ಭೂಗತಲೋಕದ ಗುಟ್ಟಿನ ಹಿಂದೆ ಬಿದ್ದಿದೆಯೇ 'ಗುಳ್ಟು' ಜೋಡಿ; ಮೌನ ಮುರಿಯುತ್ತಾ ರವಿ ಬೆಳಗೆರೆಯ 'ಒಮಾರ್ಟ'?
ಇದೊಂದು ಸಿನಿಮಾ ಆಗಬೇಕಿತ್ತು ಅನ್ನೋದು ಹಲವರ ಆಸೆ. ಹಿಂದೊಮ್ಮೆ ಈ ಚುಗುರಿ ಹಾಗೇ ಕಮರಿ ಹೋಗಿತ್ತು. ರವಿ ಬೆಳೆಗೆರೆ ಬರೆದ ಜನಪ್ರಿಯ ಕೃತಿಗಳಲ್ಲಿ 'ಒಮರ್ಟಾ' ಕೂಡ ಒಂದು. ಭೂಗಕ ಲೋಕದ ನಿಯಮಗಳ ಮೇಲೆ ಬೆಳಕು ಚೆಲ್ಲುವ ಈ ಕೃತಿ ಅದೆಷ್ಟೋ ಓದುಗರ ಫೇವರಿಟ್. 'ಒಮರ್ಟಾ' ಸಿನಿಮಾ ಆಗಬೇಕಿತ್ತು ಬಯಸಿದ್ದವರಿಗೇನು ಕಮ್ಮಿಯಿರಲಿಲ್ಲ.
ಈಗ ಮತ್ತೆ ರವಿ ಬೆಳಗೆರೆಯ ಈ ಕೃತಿ ಸಿನಿಮಾ ಆಗುತ್ತೆ ಅನ್ನೋ ಸುದ್ದಿ ಸ್ಯಾಂಡಲ್‌ವುಡ್‌ನಲ್ಲಿ ಓಡಾಡುತ್ತಿದೆ. 2018ರಲ್ಲಿ ಸ್ಯಾಂಡಲ್‌ವುಡ್‌ಗೆ ಸರ್ಪ್ರೈಸ್ ಹಿಟ್ ಕೊಟ್ಟಿದ್ದ 'ಗುಳ್ಟು' ಜೋಡಿ ಈ ಪ್ರಯತ್ನಕ್ಕೆ ಕೈ ಹಾಕಿದೆ ಅನ್ನೋ ಸುದ್ದಿ ಸದ್ದು ಮಾಡುವುದಕ್ಕೆ ಶುರು ಮಾಡಿದೆ. 'ಗುಳ್ಟು' ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ 'ಒಮರ್ಟಾ'ವನ್ನು ತೆರೆಮೇಲೆ ತರುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಅನ್ನೋದು ಸುದ್ದಿ.

ಅಂದ್ಹಾಗೆ, ದಿಡೀರನೇ ಮತ್ತೆ 'ಒಮರ್ಟಾ' ಸಿನಿಮಾ ಆಗುತ್ತಿರುವ ಬಗ್ಗೆ ಸುದ್ದಿ ಆಗುತ್ತಿರುವುದಕ್ಕೆ ಕಾರಣವಿದೆ. 'ಗುಳ್ಟು' ಸಿನಿಮಾದಿಂದ ವಿಭಿನ್ನ ಕಥೆಗಳಲ್ಲಿ ನಟಿಸುತ್ತಾ ಬಂದಿರೋ ನವೀನ್ ಶಂಕರ್ ಹುಟ್ಟುಹಬ್ಬ (ಮೇ 25). ಇದೇ ಸಂದರ್ಭದಲ್ಲಿ ಈ ಯಶಸ್ವಿ ಜೋಡಿಯ ಮುಂದಿನ ಸಿನಿಮಾ ಬಗ್ಗೆ ಸುದ್ದಿಯೊಂದು ಓಡಾಡುತ್ತಿದೆ.
ನವೀನ್ ಶಂಕರ್ 36ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ 'ಒಮರ್ಟಾ' ಕೂಡ ಸದ್ದು ಮಾಡುವುದಕ್ಕೆ ಶುರು ಮಾಡಿದೆ. ಐದು ವರ್ಷಗಳ ಹಿಂದೇನೆ 'ಒಮರ್ಟಾ' ಸಿನಿಮಾ ಆಗುತ್ತೆ ಅಂತ ವರದಿಯಾಗಿತ್ತು. ಆದರೆ, ಆ ವೇಳೆ ಅನೀಶ್ ತೇಜಶ್ವರ್ ಹೆಸರು ಓಡಾಡಿತ್ತು. ಆದ್ರೀಗ ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ ಹಾಗೂ ನವೀನ್ ಶಂಕರ್ ಕಾಂಬಿನೇಷನ್‌ನಲ್ಲಿ 'ಒಮರ್ಟಾ' ಸಿನಿಮಾ ಆಗುತ್ತೆ ಎನ್ನಲಾಗುತ್ತಿದೆ.

ಸಿನಿಮಾ ವಲಯದಲ್ಲಿ ನವೀನ್ ಶಂಕರ್ ಬರ್ತ್‌ಡೇ ದಿನವೇ ಇಂತಹದ್ದೊಂದು ಸುದ್ದಿ ಓಡಾಡುತ್ತಿದೆ. ಆದರೆ, ನವೀನ್ ಶಂಕರ್ ಆಗಲಿ, ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ ಆಗಲಿ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿಲ್ಲ. ಅವರು ಅಂದುಕೊಂಡಂತೆ ಆದರೆ, ಮುಂದಿನ ದಿನಗಳಲ್ಲಿ 'ಒಮರ್ಟಾ' ಸಿನಿಮಾ ಆಗುತ್ತಿರುವ ಬಗ್ಗೆ ಸುದ್ದಿಯನ್ನು ಅನೌನ್ಸ್ ಮಾಡಬಹುದು.
ಸದ್ಯ ನವೀನ್ ಶಂಕರ್ ನಟಿಸುತ್ತಿರುವ 'ನೋಡಿದವರು ಏನಂತಾರೆ' ಸಿನಿಮಾ ರಿಲೀಸ್ ಆಗಬೇಕಿದೆ. ಹುಟ್ಟುಹಬ್ಬಕ್ಕೆ ಈ ಸಿನಿಮಾ ಟೀಸರ್, ಟ್ರೈಲರ್ ರಿಲೀಸ್ ಆಗಬಹುದು ಅನ್ನೋ ನಿರೀಕ್ಷೆಯಿತ್ತು. ಆದರೆ, ಸದ್ಯಕ್ಕೆ ಚಿತ್ರತಂಡದಿಂದ ಇನ್ನೂ ಈ ಬಗ್ಗೆ ಸುಳಿವು ಇಲ್ಲ.
2023 ನವೀನ್ ಶಂಕರ್ ಪಾಲಿಗೆ ಅದೃಷ್ಟದ ವರ್ಷ ಆಗಿತ್ತು. ಸುಮಾರು ನಾಲ್ಕು ಸಿನಿಮಾಗಳು ತೆರೆಕಂಡಿದ್ದವರು. 'ಹೊಂದಿಸಿ ಬರೆಯಿರಿ', ನೆಗೆಟಿವ್ ರೋಲ್‌ನಲ್ಲಿ ನಟಿಸಿದ್ದ 'ಗುರುದೇವ್ ಹೊಯ್ಸಳ', 'ಕ್ಷೇತ್ರಪತಿ' ಹಾಗೂ 'ಸಲಾರ್' ಪಾರ್ಟ 1 ರಿಲೀಸ್ ಆಗಿದ್ದವು. ನವೀನ್ ಶಂಕರ್ ನಟಿಸಿದ ಈ ನಾಲ್ಕು ಸಿನಿಮಾಗಳಲ್ಲೂಅವರ ನಟನೆಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಈ ವರ್ಷ ಹೆಚ್ಚು ಸಿನಿಮಾ ರಿಲೀಸ್ ಇಲ್ಲದೇ ಹೋದರೂ 'ನೋಡಿದವರು ಏನಂತಾರೆ' ಬಿಡುಗಡೆ ಆಗಲಿದೆ. ಇದರೊಂದಿಗೆ 'ಒಮರ್ಟಾ' ಈಗ ಚರ್ಚೆಯಲ್ಲಿದೆ.


Click it and Unblock the Notifications











