300 ಎಕರೆಯ ಐಶಾರಾಮಿ ರೆಸಾರ್ಟ್‌ನಲ್ಲಿ 'ಗೂಗ್ಲಿ' ಬ್ಯೂಟಿ ಕೃತಿ ಕರಬಂಧ ಮದುವೆ; ಎಲ್ಲಿ? ಯಾವಾಗ?
'ಗೂಗ್ಲಿ' ಸಿನಿಮಾ ನೋಡಿದವರಿಗೆ ನಟಿ ಕೃತಿ ಕರಬಂಧ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಈ ನಟಿ ಕನ್ನಡಿಗರಿ ತುಂಬಾನೇ ಚಿರಪರಿಚಿತ. ಹೆಚ್ಚು ಕಡಿಮೆ ಒಂದು ದಶಕಗಳ ಕಾಲ ದಕ್ಷಿಣ ಭಾರತದಲ್ಲಿ ಮಿಂಚಿದ ಬಳಿಕ ಬಾಲಿವುಡ್ ಕಡೆಗೆ ಪಯಣ ಬೆಳೆಸಿದ್ದರು. ಕನ್ನಡ, ತೆಲುಗು ಭಾಷೆಯ ಸಿನಿಮಾಗಳಲ್ಲಿ ಹೆಚ್ಚು ನಟಿಸಿದ್ದರೂ, ಯಶಸ್ಸು, ಹೆಸರು ಅಂತ ಸಿಕ್ಕಿದ್ದು ಕನ್ನಡ ಸಿನಿಮಾದಿಂದಲೇ.
ಇದೇ ಅದೆಷ್ಟೇ ಸಿನಿಮಾದಲ್ಲಿ ನಟಿಸಿದ್ದರೂ 'ಗೂಗ್ಲಿ' ಸಿನಿಮಾದಿಂದಲೇ ಕೃತಿ ಕರಬಂಧರನ್ನು ಇಂದಿಗೂ ಗುರುತಿಸುತ್ತಾರೆ. ಸದ್ಯ ದಕ್ಷಿಣ ಭಾರತದಿಂದ ದೂರವೇ ಉಳಿದಿರೋ ಈ ನಟಿಯೀಗ ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ಸಜ್ಜಾಗಿದ್ದಾರೆ. ಐದಾರು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದ ಬಾಲಿವುಡ್ ನಟ ಪುಲ್ಕಿತ್ ಸಮರ್ಥ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ಸಜ್ಜಾಗಿದ್ದಾರೆ.

ಕೃತಿ ಕರಬಂಧ ಹಾಗೂ ಪುಲ್ಕಿತ್ ಸಮರ್ಥ್ ಇದೇ ಮಾರ್ಚ್ 15ರಂದು ದೆಹಲಿಯಲ್ಲಿ ಗ್ರ್ಯಾಂಡ್ ಆಗಿ ಮದುವೆ ಆಗುತ್ತಿದ್ದಾರೆ ಎಂದು ಈಗಾಗಲೇ ವರದಿಯಾಗಿವೆ. ಈ ಜೋಡಿ ತಮ್ಮ ಆಪ್ತರಿಗೆ ಹಾಗೂ ಬಾಲಿವುಡ್‌ನ ಸಹೋದ್ಯೋಗಿಗಳಿಗೆ ಆಮಂತ್ರಣ ಪತ್ರವನ್ನು ನೀಡಿದ್ದಾರೆ. ಈ ಆಮಂತ್ರಣ ಪತ್ರಿಕೆ ಕೆಲವು ದಿನಗಳ ಹಿಂದಷ್ಟೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಈಗ ಈ ಜೋಡಿ ಮದುವೆ ಆಗುತ್ತಿರುವ ರೆಸಾರ್ಟ್ ಬಗ್ಗೆ ಮಾಹಿತಿ ಹೊರಬಿದ್ದಿದೆ. ಸುಮಾರು 300 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿರುವ ರೆಸ್ಪಾರ್ಟ್‌ನಲ್ಲಿ ಈ ಜೋಡಿ ಹಸಮಣೆ ತುಳಿಯಲಿದ್ದಾರೆ. ಅಷ್ಟಕ್ಕೂ ಈ ರೆಸಾರ್ಟ್‌ನ ವಿಶೇಷತೆಯೇನು? ಮದುವೆಯನ್ನು ಕಣ್ತುಂಬಿ ಕೊಳ್ಳಲು ಬರುವ ಅತಿಥಿಗಳಿಗೆ ಇಲ್ಲೇನು ಸೌಲಭ್ಯವಿದೆ? ಇಲ್ಲೇ ಯಾಕೆ ವಿವಾಹವಾಗುತ್ತಿದ್ದಾರೆ? ಅನ್ನೋದನ್ನು ತಿಳಿಯಲು ಮುಂದೆ ಓದಿ..
'ಗೂಗ್ಲಿ' ಬ್ಯೂಟಿ ಕೃತಿ ಕರಬಂಧ ಹಾಗೂ ಪುಲ್ಕಿತ್ ಸಮರ್ಥ್ ದೆಹಲಿಯಲ್ಲಿರುವ ಐಟಿಸಿ ಗ್ರ್ಯಾಂಡ್ ಐಶಾರಾಮಿ ರೆಸಾರ್ಟ್‌ನಲ್ಲಿ ಮದುವೆ ಆಗುತ್ತಿದ್ದಾರೆ ಎಂದು ಬಾಲಿವುಡ್ ಹಂಗಾಮ ವರದಿ ಮಾಡಿದೆ. ಈ ಗ್ರ್ಯಾಂಡ್ ರೆಸಾರ್ಟ್ 300 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿದೆ. ಈ ಭವ್ಯವಾದ ರೆಸಾರ್ಟ್ ಅರಮನೆಯ ವಾಸ್ತುಶಿಲ್ಪವನ್ನು ಹೊಂದಿದೆ. ಪ್ರಾಚೀನ ಅರಾವಳಿ ಶ್ರೇಣಿಯಲ್ಲಿ ಸುಂದರವಾದ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗಿದೆ.

ಅಂದ ಹಾಗೆ ಐಟಿಸಿ ಗ್ರ್ಯಾಂಡ್ ಭಾರತ್ ರೆಸಾರ್ಟ್‌ನಲ್ಲಿ ನಡೆಯುತ್ತಿರುವ ಮೊದಲ ಸೆಲೆಬ್ರೆಟಿ ವಿವಾಹ ಅನ್ನೋದು ಮತ್ತೊಂದು ವಿಶೇಷ. ಇದರಲ್ಲಿ ಸುಮಾರು 4 ಪ್ರೆಸಿಡೆಂನ್ಸಿಯಲ್ ವಿಲ್ಲಾವಿದೆ. ಹಾಗೇ ಸುಮಾರು 100 ಡಿಲಕ್ಸ್ ಸೂಟ್‌ಗಳಿದ್ದು, ಪ್ರತಿಯೊಂದಕ್ಕೂ ಪ್ರತ್ಯೇಕ ಸ್ವಿಮ್ಮಿಂಗ್ ಪೂಲ್‌ಗಳಿವೆ. ಏಷ್ಯಾದ ಏಕೈಕ 27 ಹೋಲ್ ಸಿಗ್ನೇಚರ್ ಗಾಲ್ಫ್ ಕ್ಲಬ್ ಇದೆ. ಐಷಾರಾಮಿ ಸ್ಪಾಗಳು ಸೇರಿದಂತೆ ಅನೇಕ ಸೌಲಭ್ಯಗಳಿವೆ.
ಇನ್ನು ಇಲ್ಲೇ ಮದುವೆ ಆಗುತ್ತಿರೋದಕ್ಕೆ ಕಾರಣವಿದೆ. ಕೃತಿ ಕರಬಂಧ ಹಾಗೂ ಪುಲ್ಕಿತ್ ಸಮರ್ಥ್ ಇಬ್ಬರೂ ದೆಹಲಿಯಲ್ಲೇ ಹುಟ್ಟಿ ಬೆಳೆದಿದ್ದಾರೆ. ಇವರ ಕುಟುಂಬ ದೆಹಲಿಯಲ್ಲಿಯೇ ನೆಲೆಸಿರುವುದರಿಂದ ಇದೇ ಸೂಕ್ತ ಆಯ್ಕೆ ಎಂದು ಜೋಡಿ ನಿರ್ಧರಿಸಿದೆ. ಹಾಗೇ ಈ ಜೋಡಿ ಆರತಕ್ಷತೆಯನ್ನು ದೆಹಲಿಯ ಐಟಿಸಿ ಗ್ರ್ಯಾಂಡ್ ಭಾರತ್‌ನಲ್ಲಿಯೇ ಹಮ್ಮಿಕೊಂಡಿದೆ ಎನ್ನಲಾಗಿದೆ.
ಕೃತಿ ಕರಬಂಧ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದ್ದರು. ಆ ವೇಳೆ ಪುಲ್ಕಿತ್ ಸಮರ್ಥ್ ಹಾಗೂ ಕೃತಿ ಇಬ್ಬರೂ 'ಪಾಗಲ್‌ಪಂತಿ' ಅನ್ನುವ ಸಿನಿಮಾದಲ್ಲಿ ನಟಿಸಿದ್ದರು. ಆ ವೇಳೆ ಇಬ್ಬರಿಗೂ ಪ್ರೀತಿ ಹುಟ್ಟಿಕೊಂಡಿತ್ತು. ಇಬ್ಬರೂ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ರಿಲೇಷನ್‌ಶಿಪ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ನಾಲ್ಕೈದು ವರ್ಷ ಡೇಟಿಂಗ್ ಮಾಡಿದ ಬಳಿಕ ಈಗ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.


Click it and Unblock the Notifications











