"ರಾಜಾಹುಲಿ ಅಂತಹ ಬ್ಲಾಕ್ ಬಸ್ಟರ್ ಸಿನಿಮಾ ಕೊಟ್ಟಾಗ ನನಗೆ ಎರಡು ಕೋಡು ಬಂದು ಬಿಡ್ತು"; ಗುರು ದೇಶಪಾಂಡೆ
ಕಳೆದ ಕೆಲವು ದಿನಗಳಿಗೆ ಗುರು ದೇಶಪಾಂಡೆ ಸಿಕ್ಕಾಪಟ್ಟೆ ಸುದ್ದಿಯಲ್ಲಿ ಇದ್ದಾರೆ. ಇತ್ತೀಚೆಗೆ 'ಲವ್ ಮಾಕ್ಟೇಲ್ 3' ಸಿನಿಮಾದ ಕಥೆ ಕದ್ದಿದ್ದಾರೆಂದು ಡಾರ್ಲಿಂಗ್ ಕೃಷ್ಣ ವಿರುದ್ಧ ಗುರು ದೇಶಪಾಂಡೆ ತಿರುಗಿಬಿದ್ದಿದ್ದರು. ಒಂದಿಷ್ಟು ದಿನ ಡಾರ್ಲಿಂಗ್ ಕೃಷ್ಣ ಹಾಗೂ ಗುರು ದೇಶಪಾಂಡೆ ನಡುವೆ ಜಟಾಪಟಿ ಫಿಲ್ಮ್ ಚೇಂಬರ್ ಮೆಟ್ಟಿಲೇರಿತ್ತು. ಈ ವಿವಾದದ ಹಿಂದೇನೆ ಈಗ ತಮ್ಮ ಸಿನಿಮಾವನ್ನು ರಿಲೀಸ್ ಮಾಡುವುದಕ್ಕೆ ಹೊರಟಿದ್ದಾರೆ. ಅದುವೇ 'ರಾಮರಸ'.
ಗುರು ದೇಶಪಾಂಡೆ 'ರಾಮರಸ' ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಎಂಬಿ ಗಿರಿರಾಜ್ ಕಥೆ, ಚಿತ್ರಕಥೆ ಬರೆದು ನಿರ್ದೇಶನವನ್ನು ಮಾಡಿದ್ದಾರೆ. ಪ್ರಮುಖ ಪಾತ್ರದಲ್ಲಿ ಬಿಗ್ ಬಾಸ್ ಖ್ಯಾತಿಯ ಕಾರ್ತಿಕ್ ಮಹೇಶ್, ಪ್ರಜ್ವಲ್ ದೇವರಾಜ್ ಹಾಗೂ ಶರಣ್ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಪ್ರಜ್ವಲ್ ದೇವರಾಜ್ ಫಸ್ಟ್ ಲುಕ್ ಕುತೂಹಲವನ್ನು ಕೆರಳಿಸಿದೆ.

'ರಾಮರಸ'ದ ಈ ಇವೆಂಟ್‌ನಲ್ಲಿ ಗುರು ದೇಶಪಾಂಡೆ ತಮ್ಮ ಯಶಸ್ಸಿನ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಈ ವೇದಿಕೆ ಮೇಲೆ 'ರಾಜಾಹುಲಿ' ಅಂತಹ ಬ್ಲಾಕ್ ಬಸ್ಟರ್ ಸಿನಿಮಾ ಕೊಟ್ಟ ಬಳಿಕ ತನಗೆ ಎರಡು ಕೊಂಬು ಬಂದಿತ್ತು ಎಂದು ಹೇಳಿಕೊಂಡಿದ್ದಾರೆ. ಸಕ್ಸಸ್‌ಫುಲ್ ಆಗಿ ಸಾಗುತ್ತಿದ್ದ ಸಿನಿಮಾ ಜರ್ನಿಯಲ್ಲಿ ಡೌನ್ ಫಾಲ್ ಆಗಿದ್ದು ಎಲ್ಲಿಂದ? ಯಾಕಾಯ್ತು? ಅನ್ನೋದನ್ನು ಇದೇ ವೇದಿಕೆ ಮೇಲೆ ಹೇಳಿಕೊಂಡಿದ್ದಾರೆ.
ಯಶ್ ಹಾಗೂ ಗುರುದೇಶಪಾಂಡೆ ಕಾಂಬಿನೇಷನ್‌ನಲ್ಲಿ ಬಂದ ಸಿನಿಮಾ 'ರಾಜಾಹುಲಿ' ಬಾಕ್ಸಾಫೀಸ್‌ನಲ್ಲಿ ಒಳ್ಳೆ ಕಲೆಕ್ಷನ್ ಮಾಡಿತ್ತು. ಈ ಸಿನಿಮಾ ಬ್ಲಾಕ್‌ಬಸ್ಟರ್ ಅಂತಾನೂ ಸಾಬೀತಾಗಿತ್ತು. ಇಲ್ಲಿಂದ ಗುರು ದೇಶಪಾಂಡೆಗೆ ಕನ್ನಡ ಚಿತ್ರರಂಗದಲ್ಲಿ ಬೇಡಿಕೆನೂ ಹೆಚ್ಚಾಗಿತ್ತು. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ನಿರ್ದೇಶನ ಮಾಡಿದರು.
"2013, ನವೆಂಬರ್ 1 ರಂದು ರಾಜಾಹುಲಿ ಅಂತ ಬ್ಲಾಕ್ ಬಸ್ಟರ್ ಸಿನಿಮಾ ಕೊಟ್ಟೆ. ರಾಜಾಹುಲಿ ಸಿನಿಮಾಗಿಂತ ಮೊದಲೇ ನಾನು ವಾರಸ್ದಾರ ಮೂಲಕ ಡೈರೆಕ್ಟರ್ ಆಗಿದ್ದೆ. ಲೈಫ್ ನಡೀತಾ ಇತ್ತು. ಯಾವಾಗ ರಾಜಾಹುಲಿ ಅಂತಹ ಬ್ಲಾಕ್ ಬಸ್ಟರ್ ಸಿನಿಮಾ ಕೊಟ್ಟಾಗ ನನಗೆ ಎರಡು ಕೊಂಡು ಬಂದು ಬಿಡ್ತು." ಎಂದು ಗುರು ದೇಶಪಾಂಡೆ ಹೇಳಿದ್ದಾರೆ.

'ರಾಜಾಹುಲಿ' ಸಿನಿಮಾ ಗೆದ್ದ ಬಳಿಕ ನಿರ್ದೇಶನ ಮಾಡಿ ಗೆಲ್ಲುತ್ತಿದ್ದ ಗುರು ದೇಶಪಾಂಡೆ ಡೌನ್‌ಫಾಲ್ ಶುರುವಾಗಿತ್ತು. ಅದು ಎಲ್ಲಿಂದ ಅನ್ನೋದನ್ನು ರಿವೀಲ್ ಮಾಡಿದ್ದಾರೆ. "ಎಲ್ಲೇ ಹೋದರೂ ನನ್ನನ್ನು ರಾಜಾಹುಲಿ ಡೈರೆಕ್ಟರ್ ಅಂತ ಕರೆಯೋರು. ಈ ಸಕ್ಸಸ್ ಖುಷಿಕೊಡುತ್ತಿತ್ತು. ಅದಕ್ಕೆ ನಿರಂತರವಾಗಿ ರುದ್ರತಾಂಡವ, ಜಾನ್ ಜಾನಿ ಜನಾರ್ಧನ್, ಸಂಹಾರ, ಪಡ್ಡೆಹುಲಿ ಹೀಗೆ ವರ್ಷಕ್ಕೊಂದು ಸಿನಿಮಾ ಮಾಡುತ್ತಾ ಹೋದೆ. ಲೈಫ್ ನಡೀತಾ ಇತ್ತು. ಒಂದು ಮನೆ ತೆಗೆದುಕೊಂಡೆ. ಫಾರ್ಮ್ ಹೌಸ್ ತೆಗೆದುಕೊಂಡೆ. 2019ನಲ್ಲಿ ಜೆಂಟಲ್‌ಮ್ಯಾನ್ ಸಿನಿಮಾ ಶುರು ಮಾಡಿದ್ವಿ. ಆ ಸಿನಿಮಾ ಮಾಡಿದಾಗ ನಾನು ಪ್ರಡ್ಯೂಸರ್ ಆದೆ. ಆ ಮೇಲೆ ನಿರ್ಮಾಪಕನಾಗಿ ನಾಲ್ಕು ಸಿನಿಮಾ ಮಾಡಿದೆ. ಏನು ಸಕ್ಸಸ್ ಹೀಗೆ ನೋಡಿದೋನು ಒಳ್ಳೆಯ ಸಿನಿಮಾ ಮಾಡಿದರೂ ಹಾಗೇ ಡೌನ್ ಫಾಲ್ ಆದೆ." ಎಂದು ಗುರುದೇಶಪಾಂಡೆ ಹೇಳಿದ್ದಾರೆ.
ಇದೇ ವೇದಿಕೆ ಮೇಲೆ ತನ್ನ ಬದುಕು ಬದಲಿಸಿದ ವಿನಯ್ ಗುರೂಜಿ ಬಗ್ಗೆನೂ ಅಚ್ಚರಿ ಮಾತುಗಳನ್ನಾಡಿದ್ದಾರೆ. "ನನ್ನ ವೈಫ್ ಯಾವಾಗಲೂ ನನಗೆ ಹೇಳೋರು. ನಿರ್ಮಾಪಕನಾದಾಗ ಒಂದು ಒತ್ತಡ ಶುರುವಾಗುತ್ತೆ. ಮನೆಯಲ್ಲಿ ಇಲ್ಲದ ಕೋಪಗಳನ್ನು ತೋರಿಸುವುದಕ್ಕೆ ಶುರು ಮಾಡುತ್ತೇವೆ. ಹೊರಗಡೆ ಇರುವ ಕೋಪವನ್ನು ಮನೆಯಲ್ಲಿ ಹೋಗಿ ತೋರಿಸುವುದಕ್ಕೆ ಶುರು ಮಾಡುತ್ತೇವೆ. ನಿರ್ದೇಶಕನಾಗಿದ್ದಾಗ ಎಷ್ಟು ತಾಳ್ಮೆಯಿಂದ ಕೆಲಸ ಮಾಡುತ್ತಿದ್ವೋ. ನಿರ್ಮಾಪಕನಾದ್ಮೇಲೆ ಆ ಒತ್ತಡವನ್ನು ತೆಗೆದುಕೊಂಡು ನೆಮ್ಮದಿ ಅನ್ನೋದು ಕಳೆದುಕೊಳ್ಳುತ್ತಾ ಹೋದಾಗ ನನ್ನ ಹೆಂಡ್ತಿ ಸುಮ್ಮನೆ ಬೇರೆಯವರ ಮೇಲೆ ಕೂಗಾಡುತ್ತಿದ್ದೀಯಾ? ನಿನ್ನ ಮೇಲೆ ನೀನು ವರ್ಕ್ ಮಾಡುವುದಕ್ಕೆ ಶುರು ಮಾಡು ಅಂದರು. ಆಗ ನೆನಪಾಗಿದ್ದೇ ವಿನಯ್ ಗುರೂಜಿ." ಎಂದು ಗುರು ದೇಶಪಾಂಡೆ ಹೇಳಿದ್ದಾರೆ.


Click it and Unblock the Notifications