇಕ್ಷಕರಿಗೆ ಎಂಟರ್ಟೈನ್ಮೆಂಟ್ ಸಿಗೋದು ಪಕ್ಕಾ.

More from Filmibeat

English summary
Golden Star Ganesh Starrer Triple Riding Movie Paid Premier Tomorrow, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X