ಕನ್ನಡದ ಈ ಜನಪ್ರಿಯ ನಟಿ ಯಾರೆಂದು ಗುರುತಿಸಬಹುದೇ? ಶಿವಣ್ಣನ ಕುಟುಂಬಕ್ಕೆ ಬಾರೀ ಹತ್ತಿರ
ಸಿನಿಮಾ ತಾರೆಯರ ಹಿಂದೆ ಒಂದೊಂದು ಕಹಾನಿ ಇದ್ದೇ ಇರುತ್ತೆ. ಅದರಲ್ಲೂ ಕನ್ನಡದ ನಟಿಯರ ಬಗ್ಗೆ ತಿಳಿದುಕೊಳ್ಳುವುದಕ್ಕೆ ಸಿನಿಪ್ರಿಯರು ಯಾವಾಗಲೂ ಕಾತುರರಾಗಿರುತ್ತಾರೆ. ಕೇವಲ ಅವರ ಸಿನಿಮಾಗಳ ಬಗ್ಗೆ ಅಷ್ಟೇ ಅಲ್ಲ. ಅವರು ಪ್ರತಿಯೊಂದು ಹೆಜ್ಜೆಯನ್ನೂ ಗಮನಿಸುತ್ತಲೇ ಇರುತ್ತಾರೆ. ತಾರೆಯರ ಕುರಿತು ಚಿಕ್ಕ ಪುಟ್ಟ ವಿಷಯಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ. ಅದರಲ್ಲೂ ಅವರು ಬಾಲ್ಯದಲ್ಲಿ ಹೇಗಿದ್ದರು? ಬಾಲ್ಯದಲ್ಲಿ ನಟಿಸಿದ ಸಿನಿಮಾಗಳು, ಹೀಗೆ ಇಂಟ್ರೆಸ್ಟಿಂಗ್ ವಿಷಯಗಳನ್ನು ಕಲೆ ಹಾಕುತ್ತಲೇ ಇರುತ್ತಾರೆ.
ಇನ್ನು ನಟಿಯರು ತಮ್ಮ ಬಾಲ್ಯದ ಫೋಟೋಗಳನ್ನು ಹಂಚಿಕೊಳ್ಳುವುದೇ ಕಷ್ಟ. ಒಂದು ವೇಳೆ ಇಂತಹ ಫೋಟೋಗಳು ಅಭಿಮಾನಿಗಳ ಕೈ ಸೇರಿದರೆ ಮುಗಿದೇ ಹೋಯ್ತು. ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ವೈರಲ್ ಮಾಡಿಬಿಡುತ್ತಾರೆ. ಇಲ್ಲೊಬ್ಬ ಕನ್ನಡದ ಜನಪ್ರಿಯ ನಟಿಯ ಬಾಲ್ಯದ ಪೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಆ ಫೋಟೊದಲ್ಲಿ ಇರುವ ಕನ್ನಡದ ಜನಪ್ರಿಯ ನಟಿ ಯಾರೆಂದು ನೀವು ಗುರುತಿಸಬಲ್ಲಿರೇ?

ಕನ್ನಡದ ಈ ಜನಪ್ರಿಯ ನಟಿಯರ ಬಗ್ಗೆ ಸುಳಿವು
ಚೈಲ್ಡ್ ಮಾಡಲ್ ಆಗಿ ವೃತ್ತಿ ಜೀವನವನ್ನು ಆರಂಭಿಸಿದ್ದರು
ಬಾಲನಟಿಯಾಗಿ ಬಣ್ಣ ಹಚ್ಚಿದ ಮೊದಲ ಸಿನಿಮಾ 'ಕಿಲಾಡಿ ಕಿಟ್ಟು'
ಬಾಲನಟಿಯಾಗಿ ನಟಿಸಿದ 2ನೇ ಸಿನಿಮಾ 'ಕುಳ್ಳ ಕುಳ್ಳಿ'
ಶಿವಣ್ಣನ ಕುಟುಂಬಕ್ಕೆ ಈ ನಟಿ ತುಂಬಾನೇ ಹತ್ತಿರ
ಈ ಜನಪ್ರಿಯ ನಟಿ ಯಾರು?
ಕನ್ನಡದ ಈ ಜನಪ್ರಿಯರ ನಟಿಯ ಬಾಲ್ಯದ ಫೋಟೊ ಬಗ್ಗೆ ಇಷ್ಟು ಸುಳಿವು ಕೊಟ್ಮೇಲೆ ಯಾರೆಂದು ನೀವು ಗುರುತಿಸಬಹುದೇ? ಕನ್ನಡಿಗರ ಈ ಅಚ್ಚು ಮೆಚ್ಚಿನ ನಟಿ ಕನ್ನಡ ಚಿತ್ರರಂಗದಲ್ಲಿ ಸುಮಾರು 50 ವರ್ಷಗಳಿಂದ ನಟಿಸುತ್ತಿದ್ದಾರೆ. ಡಾ.ರಾಜ್‌ಕುಮಾರ್ ಅವರಿಂದ ಹಿಡಿದು ಕನ್ನಡದ ಬಹುತೇಕ ಎಲ್ಲಾ ದಿಗ್ಗಜರೊಂದಿಗೆ ನಟಿಸಿದ್ದಾರೆ.80 ಹಾಗೂ 90ರ ದಶಕದಲ್ಲಿ ಇವರು ಬಹುಬೇಡಿಕೆಯ ನಟಿಯಾಗಿದ್ದರು. ಇಂದಿಗೂ ಇವರು ಸಿನಿಮಾಗಳು ಹಾಗೂ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ.
ಎರಡೂವರೆ ವರ್ಷವಿರುವಾಗಲೇ ನಟನೆ
ಈ ನಟಿಗೆ ಕೇವಲ ಎರಡೂವರೆ ವರ್ಷವಿತ್ತು. ಆಗಲೇ ಇವರು ಜಾಹೀರಾತಿನಲ್ಲಿ ನಟಿಸಿದ್ದರು. ವಿಕಿಪಿಡಿಯಾ ಪ್ರಕಾರ, ಕ್ವಾಲಿಟಿ ಬಿಸ್ಕೆಟ್‌ನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಇಲ್ಲಿಂದ ಇವರ ನಟನಾ ಜರ್ನಿ ಆರಂಭ ಆಗಿತ್ತು. 'ಕಿಲಾಡಿ ಕಿಟ್ಟು', 'ಕುಳ್ಳ ಕುಳ್ಳಿ' ಅಂತಹ ಸಿನಿಮಾಗಳಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದರು. ಕೇವಲ 12 ವರ್ಷವಿರುವಾಗಲೇ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಎಂಟ್ರಿಕೊಟ್ಟಿದ್ದರು. ಮೊದಲ ಸಿನಿಮಾವೇ ಸೂಪರ್ ಹಿಟ್ ಆಗಿತ್ತು. ಅಲ್ಲಿಂದ ಈ ನಟಿ ಮತ್ತೆ ಹಿಂತಿರುಗಿ ನೋಡಲೇ ಇಲ್ಲ. ಈಗಲಾದರೂ ಹೇಳಬಹುದೇ?

ಪಾರ್ವತಮ್ಮನವರ ಫೇವರಿಟ್ ನಟಿ
ಈ ನಟಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುವುದಕ್ಕೆ ಪಾರ್ವತಮ್ಮ ರಾಜ್‌ಕುಮಾರ್ ಅವರೇ ಕಾರಣ. ಶಿವಣ್ಣನ ಮೊದಲ ಸಿನಿಮಾದ ನಾಯಕಿ. ಹೌದು, ಇವರು ಮತ್ಯಾರೂ ಅಲ್ಲ ಕನ್ನಡದ ಜನಪ್ರಿಯ ನಟಿ ಸುಧಾರಾಣಿ. 52 ವರ್ಷದ ಈ ನಟಿ ಎರಡೂವರೆ ವರ್ಷವಿರುವಾಗಲೇ ಕ್ಯಾಮರಾ ಫೇಸ್ ಮಾಡಿದವರು. ಅಲ್ಲಿಂದ ಬಣ್ಣದ ನಂಟು ಬಿಟ್ಟು ಹೋಗಿಲ್ಲ. ಅಲ್ಲಿಂದ ಇಲ್ಲಿವರೆಗೂ ಸುಧಾರಾಣಿಯವರ ಯಶಸ್ಸಿನ ಪಯಣ ಮುಂದುವರೆದಿದೆ.
50 ವರ್ಷದ ಜರ್ನಿ
ಎರಡೂವರೆ ವರ್ಷವಿರುವಾಗಲೇ ಕ್ಯಾಮರಾ ಫೇಮಸ್ ಮಾಡಿದ್ದನ್ನು ಗಣನೆಗೆ ತೆಗೆದುಕೊಂಡರೇ, ಇವರ ವೃತ್ತಿ ಬದುಕಿಗೀಗ 50 ವರ್ಷ. ಶಿವರಾಜ್‌ಕುಮಾರ್ ನಟಿಸಿದ 'ಆನಂದ್' ಸಿನಿಮಾದಿಂದ ಇವರ ನಟನಾ ಜರ್ನಿ ಆರಂಭ ಆಗಿತ್ತು. ಅಲ್ಲಿಂದ 'ಮನಮೆಚ್ಚಿದ ಹುಡುಗಿ', 'ಸಮರ', 'ಆಸೆಗೊಬ್ಬ ಮೀಸೆಗೊಬ್ಬ','ಮಿಡಿದ ಶ್ರುತಿ' ಸಿನಿಮಾದಲ್ಲಿ ಶಿವಣ್ಣನೊಂದಿಗೆ ನಟಿಸಿದ್ದಾರೆ. ರಮೇಶ್ ಅರವಿಂದ್ ಜೊತೆ 8 ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ ಅಷ್ಟೇ ಅಲ್ಲ ತಮಿಳಿನಲ್ಲಿ 10 ಸಿನಿಮಾಗಳಲ್ಲಿ ನಟಿಸಿದ್ದು, ಅಲ್ಲೂ ಯಶಸ್ವಿ ನಟಿಯಾಗಿದ್ದಾರೆ.


Click it and Unblock the Notifications











